• Home
 • »
 • News
 • »
 • tech
 • »
 • Technology: ಈ ಫ್ಯಾನ್​ ನಿಮ್ಮ ಮನೆ ಮಕ್ಕಳ ಜೀವ ಉಳಿಸಬಹುದು!

Technology: ಈ ಫ್ಯಾನ್​ ನಿಮ್ಮ ಮನೆ ಮಕ್ಕಳ ಜೀವ ಉಳಿಸಬಹುದು!

ಸೇಫ್‌ ಹ್ಯಾಲೊ ಫ್ಯಾನ್‌

ಸೇಫ್‌ ಹ್ಯಾಲೊ ಫ್ಯಾನ್‌

ಸೇಫ್ ಹ್ಯಾಲೋ ಕಂಪನಿ ಆವಿಷ್ಕಾರ ಮಾಡಿರುವ ಈ ಹೊಸ ಸೇಫ್ ಫ್ಯಾನ್ ಡಿವೈಸ್ ಅನ್ನು ಫ್ಯಾನ್​ಗೆ ಅಳವಡಿಸಿದಲ್ಲಿ ಆ ಫ್ಯಾನ್​ನಿಂದ ಯಾರೂ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದು ಆತ್ಮಹತ್ಯೆಯಿಂದ ರಕ್ಷಿಸುತ್ತದೆ.

 • Share this:

  ತಂತ್ರಜ್ಞಾನ (Technology) ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಬದಲಾವಣೆಗಳು ಆಗುತ್ತಲೇ ಇದೆ. ಕೆಲವೊಂದು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ತಂತ್ರಜ್ಞರು ಹೊಸ ಹೊಸ ಆವಿಷ್ಕಾರಗಳನ್ನು  ಮಾಡುತ್ತಿರುತ್ತಾರೆ. ಇಲ್ಲೊಂದು ವಿಶೇಷವಾದ ಫ್ಯಾನ್‌ (Fan) ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಇದು ಬಹಳಷ್ಟು ಫೀಚರ್ಸ್‌ (Features) ಅನ್ನು ಹೊಂದಿದೆ. ಇದರ ವಿಶೇಷತೆಯೆಂದರೆ ಇಲ್ಲಿ ಕೆಲವೊಬ್ಬರು ನೇಣುಬಿಗಿದು ಆತ್ಮಹತ್ಯೆ ಮಾಡಲು ಪ್ರಯತ್ನಿಸುತ್ತಾರೆ. ಆದರೆ ಈ ಫ್ಯಾನ್‌ನಲ್ಲಿ ಒಂದು ವಿಶೇಷವಾದ ಡಿವೈಸ್‌ (Device) ಅನ್ನು ಆ್ಯಡ್ (Add) ಮಾಡಿದ್ದಾರೆ. ಈ ಫ್ಯಾನ್‌ ವಿಶೇಷವಾಗಿ ಆತ್ಮಹತ್ಯೆ ಯತ್ನ ಮಾಡುವವರನ್ನೇ ಉದ್ದೇಶವಾಗಿಟ್ಟುಕೊಂಡು ಆವಿಷ್ಕರಿಸಿದೆ ಎಂದು ವರದಿ (Report) ಮಾಡಿದ್ದಾರೆ. 


  ಸೇಫ್ ಹ್ಯಾಲೋ ಕಂಪನಿ ಆವಿಷ್ಕಾರ ಮಾಡಿರುವ ಈ ಹೊಸ ಸೇಫ್ ಫ್ಯಾನ್ ಡಿವೈಸ್ ಅನ್ನು ಫ್ಯಾನ್​ಗೆ ಅಳವಡಿಸಿದಲ್ಲಿ ಆ ಫ್ಯಾನ್​ನಿಂದ ಯಾರೂ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಾಗದಂತಹ ಉಪಕರಣವನ್ನು ವಿನ್ಯಾಸ ಮಾಡಲಾಗಿದೆ.


  ಎಲ್ಲಿ ಮೊದಲು ಪ್ರದರ್ಶನ ಮಾಡಲಾಯಿತು?


  ಬೆಂಗಳೂರು ನಗರದ ಅರಮನೆ ಮೈದಾನದಲ್ಲಿ ಆದಂತಹ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ವಸ್ತು ಪ್ರದರ್ಶನದಲ್ಲಿ ಈ ಸಾಧನ ವಿಶೇಷ ಆಕರ್ಷಣೆಯಾಗಿತ್ತು. ಇಲ್ಲೇ ಮೊದಲು ಈ ತಂತ್ರಜ್ಞಾನವನ್ನು ಮಾರುಕಟ್ಟೆಗೆ ಪರಿಚಯಿಸಿದರು.


  ಇದನ್ನೂ ಓದಿ: ಮಾರುಕಟ್ಟೆಗೆ ಲಗ್ಗೆಯಿಟ್ಟ ನೋಕಿಯಾ 2780 ಫ್ಲಿಪ್ ಫೀಚರ್ ಫೋನ್: ಬೆಲೆ, ಫೀಚರ್ ಮಾಹಿತಿ ಇಲ್ಲಿದೆ


  ಯಾವ ಕಾರಣಕ್ಕೆ ಮಾಡಲಾಗಿದೆ?


  ಕಛೇರಿ, ಶಾಲೆಗಳು, ಕಾಲೇಜುಗಳು, ಹೊಟೇಲ್‌, ಹಾಸ್ಟೆಲ್‌ ಇಂತಹ ಸ್ಥಳಗಳಲ್ಲಿ ಹೆಚ್ಚಾಗಿ ಸೀಲಿಂಗ್‌ ಫ್ಯಾನ್‌ಗಳನ್ನು ಅಳವಡಿಸಿರುತ್ತಾರೆ. ಹೆಚ್ಚಾಗಿ ಈ ಸೀಲಿಂಗ್‌ ಫ್ಯಾನ್‌ ಮೂಲಕವೇ ಆತ್ಮಹತ್ಯೆ ಮಾಡಿಕೊಂಡು ಮರಣ ಹೊಂದಿರುತ್ತಾರೆ. ಆದ್ದರಿಂದ ಈ ಎಲ್ಲ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಈ ತಂತ್ರಜ್ಞಾನವನ್ನು ರಚಿಸಲಾಗಿದೆ ಎಂದು ವರದಿಯಲ್ಲಿ ಹೇಳಿದ್ದಾರೆ.


  If you try to commit suicide in this fan there will be an alarm Even if you hang yourself life will not go away
  ಸೇಫ್‌ ಹ್ಯಾಲೊ ಫ್ಯಾನ್‌


  ಯಾವ ರೀತಿ ಕಾರ್ಯನಿರ್ವಹಿಸುತ್ತದೆ?


  ಡಿವೈಸ್‌ನಿಂದ ಲಿಂಕ್‌ ಆಗಿರುವ ನಂಬರ್‌ಗೆ ಮೆಸೇಜ್:‌ 


  ಈ ರೀತಿಯ ಫ್ಯಾನ್‌ ಅತ್ಮಹತ್ಯೆ ಮಾಡುವವರನ್ನು ರಕ್ಷಿಸುತ್ತದೆ. ಹೇಗೆಂದರೆ ಎಲ್ಲಾದರೂ ಸೀಲಿಂಗ ಫ್ಯಾನ್‌ ಸಿಕ್ಕಿಸುವಾಗ ಡೈರೆಕ್ಟ್‌ ಸೀಲಿಂಗ್‌ ಮೇಲಿರುವ ಕ್ಲಾಂಪ್‌ಗೆ ಸಿಕ್ಕಿಸಬಾರದು. ಬದಲಾಗಿ "ಸೇಫ್‌ ಹ್ಯಾಲೋ ಕಂಪನಿ" ಒದಗಿಸುವ ಸೇಫ್‌ ಕ್ಲಾಂಪ್‌ ಅನ್ನು ಸೆಟಪ್‌ ಮಾಡಿ ಸಿಕ್ಕಿಸಬೇಕು. ಈ ಫ್ಯಾನ್‌ನಲ್ಲಿರುವ ಡಿವೈಸ್‌ಗೆ ಮೊದಲೇ ಒಂದು ನಂಬರನ್ನು ಕನೆಕ್ಟ್‌ ಮಾಡಲಾಗುತ್ತದೆ. ಆದ್ದರಿಂದ ಯಾರಾದರು ಆತ್ಮಹತ್ಯಗೆ ಯತ್ನಿಸಿದಾಗ ಆ ನಂಬರ್‌ಗೆ ತಕ್ಷಣ ಮೆಸೇಜ್‌ ಹೋಗುತ್ತದೆ.


  ಹ್ಯಾಲೋ ಕಂಪನಿಯಾ ಸೇಫ್‌ ಕ್ಲಾಂಪ್:‌


  ಇದು ಫ್ಯಾನಿನ ಮೂಲಕ ಆತ್ಮಹತ್ಯೆಗೆ ಪ್ರಯತ್ನಿಸಿದಾಗ ಈ ಫ್ಯಾನ್‌ 20 ಕೆಜಿ ಭಾರ ಬೀಳುತ್ತಲೇ ಮೆಲ್ಲನೆ ಕೆಳಗೆ ಇಳಿಯುತ್ತದೆ. ನೇಣಿಗೆ ಕೊರಳೊಡ್ಡಿದ ವ್ಯಕ್ತಿಯನ್ನು ನೆಲಕ್ಕೆ ತಾಗುವಂತೆ ಮಾಡುತ್ತದೆ. ಈ ರೀತಿ ಆತ್ಮಹತ್ಯೆಯಿಂದ ಇದು ತಪ್ಪಿಸುವಂತೆ ಮಾಡುತ್ತದೆ.


  ಅಲಾರಂ ಕೂಡ ಆಗುತ್ತದೆ:


  ಈ ಡಿವೈಸ್‌ನಲ್ಲಿ ಅಲಾರಂ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ಅಂದರೆ ಇಲ್ಲಿ ಆತ್ಮಹತ್ಯೆಗೆ ಯಾರಾದರು ಯತ್ನಿಸಿದಾಗ ಇದು ಜೋರಾಗಿ ಅಲಾರಂ ಅನ್ನು ಮಾಡುತ್ತದೆ. ಇದರಿಂದ ಮನೆಯೊಳಗೆ ಇದ್ದವರಿಗೆ, ಅಕ್ಕಪಕ್ಕದ ಮನೆಯವರಿಗೆ ಬಂದು ಕಾಪಾಡಬಹುದಾಗಿದೆ.


  ಈ ಸೇಫ್‌ ಡಿವೈಸ್‌ ಫ್ಯಾನಿನ ಬೆಲೆ: 


  ಈ ಸಾಧನ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಲಭ್ಯವಾಗಲಿದೆ. ಇದು 700 ರೂಪಾಯಿಯಿಂದ 1000 ರೂಪಾಯಿಯಲ್ಲಿ ಗ್ರಾಹಕರಿಗೆ ಖರೀದಿಸಬಹುದಾಗಿದೆ. ಇನ್ನು ಇದು ಮೆಕ್ಯಾನಿಕಲ್‌ ಡಿವೈಸ್‌ ಆಗಿರುವ ಉಪಕರಣದಲ್ಲಿ, ಅಲಾರಂ ಲಭ್ಯವಿದ್ದು ಬ್ಯಾಟರಿ ಚಾಲಿತವಾಗಿರುತ್ತದೆ.


  ಮಾಧ್ಯಮದ ಜೊತೆಗೆ ಕಂಪನಿಯ ಅಭಿಪ್ರಾಯ:


  ಈ ಬಗ್ಗೆ ಪ್ರತಿಷ್ಠಿತ ಮಾಧ್ಯಮದಲ್ಲಿ ಮಾತಾಡಿದ್ದ ಸೇಫ್‌ ಹ್ಯಾಲೊ ತಂತ್ರಾಂಶ ನಿರ್ದೇಶಕ ಸುಮಂತ್‌ ಅವರು ಈಗಾಗಲೆ ಈ ಉಪಕರಣವನ್ನು ಐಐಟಿ, ಏಮ್ಸ್‌, ಏರ್‌ಫೋರ್ಸ್‌ ಕ್ವಾರ್ಟರ್ಸ್‌ಗಳಲ್ಲಿ ಅಳವಡಿಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.


  ಇದನ್ನೂ ಓದಿ: ವಾಟ್ಸಾಪ್‌ನಲ್ಲಿ ಫೇಕ್‌ ನಂಬರ್ ಪತ್ತೆ ಮಾಡುವುದು ತುಂಬಾ ಸುಲಭ ಕಣ್ರೀ!


  1.2 ಲಕ್ಷದಷ್ಟು ಡಿವೈಸ್‌ ಮಾರಾಟ ಕೂಡ ಮಾಡಲಾಗಿದೆ. ಇದಲ್ಲದೆ ಇದು ಮೇಕ್‌ ಇನ್‌ ಇಂಡಿಯಾ ಯೋಜನೆಯಾಗಿದ್ದು, ಸ್ವತಃ ನಾವೇ ಆವಿಷ್ಕಾರ ಮಾಡಿದ್ದೇವೆ ಎಂದಿದ್ದಾರೆ.

  Published by:Harshith AS
  First published: