ಈ ಆರು ಆ್ಯಪ್​ಗಳು ವಾಟ್ಸ್​ಆ್ಯಪ್​, ಫೇಸ್​ಬುಕ್​ನಿಂದ ನಿಮ್ಮ ಮಾಹಿತಿ ಕದಿಯುತ್ತಿವೆ; ಅವುಗಳನ್ನು ಈಗಲೇ ಡಿಲೀಟ್​ ಮಾಡಿ

ಗೂಗಲ್​ ಪ್ಲೇಸ್ಟೋರ್​ನಲ್ಲಿ ಸಿಗುವ ಆ್ಯಪ್​ಗಳು ಸುರಕ್ಷಿತವಾಗಿರುತ್ತದೆ. ಆದಾಗ್ಯೂ ಕೆಲ ಬೇಹುಗಾರಿಕೆ ಆ್ಯಪ್​ಗಳು ಪ್ಲೇ ಸ್ಟೋರ್​ ಸೇರಿಕೊಂಡು ಬಿಡುತ್ತವೆ. ಈ ರೀತಿ 6 ಆ್ಯಪ್​ಗಳನ್ನು ಪತ್ತೆ ಹಚ್ಚಲಾಗಿದೆ.

Rajesh Duggumane | news18
Updated:January 14, 2019, 3:33 PM IST
ಈ ಆರು ಆ್ಯಪ್​ಗಳು ವಾಟ್ಸ್​ಆ್ಯಪ್​, ಫೇಸ್​ಬುಕ್​ನಿಂದ ನಿಮ್ಮ ಮಾಹಿತಿ ಕದಿಯುತ್ತಿವೆ; ಅವುಗಳನ್ನು ಈಗಲೇ ಡಿಲೀಟ್​ ಮಾಡಿ
ಸಾಂದರ್ಭಿಕ ಚಿತ್ರ
  • News18
  • Last Updated: January 14, 2019, 3:33 PM IST
  • Share this:
ಸಾಮಾಜಿಕ ಜಾಲತಾಣದ ಬಳಕೆ ಇಂದು ಹೆಚ್ಚುತ್ತಿದೆ. ಅದೆಷ್ಟರ ಮಟ್ಟಿಗೆ ಜನರು ಇದಕ್ಕೆ ಒಗ್ಗಿಕೊಂಡಿದ್ದಾರೆ ಎಂದರೆ, ವ್ಯಕ್ತಿ ಹತ್ತಿರದಲ್ಲೇ ಇದ್ದರೂ ಎದುರಿಗೆ ಮಾತನಾಡದೆ ಯಾವುದೋ ಮೆಸೆಂಜರ್​ ಮೂಲಕ ಅವರ ಜೊತೆ ಸಂಭಾಷಣೆ ಮಾಡುವವರೂ ಇದ್ದಾರೆ. ಅದರಲ್ಲೂ ಫೇಸ್​ಬುಕ್​, ವಾಟ್ಸ್​ಆ್ಯಪ್​ ಬಳಕೆ ಹೆಚ್ಚಿದೆ. ಅನೇಕರು ತಮ್ಮ ವೈಯಕ್ತಿಕ ಮಾಹಿತಿ, ಬ್ಯಾಂಕ್​ ವಿವರ, ಖಾಸಗಿ ಫೋಟೋಗಳನ್ನು ಇದರ ಮೂಲಕವೇ ಹಂಚಿಕೊಳ್ಳುತ್ತಾರೆ. ಆದರೆ, ಕೆಲ ಆ್ಯಪ್​ಗಳು ನಿಮಗೆ ಗೊತ್ತಿಲ್ಲದೇ ನಿಮ್ಮ ಮೇಲೆ ಬೇಹುಗಾರಿಕೆ ಮಾಡುತ್ತಿರುತ್ತವೆ. ನಿಮ್ಮ ಮಾಹಿತಿಯನ್ನು ಸುಲಭವಾಗಿ ಕದ್ದು ಬಿಡುತ್ತದೆ. ಈ ಬಗ್ಗೆ ಸೈಬರ್​ ಕ್ರೈಂ ಅಧಿಕಾರಿಗಳು ಎಚ್ಚರಿಕೆಯನ್ನೂ ನೀಡಿದ್ದಾರೆ. ಕೆಲ ಆ್ಯಪ್​ಗಳನ್ನು ಡಿಲೀಟ್ ಮಾಡುವಂತೆ ಸೂಚಿಸಿದ್ದಾರೆ.

ಗೂಗಲ್​ ಪ್ಲೇಸ್ಟೋರ್​ನಲ್ಲಿ ಸಿಗುವ ಆ್ಯಪ್​ಗಳು ಸುರಕ್ಷಿತವಾಗಿರುತ್ತದೆ. ಆದಾಗ್ಯೂ ಕೆಲ ಬೇಹುಗಾರಿಕೆ ಆ್ಯಪ್​ಗಳು ಪ್ಲೇ ಸ್ಟೋರ್​ ಸೇರಿಕೊಂಡು ಬಿಡುತ್ತವೆ. ಈ ರೀತಿ 6 ಆ್ಯಪ್​ಗಳನ್ನು ಪತ್ತೆ ಹಚ್ಚಲಾಗಿದೆ. ಆತಂಕಕಾರಿ ವಿಚಾರ ಎಂದರೆ, ಇವುಗಳು 1 ಲಕ್ಷಕ್ಕೂ ಅಧಿಕ ಬಾರಿ ಡವ್ನ್​​ಲೋಡ್​ ಆಗಿವೆ. ಭಾರತ ಸೇರಿದಂತೆ ವಿಶ್ವದ 200 ರಾಷ್ಟ್ರಗಳಲ್ಲಿ ಈ ಆ್ಯಪ್​ಗಳು ಕಾರ್ಯನಿರ್ವಹಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಮತ್ತೆ ಬರುತ್ತಿದೆ ಅಮೆಜಾನ್ ಗ್ರೇಟ್​ ಇಂಡಿಯನ್​ ಸೇಲ್​: ರಿಯಾಯಿತಿ ದರದಲ್ಲಿ ಇಲ್ಲಿ ಏನುಂಟು, ಏನಿಲ್ಲ?

ಗೇಮ್​ ಆ್ಯಪ್​ ಹೆಸರಿನಲ್ಲಿ ಇವು ಪ್ಲೇಸ್ಟೋರ್​ಗೆ ಕಾಲಿಡುತ್ತವೆ. ನಂತರ ಇವುಗಳ ನಿಜವಾದ ಬಣ್ಣ ಬಯಲಾಗುತ್ತದೆ. ಫ್ಲಾಪಿ ಬಿರ್​ ಡಾಗ್​, ಫ್ಲಾಶ್​​ಲೈಟ್​, ಎಚ್​ಝಡ್​ಪರ್ಮಿಸ್​ ಪ್ರೋ ಅರೇಬಿಕ್​, ವಿನ್​7 ಇಮ್ಯುಲೇಟರ್​ ಹಾಗೂ ವಿನ್​ 7 ಲಾಂಚರ್​ ಆ್ಯಪ್​ಗಳು ಅಪಾಯಕಾರಿ ಎಂದು ಗುರುತಿಸಲಾಗಿದೆ. ಇವುಗಳು ಸುಲಭವಾಗಿ ಮೊಬೈಲ್​ನಲ್ಲಿರುವ ವಾಟ್ಸ್​ಆ್ಯಪ್​ ಹಾಗೂ ಫೇಸ್​ಬುಕ್​ ಮಾಹಿತಿಯನ್ನು ಕದಿಯುತ್ತವೆಯಂತೆ.

ಫ್ಲಾಪಿ ಬಿರ್​ ಡಾಗ್​ ಆ್ಯಪ್​


ಈ ರೀತಿ ಆ್ಯಪ್​ಗಳು ಮೊಬೈಲ್​ನಲ್ಲಿ ಇನ್​ಸ್ಟಾಲ್​ಗೊಂಡ ನಂತರ ಅವುಗಳು ಮೊಬೈಲ್​ಅನ್ನು ಹ್ಯಾಕ್​ ಮಾಡುವ ಸಾಮರ್ಥ್ಯ ಹೊಂದಿರುತ್ತವೆ. ಇವು ಕದ್ದ ಮಾಹಿತಿಯನ್ನು ಸರ್ವರ್​ಗೆ ವರ್ಗಾವಣೆ ಮಾಡುತ್ತವೆ. ಇದರಿಂದ ಬ್ಯಾಂಕ್​ ಮಾಹಿತಿಗಳು ಬಯಲಾಗಿ, ಹ್ಯಾಕರ್​ಗಳಿಗೆ ಹಣ ದೋಚಲು ಸಹಕಾರಿಯಾಗುತ್ತದೆ. ಇದರ ಜೊತೆಗೆ, ಕಾಂಟ್ಯಾಕ್ಟ್​ ಮಾಹಿತಿ, ಖಾಸಗಿ ಸಂದೇಶಗಳು, ಮೊಬೈಲ್​ನಲ್ಲಿರುವ ಫೋಟೋಗಳು, ಆಡಿಯೋ ರೆಕಾರ್ಟ್​​ ದೋಚುವುದರ ಜೊತೆಗೆ ಫೇಸ್​ಬುಕ್​, ವಾಟ್ಸ್​​ಆ್ಯಪ್​ ಮಾಹಿತಿಯನ್ನೂ ಸೋರಿಕೆ ಮಾಡುತ್ತಿದೆಯಂತೆ.

ಇದನ್ನೂ ಓದಿ: ಬೈಕ್​ ಸವಾರರಿಗೆ ಸಿಹಿ ಸುದ್ದಿ: ಟೆನ್ಶನ್​ ಇಲ್ಲದೆ ಈ ಹೆಲ್ಮೆಟ್​ ಧರಿಸಬಹುದುಸದ್ಯ ಈ ಆ್ಯಪ್​ಗಳನ್ನು ಗೂಗಲ್​ ಪ್ಲೇಸ್ಟೋರ್​ನಿಂದ ಡಿಲೀಟ್​ ಮಾಡಲಾಗಿದೆ. ಆದರೆ, ಈ ಆ್ಯಪ್​ಗಳನ್ನು ಯಾರ್ಯಾರು ಇನ್​ಸ್ಟಾಲ್​ ಮಾಡಿಕೊಂಡಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ.

First published:January 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ