• Home
  • »
  • News
  • »
  • tech
  • »
  • 2023 Best Smartphones: 2023ರಲ್ಲಿ ಸದ್ದು ಮಾಡಲು ಸಜ್ಜಾಗಿರುವ ಸ್ಮಾರ್ಟ್​ಫೋನ್​ಗಳಿವು! ಫೀಚರ್ಸ್​ ನೋಡಿದ್ರೆ ಗ್ಯಾರಂಟಿ ತಗೊಳ್ತೀರಾ

2023 Best Smartphones: 2023ರಲ್ಲಿ ಸದ್ದು ಮಾಡಲು ಸಜ್ಜಾಗಿರುವ ಸ್ಮಾರ್ಟ್​ಫೋನ್​ಗಳಿವು! ಫೀಚರ್ಸ್​ ನೋಡಿದ್ರೆ ಗ್ಯಾರಂಟಿ ತಗೊಳ್ತೀರಾ

ಸ್ಮಾರ್ಟ್​​ಫೋನ್ಸ್​

ಸ್ಮಾರ್ಟ್​​ಫೋನ್ಸ್​

ಜನರೆಲ್ಲರೂ ಬಹಳ ಕಾತುರದಿಂದ ಕಾಯುತ್ತಿರುವ ವಿಷಯ ಏನೆಂದರೆ ಮುಂದಿನ ವರ್ಷದಲ್ಲಿ ಸ್ಮಾರ್ಟ್​​ಫೋನ್​ಗಳು ಹೇಗಿರಬಹುದೆಂದು. ಅದ್ರಲ್ಲೂ ಕೆಲ ಕಂಪನಿಗಳು ಮುಂಬರುವ ಸ್ಮಾರ್ಟ್​ಫೋನ್​ಗಳ ಬಗ್ಗೆ ಮಾಹಿತಿಯನ್ನು ನೀಡಿದೆ. ಅವುಗಳ ಪಟ್ಟಿಯಲ್ಲಿರುವ, 2023ರ ನಿರೀಕ್ಷೆಯಲ್ಲಿರುವ ಸ್ಮಾರ್ಟ್​ಫೋನ್​ಗಳು ಯಾವುದೆಲ್ಲಾ ಎಂಬುದನ್ನು ಈ ಲೇಖನದ ಮೂಲಕ ತಿಳಿಯಿರಿ.

ಮುಂದೆ ಓದಿ ...
  • Share this:

    ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷ (New Year) ಬಂದಾಗುತ್ತೆ. 2022ರಲ್ಲಿ ಟೆಕ್ನಾಲಜಿ ಕಂಪನಿಗಳು ಬಹಳಷ್ಟು ಪ್ರಗತಿಯನ್ನು ಕಂಡಿವೆ. ಅದ್ರಲ್ಲೂ ಮೊಬೈಲ್​ ಕಂಪನಿಗಳು ಬಹಳಷ್ಟು ಬೇಡಿಕೆಯನ್ನು ಹೊಂದಿತ್ತು. ಈ ವರ್ಷದಲ್ಲಿ ತಿಂಗಳಿಗೆ ಒಂದರಂತೆ ಕಂಪನಿಗಳು ಸ್ಮಾರ್ಟ್​ಫೋನ್​ಗಳನ್ನು ಲಾಂಚ್ (Smartphones Launch)​ ಮಾಡುತ್ತಿತ್ತು. ಅದೇ ರೀತಿ ಮುಂದಿನ ವರ್ಷದಲ್ಲಿ ಇದಕ್ಕಿಂತಲೂ ಹೆಚ್ಚು ಸದ್ದು ಮಾಡಲು ಮೊಬೈಲ್​ ಕಂಪನಿಗಳು ರೆಡಿಯಾಗಿದೆ. 2023ರಲ್ಲಿ ಅನೇಕ ಸ್ಮಾರ್ಟ್​ಫೋನ್​ಗಳು ಮಾರುಕಟ್ಟೆಗೆ ಕಾಲಿಡೋದು ಮಾತ್ರ ಪಕ್ಕಾ ಆಗಿದೆ. ಜನರು ನಿರೀಕ್ಷೆಯೂ ಮಾಡಿರದ ಸ್ಮಾರ್ಟ್​​ಫೋನ್​ಗಳು 2023ರಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಟೆಕ್ನಾಲಜಿಯಲ್ಲಿ ಇದೀಗ 5ಜಿ ಬಹಳಷ್ಟು ಸದ್ದು ಮಾಡುತ್ತಿದೆ. ಅದೇ ರೀತಿಯಲ್ಲಿ 2023ರಲ್ಲಿ 5ಜಿ (5G) ಜೊತೆ ಈ ಕೆಲ ಸ್ಮಾರ್ಟ್​ಫೋನ್ ಕಂಪನಿಗಳು ಕೂಡ ಸದ್ದು ಮಾಡಲು ಸಿದ್ಧತೆ ನಡೆಸುತ್ತಿದೆ.


    ಜನರೆಲ್ಲರೂ ಬಹಳ ಕಾತುರದಿಂದ ಕಾಯುತ್ತಿರುವ ವಿಷಯ ಏನೆಂದರೆ ಮುಂದಿನ ವರ್ಷದಲ್ಲಿ ಸ್ಮಾರ್ಟ್​​ಫೋನ್​ಗಳು ಹೇಗಿರಬಹುದೆಂದು. ಅದ್ರಲ್ಲೂ ಕೆಲ ಕಂಪನಿಗಳು ಮುಂಬರುವ ಸ್ಮಾರ್ಟ್​ಫೋನ್​ಗಳ ಬಗ್ಗೆ ಮಾಹಿತಿಯನ್ನು ನೀಡಿದೆ. ಅವುಗಳ ಪಟ್ಟಿಯಲ್ಲಿರುವ, 2023ರ ನಿರೀಕ್ಷೆಯಲ್ಲಿರುವ ಸ್ಮಾರ್ಟ್​ಫೋನ್​ಗಳು ಯಾವುದೆಲ್ಲಾ ಎಂಬುದನ್ನು ಈ ಲೇಖನದ ಮೂಲಕ ತಿಳಿಯಿರಿ.


    ಒನ್​​ಪ್ಲಸ್​ 11 ಸ್ಮಾರ್ಟ್​ಫೋನ್


    2023 ರಲ್ಲಿ ಬಿಡುಗಡೆಯಾಗಲಿರುವ ಜನಪ್ರಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಒನ್‌ಪ್ಲಸ್‌ 11 ಕೂಡ ಒಂದಾಗಿದೆ. ಮೊದಲಿಗೆ ಚೀನಾದಲ್ಲಿ ಬಿಡುಗಡೆಯಾಗಲಿರುವ ಈ ಸ್ಮಾರ್ಟ್‌ಫೋನ್‌ ಫೆಬ್ರವರಿಯಲ್ಲಿ ಭಾರತದ ಮಾರುಕಟ್ಟೆಗೆ ಲಾಂಚ್‌ ಆಗಲಿದೆ. ಈಗಾಗಲೇ ಭಾರತದಲ್ಲಿ ಈ ಸ್ಮಾರ್ಟ್‌ಫೋನ್‌ ಫೆಬ್ರವರಿ 7 ರಂದು ಅನಾವರಣಗೊಳ್ಳುವುದು ಅಧಿಕೃತವಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್ 8 Gen 2 ಪ್ರೊಸೆಸರ್‌ ಹೊಂದಿರುವ ಒನ್‌ಪ್ಲಸ್‌ ಬ್ರ್ಯಾಂಡ್‌ನ ಮೊದಲ ಸ್ಮಾರ್ಟ್‌ಫೋನ್ ಎಂದು ಗುರುತಿಸಿಕೊಂಡಿದೆ.


    ಇದನ್ನೂ ಓದಿ: 1 ಸಾವಿರಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಖರೀದಿಸಿ ಆ್ಯಪಲ್​ ಏರ್​ಪೋಡ್ಸ್​! ಫ್ಲಿಪ್​ಕಾರ್ಟ್​​​​ ಭರ್ಜರಿ ಆಫರ್


    ಐಫೋನ್ 15 ಸ್ಮಾರ್ಟ್​​ಫೋನ್


    ಆ್ಯಪಲ್​ ಕಂಪನಿ ಪ್ರತೀ ಬಾರಿ ಹೊಸವರ್ಷ ಬಂದಾಗಲೂ ಹೊಸ ಫೀಚರ್ಸ್​​ನೊಂದಿಗೆ ಸ್ಮಾರ್ಟ್​​ಫೋನ್​ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತದೆ. ಅದೇ ರೀತಿ 2023ರಲ್ಲಿ ಆ್ಯಪಲ್ ಕಂಪನಿಯಿಂದ ಹೊಸ ಐಫೋನ್‌ ಬಿಡುಗಡೆ ಮಾಡುವುದು ಖಚಿತವಾಗಿದೆ. ಆದರೆ ಈ ವರ್ಷ ಬಿಡುಗಡೆಯಾಗಿರುವ ಐಫೋನ್ 14 ಮಾದರಿಗಿಂತ ಭಿನ್ನವಾಗಿ ಐಫೋನ್ 15 ಎಂಟ್ರಿ ನೀಡಲಿದೆ ಎಂದು ಕಂಪನಿ ಹೇಳಿದೆ.


    ಸ್ಮಾರ್ಟ್​​ಫೋನ್ಸ್​


    ಅದರಲ್ಲೂ ವಿಶೇಷವಾಗಿ ಮೂಂಬರುವ ಐಫೋನ್ 15 ಕಡಿಮೆ ಬೆಲೆಯನ್ನು ಹೊಂದಿರುವ ಸಾಧ್ಯತೆಯಿದೆ. ಯಾಕೆಂದರೆ ಐಫೋನ್ 14 ದುಬಾರಿ ಬೆಲೆ ಎಂಬ ಕಾರಣಕ್ಕೆ ಜನಪ್ರಿಯತೆ ಪಡೆದುಕೊಳ್ಳುವಲ್ಲಿ ವಿಫಲವಾಗಿದೆ. ಇದೇ ಕಾರಣಕ್ಕೆ ಐಫೋನ್ 15 ಸೀರಿಸ್​, ಐಫೋನ್ 14 ಗಿಂತ ಕಡಿಮೆ ಬೆಲೆಯಲ್ಲಿ ಬರುವ ಮಾರಕಟ್ಟೆಗೆ ಬರುವ ಸಾಧ್ಯತೆಯಿದೆ.


    ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್​23 ಸ್ಮಾರ್ಟ್​ಫೋನ್​


    ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್​23 ಸೀರಿಸ್​ ಫೆಬ್ರವರಿ 1, 2023 ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಸರಣಿಯಲ್ಲಿ ಗ್ಯಾಲಕ್ಸಿ ಎಸ್​23, ಗ್ಯಾಲಕ್ಸಿ ಎಸ್​23 ಪ್ಲಸ್‌ ಮತ್ತು ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್​23 ಅಲ್ಟ್ರಾ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗುವ ಸಾಧ್ಯತೆಯಿದೆ.


    ಇನ್ನು ಈ ಸ್ಮಾರ್ಟ್‌ಫೋನ್‌ನ ಜಾಗತಿಕ ಸೀರಿಸ್​ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8 Gen 2 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ ಎಂದು ಕೆಲ ವರದಿಗಳು ತಿಳಿಸಿದೆ. ಆದರೆ ಭಾರತದಲ್ಲಿ ಎಕ್ಸಿನೋಸ್‌ ಆವೃತ್ತಿಯಲ್ಲಿಯೇ ಬಿಡುಗಡೆಯಾಗಲಿದೆ. ಇನ್ನು ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್​23 ಅಲ್ಟ್ರಾ ಸ್ಮಾರ್ಟ್​​ಫೋನ್‌ 200 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸಿಂಗಲ್‌ ರಿಯರ್‌ ಕ್ಯಾಮೆರಾವನ್ನು ಹೊಂದಿರಲಿದೆ ಎಂದು ಹೇಳಲಾಗಿದೆ


    ಗೂಗಲ್​ ಪಿಕ್ಸೆಲ್​ 8


    ಇನ್ನು ಮುಂದಿನ ವರ್ಷ ಬಿಡುಗಡೆಯಾಗುವ ಪ್ರಮುಖ ಫೋನ್‌ಗಳ ಸಾಲಿಗೆ ಗೂಗಲ್‌ ಪಿಕ್ಸೆಲ್ 8 ಸಿರಿಸ್​ ಕೂಡ ಸೇರಲಿದೆ. ಇನ್ನು ಗೂಗಲ್‌ ಪಿಕ್ಸೆಲ್ 8 ಕ್ಯಾಮೆರಾ ಹೊಸ HDR ತಂತ್ರವನ್ನು ಅಳವಡಿಸಿಕೊಳ್ಳುತ್ತದೆ ಎಂದು ವರದಿಯಾಗಿದೆ.


    ಐಫೋನ್


    ಇದರಿಂದ ಹೆಚ್ಚು ಉತ್ತಮ ಫೋಟೋಗಳನ್ನು, ವಿಡಿಯೋಗಳನ್ನು ಕ್ಲಿಕ್ ಮಾಡಲು ಅವಕಾಶ ಸಿಗಲಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ ಟೆನ್ಸರ್‌ ಜಿ3 ಪ್ರೊಸೆಸರ್‌ನ ಬೆಂಬಲದೊಂದಿಗೆ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ. ಆದರೆ ಇದರ ಕ್ಯಾಮೆರಾ ಪಿಕ್ಸೆಲ್‌ ಸಾಮರ್ಥ್ಯದ ಬಗ್ಗೆ ಇನ್ನು ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಸ್ಮಾರ್ಟ್‌ಫೋನ್‌ ದಿನಾಂಕ ಹತ್ತಿರ ವಾದಂತೆ ಇದರ ಇನ್ನಷ್ಟು ಮಾಹಿತಿ ಬಹಿರಂಗವಾಗಲಿದೆ ಎಂದು ಹೇಳಲಾಗಿದೆ.

    Published by:Prajwal B
    First published: