HOME » NEWS » Tech » THESE MISTAKE YOU MAKE WHEN CHARGING A SMARTPHONE HG

ಸ್ಮಾರ್ಟ್​ಫೋನ್ ಚಾರ್ಜ್ ಮಾಡುವಾಗ ಈ ತಪ್ಪು ಮಾಡದಿರಿ!

Smartphone: ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್​ಫೋನ್ ಇದೆ. ಪುಟಾಣಿ ಮಕ್ಕಳಿಂದ ಹಿಡಿದು, ಬಿಳಿ ಕೂದಲಿ ಅಜ್ಜಂದಿರು ಕೂಡ ಸ್ಮಾರ್ಟ್​ಫೋನ್​ ಬಳಸುತ್ತಾರೆ. ಕೊರೊನಾ ಲಾಕ್​ಡೌನ್​ನಿಂದಾಗಿ ಸ್ಮಾರ್ಟ್​ಫೋನ್​ ಬಳಕೆ ವಿಪರೀತವಾಗಿದೆ.

news18-kannada
Updated:June 5, 2021, 2:04 PM IST
ಸ್ಮಾರ್ಟ್​ಫೋನ್ ಚಾರ್ಜ್ ಮಾಡುವಾಗ ಈ ತಪ್ಪು ಮಾಡದಿರಿ!
Photo: Google
  • Share this:
ವಿಶ್ವದಾದ್ಯಂತ ಬಹುಪಾಲು ಜನರು ಸ್ಮಾರ್ಟ್​ಫೋನ್​ ಬಳಸುತ್ತಾರೆ. ಅದರ ಮೂಲಕ ಕರೆ, ಇಂಟರ್​ನೆಟ್​ ಬಳಸುತ್ತಾರೆ. ಆದರೆ ಬಳಕೆ ಹೆಚ್ಚಾದಂತೆ ಸ್ಮಾರ್ಟ್​ಫೋನ್​ ಬ್ಯಾಟರಿ ಸಂಪೂರ್ಣ ಚಾರ್ಜ್​ ಖಾಲಿಯಾದ ನಂತರ ಅದನ್ನು ಚಾರ್ಚ್​ ಮಾಡುತ್ತಾರೆ. ಇಂತಹ ತಪ್ಪಿನಿಂದಾಗಿ ಸ್ಮಾರ್ಟ್​ಫೋನ್​ ಬೇಗನೆ ಹಾಳಾಗುತ್ತದೆ. ಎಷ್ಟೇ ಬೆಲೆಯ ಸ್ಮಾರ್ಟ್​ಫೋನಿದ್ದರು ಬ್ಯಾಟರಿ ಖಾಲಿ ಮಾಡಿ ಚಾರ್ಜ್​ ಮಾಡಿದರೆ ಹಾಳಾಗೊದರಲ್ಲಿ ಅನುಮಾನವೇ ಇಲ್ಲ.

ಫೋನ್​ ಚಾರ್ಜ್​ ಮಾಡುವಾಗ ಈ ತಪ್ಪನ್ನು ಮಾಡದಿರಿ:

ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್​ಫೋನ್ ಇದೆ. ಪುಟಾಣಿ ಮಕ್ಕಳಿಂದ ಹಿಡಿದು, ಬಿಳಿ ಕೂದಲಿ ಅಜ್ಜಂದಿರು ಕೂಡ ಸ್ಮಾರ್ಟ್​ಫೋನ್​ ಬಳಸುತ್ತಾರೆ. ಕೊರೊನಾ ಲಾಕ್​ಡೌನ್​ನಿಂದಾಗಿ ಸ್ಮಾರ್ಟ್​ಫೋನ್​ ಬಳಕೆ ವಿಪರೀತವಾಗಿದೆ. ಹಗಲು-ರಾತ್ರಿ ಫೋನ್​ ಬಳಸುತ್ತಿದ್ದಾರೆ. ಬಳಕೆ ಹೆಚ್ಚಾದಂತೆ ಸ್ಮಾರ್ಟ್​ಫೋನ್​ ಚಾರ್ಜ್​ ಕಡಿಮೆ ಆಗೋದು ಗೊತ್ತಾಗುವುದಿಲ್ಲ.

ಇನ್ನು ಕೆಲವರು ಸ್ಮಾರ್ಟ್​ಫೋನ್​ ಬ್ಯಾಟರಿ ಪೂರ್ತಿ ಖಾಲಿಯಾದ ಮೇಲೆ ಚಾರ್ಜ್​ ಮಾಡುತ್ತಾರೆ. ಇದರಿಂದ ಸ್ಮಾರ್ಟ್​ಫೊನ್​ ಬಾಳಿಕೆ ಮೇಲೆ ಪರಿಣಾಮ ಬೀರುತ್ತದೆ. ಹೆಚ್ಚು ಕಾಲ ಬಳಸಲು ಸಾಧ್ಯವಾಗುವುದಿಲ್ಲ.

100% ಚಾರ್ಜ್​ ಮಾಡಬೇಡಿ!

ಬಹುತೇಕ ಜನರು ಸ್ಮಾರ್ಟ್​ಫೋನನ್ನು 100% ರಷ್ಟು ಚಾರ್ಜ್​ ಮಾಡುತ್ತಾರೆ. ಇನ್ನು ಕೆಲವರು ರಾತ್ರಿ ಚಾರ್ಜ್​ ಹಾಕಿದರೆ ಬೆಳಗ್ಗೆ ತೆಗೆಯುತ್ತಾರೆ. ಆದರೆ ಈ ರೀತಿ ಮಾಡಬಾರದು. ಸ್ಮಾರ್ಟ್​ಫೋನ್​ ಬ್ಯಾಟರಿ 80-90%ರಷ್ಟಾದಾಗ ಚಾರ್ಜ್​ನಿಂದ ತೆಗೆಯಿರಿ.  ಇದರಿಂದಾಗಿ ಬ್ಯಾಟರಿ ಬಾಳಿಕೆ ಹೆಚ್ಚಾಗುತ್ತದೆ.

ರಾತ್ರಿ ಚಾರ್ಜ್​ ಹಾಕಿ ಮಲಗದಿರಿ!ರಾತ್ರಿ ವೇಲೆ ಚಾರ್ಜ್​ ಇಟ್ಟು ಮಲಗುವುದು ಅಪಾಯಕಾರಿ. ಕೆಲಮೊಮ್ಮೆ ಇದರಿಂದ ಅಘಘಾತ ಸಂಭವಿಸಬಹುದು. ಇನ್ನು ಕೆಲಮೊಮ್ಮ ಬ್ಯಾಟರಿ ಬಿಸಿಯಾಗಿ ಸ್ಫೋಟವಾಗಬಹುದು. ಇಲ್ಲದಿದ್ದರೆ ಅಲರಾಂ ಇಟ್ಟು ಚಾರ್ಜ್​ ಮಾಡಬಹುದಗಿದೆ.

ಎಷ್ಟು ಹೊತ್ತು ಸ್ಮಾರ್ಟ್​ಫೋನ್​ ಚಾರ್ಜ್​ ಮಾಡಬೇಕು

20% ಪ್ರತಿಶತಕ್ಕಿಂತ ಕೆಲಗೆ ಬಂದಾಗ ಸ್ಮಾರ್ಟ್​ಫೊನ್​ ಚಾರ್ಜ್​ ಮಾಡಲು ಮುಂದಾಗಿ. 80% ಅಥವಾ 90% ರಷ್ಟು ಚಾರ್ಜ್​ ಮಾಡುವುದು ಸೂಕ್ತ. ಸ್ಮಾರ್ಟ್​ಫೋನ್​ನಲ್ಲಿರುವುದು​ ಲಿಥಿಯಂ ಬ್ಯಾಟರಿಯಾಗಿದೆ. ಹಾಗಾಗಿ ಸರಿಯಾದ ಸಮಯಕ್ಕೆ ಚಾರ್ಜ್​ ಮಾಡಿರಿ.
Published by: Harshith AS
First published: June 5, 2021, 2:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories