ಸ್ಮಾರ್ಟ್ಫೋನ್ಗಳನ್ನು (Smartphones) ಏನೇನೋ ಕೆಲಸಗಳಿಗೆಲ್ಲಾ ಬಳಸ್ತಾರೆ. ಅದ್ರಲ್ಲಿ ಮುಖ್ಯವಾಗಿ ಕೆಲವರು ಗೇಮ್ (Game) ಆಡಲೆಂದೇ ಬಳಸುತ್ತಾರೆ. ಇತ್ತೀಚೆಗೆ ಸ್ಮಾರ್ಟ್ಫೋನ್ಗಳ ಉತ್ಪಾದನೆ ಕೂಡ ಹೆಚ್ಚಾಗಿದೆ. ಅದ್ರಲ್ಲೂ ಗೇಮ್ ಆಡುವಾಗ ಉತ್ತಮ ಅನುಭವವನ್ನು ನೀಡುವಂತಹ ಸ್ಮಾರ್ಟ್ಫೋನ್ ಕಂಪನಿಗಳು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಹಿಂದೆಲ್ಲಾ ಹೆಚ್ಚಾಗಿ ಟ್ಯಾಬ್ಗಳನ್ನು ಬಳಸಿ ಮೊಬೈಲ್ ಗೇಮ್ಗಳನ್ನು ಆಡುತ್ತಿದ್ದರು. ಯಾಕೆಂದರೆ ಇದು ಉತ್ತಮ ಫೀಚರ್ಸ್ ಅನ್ನು ಹೊಂದಿರುತ್ತದೆ. ಆದರೆ ಇತ್ತೀಚಿನ ಸ್ಮಾರ್ಟ್ಫೋನ್ಗಳು ಮಾತ್ರ ಇದಕ್ಕಿಂತ ಹೆಚ್ಚಿನ ಫೀಚರ್ಸ್ಗಳನ್ನು ಹೊಂದಿರುವುದರಿಂದ ಟ್ಯಾಬ್ಗಳ ಮೇಲಿನ ಬೇಡಿಕೆ ಕಡಿಮೆಯಾಗಿದೆ. ಉತ್ತಮ ರೀತಿಯ ಹಲವಾರು ಮೊಬೈಲ್ ಗೇಮ್ಸ್ಗಳಿವೆ (Mobile Games). ಅದೇ ರೀತಿ ಟೆಕ್ ಕಂಪನಿಗಳಿಗೆ (Tech Company) ಈ ಗೇಮ್ಸ್ಗಳಿಂದಲೇ ಹೆಚ್ಚು ಆದಾಯ ಬರುತ್ತಿದೆ ಎಂದು ತಿಳಿದುಬಂದಿದೆ.
ಮೊಬೈಲ್ ಗೇಮ್ಸ್ಗಳು ಟೆಕ್ ಕಂಪನಿಯ ಒಂದು ಆದಾಯದ ಮೂಲ ಎನ್ನಬಹುದು. ಇದು ಉತ್ತಮ ಗ್ರಾಫಿಕ್ಸ್ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುತ್ತದೆ. ಇದೀಗ ಮತ್ತೆ ಮೂಮದಿನ ವರ್ಷದಲ್ಲಿ ಹೊಸ ರೀತಿಯಲ್ಲಿ ಮೊಬೈಲ್ ಗೇಮ್ಗಳನ್ನು ಪರಿಚಯಿಸಲು ಟೆಕ್ ಕಂಪನಿಗಳು ಯೋಜನೆ ನಡೆಸುತ್ತಿದೆ.
ಈ ಹೆಚ್ಚು ಸ್ಟೋರೇಜ್ ಹೊಂದಿದ ಗೇಮ್ಸ್ಗಳನ್ನು ಮೊಬೈಲ್ನಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಟೆಕ್ ಮಾರುಕಟ್ಟೆಯಲ್ಲಿ ಇದಕ್ಕಾಗಿ ಹಲವಾರು ಡಿವೈಸ್ಗಳು ಲಭ್ಯವಿದೆ. ಆದರೆ ಮುಂದಿನ ದಿನಗಳಲ್ಲಿ ಮೊಬೈಲ್ನಲ್ಲಿ ಈ ಹಿಂದೆ ಉತ್ತಮ ಗುಣಮಟ್ಟದ ಗೇಮ್ಸ್ಗಳನ್ನು ಆಡಬಹುದು. ಹಾಗಿದ್ರೆ 2023 ರಲ್ಲಿ ಮೊಬೈಲ್ನಲ್ಲಿ ಆಡಬಹುದಾದ ಟಾಪ್ 5 ಮೊಬೈಲ್ ಗೇಮ್ಸ್ ಯಾವುದೆಲ್ಲಾ ಎಂಬುದನ್ನು ಈ ಲೇಖನದ ಮೂಲಕ ತಿಳಿಯಿರಿ.
ಇದನ್ನೂ ಓದಿ: ಫ್ಲಿಪ್ಕಾರ್ಟ್ ಇಯರ್ ಎಂಡ್ ಸೇಲ್ ಆರಂಭ; ಈ 5 ಸ್ಮಾರ್ಟ್ಫೋನ್ಗಳ ಮೇಲೆ ಭಾರೀ ಡಿಸ್ಕೌಂಟ್!
ವ್ಯಾಲರಂಟ್ ಮೊಬೈಲ್
ಈ ವ್ಯಾಲರಂಟ್ ಗೇಮ್ ಇದುವರೆ ಪಿಸಿಯಲ್ಲಿ ಆಡಬಹುದಿತ್ತು. ಜೊತೆಗೆ ಪಿಸಿಯಲ್ಲಿ ಬಹಳಷ್ಟು ಜನಪ್ರಿಯತೆಯನ್ನು ಕೂಡ ಪಡೆದಿದೆ. ಹಾಗೆಯೇ ಉನ್ನತ ಎಫ್ಪಿಎಸ್ ಆಟಗಳಲ್ಲಿ ಒಂದನ್ನಾಗಿ ಮಾಡುವ ಉದ್ದೇಶದಿಂದ ರಾಯಿಟ್ ಟೆಕ್ ಕಂಪನಿ ತನ್ನ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಇದರ ಭಾಗವಾಗಿಯೇ ಆಂಡ್ರಾಯ್ಡ್ ಮತ್ತು ಐಒಎಸ್ನ ಫೋನ್ಗಳಿಗೆ ಇದನ್ನು ಶೀಘ್ರದಲ್ಲಿಯೇ ಪರಿಚಯಿಸಲಾಗುತ್ತಿದೆ. ಆದರೆ ಈ ಗೇಮ್ ಬಿಡುಗಡೆಯ ದಿನಾಂಕದ ಬಗ್ಗೆ ಇನ್ನೂ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.
ಕಾಲ್ ಆಫ್ ಡ್ಯೂಟಿ - ವಾರ್ಝೋನ್ ಮೊಬೈಲ್
ಕಾಲ್ ಆಫ್ ಡ್ಯೂಟಿಯು ವಾರ್ಝೋನ್ ಗೇಮ್ ಅನ್ನು ಸಹ ಹೊಸ ವರ್ಷದಿಂದ ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಆಡಬಹುದಾಗಿದೆ. ಈ ಗೇಮ್ ತನ್ನ ಗ್ರಾಫಿಕ್ಸ್ ಮೂಲಕವೇ ಹೆಚ್ಚು ಜನರ ಗಮನಸೆಳೆದಿದೆ. ಒಂದು ಪಂದ್ಯದಲ್ಲಿ 120 ಆಟಗಾರರನ್ನು ಹೊಂದಿರುವ ಬ್ಯಾಟಲ್ ರಾಯಲ್ ಗೇಮ್ ಇದಾಗಿದ್ದು, ಡಾಮಿನೇಷನ್, ಟೀಮ್ ಡೆತ್ಮ್ಯಾಚ್ ಮತ್ತು ಇತರ ರೀತಿಯ ಮೋಡ್ಗಳನ್ನು ಇದು ಹೊಂದಿದೆ. ಈ ಗೇಮ್ ಪ್ರೀ ಬುಕಿಂಗ್ಗೆ ಮುಕ್ತವಾಗಿದ್ದು, ಮುಂದಿನ ವರ್ಷದ ಆರಂಭದಿಂದ ನೀವು ಮೊಬೈಲ್ನಲ್ಲೂ ಆಡಬಹುದು. ಇನ್ನು ಇದನ್ನು ಆನ್ಲೈನ್ ಮೂಲಕ ಆಡುವಂತಹ ಗೇಮ್ ಆಗಿರುವುದರಿಂದ ಗೇಮರ್ಗಳಿಗೆ ಸ್ನೇಹಿತರೊಂದಿಗೆ ಸುಲಭದಲ್ಲಿ ಸಂಪರ್ಕ ಬೆಳೆಸಬಹುದಾಗಿದೆ.
ಅಸ್ಸಾಸಿನ್ಸ್ ಕ್ರೀಡ್ ಜೇಡ್
ಯೂಬಿಸಾಫ್ಟ್ ನ ಅಸ್ಸಾಸಿನ್ಸ್ ಕ್ರೀಡ್ ಜೇಡ್ ಗೇಮ್ ಸಾಂಪ್ರದಾಯಿಕ ಯುದ್ಧಗಳನ್ನು ಆಡಬಹುದಾದ ಆಯ್ಕೆ ಪಡೆದುಕೊಂಡಿರಲಿದೆ ಎನ್ನಲಾಗಿದೆಯಾದರೂ ಇದರ ಬಗ್ಗೆ ನಿಖರ ಮಾಹಿತಿ ತಿಳಿದುಬಂದಿಲ್ಲ. ಇನ್ನು ಈ ಗೇಮ್ ಜೇಡ್ ಎಂಬ ಹೆಸರನ್ನು ಹೊಂದಿದ್ದು, ಈ ಆಟವನ್ನು 215 BC ಯಲ್ಲಿ ನಡೆಯುವ ಘಟನೆಯೊಂದಿಗೆ ಚಿತ್ರಿಸಲಾಗಿದೆ, ಚೀನಾದ ಕ್ವಿನ್ ರಾಜವಂಶದ ಅವಧಿಯಲ್ಲಿ ಚೀನಾದ ಮಹಾ ಗೋಡೆಯಂತಹ ಸಾಂಪ್ರದಾಯಿಕ ಸ್ಥಳಗಳನ್ನು ಈ ಗೇಮ್ನಲ್ಲಿ ನೋಡಬಹುದು. ಇನ್ನುಮುಂದೆ ಇದು ಹೊಸವರ್ಷದ ಆರಂಭದಿಂದ ಮೊಬೈಲ್ ಮೂಲಕ ಆಡುವ ಅವಕಾಶ ಸಿಗಲಿದೆ ಎಂದು ಕಂಪನಿ ಹೇಳಿದೆ.
ಬ್ಯಾಟಲ್ಫೀಲ್ಡ್ ಮೊಬೈಲ್
ಬ್ಯಾಟಲ್ಫೀಲ್ಡ್ ಮೊಬೈಲ್ ಗೇಮ್ ರಶ್, ಡೆತ್ಮ್ಯಾಚ್ ಹಾಗೂ ಇತರ ಮೋಡ್ಗಳಲ್ಲಿ ಆಡಬಹುದಾದ ಗೇಮ್ ಆಗಿದೆ. ಇದು ಆಂಡ್ರಾಯ್ಡ್ ಹಾಗೂ ಐಓಎಸ್ ಡಿವೈಸ್ಗಳಿಗೆ ಮುಂದಿನ ವರ್ಷದಿಂದ ಬೆಂಬಲ ನೀಡುತ್ತದೆ ಎನ್ನಲಾಗಿದೆ. ಇನ್ನು ಈ ಗೇಮ್ 2023 ರಲ್ಲಿ ಲಾಂಚ್ ಆಗಲಿದ್ದು, ಮುಂಗಡ ನೋಂದಣಿ ಸಹ ಆರಂಭವಾಗಿದೆ. ಇದರೊಂದಿಗೆ ಅಂಡರ್ವರ್ಡ್ ಗ್ಯಾಂಗ್ ವಾರ್ಸ್, ಡ್ರ್ಯಾಗನ್ ಸೀಜ್ ಕಿಂಗ್ಡಮ್ ಕಾಂಕ್ಯೂಸ್ಟ್ಸ ಸೇರಿದಂತೆ ಇನ್ನಿತರೆ ಗೇಮ್ಗಳು ಸಹ ಭಾರತೀಯ ಗೇಮರ್ಗಳಿಗೆ ಲಭ್ಯವಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ