ವಾಟ್ಸಪ್​ ಬದಲು ಈ ಆ್ಯಪ್​ಗಳನ್ನು ಬಳಸಿ


Updated:July 30, 2018, 1:01 PM IST
ವಾಟ್ಸಪ್​ ಬದಲು ಈ ಆ್ಯಪ್​ಗಳನ್ನು ಬಳಸಿ

Updated: July 30, 2018, 1:01 PM IST
250 ಮಿಲಿಯನ್​ಗೂ ಅಧಿಕ ಭಾರತೀಯ ಬಳಕೇದಾರರನ್ನೇ ಹೊಂದಿರುವ ಸಾಮಾಜಿಕ ಜಾಲತಾಣದ ಆ್ಯಪ್​ ವಾಟ್ಸಾಪ್​ ನಮ್ಮ ದೈನಂದಿನ ಜೀವನದಲ್ಲಿ ಒಂದು ಭಾಗವೇ ಆಗಿದೆ. ಆದರೆ ನಕಲಿ ಸುದ್ದಿ, ಖಾಸಾಗಿ ಮಾಹಿತಿ ಸೋರಿಕೆಯಂತಹ ಪ್ರಕರಣ ಇತ್ತೀಚಿನ ದಿನಗಳಲ್ಲಿ ವಾಟ್ಸಪ್​ನಲ್ಲಿ ಏರುತ್ತಲೇ ಇದೆ. ಹೀಗಾಗಿ ಒಂದು ವೇಳೆ ನೀವು ವಾಟ್ಸಪ್​ ಬಳಸಿ ಬೇಸತ್ತಿದ್ದರೆ ಇದೇ ರೀತಿ ಕಾರ್ಯನಿರ್ವಹಿಸುವ ಕೆಲ ಆ್ಯಪ್​ಗಳು ಲಭ್ಯವಿದ್ದು ಅವುಗಳ ಮಾಹಿತಿ ಇಲ್ಲಿದೆ.

ಹೈಕ್​ ಆ್ಯಪ್​
ವಾಟ್ಸಪ್​ಗೆ ನೇರಾನೇರಾ ಹಣಾಹಣೆ ನೀಡಿರುವ ಆ್ಯಪ್​ ಎಂದರೆ ಹೈಕ್​ ಮೆಸೇಂಜರ್​, ಇಲ್ಲಿ ನೀವು ಸಂದೇಶಗಳನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ರವಾನಿಸಿಕೊಳ್ಳಬಹುದು. ತನ್ನ ಖಾಸಗಿ ಮಾಹಿತಿಗಳ ರಕ್ಷಣೆಯಿಂದಲೇ ಹೆಚ್ಚು ಸದ್ದು ಮಾಡಿರುವ ಹೈಕ್​ ಭಾರತೀಯ ಮೂಲದ ಸಂಸ್ಥೆ ಎನ್ನುವುದು ಮತ್ತೊಂದು ಮುಖ್ಯಾಂಶ. ಪಾಸ್​ವರ್ಡ್​ ಬಳಕೆ ಮಾಡಿಕೊಂಡು ತನ್ನ ಗ್ರಾಹಕರು ಖಾಸಗಿ ಸಂದೇಶಗಳನ್ನು ರಕ್ಷಿಸಿಕೊಳ್ಳಬಹುದು. ಇದರ ಮತ್ತೊಂದು ಉಪಯೋಗವೆಂದರೆ ಎಲ್ಲಾ ಮೆಸೆಂಜರ್​ಗಳಿಗಿಂತಲೂ ಅಧಿಕ ಸ್ಟಿಕ್ಕರ್​ ಹೊಂದಿದೆ, ಅದರಲ್ಲೂ ಪ್ರಮುಖವಾಗಗಿ ಪ್ರಾದೇಶಿಕ ಭಾಷೆಗೆ ಅನುಗುಣವಾಗಿ ಸ್ಟಿಕ್ಕರ್​ ಅಭಿವೃದ್ಧಿ ಪಡಿಸಲಾಗಿದೆ.

ಟೆಲಿಗ್ರಾಂ

ಎನ್​ಕ್ರಿಪ್ಟೆಡ್​ ಸಂದೇಶಗಳನ್ನು ಶೇರ್​ ಮಾಡಿಕೊಳ್ಳಲು ವಾಟ್ಸಪ್​ಗಿಂತಲೂ ಈ ಆ್ಯಪ್ ಹೆಚ್ಚು ಪರಿಣಾಮಕಾರಿ. ಕೇವಲೇ ಸಂದಶಗಳನ್ನು ಮಾತ್ರಾ ವಿನಿಮಯ ಮಾಡಿಕೊಳ್ಳುವ ಉದ್ಧೇಶವನ್ನು ಇಟ್ಟುಕೊಂಡೇ ಮಾರುಕಟ್ಟೆ ಪ್ರವೇಶಿಸಿದ ಆ್ಯಪ್​ಗಳಲ್ಲಿ ಟೆಲಿಗ್ರಾಂ ಕೂಡಾ ಒಂದು. ಒಂದು ವೇಳೆ ಡೆಸ್ಕ್​ಟಾಪ್​ನಲ್ಲಿ ನೀವು ಲಾಗ್​ ಇನ್​ ಆಗಿ ಅರ್ಧಕ್ಕೆ ಮೆಸೇಜ್​ ಟೈಪ್​ ಮಾಡಿದ್ದರೆ, ಆ್ಯಪ್​ನಲ್ಲಿ ಅಲ್ಲಿಂದಲೇ ಆರಂಭಿಸಿ ಕಳುಹಿಸಬಹುದು. ಇದು ಕೂಡಾ ವಾಟ್ಸಪ್​ನಂತೆಯೇ ವೆಬ್​ ವರ್ಷನ್​ ಹಾಗೂ ಆ್ಯಪ್​ ವರ್ಷನ್​ನಲ್ಲಿ ಲಭ್ಯವಿದೆ. ಒಂದು ವೇಳೆ ನೀವು ಮೊಬೈಲ್​ ಬದಲಾಯಿಸಿದರೆ ಎಲ್ಲಾ ಸಂದೇಶಗಳು ಅಲ್ಲಿ ಕಾಣಿಸಿಕೊಳ್ಳುತ್ತವೆ.

ಸಿಗ್ನಲ್​
ಸಿಗ್ನಲ್​ ಮೆಸೇಂಜರ್​ ಮೂಲಕ ಖಾಸಾಗಿ ಸಂದೇಶಗಳನ್ನು ರವಾನಿಸಲು ಸಹಾಯ ಮಾಡುತ್ತದೆ, ಎಂತಹ ಸಂದರ್ಭದಲ್ಲು ಭದ್ರತೆಯೊಂದಿಗೆ ರಾಜಿ ಮಾಡಿಕೊಳ್ಳದ ಆ್ಯಪ್​ಗಳಲ್ಲಿ ಸಿಗ್ನಲ್​ ಕೂಡಾ ಒಂದು. ಉಚಿತ ಎಸ್ಎಂಎಸ್​ ಸಂದೇಶಗಳನ್ನು ಕಳುಹಿಸಲು ಇದು ಪ್ರಮುಖ ಪಾತ್ರವಹಿಸುತ್ತದೆ. ಏಕಕಾಲದಲ್ಲಿ ನಿಮ್ಮ ಗ್ರೂಪ್​ನ ಎಲ್ಲಾ ಸದಸ್ಯರೊಂದಿಗೆ ಚಾಟ್​ ಮಾಡಲು ಈ ಆ್ಯಪ್​ ಸಹಾಯಕಾರಿ. ನೀವು ಇಲ್ಲಿ ಯಾವುದೇ ಚಿತ್ರ ಅಥವಾ ಇತರೇ ಮಾಹಿತಿಗಳನ್ನು ಶೇರ್​ ಮಾಡಿದರೂ ಯಾವುದೇ ಕಾರಣಕ್ಕೂ ಈ ಮಾಹಿತಿಗಳು ಸೋರಿಕೆಯಾಗುವುದಿಲ್ಲ.
First published:July 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ