Iphone ಅಸ್ತಿತ್ವವನ್ನು ಬದಲಾಯಿಸಲು ಈ ಮೂರು ಅಂಶಗಳೇ ಕಾರಣ!

Apple Iphone: 2007ರ ಹಿಂದೆಯೇ ಮೂರು ಅಂಶಗಳು ಐಫೋನ್‌ನ ಅದೃಷ್ಟವನ್ನು ನಿರ್ಧರಿಸಿತ್ತು ಎಂಬುದು ನಿಜವಾಗಿದೆ. ನೆಟ್‌ವರ್ಕ್ ಆಪರೇಟರ್‌ಗಳೊಂದಿಗೆ ನಡೆಸುತ್ತಿದ್ದ ಡೀಲ್‌ನಿಂದ ಆರಂಭಿಸಿ ಆ್ಯಪ್ ಸ್ಟೋರ್‌ ನಿರ್ಮಿಸುವವರೆಗೆ ಆ್ಯಪಲ್ ಕೆಲವೊಂದು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದ್ದರಿಂದಲೇ ಇಂದು ಐಫೋನ್ ಇತಿಹಾಸ ಸೃಷ್ಟಿಸಿದೆ ಎಂದೇ ಹೇಳಬಹುದು.

Iphone / ಐಫೋನ್‌

Iphone / ಐಫೋನ್‌

 • Share this:
  ಮೊಬೈಲ್ ಫೋನ್‌ಗಳ (Mobile Phone) ಕ್ಷೇತ್ರದಲ್ಲಿ ಐಫೋನ್ (Iphone) ಎಂಬುದು ಮುಂದಿನ ಅಧ್ಯಾಯವಾಗಲಿದೆ ಎಂಬುದಾಗಿ 2007ಕ್ಕೂ ಮುನ್ನವೇ ಸ್ಟೀವ್ ಜಾಬ್ಸ್ (Steve Jobs)‌ ಭವಿಷ್ಯ ನುಡಿದಿದ್ದರು. ಹದಿನೈದು ವರ್ಷಗಳ ಹಿಂದೆ ಸೆಲ್‌ಫೋನ್ ಮಾರುಕಟ್ಟೆಗಳನ್ನು (Markets) ಭಿನ್ನವಾಗಿ ನಿರ್ವಹಿಸಲಾಗುತ್ತಿತ್ತು. ಅದರಲ್ಲೂ ಅಮೆರಿಕದಲ್ಲಿ ಹೊಸ ಮೊಬೈಲ್ ಫೋನ್ ಲಾಂಚ್ (Launch) ಮಾಡುವುದು ಅಷ್ಟೊಂದು ಸುಲಭವಾಗಿರಲಿಲ್ಲ. ಇಂದು ನಮಗೆಲ್ಲರಿಗೂ ತಿಳಿದಿರುವ ಐಫೋನ್‌ನ (Iphone) ಅಸ್ತಿತ್ವ ಆ್ಯಪಲ್‌ನ ದಿಟ್ಟ ನಿರ್ಧಾರದಿಂದ ಮಾತ್ರವೇ ಸಾಧ್ಯವಾಗಿರುವುದಾಗಿದೆ. 2007ರ ಹಿಂದೆಯೇ ಮೂರು ಅಂಶಗಳು ಐಫೋನ್‌ನ ಅದೃಷ್ಟವನ್ನು ನಿರ್ಧರಿಸಿತ್ತು ಎಂಬುದು ನಿಜವಾಗಿದೆ. ನೆಟ್‌ವರ್ಕ್ ಆಪರೇಟರ್‌ಗಳೊಂದಿಗೆ (Network Operator) ನಡೆಸುತ್ತಿದ್ದ ಡೀಲ್‌ನಿಂದ ಆರಂಭಿಸಿ ಆ್ಯಪ್ ಸ್ಟೋರ್‌ ನಿರ್ಮಿಸುವವರೆಗೆ ಆ್ಯಪಲ್ ಕೆಲವೊಂದು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದ್ದರಿಂದಲೇ ಇಂದು ಐಫೋನ್ ಇತಿಹಾಸ ಸೃಷ್ಟಿಸಿದೆ ಎಂದೇ ಹೇಳಬಹುದು. ನೀವು ಇಂದು ಯಾವುದೇ ಐಫೋನ್ ಬಳಸುತ್ತಿರಿ ಈ ಲೇಖನ ನಿಮಗೆ ಆಸಕ್ತಿದಾಯಕ ವಿವರಗಳನ್ನು ನೀಡುವುದು ಖಂಡಿತ.

  ಐಫೋನ್‌ಗಾಗಿ ಪ್ರಮುಖ ಪಾತ್ರ ವಹಿಸಿದ ಮೂರು ಅಂಶಗಳು

  ಐಫೋನ್‌ ಸಿದ್ಧತೆಯ ಆರಂಭ ತೊಡಕುಗಳು:

  ಐಫೋನ್‌ ಬಿಡುಗಡೆಯ ಮೊದಲು, ಐಫೋನ್‌ ಅನ್ನು ಒಂದು ಉತ್ಪನ್ನದಂತೆ ಪರಿಗಣಿಸಲು ಆ್ಯಪಲ್ ಪರಿಶ್ರಮಿಸುತ್ತಿತ್ತು. ಆರಂಭದ ಪ್ರೋಟೋಟೈಪ್ ಪ್ರಕಾರವು ಬಗ್‌ ಹಾಗೂ ಪ್ರಮುಖ ದೋಷಗಳನ್ನು ಒಳಗೊಂಡಿತ್ತು. ಅಸಲಿ ವಿಷಯವೆಂದರೆ ಐಫೋನ್ ಸಿದ್ಧಗೊಂಡಿದೆ ಎಂಬುದಾಗಿ ಆ್ಯಪಲ್ ವಿಶ್ವಕ್ಕೆ ತಿಳಿಸುವ ಮುನ್ನ ಎಷ್ಟೋ ಬಾರಿ ಸ್ಟೀವ್ ಜಾಬ್ಸ್‌ ತಮ್ಮ ತಂಡಕ್ಕೆ ಸಮಸ್ಯೆಗಳನ್ನು ಸರಿಪಡಿಸಲು ಕೇಳಿಕೊಂಡಿರುವುದು ವರದಿಯಾಗಿದೆ. ಇನ್ನು ಲಾಂಚ್ ಆದ ನಂತರ ಕೂಡ ಐಫೋನ್ ಹೇಗೆ ಕಾರ್ಯನಿರ್ವಹಿಸಬೇಕೋ ಹಾಗೇ ಕಾರ್ಯನಿರ್ವಹಿಸದೇ ಇದ್ದ ಪರಿಸ್ಥಿತಿಗಳು ಏರ್ಪಟ್ಟಿತ್ತು.

  ಐಫೋನ್‌ಗಾಗಿ ಸ್ಟೀವ್ ಜಾಬ್ಸ್‌ ಪ್ರಸ್ತುತಿ ನಡೆಸುವ ಸಮಯದಲ್ಲಿ ಎಲ್ಲವೂ ಸರಿಯಾಗಿರುವಂತೆ ಕಂಡುಬಂದರೂ, ಮಾರಾಟದ ಸಮಯದಲ್ಲಿ ಐಫೋನ್‌ನ ಹಲವಾರು ಸಾಫ್ಟ್‌ವೇರ್ ದೋಷಗಳನ್ನು ಬಗೆಹರಿಸಿದ ಪ್ರಸಂಗ ಕೂಡ ಇತ್ತು.

  ಇದನ್ನು ಓದಿ: Amazon: ಜನವರಿ 17 ರಿಂದ 20 ರವರೆಗೆ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌.. ರಿಯಾಯಿತಿ ಬೆಲೆಗೆ ಉತ್ಪನ್ನಗಳನ್ನು ಖರೀದಿಸಲು ರೆಡಿಯಾಗಿ

  ಸಿಂಗ್ಯುಲರ್‌ನೊಂದಿಗೆ (ಇದೀಗ AT&T – ಅಮೇರಿಕನ್ ಟೆಲಿಫೋನ್ ಹಾಗೂ ಟೆಲಿಗ್ರಾಫ್ ಕಂಪನಿ) ಒಪ್ಪಂದ:

  2007ಕ್ಕೂ ಮೊದಲು ಮೊಬೈಲ್ ಫೋನ್‌ಗಳ ಭವಿಷ್ಯ ಸಾಗಣೆದಾರರನ್ನು ಅವಲಂಬಿಸಿತ್ತು. ಯುಎಸ್‌ನಲ್ಲಿರುವ ನೆಟ್‌ವರ್ಕ್ ಆಪರೇಟರ್‌ಗಳು ಅವರಿಗೆ ಇಷ್ಟಬಂದ ರೀತಿಯಲ್ಲಿ ಮೊಬೈಲ್ ಫೋನ್ ಅನುಭವಗಳನ್ನು ನಿರ್ದೇಶಿಸುತ್ತಿದ್ದರು. ಹಾಗಾಗಿ ಪೂರ್ವ-ಐಫೋನ್ ಸಮಯದಲ್ಲಿ ಡಿವೈಸ್‌ಗಳು ಸಾಕಷ್ಟು ಸಾಫ್ಟ್‌ವೇರ್ ದೋಷಗಳನ್ನು ಒಳಗೊಂಡಿತ್ತು. ಹಾಗಾಗಿ ಇದು ಗೊಂದಲಕಾರಿಯಾದ ಅನುಭವಗಳನ್ನು ನೀಡುತ್ತಿತ್ತು.

  ಆದರೂ ಆ್ಯಪಲ್ ಸಿಂಗ್ಯುಲರ್‌ನೊಂದಿಗೆ (ಇದೀಗ AT&T) ಒಪ್ಪಂದ ಮಾಡಿಕೊಂಡಿತು ಹಾಗೂ ಪ್ರತಿ ತಿಂಗಳು ಪ್ರತಿ ಗ್ರಾಹಕನಿಂದ $10 ಗಳಿಸುವಲ್ಲಿ ಸಫಲವಾಯಿತು. ಐಫೋನ್‌ನ ಸಂಪೂರ್ಣ ವಿನ್ಯಾಸದ ಮೇಲೆ ಆ್ಯಪಲ್‌ನ ಸಂಪೂರ್ಣ ನಿಯಂತ್ರಣವನ್ನು ಒಪ್ಪಂದ ಒಳಗೊಂಡಿತ್ತು. ಇದು ಸಾಧ್ಯವಾಗದೇ ಇದ್ದಿದ್ದರೆ ಐಫೋನ್ ಅಸ್ತಿತ್ವಕ್ಕೆ ಬರಲು ಸಾಧ್ಯವೇ ಇರಲಿಲ್ಲ.

  ಆ್ಯಪ್ ಸ್ಟೋರ್:

  ಮೂಲ ಐಫೋನ್ ಆ್ಯಪ್ ಸ್ಟೋರ್‌ನೊಂದಿಗೆ ಬಂದಿರಲಿಲ್ಲ. ಆ ಸಮಯದಲ್ಲಿದ್ದ ಮೊಬೈಲ್ ಫೋನ್‌ಗಳಂತೆಯೇ ಐಫೋನ್ ಕೇವಲ 16 ಆ್ಯಪ್‌ಗಳನ್ನು ಹೊಂದಿತ್ತು. ಇನ್ನು ಧೈರ್ಯದ ನಿರ್ಧಾರಗಳಿಗೆ ಅಂಟಿಕೊಂಡಿದ್ದ ಆ್ಯಪಲ್‌ನ ಅಭ್ಯಾಸದಿಂದಾಗಿ ಹೆಚ್ಚು ನಿಯಂತ್ರಿತ ವಿಧಾನಕ್ಕೆ ಒಗ್ಗಿಕೊಳ್ಳುವ ತನ್ನ ವಿಧಾನವನ್ನು ಮುಂದುವರಿಸಿತು.

  ಇದನ್ನು ಓದಿ: Bluetooth ಗೊತ್ತಲ್ವಾ? ಈ ಹೆಸರಿನ ಹಿಂದೆ ರಾಜನೊಬ್ಬನ ಕಥೆಯಿದೆ!

  2008ರಲ್ಲಿ ಆ್ಯಪ್ ಸ್ಟೋರ್ ಐಫೋನ್ ಅನುಭವ ಸುಧಾರಿಸುತ್ತದೆ ಎಂಬುದನ್ನು ಕಂಡುಕೊಂಡ ಆ್ಯಪಲ್, ಆ್ಯಪ್ ಸ್ಟೋರ್ ಅನ್ನು ಐಓಎಸ್‌ನ ಮುಂದಿನ ಆವೃತ್ತಿ ಎಂಬುದಾಗಿ ಹೊರತಂದಿತು. ಇದು ಬಳಕೆದಾರರಿಗೆ ತಮ್ಮ ಐಫೋನ್‌ನಲ್ಲಿ ಮೂರನೇ ವ್ಯಕ್ತಿ ಆ್ಯಪ್‌ಗಳನ್ನು ಬಳಸಲು ಅನುಮತಿಸಿತು ಹಾಗೂ ಗೂಗಲ್‌ನ ಆ್ಯಂಡ್ರಾಯ್ಡ್ ವರ್ಷದ ನಂತರ ಸೂಟ್ ಅನ್ನು ಅನುಸರಿಸಿತು. ಅಂತೂ ಇಂತೂ ಆ್ಯಪ್ ಸ್ಟೋರ್ ಐಫೋನ್ ಅನ್ನು ಅತ್ಯಂತ ಶಕ್ತಿಶಾಲಿ ಪ್ಲಾಟ್‌ಫಾರ್ಮ್‌ನಂತೆ ರೂಪಿಸಿತು ಹಾಗೂ ಆ್ಯಪಲ್‌ನ ಅರ್ಧದಷ್ಟು ಹೆಚ್ಚಿನ ಆದಾಯಕ್ಕೆ ಈ ಕ್ರಾಂತಿ ಮುನ್ನುಡಿಯಾಯಿತು.
  Published by:Harshith AS
  First published: