• Home
  • »
  • News
  • »
  • tech
  • »
  • Tech Tips: ಸ್ಮಾರ್ಟ್​​ವಾಚ್​ಗಳಲ್ಲಿರುವ ಯಾರಿಗೂ ತಿಳಿಯದ ಫೀಚರ್ಸ್​​ಗಳಿವು! ಹೇಗಿದೆ ನೋಡಿ

Tech Tips: ಸ್ಮಾರ್ಟ್​​ವಾಚ್​ಗಳಲ್ಲಿರುವ ಯಾರಿಗೂ ತಿಳಿಯದ ಫೀಚರ್ಸ್​​ಗಳಿವು! ಹೇಗಿದೆ ನೋಡಿ

ಸ್ಮಾರ್ಟ್​​ವಾಚ್​​

ಸ್ಮಾರ್ಟ್​​ವಾಚ್​​

ಇತ್ತೀಚಿನ ಸ್ಮಾರ್ಟ್​ವಾಚ್​​ಗಳು ಸಮಯದ ಜೊತೆಗೆ ಬಳಕೆದಾರರ ಆರೋಗ್ಯದ ಮೇಲೂ ಹೆಚ್ಚು ಕಾಳಜಿಯನ್ನು ವಹಿಸುತ್ತದೆ. ಹಾಗೆಯೇ ಇನ್ನೂ ಹಲವಾರು ಫೀಚರ್ಸ್​ಗಳನ್ನು ಒಳಗೊಂಡಿದೆ. ಹಾಗಿದ್ರೆ ನಾವು ಬಳಕೆ ಮಾಡುವಂತಹ ಸ್ಮಾರ್ಟ್​​ವಾಚ್​ಗಳು ಯಾವೆಲ್ಲಾ ಫೀಚರ್ಸ್​ ಗಳನ್ನು ಹೊಂದಿರುತ್ತದೆ, ಅದು ಯಾವ ರೀತಿ ಕಾರ್ಯನಿರ್ವಹಿಸುತ್ತದೆ ಎಂದು ಈ ಲೇಖನದ ಮೂಲಕ ತಿಳೀಯೋಣ

ಮುಂದೆ ಓದಿ ...
  • Share this:

    ಸ್ಮಾರ್ಟ್​​ವಾಚ್​ಗಳು (Smartwatches) ಇತ್ತೀಚೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಭಾರೀ ಸಂಚಲನವನ್ನು ಮೂಡಿಸಿದ ಸಾಧನಗಳಲ್ಲಿ ಒಂದಾಗಿದೆ. ಹಿಂದೆಲ್ಲಾ ಈ ವಾಚ್​ಗಳನ್ನು ಕೇವಲ ಸಮಯವನ್ನು ನೋಡಲೆಂದು ಮಾತ್ರ ಬಳಸುತ್ತಿದ್ದರು. ಆದರೆ ಈಗ ಈ ಸ್ಮಾರ್ಟ್​​​ವಾಚ್​ಗಳೇ ಒಂದು ಫ್ಯಾಶನ್ (Fashion)​ ಆಗಿಬಿಟ್ಟಿದೆ. ಇತ್ತೀಚೆಗಂತೂ ಸ್ಮಾರ್ಟ್​​ವಾಚ್​ಗಳು ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್ (Trend) ಅನ್ನೇ ಸೃಷ್ಟಿ ಮಾಡಿದೆ ಎಂದರೆ ತಪ್ಪಾಗದು. ಹೊಸ ಹೊಸ ಟೆಕ್ನಾಲಜಿ ಮೂಲಕ ಕಂಪೆನಿಗಳು ಕೂಡ ಹೊಸ ವಿನ್ಯಾಸದೊಂದಿಗೆ ಈ ಸ್ಮಾರ್ಟ್​ವಾಚ್​ಗಳನ್ನು ಪರಿಚಯಿಸುತ್ತಿದೆ. ಇದರಿಂದ ಗ್ರಾಹಕರು ಕೂಡ ಈ ಸಾಧನಗಳಿಗೆ ಬೇಗನೆ ಆಕರ್ಷಿತರಾಗಿತ್ತಾರೆ.


    ಇತ್ತೀಚಿನ ಸ್ಮಾರ್ಟ್​ವಾಚ್​​ಗಳು ಸಮಯದ ಜೊತೆಗೆ ಬಳಕೆದಾರರ ಆರೋಗ್ಯದ ಮೇಲೂ ಹೆಚ್ಚು ಕಾಳಜಿಯನ್ನು ವಹಿಸುತ್ತದೆ. ಹಾಗೆಯೇ ಇನ್ನೂ ಹಲವಾರು ಫೀಚರ್ಸ್​ಗಳನ್ನು ಒಳಗೊಂಡಿದೆ. ಹಾಗಿದ್ರೆ ನಾವು ಬಳಕೆ ಮಾಡುವಂತಹ ಸ್ಮಾರ್ಟ್​​ವಾಚ್​ಗಳು ಯಾವೆಲ್ಲಾ ಫೀಚರ್ಸ್​ ಗಳನ್ನು ಹೊಂದಿರುತ್ತದೆ, ಅದು ಯಾವ ರೀತಿ ಕಾರ್ಯನಿರ್ವಹಿಸುತ್ತದೆ ಎಂದು ಈ ಲೇಖನದ ಮೂಲಕ ತಿಳೀಯೋಣ.


    ಆ್ಯಕೆಲೆರೋಮೀಟರ್


    ಸ್ಮಾರ್ಟ್ ವಾಚ್‌ನಲ್ಲಿನ ಆ್ಯಕೆಲೆರೋಮೀಟರ್ ಬಳಕೆದಾರರ ಚಲನೆ ಮತ್ತು ಇತರೆ ಚಟುವಟಿಕೆಯ ಮಟ್ಟವನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ. ಇದರೊಂದಿಗೆ ದೈಹಿಕ ಚಟುವಟಿಕೆ ಮತ್ತು ಫಿಟ್‌ನೆಸ್ ಅನ್ನು ನಿಖರವಾಗಿ ಅಳೆಯಲಿದ್ದು, ಸುಟ್ಟ ಕ್ಯಾಲೊರಿಗಳನ್ನು ಟ್ರ್ಯಾಕ್ ಮಾಡುವ ಮೂಲಕ, ಸಂಚರಿಸಿದ ಹೆಜ್ಜೆಗಳು ಮತ್ತು ಪ್ರಯಾಣದ ದೂರವನ್ನು ಇದು ಮಾನಿಟರ್‌ ಮಾಡುತ್ತದೆ. ಹಾಗೆಯೇ ಲಿಫ್ಟ್ ಟು ವೇಕ್‌ನಂತಹ ಫೀಚರ್ಸ್‌ಗಳನ್ನೂ ಸಹ ಇದರಿಂದ ಬಳಕೆ ಮಾಡಬಹುದಾಗಿದೆ.




    ಜಿಪಿಎಸ್​


    ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ ಅಥವಾ ಜಿಪಿಎಸ್‌ ಎನ್ನುವುದು ಒಂದು ಸ್ಥಳವನ್ನು ಗುರುತಿಸಲು ಉಪಗ್ರಹಗಳಿಂದ ಸಹಾಯವನ್ನು ಪಡೆಯುವಂತಹ ಒಂದು ವ್ಯವಸ್ಥೆಯಾಗಿದೆ. ಈ ಫೀಚರ್​​ ರನ್‌ ಟ್ರ್ಯಾಕಿಂಗ್, ಸೈಕ್ಲಿಂಗ್ ಮತ್ತು ಇತರ ಹೊರಾಂಗಣ ಚಟುವಟಿಕೆಗಳಂತಹ ಫೀಚರ್ಸ್‌ಗಳನ್ನು ಇದು ಟ್ರ್ಯಾಕ್​ ಮಾಡುತ್ತದೆ. ಜೊತೆಗೆ ಟರ್ನ್-ಬೈ-ಟರ್ನ್ ನ್ಯಾವಿಗೇಷನ್‌ನಂತಹ ಸ್ಥಳ ಆಧಾರಿತ ಸೇವೆಗಳು ಮತ್ತು ಸ್ಥಳ ಆಧಾರಿತ ನೋಟಿಫಿಕೇಶನ್‌ಗಳು ಇದರಿಂದ ಲಭ್ಯವಾಗುತ್ತದೆ.


    ಹೃದಯ ಬಡಿತ ಸೆನ್ಸಾರ್​


    ಸ್ಮಾರ್ಟ್​ವಾಚ್​ಗಳಲ್ಲಿ ಹೃದಯ ಬಡಿತ ಸೆನ್ಸಾರ್ ಫೀಚರ್​ ಬಹಳ ವಿಶೇಷ ಫೀಚರ್​ ಎಂದು ಹೇಳಬಹುದು. ಇದನ್ನು ಫೋಟೋಪ್ಲೆಥಿಸ್ಮೊಗ್ರಾಮ್ (PPG) ಸೆನ್ಸಾರ್​ ಎಂದೂ ಸಹ ಕರೆಯಲಾಗುತ್ತದೆ. ಇದು ನಾಡಿಯ ರೇಟ್ ಅನ್ನು ನಿರ್ಧರಿಸಲು ಮತ್ತು ಅದನ್ನು ದಾಖಲಿಸಲು ಸಹಾಯ ಮಾಡಲಿದೆ.


    ಸ್ಮಾರ್ಟ್​​ವಾಚ್​​


    ಅಂದರೆ ಮಣಿಕಟ್ಟಿನ ಕ್ಯಾಪಿಲ್ಲರಿಗಳ ಮೂಲಕ ರಕ್ತದ ಚಲನೆಯನ್ನು ಪತ್ತೆಹಚ್ಚಲು ಬಳಸುವ ಸೆನ್ಸಾರ್​ ಇದಾಗಿದೆ. ಹಾಗೆಯೇ ಫಿಟ್‌ನೆಸ್ ಮತ್ತು ದೈಹಿಕ ಚಟುವಟಿಕೆಯ ಮಟ್ಟವನ್ನು ಅಳೆಯಲು ಇದನ್ನು ಬಳಕೆ ಮಾಡಬಹುದಾಗಿದ್ದು, ಬಿಪಿ ಅಥವಾ ಇತರ ಆರೋಗ್ಯ ಸಮಸ್ಯೆಗಳ ಯಾವುದೇ ಸೂಚನೆಗಳನ್ನು ಇದರಿಂದ ತಿಳಿದುಕೊಳ್ಳಬಹುದಾಗಿದೆ.


    ಗೈರೋಸ್ಕೋಪ್


    ಗೈರೋಸ್ಕೋಪ್ ಎಂಬುದು ಸ್ಮಾರ್ಟ್​​ವಾಚ್​ಗಳಲ್ಲಿರುವ ಮತ್ತೊಂದು ವಿಶೇಷ ಸೆನ್ಸಾರ್​ ಫೀಚರ್ ಎಂದರೆ ತಪ್ಪಾಗದು. ಈ ಫೀಚರ್​​ ಅನ್ನು ಹೊಂದಿರುವ ಸ್ಮಾರ್ಟ್​​ವಾಚ್​ ಅನ್ನು ಧರಿಸಿದವರು ತಮ್ಮ ಚಲನೆಯನ್ನು ಈ ಮೂಲಕ ಟ್ರ್ಯಾಕ್ ಮಾಡಬಹುದಾಗಿದೆ. ಹಾಗೆಯೇ ನ್ಯಾವಿಗೇಷನ್‌ನಂತಹ ಫೀಚರ್ಸ್‌ಗಳನ್ನು ಈ ಸೆನ್ಸಾರ್​ ಮೂಲಕ ಆನ್​ ಮಾಡಬಹುದಾಗಿದೆ.


    ಬಾರೋಮೀಟರ್​


    ನಿಮ್ಮ ಸ್ಮಾರ್ಟ್​ವಾಚ್​ನಲ್ಲಿ ಬಾರೋ ಮೀಟರ್ ಎಂಬ ಸೆನ್ಸಾರ್​ ಆಯ್ಕೆಯಿದ್ದರೆ ನಿಮ್ಮ ದೇಹದ ಉಸಿರಾಟದ ಒತ್ತಡವನ್ನು ತಿಳಿದುಕೊಳ್ಳಬಹುದಾಗಿದೆ. ಹಾಗೆಯೇ ಈ ಫೀಚರ್ ಬಳಕೆದಾರರಿಗೆ ಹವಾಮಾನ ಬದಲಾವಣೆಗಳನ್ನು ಸಹ ತಿಳಿಸುತ್ತದೆ.


    ಇದನ್ನೂ ಓದಿ: ಫೆಬ್ರವರಿಯಲ್ಲಿ ಮಾರುಕಟ್ಟೆಯಲ್ಲಿ ಲಾಂಚ್ ಆಗಲಿರುವ ಸ್ಮಾರ್ಟ್​​ಫೋನ್​ಗಳಿವು!


    ಇನ್ನು ಈ ಸೆನ್ಸಾರ್​ ಸಾಮರ್ಥ್ಯವನ್ನು ಹೊಂದಿದ ಸ್ಮಾರ್ಟ್​​ವಾಚ್​ ಅನ್ನು ಧರಿಸಿಕೊಂಡು ಕ್ಲೈಂಬಿಂಗ್ ಅಥವಾ ಹೈಕಿಂಗ್ ಮಾಡುವಾಗ ಎತ್ತರದಲ್ಲಿನ ಪ್ರದೇಶದ ಬದಲಾವಣೆಗಳನ್ನು ಟ್ರ್ಯಾಕ್ ಮಾಡುವುದು ಇದರಿಂದ ಸುಲಭವಾಗುತ್ತದೆ.

    Published by:Prajwal B
    First published: