• Home
  • »
  • News
  • »
  • tech
  • »
  • Technology: ಹೇಳಿದಾಗೆ ಕೇಳುತ್ತಂತೆ ಈ ಪಕ್ಷಿಗಳು! ಏನಿದು ಹೊಸ ಆವಿಷ್ಕಾರ?

Technology: ಹೇಳಿದಾಗೆ ಕೇಳುತ್ತಂತೆ ಈ ಪಕ್ಷಿಗಳು! ಏನಿದು ಹೊಸ ಆವಿಷ್ಕಾರ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅಂದಿನಿಂದ, ಹಲವಾರು ಜಾಗತಿಕ ಸಂಶೋಧಕರು ಈ ಕ್ಷೇತ್ರದಲ್ಲಿ ಸೇರಿಕೊಂಡಿದ್ದಾರೆ, ಜೀರುಂಡೆಗಳು, ಜೇನುನೊಣಗಳು, ಗೆಕ್ಕೋಗಳು(ಹಲ್ಲಿ), ಇಲಿಗಳು ಮತ್ತು ಶಾರ್ಕ್‌ಗಳು ಸೇರಿದಂತೆ ಅನೇಕ ಪ್ರಾಣಿಗಳಿಗೆ ಇದೇ ತಂತ್ರಜ್ಞಾನವನ್ನು ಅನ್ವಯಿಸಿದ್ದಾರೆ.

  • Share this:

ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳಲ್ಲಿ ಬಳಸಲು ಅನುಕೂಲವಾಗುವಂತೆ ಸೌರಶಕ್ತಿಯಿಂದ ಪಕ್ಷಿಗಳ ಮೆದುಳನ್ನು (Birds Brain) ನಿಯಂತ್ರಿಸುವಲ್ಲಿ ಚೀನಾ ವಿಜ್ಞಾನಿಗಳ (China Scientist) ತಂಡ ಯಶಸ್ವಿಯಾಗಿದೆ. ಚೀನಾದ ಮಾಧ್ಯಮಗಳ ಇತ್ತೀಚಿನ ವರದಿಯ ಪ್ರಕಾರ, ದೇಶದ ಸಂಶೋಧಕರ ತಂಡವೊಂದು ಇತ್ತೀಚೆಗೆ ಸುಮಾರು ಎರಡು ಗಂಟೆಗಳ ಕಾಲ ಪಾರಿವಾಳವನ್ನು (Pigeon) ಹಾರಿಸಲು ಸೌರಶಕ್ತಿ ಚಾಲಿತ ಮೆದುಳಿನ ನಿಯಂತ್ರಣ ಗ್ಯಾಜೆಟ್ ಅನ್ನು ಬಳಸಿದೆ ಎಂದು ಹೇಳಿಕೊಂಡಿದೆ. ಇದು ಚೀನಾದಲ್ಲಿ ಅಳವಡಿಸಿದ ಹೊಸರೀತಿಯ ತಂತ್ರಜ್ಞಾನವಾಗಿದೆ (Technology).


ಪೂರ್ವ ಚೀನಾದ ಶಾಂಡೋಂಗ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಎಲೆಕ್ಟ್ರಿಕಲ್ ಮತ್ತು ಆಟೊಮೇಷನ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಹುವಾಯ್ ರೂಟುವೊ ಈ ಸಂಶೋಧನೆಯ ನೇತೃತ್ವ ವಹಿಸಿದ್ದರು ಎನ್ನಲಾಗಿದೆ.


ಪಕ್ಷಿಗಳ ಮಿದುಳಿನ ನಿಯಂತ್ರಣಕ್ಕಾಗಿ ಸೌರ ಶಕ್ತಿ ಅಳವಡಿಕೆ


ಪ್ರಯೋಗದಲ್ಲಿ ವಿಜ್ಞಾನಿಗಳ ತಂಡ ಪಾರಿವಾಳವನ್ನು ಬಳಸಿಕೊಂಡಿದೆ. ಪಾರಿವಾಳದ ತಲೆಯ ಮೇಲೆ ಅಳವಡಿಸಲಾದ ನಿಯಂತ್ರಣ ಸಾಧನಕ್ಕೆ ಶಕ್ತಿ ನೀಡಲು, ವಿಜ್ಞಾನಿಗಳು ಪಾರಿವಾಳದ ಹಿಂಭಾಗಕ್ಕೆ ಸೌರ ಫಲಕವನ್ನು ಇರಿಸಿದ್ದರು. ಅದು ಸರಿಸುಮಾರು ನಮ್ಮ ಸ್ಮಾರ್ಟ್‌ಫೋನ್ ಪರದೆಯ ಗಾತ್ರದಲ್ಲಿದೆ ಎಂದು ಚೀನಾದ ಪೀರ್-ರಿವ್ಯೂಡ್ ಜರ್ನಲ್ ಆಫ್ ಬಯೋಮೆಡಿಕಲ್ ಎಂಜಿನಿಯರಿಂಗ್‌ನಲ್ಲಿ ಸಂಶೋಧನೆ ತಂಡ ಪ್ರಕಟಿಸಿದೆ.


ಇದನ್ನೂ ಓದಿ: ಇನ್​ಸ್ಟಾಗ್ರಾಮ್​ನಲ್ಲಿ ಹೆಚ್ಚು ಲೈಕ್, ವೀವ್ಸ್ ಬರಬೇಕಾ? ಈ ಟೈಮ್​ನಲ್ಲಿ ಪೋಸ್ಟ್ ಹಾಕಿ


45 ನಿಮಿಷಗಳ ಕಾಲ ಮಾನವನ ಆದೇಶಗಳನ್ನು ಪಾಲಿಸಿದ ಪಾರಿವಾಳ


ಪಾರಿವಾಳಗಳ ಮೇಲಿನ ಮೆದುಳಿನ ನಿಯಂತ್ರಣ ಅಧ್ಯಯನಗಳು, ಪಕ್ಷಿಗಳು ಸುಮಾರು 45 ನಿಮಿಷಗಳ ಕಾಲ ಮಾನವನ ಆದೇಶಗಳನ್ನು ಪಾಲಿಸುವಲ್ಲಿ ಯಶಸ್ವಿಯಾಗಿವೆ ಎಂದು ವರದಿಗಳು ತೋರಿಸಿವೆ. ಪಕ್ಷಿಗಳಲ್ಲಿ ಅಳವಡಿಸಲಾದ ಮತ್ತು ಅವು ಸಾಗಿಸಬಹುದಾದ ಸಣ್ಣ ಬ್ಯಾಟರಿಯಿಂದ ಇದು ಸಂಭವಿಸಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.


ಸೌರ ಫಲಕವನ್ನು ಸಣ್ಣ ಲಿಥಿಯಂ ಬ್ಯಾಟರಿಯ ಜೊತೆ ಅಳವಡಿಕೆ


ಮನೆಯಿಂದ ವೈರ್‌ಲೆಸ್ ಸಂಪರ್ಕವನ್ನು ನಿರ್ವಹಿಸುವಾಗ ಪಾರಿವಾಳದ ತಲೆಯ ಮೇಲೆ ಮೆದುಳಿನ ನಿಯಂತ್ರಣ ಸಾಧನಕ್ಕೆ ಶಕ್ತಿ ತುಂಬಲು, ಈ ಸೌರ ಫಲಕವನ್ನು ಸಣ್ಣ ಲಿಥಿಯಂ ಬ್ಯಾಟರಿಯ ಜೊತೆ ರೀಚಾರ್ಜ್ ಮಾಡಲು ತಂಡವು ಇದನ್ನು ವಿನ್ಯಾಸಗೊಳಿಸಿದೆ.


ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳಲ್ಲಿ ಸಹಕಾರಿ


SCMP ಯೊಂದಿಗೆ ಮಾತನಾಡಿದ ಪ್ರಾಣಿ ರೊಬೊಟಿಕ್ಸ್ ಕ್ಷೇತ್ರದ ಬೀಜಿಂಗ್ ಮೂಲದ ಸಂಶೋಧಕರೊಬ್ಬರು, "ಮೆದುಳಿನ ನಿಯಂತ್ರಣ ತಂತ್ರಜ್ಞಾನವು ಕೆಲವು ಮಿಲಿಟರಿ ಅಪ್ಲಿಕೇಶನ್‌ಗಳಲ್ಲಿ (ಪಿಎಲ್‌ಎ) ತುಂಬಾ ಸಹಾಯಗಳನ್ನು ಮಾಡುತ್ತದೆ. ಭಯೋತ್ಪಾದನಾ ಕಾರ್ಯಾಚರಣೆಗಳು ಅಥವಾ ಯುದ್ಧ ಕಾರ್ಯಾಚರಣೆಗಳಂತಹ ಅಪಾಯಕಾರಿ ಸಂದರ್ಭಗಳಲ್ಲಿ ಗುಪ್ತಚರ ಸಂಗ್ರಹಣೆಯ ಶಸ್ತ್ರಾಸ್ತ್ರಗಳು ಮತ್ತು ಸಾಧನಗಳನ್ನು ಸಾಗಿಸಲು ಈ ತಂತ್ರಜ್ನಾನ ಸಹಾಯವಾಗುತ್ತದೆ" ಎಂದರು.


ಬ್ಲೂ ಶಾರ್ಕ್‌ನಲ್ಲಿ ಸಾಧನ


ಮೆದುಳಿನ ನಿಯಂತ್ರಣ ಸಾಧನಗಳೊಂದಿಗೆ ಅಳವಡಿಸಲಾದ ಬ್ಲೂ ಶಾರ್ಕ್‌ಗಳನ್ನು ಬಳಸಿಕೊಂಡು ಪರೀಕ್ಷೆಗಳನ್ನು ಆಯೋಜಿಸಲಾಗಿದೆ ಎಂದು ತಿಳಿದುಬಂದಿದೆ. ಈ ಶಾರ್ಕ್‌ಗಳನ್ನು ಹಡುಗುಗಳು ಪತ್ತೆಹಚ್ಚಲಾಗದಂತಹ ಸಂದರ್ಭಗಳಲ್ಲಿ ಇದನ್ನು ಸೇರಿಸುವ ಗುರಿಯನ್ನು ತಂಡ ಹೊಂದಿದೆ.


ಸಣ್ಣ ರೇಡಿಯೋ ಟ್ರಾನ್ಸ್‌ಮಿಟರ್‌ನಿಂದ ನಿಯಂತ್ರಿಸಲ್ಪಡುವ ಸಾಧನಗಳು, ವಾಸನೆಗೆ ಮೀಸಲಾದ ಶಾರ್ಕ್‌ನ ಮೆದುಳಿನ ಪ್ರದೇಶದ ಬಲ ಅಥವಾ ಎಡಭಾಗವನ್ನು ಉತ್ತೇಜಿಸುತ್ತದೆ ಎಂದು ವರದಿಯಾಗಿದೆ, ಇದು ಮೀನುಗಳನ್ನು ಮಾನವನ ಆದೇಶದ ದಿಕ್ಕಿನಲ್ಲಿ ಚಲಿಸುವಂತೆ ಪ್ರೇರೇಪಿಸುತ್ತದೆ.


ವಿಜ್ನಾನಿಗಳ ಪರೀಕ್ಷೆಯ ನಂತರದ ಪ್ರತಿಕ್ರಿಯೆ


ವಿಜ್ಞಾನಿಗಳ ಪರೀಕ್ಷೆಯಲ್ಲಿ ಐದು ಪಾರಿವಾಳಗಳನ್ನು ಒಳಗೊಂಡ ಪ್ರಯೋಗವು ಹಕ್ಕಿಗಳು 80-90% ನಿಖರತೆಯೊಂದಿಗೆ ಬಲ ಅಥವಾ ಎಡಕ್ಕೆ ತಿರುಗುವಂತಹ ಸರಳ ಆಜ್ಞೆಗಳನ್ನು ಪಾಲಿಸಿದ್ದಾಗಿ ವರದಿಯಾಗಿದೆ. ಆಯಾಸ ಅಥವಾ ಅನಿರೀಕ್ಷಿತ ಗೊಂದಲಗಳ ಕಾರಣ ಪಕ್ಷಿಗಳು ಕೆಲವೊಮ್ಮೆ ಪ್ರತಿಕ್ರಿಯಿಸಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.


ಸಂಭಾವ್ಯ ಮಿಲಿಟರಿ ಅಪ್ಲಿಕೇಶನ್‌ಗಳು


ಜಪಾನಿನ ಸಂಶೋಧನಾ ತಂಡವು 1997ರಲ್ಲಿ ಅಂತರರಾಷ್ಟ್ರೀಯ ರೊಬೊಟಿಕ್ಸ್ ಸಮ್ಮೇಳನದ ಪ್ರಸ್ತುತಿಯಲ್ಲಿ ಪ್ರಾಣಿಗಳ ಮೆದುಳಿನ ನಿಯಂತ್ರಣವನ್ನು ಪ್ರದರ್ಶಿಸಿತು. ಜಿರಳೆಯನ್ನು ಸರಳ ರೇಖೆಯಲ್ಲಿ ಚಲಿಸುವಂತೆ ಮಾಡಲು ಅವರು ವಿದ್ಯುತ್ ಪ್ರಚೋದಕಗಳನ್ನು ಬಳಸಿದರು.


ಇದನ್ನೂ ಓದಿ: ಹೈಡ್‌ ಮಾಡಿದ ಸ್ಟೇಟಸ್‌ ನೋಡ್ಬೇಕಾ? ಈ ಟ್ರಿಕ್ಸ್ ಬಳಸಿ, ತುಂಬಾ ಸಿಂಪಲ್​!


ಅಂದಿನಿಂದ, ಹಲವಾರು ಜಾಗತಿಕ ಸಂಶೋಧಕರು ಈ ಕ್ಷೇತ್ರದಲ್ಲಿ ಸೇರಿಕೊಂಡಿದ್ದಾರೆ, ಜೀರುಂಡೆಗಳು, ಜೇನುನೊಣಗಳು, ಗೆಕ್ಕೋಗಳು(ಹಲ್ಲಿ), ಇಲಿಗಳು ಮತ್ತು ಶಾರ್ಕ್‌ಗಳು ಸೇರಿದಂತೆ ಅನೇಕ ಪ್ರಾಣಿಗಳಿಗೆ ಇದೇ ತಂತ್ರಜ್ಞಾನವನ್ನು ಅನ್ವಯಿಸಿದ್ದಾರೆ.

First published: