Secret Phone Killers: ಎಷ್ಟು ಬಾರಿ ಚಾರ್ಜ್​ ಮಾಡಿದರೇನು..ನಿಮ್ಮ ಸ್ಮಾರ್ಟ್​ಫೋನ್ ಬ್ಯಾಟರಿ ಖಾಲಿ ಮಾಡಲು ಈ ಆ್ಯಪ್​ಗಳೇ ಸಾಕು!

Dry Battery: ಯಾವ ಆ್ಯಪ್ ಹೆಚ್ಚು ಬ್ಯಾಟರಿ ವಿನಿಯೋಗಿಸುತ್ತಿದೆ ಎಂಬ ಮಾಹಿತಿಯನ್ನು ಸೆಟ್ಟಿಂಗ್ಸ್, ಬ್ಯಾಟರಿ ಆಯ್ಕೆಮಾಡುವ ಮೂಲಕ ಆ್ಯಪ್‌ಗಳ ಬ್ಯಾಟರಿ ವಿನಿಯೋಗದ ಅಂಕಿಅಂಶಗಳನ್ನು ತಿಳಿದುಕೊಳ್ಳಬಹುದಾಗಿದೆ.

Photo: Google

Photo: Google

  • Share this:
    Secret Phone Killer Apps: ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಹೆಚ್ಚುವರಿ ಬ್ಯಾಟರಿ ಕಬಳಿಸುವ ಆ್ಯಪ್ ಯಾವುದಾಗಿರಬಹುದು ಎಂದು ಚಿಂತಿತರಾಗಿದ್ದೀರಾ?.. ಈ ಹಿಂದೆ ನೀವು ನಿರ್ಲಕ್ಷಿಸಿದ ಕೆಲವೊಂದು ಆ್ಯಪ್‌ಗಳೇ ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ಕುಗ್ಗಿಸಲು ಕಾರಣವಾಗಿವೆ ಎಂದರೆ ನೀವು ನಂಬಲೇಬೇಕು. ಈ ನಿಟ್ಟಿನಲ್ಲಿ ಆ್ಯಪಲ್ (Apple) ಹಾಗೂ ಗೂಗಲ್ (Google) ಎರಡೂ ಕಂಪನಿಗಳು ಬ್ಯಾಟರಿ ದೀರ್ಘಾವಧಿಯನ್ನು ತಮ್ಮ ಬಳಕೆದಾರರಿಗೆ ದೊರಕಿಸಿಕೊಡುವ ಸಲುವಾಗಿ ತಮ್ಮ ಒಎಸ್‌ಗಳಲ್ಲಿ ಮಾರ್ಪಾಡು ಮಾಡುತ್ತಿವೆ. ಆದರೂ ಕೆಲವೊಂದು ಆ್ಯಪ್‌ಗಳು ಬ್ಯಾಟರಿಯನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿವೆ.

    ಈ ದಿಸೆಯಲ್ಲಿ ಕ್ಲೌಡ್ ಸ್ಟೋರೇಜ್ ಕಂಪನಿ ಪಿ ಕ್ಲೌಡ್ (pCloud) ಹೆಚ್ಚು ಜನಪ್ರಿಯ ಆ್ಯಪ್‌ಗಳನ್ನು ಪರಿಶೀಲಿಸಿದ್ದು ಇವುಗಳು ಅತ್ಯಂತ ಕೆಟ್ಟ ಬ್ಯಾಟರಿ ಮುಗಿಸುವ ಆ್ಯಪ್‌ಗಳು ಎಂಬುದನ್ನು ಪತ್ತೆಹಚ್ಚಿವೆ. ಅದರಲ್ಲೂ ಟಿಂಡರ್ ಹಾಗೂ ಉಬರ್‌ನಂತಹ ಆ್ಯಪ್‌ಗಳು ಅತಿದೊಡ್ಡ ಬ್ಯಾಟರಿ ಕಬಳಿಸುವ ಆ್ಯಪ್‌ಗಳಾಗಿ ಹೊರಹೊಮ್ಮಿವೆ. ಪ್ರತಿಯೊಂದು ಆ್ಯಪ್‌ ಬಳಸುವ ವಿವರಗಳು ಅಂದರೆ ಲೊಕೇಶನ್ (Location), ಕ್ಯಾಮೆರಾ (camera) ವಿವರಗಳು ಬ್ಯಾಟರಿಯನ್ನು ಹೆಚ್ಚು ಬಳಸಿಕೊಳ್ಳುತ್ತಿವೆ. ಅಂತೆಯೇ ಡೇಟಿಂಗ್ ಹಾಗೂ ಸಾಮಾಜಿಕ ಮಾಧ್ಯಮ ಆ್ಯಪ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಫೋನ್ ಬ್ಯಾಟರಿ ಬಳಸಿಕೊಳ್ಳುತ್ತಿವೆ.

    ಯಾವ ಆ್ಯಪ್ ಹೆಚ್ಚು ಬ್ಯಾಟರಿ (Battery) ವಿನಿಯೋಗಿಸುತ್ತಿದೆ ಎಂಬ ಮಾಹಿತಿಯನ್ನು ಸೆಟ್ಟಿಂಗ್ಸ್ (Settings), ಬ್ಯಾಟರಿ ಆಯ್ಕೆಮಾಡುವ ಮೂಲಕ ಆ್ಯಪ್‌ಗಳ ಬ್ಯಾಟರಿ ವಿನಿಯೋಗದ ಅಂಕಿಅಂಶಗಳನ್ನು ತಿಳಿದುಕೊಳ್ಳಬಹುದಾಗಿದೆ.

    1. ಫಿಟ್‌ಬಿಟ್:

    ಫಿಟ್‌ಬಿಟ್ ಡಿವೈಸ್ ಅನ್ನು ನಿಮ್ಮ ಮೊಬೈಲ್ ಡಿವೈಸ್‌ಗೆ ಸಿಂಕ್ ಮಾಡಿದಾಗ ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿಯನ್ನು ಬೇಗನೇ ತಗ್ಗಿಸುತ್ತದೆ. ನಿಮ್ಮ ಡಿವೈಸ್‌ನಲ್ಲಿ ಆಲ್-ಡೇ ಸಿಂಕ್ ಆಯ್ಕೆಯನ್ನು ಆಫ್ ಮಾಡುವುದೇ ಬ್ಯಾಟರಿ ವಿನಯೋಗ ತಗ್ಗಿಸುವ ವಿಧಾನವಾಗಿದೆ. ಇದು 92%ನಷ್ಟು ಬ್ಯಾಟರಿ ವಿನಿಯೋಗಕ್ಕೆ ಕಾರಣವಾಗಿದೆ.

    2. ವೆರಿಝೋನ್:

    ಈ ಅಪ್ಲಿಕೇಶನ್ ನಿಮ್ಮ ಖಾತೆ ನಿರ್ವಹಿಸುವ ವಿಧಾನವನ್ನು ಸರಳಗೊಳಿಸುತ್ತದೆ. ಆದರೆ ಈ ಆ್ಯಪ್‌ ನಿಮ್ಮ ಡಿವೈಸ್‌ನಲ್ಲಿ 92% ಬ್ಯಾಟರಿಯನ್ನು ವಿನಿಯೋಗಿಸುತ್ತದೆ.

    3. ಉಬರ್:

    ನಿಮ್ಮ ಪ್ರಯಾಣಕ್ಕೆ ಸಹಕಾರಿ ಎಂದೆನಿಸಿರುವ ಉಬರ್ ಆ್ಯಪ್‌ ಹೆಚ್ಚು ಬ್ಯಾಟರಿ ಕಬಳಿಸುವ ಅಪ್ಲಿಕೇಶನ್ ಆಗಿದೆ ಎಂದರೆ ನೀವು ನಂಬಲೇಬೇಕು. ಇದು 87%ನಷ್ಟು ಬ್ಯಾಟರಿ ವಿನಿಯೋಗಿಸುತ್ತದೆ.

    4. ಸ್ಕೈಪ್:

    ಟೆಲಿಕಮ್ಯುನಿಕೇಶನ್ ಅಪ್ಲಿಕೇಶನ್ ಆಗಿರುವ ಸ್ಕೈಪ್ ಧ್ವನಿ ಕರೆಗಳಿಗೆ ಬೆಂಬಲ ನೀಡುತ್ತದೆ. ಆದರೆ ಇದು ಕೂಡ ವೇಗವಾಗಿ ನಿಮ್ಮ ಡಿವೈಸ್ ಬ್ಯಾಟರಿಯನ್ನು ಕಬಳಿಸುತ್ತದೆ. ಇದು 87%ನಷ್ಟು ಬ್ಯಾಟರಿ ವಿನಿಯೋಗಿಸುತ್ತದೆ.

    5. ಫೇಸ್‌ಬುಕ್:

    ಪ್ರಸಿದ್ಧ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಕೂಡ ಬ್ಯಾಟರಿ ವಿನಿಯೋಗದಲ್ಲಿ ಎತ್ತಿದ ಕೈ ಎಂದೆನಿಸಿದೆ. ನೀವು ಹೆಚ್ಚು ಫೇಸ್‌ಬುಕ್ ಬಳಕೆ ಮಾಡುತ್ತೀರಿ ಎಂದಾದರೆ ನಿಮ್ಮ ಫೋನ್ ಬ್ಯಾಟರಿ ಹೆಚ್ಚು ವ್ಯಯವಾಗುತ್ತಿದೆ ಎಂದೇ ಅರ್ಥವಾಗಿದೆ. ಇದು 82%ನಷ್ಟು ಬ್ಯಾಟರಿ ವಿನಿಯೋಗಿಸುತ್ತದೆ

    6. ಏರ್‌ಬ್ನಾಬ್ (Airbnb):

    ನಿಮ್ಮ ಪ್ರವಾಸ ಚಟುವಟಿಕೆಗಳಿಗೆ ಸಾಥ್ ನೀಡುವ ಏರ್‌ಬ್ನಾಬ್ ಹೆಚ್ಚು ಬ್ಯಾಟರಿ ವಿನಿಯೋಗಿಸುತ್ತದೆ ಎಂದರೆ ನೀವು ನಂಬಲೇಬೇಕು. ಇದು 82%ನಷ್ಟು ಬ್ಯಾಟರಿ ವಿನಿಯೋಗಿಸುತ್ತದೆ.

    7. ಬಿಗೋ ಲೈವ್:

    ಲೈವ್ ಚಾಟ್‌ಗೆ ಸಹಕಾರ ನೀಡುವ ಬಿಗೋ ಲೈವ್ ಆ್ಯಪ್ ಸ್ಮಾರ್ಟ್‌ಫೋನ್‌ನಲ್ಲಿನ ಬ್ಯಾಟರಿಯನ್ನು ನಿಮಗೆ ತಿಳಿಯದಂತೆಯೇ ವಿನಿಯೋಗಿಸುತ್ತದೆ. ಇದು 82%ನಷ್ಟು ಬ್ಯಾಟರಿ ವಿನಿಯೋಗಿಸುತ್ತದೆ.

    8. ಇನ್‌ಸ್ಟಾಗ್ರಾಮ್:

    ಪ್ರಖ್ಯಾತ ಸಾಮಾಜಿಕ ತಾಣ ಇನ್‌ಸ್ಟಾಗ್ರಾಮ್ ಕೂಡ ನಿಮಗೆ ಮನರಂಜನೆ ಒದಗಿಸುವುದರೊಂದಿಗೆ ಬ್ಯಾಟರಿ ವಿನಿಯೋಗವನ್ನು ಅಷ್ಟೇ ಪ್ರಮಾಣದಲ್ಲಿ ಬಳಸುತ್ತದೆ. 79% ಬ್ಯಾಟರಿ ನಷ್ಟವನ್ನು ಇದು ಉಂಟುಮಾಡುತ್ತದೆ.

    9. ಟಿಂಡರ್:

    ಡೇಟಿಂಗ್ ಆ್ಯಪ್ ಆಗಿರುವ ಟಿಂಡರ್ ಕೂಡ ಬ್ಯಾಟರಿ ನಷ್ಟಮಾಡುವಲ್ಲಿ ಎತ್ತಿದ ಕೈ ಎಂದೆನಿಸಿದೆ. ನಿಮ್ಮ ಫೋನ್‌ನಲ್ಲಿ ನೀವು ಟಿಂಡರ್ ಆ್ಯಪ್ ಬಳಸುತ್ತಿದ್ದೀರಿ ಎಂದಾದಲ್ಲಿ ನಿಮ್ಮ ಡಿವೈಸ್ ಬ್ಯಾಟರಿ ಮೇಲೆ ಗಮನಹರಿಸುವುದು ಕೂಡ ಮುಖ್ಯವಾಗಿದೆ. ಇದು 77%ನಷ್ಟು ಬ್ಯಾಟರಿ ವಿನಿಯೋಗಿಸುತ್ತದೆ.

    10. ಬಂಬಲ್:

    ಆನ್‌ಲೈನ್ ಡೇಟಿಂಗ್ ಆ್ಯಪ್ ಆಗಿರುವ ಬಂಬಲ್ ನಿಮಗೆ ಉತ್ತಮ ಸಂಗಾತಿ ದೊರಕಿಸಿಕೊಡುತ್ತದೆ ಎಂಬುದರಲ್ಲಿ ಸಂದೇಹವೇ ಇಲ್ಲ. ಆದರೆ ಇದು ಕೂಡ ಬ್ಯಾಟರಿ ನಷ್ಟಕ್ಕೆ ಕಾರಣವಾಗಿರುವ ಆ್ಯಪ್ ಆಗಿದೆ. ಇದು 77%ನಷ್ಟು ಬ್ಯಾಟರಿ ನಷ್ಟವನ್ನುಂಟು ಮಾಡುತ್ತದೆ.

    11. ಸ್ನ್ಯಾಪ್‌ಚಾಟ್:

    ತ್ವರಿತ ಮೆಸೇಜಿಂಗ್ ಆ್ಯಪ್ ಆಗಿರುವ ಸ್ನ್ಯಾಪ್‌ಚಾಟ್ ಬಳಕೆದಾರರ ಅಚ್ಚುಮೆಚ್ಚಿನ ಆ್ಯಪ್ ಎಂದೆನಿಸಿದೆ. ಇದು ವಿನಿಯೋಗಿಸುವ ಬ್ಯಾಟರಿ ಮಟ್ಟ 77% ಎಂಬುದು ಪಿ ಕ್ಲೌಡ್‌ನ ಡೇಟಾ ಅಂಕಿಅಂಶಗಳಿಂದ ತಿಳಿದುಬಂದಿದೆ.

    12. ವಾಟ್ಸ್‌ಆ್ಯಪ್:

    ಸುಪ್ರಸಿದ್ಧ ತ್ವರಿತ ಮೆಸೇಜಿಂಗ್ ಆ್ಯಪ್ ಆಗಿರುವ ವಾಟ್ಸ್‌ಆ್ಯಪ್ ಬಳಸದೇ ಇರುವವರು ಯಾರಿದ್ದಾರೆ ಹೇಳಿ. ಆದರೆ ಪಿ ಕ್ಲೌಡ್ ಈ ತಾಣ ವಿನಿಯೋಗಿಸುವ ಬ್ಯಾಟರಿ ಅಂಕಿಅಂಶಗಳನ್ನು ಅಂದಾಜಿಸಿದ್ದು 77% ಎಂದು ತಿಳಿಸಿದೆ.

    13.ಜೂಮ್:

    ಹೆಚ್ಚಿನ ವಿಡಿಯೋ ಕಾಲಿಂಗ್, ಕಚೇರಿ ಮೀಟಿಂಗ್, ಕಾನ್ಫರೆನ್ಸ್‌ಗಳಿಗೆ ನೆರವಾಗಿರುವ ಜೂಮ್ ಕೂಡ ಪಿ ಕ್ಲೌಡ್ ಪಟ್ಟಿಮಾಡಿರುವ ಬ್ಯಾಟರಿ ವಿನಿಯೋಗಿಸುವ ಆ್ಯಪ್‌ಗಳಲ್ಲಿ ಒಂದಾಗಿದೆ. ಇದು 77% ಬ್ಯಾಟರಿ ನಷ್ಟವನ್ನುಂಟು ಮಾಡುತ್ತದೆ.

    14. ಯೂಟ್ಯೂಬ್:

    ವಿಡಿಯೋ ಶೇರಿಂಗ್ ಹಾಗೂ ಸಾಮಾಜಿಕ ತಾಣವಾಗಿರುವ ಯೂಟ್ಯೂಬ್ ಮನರಂಜನೆಯ ಅತಿದೊಡ್ಡ ವೇದಿಕೆ ಎಂದೆನ್ನಿಸಿದೆ. ಆದರೆ ಪಿ ಕ್ಲೌಡ್ ಪಟ್ಟಿಮಾಡಿರುವ ಬ್ಯಾಟರಿ ವಿನಿಯೋಗದ ಆ್ಯಪ್‌ಗಳಲ್ಲಿ ಯೂಟ್ಯೂಬ್ ಕೂಡ ಒಂದಾಗಿದೆ. ಇದು ಸ್ಮಾರ್ಟ್‌ಫೋನ್‌ಗಳಲ್ಲಿ 77% ಬ್ಯಾಟರಿ ನಷ್ಟಕ್ಕೆ ಕಾರಣವಾಗಿದೆ.



    15. ಬುಕ್ಕಿಂಗ್.ಕಾಮ್:

    ಟ್ರಾವೆಲ್ ಏಜೆನ್ಸಿಯಾಗಿರುವ ಬುಕ್ಕಿಂಗ್.ಕಾಮ್ ಲಾಡ್ಜಿಂಗ್ ರಿಸರ್ವೇಶನ್ ಹಾಗೂ ಇತರ ಪ್ರಯಾಣ ಆದ್ಯತೆಗಳನ್ನು ಪ್ರವಾಸಿಗರಿಗಾಗಿ ನೆರವೇರಿಸಿಕೊಡುತ್ತದೆ. ಆದರೆ ಬುಕ್ಕಿಂಗ್.ಕಾಮ್ ಕೂಡ ಹೆಚ್ಚಿನ ಬ್ಯಾಟರಿ ವಿನಿಯೋಗವನ್ನು ತನ್ನ ಸೇವೆಗಳನ್ನು ಬಳಸುವಲ್ಲಿ ಮಾಡುತ್ತಿದ್ದು ಪಿ ಕ್ಲೌಡ್ ಪ್ರಕಾರ ಇದು 77% ಬ್ಯಾಟರಿ ನಷ್ಟಕ್ಕೆ ಕಾರಣವಾಗಿದೆ.

    16. ಅಮೆಜಾನ್:

    ಇ-ಕಾಮರ್ಸ್ ಜಾಲತಾಣವಾಗಿರುವ ಅಮೆಜಾನ್ ಆ್ಯಪ್ ಅನ್ನು ನಿಮ್ಮ ಫೋನ್‌ನಲ್ಲಿ ನೀವು ಹೆಚ್ಚು ಬಳಸುತ್ತಿದ್ದೀರಿ ಎಂದಾದಲ್ಲಿ ನಿಮ್ಮ ಫೋನ್‌ನಲ್ಲಿ ನಿಮಗೆ ಗೊತ್ತಿಲ್ಲದಂತೆಯೇ ಬ್ಯಾಟರಿ ಕಡಿಮೆಯಾಗುತ್ತಲೇ ಇರುತ್ತದೆ. ಇದು 77% ಬ್ಯಾಟರಿ ನಷ್ಟವನ್ನುಂಟುಮಾಡುತ್ತದೆ.

    Read Also: MeowTalk: ಮುದ್ದಿನ ಬೆಕ್ಕು ಏನು ಹೇಳುತ್ತೆ ಗೊತ್ತಾಗಬೇಕಾ? ಹಾಗಿದ್ರೆ ಈ ಆ್ಯಪ್​ ಬಳಸಿ ಅದರ ಮನಸ್ಥಿತಿ ಅರ್ಥ ಮಾಡಿಕೊಳ್ಳಿ

    17. ಟೆಲಿಗ್ರಾಮ್:

    ತ್ವರಿತ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಆಗಿರುವ ಟೆಲಿಗ್ರಾಮ್ ವಿಡಿಯೋ ಕಾಲಿಂಗ್‌ಗೆ ನೆರವನ್ನೀಯುತ್ತದೆ. ಆದರೆ ಪಿ ಕ್ಲೌಡ್ ಹೇಳುವಂತೆ ಇದು 77% ಬ್ಯಾಟರಿ ನಷ್ಟವನ್ನು ಡಿವೈಸ್‌ಗಳಲ್ಲಿ ಉಂಟುಮಾಡುತ್ತಿದೆ.

    18. ಗ್ರಿಂಡರ್:

    ಸಾಮಾಜಿಕ ನೆಟ್‌ವರ್ಕಿಂಗ್ ಹಾಗೂ ಡೇಟಿಂಗ್ ಆಗಿ ಗ್ರಿಂಡರ್ ಪಿ ಕ್ಲೌಡ್ ಹೇಳುವಂತೆ ಸ್ಮಾರ್ಟ್‌ಫೋನ್ ಬ್ಯಾಟರಿಯನ್ನು ತಗ್ಗಿಸುತ್ತದೆ. ಇದು 72% ಬ್ಯಾಟರಿ ವಿನಿಯೋಗಿಸುತ್ತದೆ.



    19. ಲೈಕಿ:

    ವಿಡಿಯೋ ರಚನೆ ಹಾಗೂ ಶೇರಿಂಗ್ ಆ್ಯಪ್ ಆಗಿರುವ ಲೈಕಿ ಬಿಗೋ ಟೆಕ್ನಾಲಜಿಯ ಮಾಲಿಕತ್ವದಲ್ಲಿದೆ. ಈ ಆ್ಯಪ್ 72% ಬ್ಯಾಟರಿ ಡ್ರೈನ್ ಡಿವೈಸ್‌ಗಳಲ್ಲಿ ಉಂಟುಮಾಡುತ್ತದೆ.

    20. ಲಿಂಕ್ಡ್‌ಇನ್:

    ಬಿಸ್‌ನೆಸ್ ಹಾಗೂ ಉದ್ಯೋಗ ಆಧಾರಿತ ಆನ್‌ಲೈನ್ ಸೇವೆಯನ್ನೊದಗಿಸುವ ಲಿಂಕ್ಡ್‌ಇನ್ ಆ್ಯಪ್ ಪಿ ಕ್ಲೌಡ್‌ನ ಬ್ಯಾಟರಿ ಕುಗ್ಗಿಸುವ (ಡ್ರೈನ್) ಮಾಡುವ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಇದು 72% ಬ್ಯಾಟರಿ ನಷ್ಟಕ್ಕೆ ಕಾರಣವಾಗಿದೆ ಎಂಬುದು ಅಂಕಿ ಅಂಶಗಳಿಂದ ತಿಳಿದುಬಂದಿದೆ.


    First published: