• Home
 • »
 • News
 • »
 • tech
 • »
 • Solar Cell: ಇವು ಕೂದಲಿಗಿಂತಲೂ ತೆಳುವಾದ ಸೋಲಾರ್ ಸೆಲ್​ಗಳು, ಇದರ ಪವರ್ ಹೇಗಿದೆ ಗೊತ್ತಾ?

Solar Cell: ಇವು ಕೂದಲಿಗಿಂತಲೂ ತೆಳುವಾದ ಸೋಲಾರ್ ಸೆಲ್​ಗಳು, ಇದರ ಪವರ್ ಹೇಗಿದೆ ಗೊತ್ತಾ?

ಸೋಲಾರ್ ಸೆಲ್

ಸೋಲಾರ್ ಸೆಲ್

ಇವು ದೀರ್ಘ ಬಾಳಿಕೆ ಬರುವ ಹಾಗೂ ಫ್ಲಿಕ್ಸಿಬಲ್ ಗುಣಲಕ್ಷಣ ಹೊಂದಿರುವ ಸೌರ ಕೋಶಗಳಾಗಿದ್ದು (ಸೋಲಾರ್ ಸೆಲ್ಸ್) ಮನುಷ್ಯನ ಕೂದಲಿನಿಗಿಂತಲೂ ತೆಳುವಾಗಿದೆ. ಇದನ್ನು ಬಲಶಾಲಿಯಾದ ಫ್ರೇಮ್ ಗಳಿಗೆ ಸುಲಭವಾಗಿ ಅಂಟಿಸಬಹುದಾಗಿದ್ದು ಸರಳವಾಗಿ ಇದನ್ನು ಎಲ್ಲೆಡೆ ಬಳಸಬಹುದಾಗಿದೆ. 

 • News18 Kannada
 • 5-MIN READ
 • Last Updated :
 • New Delhi, India
 • Share this:

  ಇವು ದೀರ್ಘ ಬಾಳಿಕೆ (Long Lusting) ಬರುವ ಹಾಗೂ ಫ್ಲಿಕ್ಸಿಬಲ್ ಗುಣಲಕ್ಷಣ ಹೊಂದಿರುವ ಸೌರ ಕೋಶಗಳಾಗಿದ್ದು (ಸೋಲಾರ್ ಸೆಲ್ಸ್) (Solar Cell) ಮನುಷ್ಯನ ಕೂದಲಿನಿಗಿಂತಲೂ ತೆಳುವಾಗಿದೆ. ಇದನ್ನು ಬಲಶಾಲಿಯಾದ ಫ್ರೇಮ್​ಗಳಿಗೆ (Powerful Frame)  ಸುಲಭವಾಗಿ ಅಂಟಿಸಬಹುದಾಗಿದ್ದು ಸರಳವಾಗಿ ಇದನ್ನು ಎಲ್ಲೆಡೆ ಬಳಸಬಹುದಾಗಿದೆ. ಇಂದು ತಂತ್ರಜ್ಞಾನ (Technology) ದಿನಗಳೆದಂತೆ ಸಾಕಷ್ಟು ಪ್ರಗತಿಯಾಗುತ್ತಿದೆ. ನಿತ್ಯ ಏನಾದರೊಂದು ಆವಿಷ್ಕಾರಗಳು (Inventions) ಜಗತ್ತಿನ ಯಾವುದಾದರೂ ಮೂಲೆಯಲ್ಲಿ ನಡೆಯುತ್ತಲೇ ಇರುತ್ತದೆ ಎಂದರೂ ತಪ್ಪಿಲ್ಲ. ಈಗ ಇಂತಹದ್ದ ಒಂದು ಆವಿಷ್ಕಾರದ ಬಗ್ಗೆ ಇಲ್ಲಿ ತಿಳಿಯೋಣ.


  ಮೂಲತಃ ಅಮೆರಿಕದ ಮಸ್ಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜೀಸ್ ಕಾಲೇಜಿನ ಇಂಜಿನಿಯರ್ ಗಳ ತಂಡವೊಂದು ಹೊಸದೊಂದು ಆವಿಷ್ಕಾರ ಮಾಡಿದ್ದಾರೆ. ಅವರು ಅತ್ಯಂತ ಹಗುರ ಎನ್ನಲಾಗುವ ಫ್ಯಾಬ್ರಿಕ್ ಸೋಲಾರ್ ಸೆಲ್ (ಸೌರ ಕೋಶಗಳು) ಗಳನ್ನು ಅಭಿವೃದ್ಧಿಪಡಿಸಿದ್ದು ಅದನ್ನು ಬಳಸುವ ಮೂಲಕ ತ್ವರಿತವಾಗಿ ಯಾವುದೇ ಮೇಲ್ಮೈಯನ್ನು ಶಕ್ತಿಯ ಮೂಲವನ್ನಾಗಿ ಪರಿವರ್ತಿಸಬಹುದಾಗಿದೆ.


  ಸಾಕಷ್ಟು ಹಗುರವಾದ, ಮನುಷ್ಯನ ಕೂದಲಿಗಿಂತಲೂ ತೆಳುವಾದ ಈ ಈ ಸೆಲ್​ಗಳು ನಿಜಕ್ಕೂ ಉಪಯುಕ್ತ ಎನ್ನಬಹುದಾದ ಆವಿಷ್ಕಾರವಾಗಿದ್ದು ಇದನ್ನು ನಿರ್ಜನ ಪ್ರದೇಶಗಳಲ್ಲಿ ಅಥವಾ ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ಪವರ್ ಕೊರತೆ ಉಂಟಾದಾಗ ಪರಿಣಾಮಕಾರಿಯಾಗಿ ಬಳಸಬಹುದಾಗಿದೆ.


  ಈ ಬಗ್ಗೆ ಎಂಐಟಿ ಪತ್ರಿಕಾ ಪ್ರಕಟಣೆಯೊಂದನ್ನು ಹೊರಡಿಸಿದ್ದು ಅದರಲ್ಲಿ, ಈ ಫ್ಯಾಬ್ರಿಕ್ ಸೋಲಾರ್ ಸೆಲ್​ಗಳು ಸಾಕಷ್ಟು ಹಗುರವಾಗಿದ್ದು ಇವುಗಳನ್ನು ಬಲಶಾಲಿಯಾದ ಫ್ರೇಮ್ ಗಳಿಗೆ ಸುಲಭವಾಗಿ ಅಂಟಿಸಬಹುದಾಗಿದ್ದು ಸರಳವಾಗಿ ಇದನ್ನು ಎಲ್ಲೆಡೆ ಬಳಸಬಹುದಾಗಿದೆ ಎಂದು ಹೇಳಿದೆ.


  These are solar cells thinner than a hair do you know how its power is
  ಸೋಲಾರ್ ಸೆಲ್


  ಅಲ್ಲದೆ, ಈ ಕೋಶಗಳನ್ನು ತ್ವರಿತವಾಗಿ ತುರ್ತು ಸಂದರ್ಭಗಳಿದ್ದಾಗ ಅಥವಾ ನಿರ್ಜನ ಪ್ರದೇಶಗಳಲ್ಲಿ ವಿದ್ಯುತ್ ಕೊರತೆ ಉಂಟಾದಾಗ ಸರಳವಾಗಿ ಶಕ್ತಿಯನ್ನು ಪಡೆಯಲು ಇವುಗಳನ್ನು ಸುಲಭವಾಗಿ ಕೊಂಡೊಯ್ದು ಬಳಸಬಹುದಾಗಿದೆ ಎಂದು ತನ್ನ ಹೇಳಿಕೆಯಲ್ಲಿ ಎಂಐಟಿ ತಿಳಿಸಿದೆ.


  ಇದನ್ನೂ ಓದಿ: Solar System: ಜೀವ ವಿಕಾಸಕ್ಕೆ ಆಧಾರವಾಗಿದ್ದ ಸೌರವ್ಯೂಹದ ಮೊದಲ ಗ್ರಹ ಮಂಗಳ ಅಂತ ಖಾತ್ರಿಪಡಿಸಿದ ಹೊಸ ಸಂಶೋಧನೆ!


  ಸೋಲಾರ್ ಸೆಲ್ಲುಗಳ ಗುಣಲಕ್ಷಣಗಳು


  ಇನ್ನು ಈ ಸೆಲ್​ಗಳ ಪ್ರಾಪರ್ಟಿಗಳ ಬಗ್ಗೆ ಗಮನಿಸುವುದಾದರೆ,


  * ಸದ್ಯ ಚಾಲ್ತಿಯಲ್ಲಿರುವ ಸೋಲಾರ್ ಪ್ಯಾನೆಲ್ಲುಗಳ 1/100ನೇ ಭಾಗದಷ್ಟು ಭಾರ ಹೊಂದಿವೆ, ಅಂದರೆ ಅಷ್ಟು ಹಗುರವಾಗಿವೆ ಹಾಗೂ ಅವುಗಳಿಗಿಂತ ಪ್ರತಿ ಕಿ.ಗ್ರಾಂಗೆ 18 ಪಟ್ಟು ಹೆಚ್ಚು ವಿದ್ಯುತ್ ಅನ್ನು ಉತ್ಪಾದಿಸುತ್ತವೆ.


  * ಪ್ರಿಂಟಿಂಗ್ ಪ್ರಕ್ರಿಯೆಗಳ ಮೂಲಕ ಅವುಗಳನ್ನು ಸೆಮಿಕಂಡಕ್ಟಿಂಗ್ ಇಂಕ್​ಗಳನ್ನು ಬಳಸಿ ತಯಾರಿಸಬಹುದಾಗಿದೆ.


  ಸಾಮಾನ್ಯವಾಗಿ, ಸೋಲಾರ್ ಸೆಲ್ ಟೆಕ್ನಾಲಾಜಿಯಲ್ಲಿ ಸೆಲ್ ಗಳ ಪ್ರಿಣಾಮಕಾರಿತ್ವವನ್ನು ಅದರ ಶಕ್ತಿ ಪರಿವರ್ತನಾ ಸಾಮರ್ಥ್ಯ ಹಾಗೂ ಪ್ರತಿ ವಾಟ್ ಗೆ ತಗಲುವೆ ವೆಚ್ಚದ ಮೇಲೆ ಮಾಪನ ಮಾಡಲಾಗುತ್ತದೆ. ಅಲ್ಲದೆ ಅವುಗಳನ್ನು ಎಷ್ಟು ಸುಲಭವಾಗಿ ಸಂಘಟಿಸಬಹುದಾಗಿದೆ ಎಂಬುದು ಸಹ ಪ್ರಮುಖವಾಗಿದೆ ಎಂದು ಎಂಐಟಿ ನ್ಯಾನೊದ ನಿರ್ದೇಶಕರಾಗಿರುವ ಹಾಗೂ ಹಿರೀಯ ಲೇಖಕರಾಗಿರುವ ವ್ಲಾಡಿಮಿರ್ ಬುಲೋವಿಕ್ ಅವರು ಹೇಳುತ್ತಾರೆ.


  These are solar cells thinner than a hair do you know how its power is
  ಸೋಲಾರ್ ಸೆಲ್


  ಇದಕ್ಕನ್ವಯವಾಗುವಂತೆ ಸದ್ಯ ಆವಿಷ್ಕರಿಸಲಾಗಿರುವ ಈ ಹಗುರ ಸೋಲಾರ್ ಫ್ಯಾಬ್ರಿಕ್ ಸೆಲ್​ಗಳನ್ನು ಸುಲಭವಾಗಿ ಸಂಘಟಿಸಬಹುದಾಗಿದ್ದು ಬೇಕಾದ ಫಲಿತಾಂಶವನ್ನು ತ್ವರಿತವಾಗಿ ಪಡೆಯಬಹುದಾಗಿದೆ. ಸದ್ಯ ಇಂಗಾಲ ಮುಕ್ತ ನಾಡ ನಿರ್ಮಾಣಕ್ಕೆ ಈ ರೀತಿಯ ಸೌರ ಚಾಲಿತ ಪರಿಕರಗಳನ್ನು ಹೆಚ್ಚಿನ ಮಟ್ಟದಲ್ಲಿ ಬಳಕೆಯಾಗುವಂತೆ ಉತ್ತೇಜಿಸಬೇಕಾದ ಪರಿಸ್ಥಿತಿಯಿದ್ದು ಇದು ಆ ನಿಟ್ಟಿನಲ್ಲಿ ಕೊಡುಗೆ ನೀಡುತ್ತದೆ ಎಂದೂ ಸಹ ವ್ಲಾಡಿಮಿರ್ ಹೇಳಿದ್ದಾರೆ.


  ಪ್ರಸ್ತುತ ಆವಿಷ್ಕಾರವು ಭವಿಷ್ಯದಲ್ಲಿ ಸೌರ ಶಕ್ತಿಯನ್ನು ಬಳಸಿಕೊಳ್ಳುವಂತಹ ಪ್ರಕ್ರಿಯೆಗೆ ಹೆಚ್ಚಿನ ಗತಿ ನೀಡಲಿದೆ ಹಾಗೂ ಈ ಮೂಲಕ ಸೌರಶಕ್ತಿಯ ಅಪಾರ ಲಾಭಗಳನ್ನು ಮನುಕುಲದ ಹಿತಕ್ಕಾಗಿ ಬಳಸಬಹುದಾಗಿದೆ ಮತ್ತು ಇದರಿಂದ ಆರ್ಥಿಕತೆಯು ಬಲಗೊಳ್ಳುವುದರಲ್ಲಿ ಅನುಮಾನವೇ ಇಲ್ಲ ಎನ್ನಬಹುದು.


  ಒಟ್ಟಿನಲ್ಲಿ ಈ ಆವಿಷ್ಕಾರ ಒಂದು ರೀತಿಯ ಭರವಸೆಯನ್ನು ಮೂಡಿಸಿದ್ದು ಮುಂಬರುವ ದಿನಗಳಲ್ಲಿ ಸೌರಶಕ್ತಿಯ ಪರಿಪೂರ್ಣ ಪ್ರಯೋಜನ ನಾವು ಮನುಕುಲದ ಹಿತ ಹಾಗೂ ಅನುಕೂಲಕ್ಕೆ ಬಳಸಿಕೊಳ್ಳುವಂತಾಗಲಿ ಹಾಗೂ ಈ ಮೂಲಕ ಕೃತಕ ಅವಲಂಬನೆಗಳಿಂದ ದೂರ ಸರಿದು ಪರಿಸರ ಸಂರಕ್ಷಿಸುವಂತಾಗಲಿ ಎಂದಷ್ಟೆ ಆಶಿಸಬಹುದು.

  Published by:Gowtham K
  First published: