Smartphones: ಇಂದು ಬಿಡುಗಡೆಯಾಗುತ್ತಿವೆ ಈ ಮೂರು ಸ್ಮಾರ್ಟ್​ಫೋನ್​ಗಳು!

POCO F2 Pro | Vivo V19 | Honor 9X Pro: ಮೇ.11 ರಂದು ರಿಯಲ್​ಮಿ ಕಂಪೆನಿ ನಾರ್ಜೊ 10 ಮತ್ತು 10ಎ ಫೋನ್​ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿತು. ಇಂದು ಪೊಕೊ ಕಂಪೆನಿಯ ಎಫ್​​​2 ಪ್ರೊ, ಹಾನರ್​ 9ಎಕ್ಸ್​ ಪ್ರೊ ಮತ್ತು ವಿವೋ ಕಂಪೆನಿ ವಿ19 ಬಿಡುಗಡೆಯಾಗಲಿದೆ.

news18-kannada
Updated:May 12, 2020, 7:30 AM IST
Smartphones: ಇಂದು ಬಿಡುಗಡೆಯಾಗುತ್ತಿವೆ ಈ ಮೂರು ಸ್ಮಾರ್ಟ್​ಫೋನ್​ಗಳು!
ಸ್ಮಾರ್ಟ್​ಫೋನ್
  • Share this:
POCO F2 Pro | Vivo V19 | Honor 9X Pro - ಕೊರೋನಾ ಲಾಕ್​​ಡೌನ್​ ನಡುವೆಯು ಕೆಲವು ಸ್ಮಾರ್ಟ್​ಫೋನ್​ ಕಂಪೆನಿಗಳು ನೂತನವಾಗಿ ಸಿದ್ಧಪಡಿಸಿದ್ದ ಫೋನ್​ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಇಂದು ಪೊಕೊ, ಹಾನರ್​​ ಮತ್ತು ವಿವೋ ಕಂಪೆನಿಗಳು ಸಿದ್ಧಪಡಿಸಿರುವ ಸ್ಮಾರ್ಟ್​ಫೋನ್​ಗಳು ಮಾರುಕಟ್ಟೆಗೆ ಪ್ರವೇಶಿಸಲಿವೆ

ಮೇ.11 ರಂದು ರಿಯಲ್​ಮಿ ಕಂಪೆನಿ ನಾರ್ಜೊ 10 ಮತ್ತು 10ಎ ಫೋನ್​ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿತು. ಇಂದು ಪೊಕೊ ಕಂಪೆನಿಯ ಎಫ್​​​2 ಪ್ರೊ, ಹಾನರ್​ 9ಎಕ್ಸ್​ ಪ್ರೊ ಮತ್ತು ವಿವೋ ಕಂಪೆನಿ ವಿ19 ಬಿಡುಗಡೆಯಾಗಲಿದೆ.

ಪೊಕೊ ಎಫ್​​2 ಪ್ರೊ ವಿಶೇಷತೆ:

ಪೊಕೊ ಕಂಪೆನಿ ಮಾರುಕಟ್ಟೆಗೆ ಪರಿಚಯಿಸುತ್ತಿರುವ ಎಫ್​​2 ಪ್ರೊ ಸ್ಮಾರ್ಟ್​ಫೋನ್​​​ 6.67 ಇಂಚಿನ ಫುಲ್​​ ಹೆಚ್​ಡಿ+ ಅಮೋಲ್ಡ್​ ಡಿಸ್​ಪ್ಲೇಯನ್ನು ಹೊಂದಿದ್ದು, ಸ್ನಾಪ್​ಡ್ರ್ಯಾಗನ್​​ ಎಸ್​ಒಸಿಯಿ.ದ ಕಾರ್ಯ ನಿರ್ವಹಿಸಲಿದೆ. ಜೊತೆಗೆ ಆ್ಯಂಡ್ರಾಯ್ಡ್​​ 10 MIUI  ಬೆಂಬಲವನ್ನು ಪಡೆದಿದೆ.

ನೂತನ ಸ್ಮಾರ್ಟ್​ಫೋನ್​​ ಹಿಂಭಾಗದಲ್ಲಿ ನಾಲ್ಕು ಕ್ಯಾಮೆರಾವನ್ನು ನೀಡಿದೆ. 64 ಮೆಗಾಫಿಕ್ಸೆಲ್​ ಪ್ರೈಮರಿ ಕ್ಯಾಮೆರಾ, 5 ಮೆಗಾಫಿಕ್ಸೆಲ್​ ಕ್ಯಾಮೆರಾ, 13 ಮೆಗಾಫಿಕ್ಸೆಲ್​ ಕ್ಯಾಮೆರಾ, ಜೊತೆಗೆ 2 ಮೆಗಾಫಿಕ್ಸೆಲ್​ ಕ್ಯಾಮೆರಾ ಅಳವಡಿಸಿದೆ. ಸೆಲ್ಫಿಗಾಗಿ 20 ಮೆಗಾಫಿಕ್ಸೆಲ್​ ಪಾಪ್​ ಅಪ್​​​ ಕ್ಯಾಮೆರಾ ನೀಡಿದೆ.

ಗ್ರಾಹಕರಿಗಾಗಿ ಈ ಸ್ಮಾರ್ಟ್​ಫೋನ್​ 6GB + 128GB, 8GB + 128GB, 8GB + 256GB ವೇರಿಯಂಟ್​ನಲ್ಲಿ ಸಿಗಲಿದೆ. ಇನ್ನು ಧೀರ್ಘ ಕಾಳದ ಬಾಳಿಕೆಗಾಗಿ 4,700mAh ಬ್ಯಾಟರಿಯನ್ನು ಹೊಂದಿದೆ.

ವಿವೋ ವಿ19ಭಾರತದ ಮಾರುಕಟ್ಟೆಗೆ ನೂತನವಾಗಿ ಬಿಡುಗಡೆಯಾಗುತ್ತಿರುವ ವಿವೋ ವಿ 19 ಸ್ಮಾರ್ಟ್​ಫೋನ್​​ ​​​ 6.44 ಇಂಚಿನ ಅಮೋಲ್ಡ್​ ಪಂಚ್​ ಹೋಲ್​​ ಡಿಸ್​ಪ್ಲೇಯನ್ನು ಹೊಂದಿದ್ದು, ಸ್ನಾಪ್​ಡ್ರ್ಯಾಗನ್​​ 712ನಿಂದ ಕಾರ್ಯ ನಿರ್ವಹಿಸಲಿದೆ. ಜೊತೆಗೆ ಆ್ಯಂಡ್ರಾಯ್ಡ್​​ 10 ಫನ್​​ಟಚ್​​​ 10 ಸ್ಕಿನ್​ ಬೆಂಬಲವನ್ನು ಪಡೆದಿದೆ.

ನೂತನ ಸ್ಮಾರ್ಟ್​ಫೋನ್​​ ಹಿಂಭಾಗದಲ್ಲಿ ನಾಲ್ಕು ಕ್ಯಾಮೆರಾವನ್ನು ನೀಡಿದೆ. 48 ಮೆಗಾಫಿಕ್ಸೆಲ್​ ಪ್ರೈಮರಿ ಕ್ಯಾಮೆರಾ, 8 ಮೆಗಾಫಿಕ್ಸೆಲ್​ ಕ್ಯಾಮೆರಾ, 2 ಮೆಗಾಫಿಕ್ಸೆಲ್​ ಕ್ಯಾಮೆರಾ, ಜೊತೆಗೆ 2 ಮೆಗಾಫಿಕ್ಸೆಲ್​ ಕ್ಯಾಮೆರಾ ಅಳವಡಿಸಿದೆ. ಸೆಲ್ಫಿಗಾಗಿ 32 ಮೆಗಾಫಿಕ್ಸೆಲ್, 8 ಮೆಗಾಫಿಕ್ಸೆಲ್ ​ಕ್ಯಾಮೆರಾ ನೀಡಿದೆ.

ಗ್ರಾಹಕರಿಗಾಗಿ ಈ ಸ್ಮಾರ್ಟ್​ಫೋನ್​ 8GB RAM ಆಯ್ಕೆಯಲ್ಲಿ 128GB ಮತ್ತು 256GB ಸ್ಟೊರೇಜ್​​ ಆಯ್ಕೆಯಲ್ಲಿ ಸಿಗಲಿದೆ. ಇನ್ನು ಧೀರ್ಘ ಕಾಲದ ಬಾಳಿಕೆಗಾಗಿ 4,500mAh​​​ ಬ್ಯಾಟರಿಯನ್ನು ಹೊಂದಿದೆ.

ಹಾನರ್​​ 9ಎಕ್ಸ್​​​ ಪ್ರೊ

ಹಾನರ್​​​ 9ಎಕ್ಸ್​ ಪ್ರೊ​ ಸ್ಮಾರ್ಟ್​ಫೋನ್​​ ​​​ 6.59 ಇಂಚಿನ ಅಮೋಲ್ಡ್​ ಪಂಚ್​ ಹೋಲ್​​ ಡಿಸ್​ಪ್ಲೇಯನ್ನು ಹೊಂದಿದ್ದು, ಕಿರಿನ್​​​ 810 ಎಸ್​ಒಸಿಯಿಂದ ಕಾರ್ಯ ನಿರ್ವಹಿಸಲಿದೆ. ಜೊತೆಗೆ ಆ್ಯಂಡ್ರಾಯ್ಡ್​​ 10 ಒಎಸ್​​ ​ಬೆಂಬಲವನ್ನು ಪಡೆದಿದೆ.

ನೂತನ ಸ್ಮಾರ್ಟ್​ಫೋನ್​​ ಹಿಂಭಾಗದಲ್ಲಿ ನಾಲ್ಕು ಕ್ಯಾಮೆರಾವನ್ನು ನೀಡಿದೆ. 48 ಮೆಗಾಫಿಕ್ಸೆಲ್​ ಪ್ರೈಮರಿ ಕ್ಯಾಮೆರಾ, 2 ಮೆಗಾಫಿಕ್ಸೆಲ್​ ಕ್ಯಾಮೆರಾ, 8 ಮೆಗಾಫಿಕ್ಸೆಲ್​ ರೇರ್​​ ಕ್ಯಾಮೆರಾ ಅಳವಡಿಸಿದೆ. ಸೆಲ್ಫಿಗಾಗಿ 16 ಮೆಗಾಫಿಕ್ಸೆಲ್​ ಪಾಪ್​ ಅಪ್​​​ ಕ್ಯಾಮೆರಾ ನೀಡಿದೆ.

ಗ್ರಾಹಕರಿಗಾಗಿ ಈ ಸ್ಮಾರ್ಟ್​ಫೋನ್​ 6GB RAM  ​ ಮತ್ತು 256GB ಸ್ಟೋರೇಜ್​ ಆಯ್ಕೆಯಲ್ಲಿ  ಸಿಗಲಿದೆ. ಇನ್ನು ಧೀರ್ಘ ಕಾಳದ ಬಾಳಿಕೆಗಾಗಿ 4,700mAh​​​​​​ ಬ್ಯಾಟರಿಯನ್ನು ಹೊಂದಿದೆ.

Realme Narzo series: ರಿಯಲ್​ಮಿ ನಾರ್ಜೊ ಸಿರೀಸ್​ ಸ್ಮಾರ್ಟ್​ಫೋನ್​ ಬಿಡುಗಡೆ; ಫೀಚರ್​, ಬೆಲೆಯ ಬಗ್ಗೆ ಮಾಹಿತಿ ಇಲ್ಲಿದೆ
First published: May 12, 2020, 7:17 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading