ವಿಶ್ವದ ಅತ್ಯಂತ ದುರ್ಬಲ ಪಾಸ್​ವರ್ಡ್ ಪಟ್ಟಿ ಬಿಡುಗಡೆ​: ಈ ಪಟ್ಟಿಯಲ್ಲಿ ನಿಮ್ಮ ಪಾಸ್​ವರ್ಡ್​ ಇದೆಯೇ ಎಂದು ಪರೀಕ್ಷಿಸಿಕೊಳ್ಳಿ

Worlds Most Hacked Passwords: ಇನ್ನು ಫುಟ್​ಬಾಲ್ ಪ್ರಿಯರು ಕೆಲ ಸಾಮಾನ್ಯ ಪಾಸ್​ವರ್ಡ್​ಗಳನ್ನು ಬಳಸುತ್ತಿದ್ದು, ಇದರಿಂದ ಕೂಡ ಅಪಾಯವಿದೆ.

zahir | news18
Updated:April 22, 2019, 3:21 PM IST
ವಿಶ್ವದ ಅತ್ಯಂತ ದುರ್ಬಲ ಪಾಸ್​ವರ್ಡ್ ಪಟ್ಟಿ ಬಿಡುಗಡೆ​: ಈ ಪಟ್ಟಿಯಲ್ಲಿ ನಿಮ್ಮ ಪಾಸ್​ವರ್ಡ್​ ಇದೆಯೇ ಎಂದು ಪರೀಕ್ಷಿಸಿಕೊಳ್ಳಿ
@ZDNet
  • News18
  • Last Updated: April 22, 2019, 3:21 PM IST
  • Share this:
ಡಿಜಿಟಲ್​ ಯುಗದಲ್ಲಿ ಕಂಪ್ಯೂಟರ್​, ಮೊಬೈಲ್​​ನಿಂದ ಹಿಡಿದು ಪ್ರತಿಯೊಂದು ಖಾತೆಗಳ ಸುರಕ್ಷತೆಗಾಗಿ ಪಾಸ್​ವರ್ಡ್​ಗಳನ್ನು ಬಳಸಲಾಗುತ್ತದೆ. ಪಾಸ್​ವರ್ಡ್​ ರೂಪಿಸಲು ಕನಿಷ್ಠ ಆರು ಅಕ್ಷರಗಳನ್ನು ನಮೂದಿಸಬೇಕೆಂಬ ನಿಯಮವಿದೆ. ಹೀಗಾಗಿ ಮೊಬೈಲ್ ಹಾಗೂ ಇತರೆಡೆಗಳಲ್ಲಿ ಹಿಂದು ಮುಂದು ನೋಡದೇ 123456 ಎಂಬ ನಂಬರ್ ಒತ್ತುವವರೇ ಹೆಚ್ಚು.

ಇದೀಗ ಇಂಗ್ಲೆಂಡ್​ನ ಸೈಬರ್ ಭದ್ರತಾ ಸೆಂಟರ್(NCSC) ಇಂತಹ ಪಾಸ್​ವರ್ಡ್​ಗಳ ಪಟ್ಟಿಯೊಂದನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ವಿಶ್ವದ ಅತ್ಯಂತ ದುರ್ಬಲವಾಗಿರುವ ಪಾಸ್​ವರ್ಡ್​ಗಳನ್ನು ತಿಳಿಸಿದ್ದು, ಅದರಲ್ಲಿ 123456 ಪಾಸ್​ವರ್ಡ್​ ಮೊದಲ ಸ್ಥಾನ ಪಡೆದುಕೊಂಡಿದೆ. ಈ ಪಾಸ್​ವರ್ಡ್​ ಅನ್ನು ಈಗಾಗಲೇ 2 ಕೋಟಿ 30 ಲಕ್ಷ ಬಾರಿ ಇಡಲಾಗಿದೆ ಎಂದು ವರದಿಯಲ್ಲಿ ತಿಳಿಸಿದೆ. ಶೀಘ್ರದಲ್ಲೇ ಪಾಸ್​ವರ್ಡ್ ನಮೂದಿಸಲು ಮತ್ತು ಸುಲಭವಾಗಿ ನೆನಪಿಟ್ಟುಕೊಳ್ಳಲು ನೀವು ತೋರಿಸುವ ಅತೀ ಬುದ್ಧಿವಂತಿಕೆ ಮೂರ್ಖತನಕ್ಕೆ ಕಾರಣವಾಗುತ್ತಿದೆ ಎಂಬುದಕ್ಕೆ ಈ ವರದಿ ಉದಾಹರಣೆ.

ಅತೀ ದುರ್ಬಲ ಪಾಸ್​ವರ್ಡ್ಗಳು​:

ಇನ್ನು ಈ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿರುವುದು ಸಹ ಸಂಖ್ಯೆಯನ್ನೊಳಗೊಂಡ ಪಾಸ್​ವರ್ಡ್​. 123456789 ಎಂಬ ಪಾಸ್​ವರ್ಡ್​ ಅನ್ನು ಸಹ ಅತೀ ಹೆಚ್ಚು ಜನರು ಬಳಸುತ್ತಿದ್ದು, ಇದು ಕೂಡ ಸಾಮಾನ್ಯ ಪಾಸ್​ವರ್ಡ್​ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಮೂರನೇ ಸ್ಥಾನದಲ್ಲಿ ‘qwerty’, 4ನೇ ಸ್ಥಾನದಲ್ಲಿ 'password' ಮತ್ತು ಐದನೇ ಸ್ಥಾನದಲ್ಲಿ ‘1111111’ ಸಂಖ್ಯೆಗಳು ಟಾಪ್​ 5 ದುರ್ಬಲ ಪಾಸ್​ವರ್ಡ್​ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ಹಾಗೆಯೇ ಪಾಸ್​ವರ್ಡ್​ ಆಗಿ ಬಳಸಲ್ಪಡುತ್ತಿರುವ ಹೆಸರುಗಳಲ್ಲಿ ‘Ashley’ ಮೊದಲ ಸ್ಥಾನವನ್ನು ಅಲಂಕರಿಸಿದೆ. ನಂತರ ಸ್ಥಾನಗಳಲ್ಲಿ ಕ್ರಮವಾಗಿ ‘Michael’,‘Daniel’,‘Jessica’ ಮತ್ತು ‘Charlie’ ಪಾಸ್​ವರ್ಡ್​ಗಳನ್ನು ಬಳಸಲಾಗುತ್ತಿದೆ. ಇಂತಹ ಪಾಸ್​ವರ್ಡ್​ಗಳನ್ನು ಇಡುವುದರರಿಂದ ಹ್ಯಾಕರ್​ಗಳು ನಿಮ್ಮ ಖಾತೆಯನ್ನು ಅತೀ ಸುಲಭವಾಗಿ ಹ್ಯಾಕ್ ಮಾಡಿಕೊಳ್ಳುವ ಸಾಧ್ಯತೆಯಿದೆ ಎಂದು NCSC ಎಚ್ಚರಿಸಿದೆ.

ಇನ್ನು ಫುಟ್​ಬಾಲ್ ಪ್ರಿಯರು ಕೆಲ ಸಾಮಾನ್ಯ ಪಾಸ್​ವರ್ಡ್​ಗಳನ್ನು ಬಳಸುತ್ತಿದ್ದು, ಇದರಿಂದ ಕೂಡ ಅಪಾಯವಿದೆ. ಈ ವರದಿಯಲ್ಲಿ LiverPool are champion ಮತ್ತು Chelsea ಎಂಬ ಪಾಸ್​ವರ್ಡ್​ಗಳನ್ನು ಹೆಚ್ಚಾಗಿ ಬಳಸಲಾಗುತ್ತಿದೆ ಎಂದು ತಿಳಿಸಲಾಗಿದೆ.

ಸಾಮಾನ್ಯವಾಗಿ ಬಳಸಲ್ಪಡುತ್ತಿರುವ ದುರ್ಬಲ ಪಾಸ್​ವರ್ಡ್​ ಮತ್ತು ಬಳಕೆಯ ಸಂಖ್ಯೆ:123456 (2. 32 ಕೋಟಿ)
123456789 (77 ಲಕ್ಷ)
qwerty (38 ಲಕ್ಷ)
password (36 ಲಕ್ಷ)
1111111 (31 ಲಕ್ಷ)
12345678 (29 ಲಕ್ಷ)
abc123 (28 ಲಕ್ಷ)
1234567 (25 ಲಕ್ಷ)
password1 (24 ಲಕ್ಷ)
12345 (23 ಲಕ್ಷ)
1234567890 (22 ಲಕ್ಷ)
123123 (22 ಲಕ್ಷ)
000000 (19 ಲಕ್ಷ)
Iloveyou (16 ಲಕ್ಷ)
1234 (13 ಲಕ್ಷ)
1q2w3e4r5t (12 ಲಕ್ಷ)
Qwertyuiop (11 ಲಕ್ಷ)
123 (10 ಲಕ್ಷ)
Monkey (9.8 ಲಕ್ಷ)
Dragon (9.6 ಲಕ್ಷ)

2018 ರ ವರದಿ​:
ಇದು 2018 ರಲ್ಲಿ ಜಾರಿಯಲ್ಲಿದ್ದ ದುರ್ಬಲ ಪಾಸ್​ವರ್ಡ್​ಗಳ ವರದಿಯಾಗಿದ್ದು, ಇಂತಹ ಪಾಸ್​ವರ್ಡ್​ಗಳನ್ನು ಬಳಸುವುದರಿಂದ ಬಳಕೆದಾರರ ಡೇಟಾವನ್ನು ಅತೀ ಸುಲಭವಾಗಿ ಹ್ಯಾಕ್ ಮಾಡಿಕೊಳ್ಳಲಾಗುತ್ತಿದೆ. ಅಲ್ಲದೆ ದುರ್ಬಲ ಪಾಸ್​ವರ್ಡ್​ಗಳನ್ನು ಒಳಗೊಂಡಿರುವ ಅನೇಕ ಖಾತೆಗಳು ಈಗಾಗಲೇ ಹ್ಯಾಕ್​ಗೆ ಒಳಗಾಗಿವೆ ಎಂದು ತಿಳಿಸಲಾಗಿದೆ. ಕಳೆದ 6 ವರ್ಷಗಳಿಂದ ದುರ್ಬಲ ಪಾಸ್​ವರ್ಡ್​ ಪಟ್ಟಿಯಲ್ಲಿ 123456 ಹಾಗೂ password ಎಂಬ ಪಾಸ್​ವರ್ಡ್​ ಕಾಣಿಕೊಳ್ಳುತ್ತಿದ್ದು, ಇಂತಹ ಸುಲಭ ಪಾಸ್​ವರ್ಡ್​ಗಳನ್ನು ಬಳಸದಂತೆ ಎಚ್ಚರಿಸಿದ್ದಾರೆ. ನಂಬರ್​ಗಳೊಂದಿಗೆ ಅಕ್ಷರಗಳನ್ನು ಸೇರಿಸಿ ಪ್ರಬಲ ಪಾಸ್​ವರ್ಡ್​ ಸೃಷ್ಟಿಸುವ ಮೂಲಕ  ಹ್ಯಾಕರ್​ಗಳಿಂದ ನಿಮ್ಮ ಖಾತೆಯನ್ನು ಕಾಪಾಡಿಕೊಳ್ಳಬೇಕೆಂದು ಇದೇ ವೇಳೆ ಡೇಟಾ ತಜ್ಞರು ಸಲಹೆ ನೀಡಿದ್ದಾರೆ.
First published:April 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading