ನಿಮ್ಮ ಪೋಷಕರಿಗೆ ತಿಳಿಸಲೇ ಬೇಕಾದ 7 ಅಂಶಗಳು


Updated:July 18, 2018, 4:24 PM IST
ನಿಮ್ಮ ಪೋಷಕರಿಗೆ ತಿಳಿಸಲೇ ಬೇಕಾದ 7 ಅಂಶಗಳು
Aged people using Mobile

Updated: July 18, 2018, 4:24 PM IST
ನವದೆಹಲಿ: ಅಂತರ್ಜಾಲ ಬಳಕೆ ದಿನದಿಂದ ದಿನಕ್ಕೆ ಏರುತ್ತಾ ಹೋದಂತೆ ಅಪಾಯಗಳೂ ಕೂಡಾ ಹೆಚ್ಚುತ್ತಾ ಹೋಗುತ್ತಿದೆ. ಆನ್​ಲೈನ್​ ವಂಚನೆ, ಮಾಹಿತಿ ಸೋರಿಕೆ, ಚಿತ್ರಗಳ ದುರುಪಯೋಗ ಹೀಗೆ ಹಲವಾರು ತೊಂದರೆಗಳನ್ನು ಎದುರಿಸುತ್ತಲೇ ಬರುತ್ತಿದ್ದೇವೆ. ನಾವು ಈ ಎಲ್ಲಾ ವಂಚನೆ ಬಗ್ಗೆ ಜ್ಞಾನ ಹೊಂದಿದ್ದರೂ ನಮ್ಮ ಪೋಷಕರಿಗೆ ಸ್ಮಾರ್ಟ್​ಫೋನ್​ಗಳಲ್ಲಿ ನಡೆಯುವ ವಂಚನೆ ಬಗ್ಗೆ ಅಪ್ಡೇಟ್​ ಇರದೇ ಹೋಗಬಹುದು. ಹೀಗಾಗಿ ಇಂದು ನಾವು ನಿಮ್ಮ ಪೋಷಕರಿಗೆ ತಿಳಿಸಲೇ ಬೇಕಾದ ಬಹು ಮುಖ್ಯ ಟಿಪ್ಸ್​ಗಳನ್ನು ನೀಡುತ್ತಿದ್ದೇವೆ ಮುಂದೆ ಓದಿ.

ಸಾಂದರ್ಭಿಕ ಚಿತ್ರ


ಮೊಬೈಲ್​ ಸ್ಕ್ರೀನ್​ ಲಾಕ್​
ಆನ್​ಲೈನ್​ ವಂಚನೆಗೆ ಬಲಿಯಾಗುವವರಲ್ಲಿ ಹಿರಿಯರೇ ಹೆಚ್ಚು, ಮೊದಲಿಗೆ ನೀವು ಅವರಿಗೆ ಮೊಬೈಲ್​ ಲಾಕ್​ ಹಾಗೂ ಸ್ಕ್ರೀನ್​ ಪ್ಯಾಟರ್ನ್​ನ್ನು ಮೂರನೇ ವ್ಯಕ್ತಿಗೆ ತಿಳಿಸದಂತೆ ಹೇಳಿ. ಈ ರೀತಿ ಮಾಡುವುದರಿಂದ ಮೂರನೇ ವ್ಯಕ್ತಿ ನಿಮ್ಮವರ ಮೊಬೈಲ್​ ಬಳಸುವುದೇ ತಪ್ಪುತ್ತದೆ.

ನಕಲಿ ಆ್ಯಪ್​ಗಳ ಕುರಿತು ಎಚ್ಚರಿಕೆ

ಪ್ಲೇಸ್ಟೋರ್​ ಅಥವಾ ಐಒಎಸ್​ಗಳಲ್ಲಿ ಅದೆಷ್ಟೋ ನಕಲಿ ಆ್ಯಪ್​ಗಳು ಬಂದು ಬಿಟ್ಟಿವೆ. ಹೆಚ್ಚಿನ ಆ್ಯಪ್​ಗಳು ಜಾಹೀರಾತಿಗೆ ಮಾತ್ರಾ ಸೀಮಿತವಾಗಿರುವ ಸಾಧ್ಯತೆಗಳಿರುತ್ತೆ. ಮತ್ತೆ ಕೆಲವು ಆ್ಯಪ್​​ಗಳು ನಿಮ್ಮ ಮೊಬೈಲ್​ನ ಖಾಸಾಗಿ ಮಾಹಿತಿಯನ್ನು ಕಲೆಹಾಕಬಹುದು. ಹೀಗಾಗಿ ನಿಮ್ಮ ಪೋಷಕರಿಗೆ ಅನಾವಶ್ಯಕ ಆ್ಯಪ್​ಗಳನ್ನು ಬಳಕೆ ಮಾಡದಂತೆ ಹೇಳಿ.


Loading...

ಎಟಿಎಂ ಅಥವಾ ಬ್ಯಾಂಕ್​ಗಳ ಪಿನ್​ಕೋಡ್​ ಸೇವ್​ ಮಾಡದಿರಿ
ಬ್ಯಾಂಕ್​ಗಳ ಮಾಹಿತಿ, ತಮ್ಮ ಎಟಿಎಂ/ಕ್ರೆಡಿಟ್​​ ಕಾರ್ಡ್​ ಮಾಹಿತಿ, ಹೀಗೆ ಹಣಕಾಸು ವಿಚಾರಗಳ ಮಾಹಿತಿಯನ್ನು ಎಲ್ಲೂ ಸೇವ್​ ಮಾಡಿಟ್ಟುಕೊಳ್ಳದಂತೆ ಹೇಳಿಕೊಡಿ.

ಸ್ಪ್ಯಾಪ್​ ಇ-ಮೇಲ್​, ಮೆಸೇಜ್​ಗಳು

ಹೆಚ್ಚಿನ ಸಂದರ್ಭದಲ್ಲಿ ನಾವು ಇಮೇಲ್​ ಐಡಿಗಳನ್ನು ಮಾಡಿಟ್ಟುಕೊಂಡಿರುತ್ತೇವೆ , ಆದರೆ ನಾವು ಬಳಕೆ ಮಾಡುವ ಆ್ಯಪ್​ ಹಾಗೂ ಗೂಗಲ್​ನಲ್ಲಿ ಮಾಡುವ ಬ್ರೌಸಿಂಗ್​ ಡೇಟಾ ಬಳಿಸಿಕೊಂಡು ಹಲವಾರು ಸ್ಪ್ಯಾಮ್​ ಮೇಲ್​ಗಳು ಬರುತ್ತಿರುತ್ತವೆ. ಒಂದು ವೇಳೆ ಇವುಗಳನ್ನು ತೆರೆದು ನೋಡಿದರೆ ಹಣಕಳೆದುಕೊಳ್ಳುವ ಸಾಧ್ಯತೆಗಳೇ ಹೆಚ್ಚು.

ಆಧಾರ್​ ಅಪ್​ಡೇಟ್​, ಅಥವಾ ಇತರೇ ನಕಲಿ ಕರೆಗಳ ವಂಚನೆ
ತಾವು ಬ್ಯಾಂಕ್​ನಿಂದ ಕರೆ ಮಾಡಿರುವುದಾಗಿ ಯಾರಾದರೂ ಹೇಳಿ, ನಿಮ್ಮ ಮೊಬೈಲ್​ ಮಾಹಿತಿಯನ್ನು ಅಪ್​ಡೇಟ್​ ಮಾಡಿ ಎಂದು ಬರುವ ಕರೆಗಳ ಕುರಿತು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಪೋಷಕರಿಗೆ ತಿಳಿಸಿ.

 

ಮೊಬೈಲ್​ ರಿಪೇರಿ ಹಾಗೂ ಬ್ಯಾಂಕ್​ ಸಿಬ್ಬಂದಿ ಕರೆ
ಹೆಚ್ಚಿನ ಸಮಯದಲ್ಲಿ ವಂಚಕರು ಮೊಬೈಲ್​ಗಳಲ್ಲಿನ ಸಮಸ್ಯೆ ಸರಿಪಡಿಸುವುದಾಗಿ ಕರೆ ಮಾಡಿದರೆ ಅಥವಾ ಬ್ಯಾಂಕ್​ಗಳಲ್ಲಿನ ಸಮಸ್ಯೆ ಕುರಿತು ಕರೆ ಮಾಡಿ ನಿಮ್ಮ ಎಟಿಎಂ ಹಾಗೂ ಇತರೇ ದಾಖಲೆಗಳನ್ನು ಕೇಳಿದರೆ ಅಂತಹ ಕರೆಗಳನ್ನು ತಿರಸ್ಕರಿಸುವಂತೆ ಹೇಳಿ. ಯಾವುದೇ ಸಂಸ್ಥೆಗಳು ನಿಮ್ಮ ಬ್ಯಾಂಕ್​ ಖಾತೆಗಳ ಮಾಹಿತಿ ಕಲೆ ಹಾಕುವುದಿಲ್ಲ.ಆಧಾರ್​, ವೋಟರ್​ ಐಡಿ, ಪಾನ್​ಕಾರ್ಡ್​ ಮಾಹಿತಿ
ಮೂರನೇ ವ್ಯಕ್ತಿಗಳಿಗೆ ಅಥವಾ ಕೆಲವು ಆ್ಯಪ್​ಗಳಿಗೆ ನಿಮ್ಮ ಆಧಾರ್​, ವೋಟಾರ್ ಐಡಿ ಅಥವಾ ಇತರೇ ದಾಖಲೆಗಳನ್ನು ನೀಡುವ ಮುನ್ನ ಪೂರ್ಣವಾಗಿ ಓದುವಂತೆ ಹಿರಿಯರಿಗೆ ತಿಳಿಸಿ.
First published:July 18, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...