ಗೂಗಲ್​ ಪಿಕ್ಸೆಲ್​ 3 XL ಮಾಹಿತಿ ಸೋರಿಕೆ


Updated:August 25, 2018, 1:35 PM IST
ಗೂಗಲ್​ ಪಿಕ್ಸೆಲ್​ 3 XL  ಮಾಹಿತಿ ಸೋರಿಕೆ

Updated: August 25, 2018, 1:35 PM IST
ಗೂಗಲ್​ ಅಭಿವೃದ್ಧಿ ಪಡಿಸಿದ ಮೊಬೈಲ್​ಗಳಾದ ಪಿಕ್ಸೆಲ್​ ಶ್ರೇಣಿಯ ಮೊಬೈಲ್​ಗಳು ಸಾಮಾನ್ಯವಾಗಿ ಅಕ್ಟೊಬರ್​ ತಿಂಗಳಾಂತ್ಯದಲ್ಲಿ ಮಾರುಕಟ್ಟೆಗೆ ಪ್ರವೇಶಿಸುತ್ತವೆ. ಆದರೆ ಈ ಬಾರಿ ಪಿಕ್ಸೆಲ್​ 3 XL ಅಕ್ಟೋಬರ್​ ತಿಂಗಳ ಮೊದಲೇ ಬಿಡುಗಡೆಯಾಗುವ ಸಾಧ್ಯತೆಯಿದ್ದು, ಮೊಬೈಲ್​ನ ಹಲವು ಚಿತ್ರಗಳು ಸೋರಿಕೆಯಾಗಿವೆ.

ಉಕ್ರೇನಿನ ಛೋರ್​ ಬಜಾರ್​ನ ಡೀಲರ್​ಗಳ ಪ್ರಕಾರ ಈಗಾಗಲೇ ಈ ಮೊಬೈಲ್​ ನಕಲು ಪ್ರತಿಗಳು 2000 ಡಾಲರ್​ಗಿಂತಲೂ ಅಧಿಕ ಸಂಖ್ಯೆಯಲ್ಲಿ ಮಾರಾಟವಾಗಿದ್ದು, ಮೊಬೈಲ್​ನ ಮುಂಭಾಗ,. ಕ್ಯಾಮೆರಾ, ಬ್ಯಾಕ್​ಪ್ಯಾನಲ್​ ಎಲ್ಲವೂ ಲೀಕ್​ ಆಗಿದೆ.



@wylsacom ಟ್ವೀಟ್​ನಲ್ಲಿ ಗೂಗಲ್​ ಪಿಕ್ಸೆಲ್​ 3 XL ಚಿತ್ರಗಳು ಸೋರಿಕೆಯಾಗಿದ್ದು, ಈಗಿರುವ ಪಿಕ್ಸೆಲ್​ 2 XL ಮಾದರಿಯಲ್ಲೇ ಕಾಣಿಸಿಕೊಂಡಿದ್ದು, ಡಿಸ್​ಪ್ಲೇನಲ್ಲಿ ಮಾತ್ರಾ ಮಹತ್ವದ ಬದಲಾವಣೆ ಕಂಡಿದ್ದು, ನೋಚ್​ ಡಿಸ್​ಪ್ಲೇ ಮಾಡಲಾಗಿದೆ. ಇನ್ನು ಮೊಬೈಲ್​ನ ಸಂಪೂರ್ಣ ವಿಶ್ಲೇಷಣೆ ಕುರಿತು GSMArena ವರದಿ ಮಾಡಿದ್ದು, ಆ್ಯಕ್ಟೀವ್​ ಎಡ್ಜ್​ ಡಿಸೈನ್​ ಆಯ್ಕೆಯನ್ನು ಮಾಡಲಾಗಿದೆ.

ಈ ಮೊಬೈಲ್​ಗಳಿಗೆ ಹೆಡ್​ಫೋನ್​ ಜ್ಯಾಕ್​ ಕೂಡಾ ನೀಡಲಾಗಿದ್ದ, ಇದೇ ಮೊದಲ ಬಾರಿಗೆ ಗೂಗಲ್​ ತನ್ನ ಮೊಬೈಲ್​ಗಳಿಗೆ ಹೆಡ್​ಫೋನ್​ ಸಪೋರ್ಟ್​ ನೀಡುತ್ತಿದೆ. ಇದರೊಂದಿಗೆ ಪಿಕ್ಸಲ್ ಬಡ್ಸ್​ ಎಂಬ ಇಯರ್​ಫೋನ್​ ಕೂಡಾ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಈ ಹಿಂದೆ ಬಂದಿದ್ದ ಸುದ್ದಿಗಳ ಪ್ರಕಾರ 6.71 ಇಂಚಿನ ಡಿಸ್​ಪ್ಲೇಯನ್ನು ಪಿಕ್ಸೆಲ್​ 3 XL ಹೊಂದಿದ್ದು, ಕ್ವಾಲ್ಕಂ ಸ್ನಾಪ್​ಡ್ರಾಗನ್​ 845 ಪ್ರೊಸೆಸರ್​ ನೀಡಲಾಗಿದೆ.
First published:August 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ