ಸ್ಮಾರ್ಟ್ಫೋನ್ಗಳು (Smartphones) ಮಾರುಕಟ್ಟೆಯಲ್ಲಿ ಇತ್ತೀಚೆಗೆ ಭಾರೀ ಬೇಡಿಕೆಯಲ್ಲಿರುವ ಸಾಧನವಾಗಿದೆ. ಸ್ಮಾರ್ಟ್ಫೋನ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಪ್ರತಿಯೊಬ್ಬರೂ ಕೂಡ ತಾನು ಖರೀದಿಸುವ ಸ್ಮಾರ್ಟ್ಫೋನ್ಗಳು ಗುಣಮಟ್ಟದ್ದಾಗಿರಬೇಕು, ಉತ್ತಮ ವಿನ್ಯಾಸ (Good Design) ಹೊಂದಿರಬೇಕೆಂದು ಬಯಸುತ್ತಾರೆ. ಆದರೆ ಇವೆಲ್ಲವೂ ಕೆಲವೊಂದು ಸ್ಮಾರ್ಟ್ಫೋನ್ಗಳು ಹೊಂದಿರುವುದಿಲ್ಲ. ಆದರೆ ಇತ್ತೀಚೆಗೆ ಅಂತೂ ತಿಂಗಳಿಗೆ 5 ರಿಂದ 7 ರಂತೆ ಸ್ಮಾರ್ಟ್ಫೋನ್ಗಳು ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿದೆ. ಒಂದಕ್ಕೊಂದು ಸ್ಪರ್ಧೆಯನ್ನು ನೀಡುವ ಉದ್ದೇಶದಿಂದ ಕಂಪೆನಿಗಳು ಸಹ ಗುಣಮಟ್ಟದ ಫೀಚರ್ಸ್ (Features) ಜೊತೆಗೆ, ಉತ್ತಮ ವಿನ್ಯಾಸ ಹೊಂದಿದ ಮೊಬೈಲ್ಗಳನ್ನು ಪರಿಚಯಿಸುತ್ತಿದೆ. ಇದೀಗ ಫೆಬ್ರವರಿ ಒಂದೇ ತಿಂಗಳಿನಲ್ಲಿ ಹತ್ತಕ್ಕೂ ಹೆಚ್ಚು ಸ್ಮಾರ್ಟ್ಫೋನ್ಗಳು ಬಿಡುಗಡೆಯಾಗಲು ರೆಡಿಯಾಗಿವೆ.
ಮಾರುಕಟ್ಟೆಯಲ್ಲಿ ಮುಂದಿನ ತಿಂಗಳು ಅಂದರೆ ಫೆಬ್ರವರಿಯಲ್ಲಿ ಸಾಕಷ್ಟು ಸ್ಮಾರ್ಟ್ಫೋನ್ಗಳು ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಸಜ್ಜಾಗಿ ನಿಂತಿದೆ. ಅದರಲ್ಲೂ ಪ್ರಮುಖ ಮೊಬೈಲ್ ಬ್ರಾಂಡ್ಗಳು ಫೆಬ್ರವರಿ ತಿಂಗಳಿನಲ್ಲಿ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸುತ್ತಿದೆ. ಹಾಗಿದ್ರೆ ಮಾರುಕಟ್ಟೆಗೆ ಮುಂಬರುವಂತಹ ಸ್ಮಾರ್ಟ್ಫೋನ್ಗಳು ಯಾವುದು? ಫೀಚರ್ಸ್ ಹೇಗಿದೆ ಎಂದುನ್ನು ಈ ಲೇಖನದಲ್ಲಿದೆ ಓದಿ.
ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್23 5ಜಿ ಸ್ಮಾರ್ಟ್ಫೋನ್
ಈ ಬಾರಿಯ ಬಹು ನಿರೀಕ್ಷಿತ ಸ್ಮಾರ್ಟ್ಫೋನ್ಗಳಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್23 ಸೀರಿಸ್ನ ಸ್ಮಾರ್ಟ್ಫೋನ್ಗಳು ಸಹ ಒಂದಾಗಿದೆ. ಇನ್ನು ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್23 ಸೀರಿಸ್ನ ಸ್ಮಾರ್ಟ್ಫೋನ್ಗಳು ಭಾರತದಲ್ಲಿ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಫೆಬ್ರವರಿ 1, 2023 ರಂದು ಲಾಂಚ್ ಆಗುವ ನಿರೀಕ್ಷೆಯಿದೆ. ಇನ್ನು ಈ ಸೀರಿಸ್ನ ಅಡಿಯಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್23, ಗ್ಯಾಲಕ್ಸಿ ಎಸ್ 23 ಪ್ಲಸ್ ಮತ್ತು ಗ್ಯಾಲಕ್ಸಿ ಎಸ್23 ಅಲ್ಟ್ರಾ ಸ್ಮಾರ್ಟ್ಫೋನ್ಗಳು ಬಿಡುಗಡೆಯಾಗುತ್ತವೆ ಎಂದು ಕಂಪೆನಿ ತಿಳಿಸಿದೆ.
ಒನ್ಪ್ಲಸ್ 11 5ಜಿ ಸ್ಮಾರ್ಟ್ಫೋನ್
ಒನ್ಪ್ಲಸ್ ಕಂಪೆನಿಯ ಈ ಹಿಂದೆಯೂ ಸಾಕಷ್ಟು ಸ್ಮಾರ್ಟ್ಫೋನ್ಗಳು ಬಿಡುಗಡೆಯಾಗಿವೆ, ಈ ಮಧ್ಯೆ 2023ರಲ್ಲಿ ಒನ್ಪ್ಲಸ್ ಕಂಪೆನಿ ತನ್ನ ಬ್ರಾಂಡ್ನ ಅಡಿಯಲ್ಲಿ ಫೆಬ್ರವರಿ 7 ರಂದು ಒನ್ಪ್ಲಸ್ 11 5ಜಿ ಸ್ಮಾರ್ಟ್ಫೋನ್ ಅನ್ನು ಲಾಂಚ್ ಮಾಡಲು ರೆಡಿಯಾಗಿದೆ. ಇದಲ್ಲದೆ ಈ ಸ್ಮಾರ್ಟ್ಫೋನ್ ಬೆಲೆ ಮತ್ತು ಫೀಚರ್ಸ್ ಬಗ್ಗೆ ಮಾಹಿತಿ ಸೋರಿಕೆಯಾಗಿದ್ದು, ಇದು ಎರಡು ರ್ಯಾಮ್ ಮಾದರಿಗಳಲ್ಲಿ ಪರಿಚಯಿಸುವ ಸಾಧ್ಯತೆಯಿದೆ.
ಇದರ ಮೂಲ ಮಾದರಿಯು 8ಜಿಬಿ ರ್ಯಾಮ್ ಜೊತೆಗೆ 128ಜಿಬಿ ಸ್ಟೋರೇಜ್ ಅನ್ನು ಹೊಂದಿರಬಹುದು. ಇದರ ಬೆಲೆ 35,000 ರಿಂದ 40,000 ರೂಪಾಯಿ ಎಂದು ಅಂದಾಜಿಸಲಾಗಿದೆ. ಇದರ ಎರಡನೇ ಮಾದರಿಯಲ್ಲಿ, 16ಜಿಬಿ ರ್ಯಾಮ್ ಮತ್ತು 512ಜಿಬಿ ಸ್ಟೋರೇಜ್ ಅನ್ನು ಹೊಂದಿರಬಹುದು ಈ ಮಾದರಿಯ ಸ್ಮಾರ್ಟ್ಫೋನ್ನ ಬೆಲೆ 40,000 ರಿಂದ 45,000 ರೂಪಾಯಿ ಇರಬಹುದು ಎಂದು ಅಂದಾಜಿಸಲಾಗಿದೆ.
ಮೊಟೊರೊಲಾ ಎಡ್ಜ್ 40 ಪ್ರೋ ಸ್ಮಾರ್ಟ್ಫೋನ್
ಮೊಟೊರೊಲಾ ಎಡ್ಜ್ 40 ಪ್ರೋ ಸ್ಮಾರ್ಟ್ಫೋನ್ ಅನ್ನು ಮುಂದಿನ ತಿಂಗಳು ಲಾಂಚ್ ಮಾಡುವ ನಿರೀಕ್ಷೆ ಇದೆ. ಇದು ಕಳೆದ ತಿಂಗಳಷ್ಟೇ ಚೀನಾದಲ್ಲಿ ಲಾಂಚ್ ಆಗಿದೆ. ಈ ಫೋನ್ ಮೊಟೊ ಎಕ್ಸ್40 ಸ್ಮಾರ್ಟ್ಫೋನ್ನ ಮರುಬ್ಯಾಡ್ಜ್ ಆವೃತ್ತಿಯಾಗಿದೆ ಎಂದು ತಿಳಿದುಬಂದಿದೆ. ಆದಾಗ್ಯೂ ಮಾರ್ಚ್ 2022 ರವರೆಗೆ ಫೋನ್ ಭಾರತದಲ್ಲಿ ಲಭ್ಯ ಇರುವುದಿಲ್ಲ ಎನ್ನುವ ಮಾತು ಸಹ ಕೇಳಿಬರುತ್ತಿವೆ.
ಪೋಕೋ ಎಕ್ಸ್5 ಸೀರಿಸ್ ಸ್ಮಾರ್ಟ್ಫೋನ್
ಪೊಕೊ X5 ಸರಣಿಯ ಸ್ಮಾರ್ಟ್ಫೋನ್ ಸಹ ಮುಂದಿನ ತಿಂಗಳು ಅಂದರೆ ಫೆಬ್ರವರಿ 23 ರಂದು ಅನಾವರಣ ಆಗಲಿದೆ ಎಂದು ವರದಿಯಾಗಿದೆ. ಇನ್ನು ಈ ಸ್ಮಾರ್ಟ್ಫೋನ್ ಸದ್ಯ ಕೆಲವೊಂದು ಫೋಟೋಗಳು ಅನಾವರಣವಾಗಿದ್ದು, ಇದರಲ್ಲಿ ಭಾರತೀಯ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರು ಕಾಣಿಸಿಕೊಂಡಿದ್ದಾರೆ.
ಐಕ್ಯೂ ನಿಯೋ 7 ಸೀರಿಸ್ ಸ್ಮಾರ್ಟ್ಫೋನ್
ಬಜೆಟ್ ಬೆಲೆಯಲ್ಲಿ ಸ್ಮಾರ್ಟ್ಫೋನ್ಗಳನ್ನು ಉತ್ಪಾದಿಸುವಲ್ಲಿ ಐಕ್ಯೂ ಕಂಪೆನಿ ಮುಂಚೂಣಿಯಲ್ಲಿದೆ. ಇದೀಗ ಈ ಕಂಪೆನಿಯ ಸ್ಮಾರ್ಟ್ಫೋನ್ಗಳು ಐಕ್ಯೂ ನಿಯೋ 7 ಸೀರಿಸ್ನಲ್ಲಿ ಬಿಡುಗಡೆಯಾಗಲಿದ್ದು, ಇದು ಫೆಬ್ರವರಿ 16 ರಂದು ಭಾರತದ ಮಾರುಕಟ್ಟೆಗೆ ಕಾಲಿಡಲಿದೆ.
ಇದನ್ನೂ ಓದಿ: ಬಿಡುಗಡೆಗೂ ಮೊದಲೇ ಮಾರುಕಟ್ಟೆಯಲ್ಲಿ ಸದ್ದು ಮಾಡ್ತಿದೆ ಒಪ್ಪೋ ಸ್ಮಾರ್ಟ್ಫೋನ್! ಫೀಚರ್ಸ್ ಹೇಗಿದೆ ಗೊತ್ತಾ?
ಶಿಯೋಮಿ 13 ಸೀರಿಸ್ ಸ್ಮಾರ್ಟ್ಫೋನ್ಗಳು
ಶಿಯೋಮಿ ಕಂಪೆನಿ ಇದುವರೆಗೆ ಹಲವಾರು ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುವ ಮೂಲಕ ಭಾರತದ ಬೇಡಿಕೆಯಲ್ಲಿರುವ ಮೊಬೈಲ್ ಕಂಪೆನಿ ಇದಾಗಿದೆ. ಇನ್ನು ಈ ಕಂಪೆನಿ ಶಿಯೋಮಿ 13 ಸೀರಿಸ್ನ ಸ್ಮಾರ್ಟ್ಫೋನ್ಗಳು ಇದೇ ಫೆಬ್ರವರಿ 27ರಂದು ಜಾಗತಿಕವಾಗಿ ಬಿಡುಗಡೆಯಾಗುತ್ತದೆ ಎಂಬ ನಿರೀಕ್ಷೆಯಿದೆ. ಹಾಗೂ ಈ ಸೀರಿಸ್ನ ಅಡಿಯಲ್ಲಿ ಸದ್ಯ ಚೀನಾದಲ್ಲಿ ಶಿಯೋಮಿ 13, ಶಿಯೋಮಿ 13 ಪ್ರೋ ಮತ್ತು ಶಿಯೋಮಿ 13 ಲೈಟ್ ಸ್ಮಾರ್ಟ್ಫೋನ್ಗಳು ಬಿಡುಗಡೆಯಾಗಿವೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ