• Home
  • »
  • News
  • »
  • tech
  • »
  • WhatsApp Communities: ವಾಟ್ಸಪ್​ನ ಈ ಹೊಸಾ ಫೀಚರ್​ನಲ್ಲಿ ಏನೇನಿದೆ? ಬಳಸೋದು ಹೇಗೆ?

WhatsApp Communities: ವಾಟ್ಸಪ್​ನ ಈ ಹೊಸಾ ಫೀಚರ್​ನಲ್ಲಿ ಏನೇನಿದೆ? ಬಳಸೋದು ಹೇಗೆ?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಇದೀಗ ವಾಟ್ಸಪ್ ಬೀಟಾ ಬಳಕೆದಾರರಿಗೆ ಹೊಸ ಫೀಚರ್ ಅನ್ನು ವಾಟ್ಸಪ್ ಸಂಸ್ಥೆ ನೀಡಿದೆ. ಆದೇನು ಗೊತ್ತಾ?

  • Share this:

    ಇದೀಗ WhatsApp ಬೀಟಾ ಬಳಕೆದಾರರಿಗೆ ಹೊಸ ಫೀಚರ್ (New Feature) ಅನ್ನು ವಾಟ್ಸಪ್ ಸಂಸ್ಥೆ ನೀಡಿದೆ. ಆಂಡ್ರಾಯ್ಡ್‌ನಲ್ಲಿ(Android) ವಾಟ್ಸಾಪ್ ಬೀಟಾ (Beta) ವಿ2.22.193 ಗೆ ಅಪ್‌ಡೇಟ್ ಮಾಡಿದ ಕೆಲವು WhatsApp ಬಳಕೆದಾರರಿಗೆ ಕಮ್ಯುನಿಟೀಸ್ (Communities) ಟ್ಯಾಬ್ (Tab) ಕಾಣಿಸಿಕೊಂಡಿದ್ದು, ಈ ಫೀಚರ್ ನ ಸಹಾಯದಿಂದ 10 ಗುಂಪುಗಳನ್ನು ರಚಿಸುವ ಅವಕಾಶವಿದೆ. ಈ ಕಾರಣದಿಂದ ವಾಟ್ಸಪ್ ಬಳಕೆದಾರರು ತಮ್ಮ ಸ್ಮಾರ್ಟ್ ಫೋನ್ಗಳನ್ನು ಅಪ್ಡೇಟ್ ಮಾಡುತ್ತಿದ್ದರೆ. ಇವೊಂದು ಫೀಚರ್ ವಾಟ್ಸಪ್ ಬಳಕೆದಾರರಿಗೆ 10 ಗುಂಪು, 512 ಜನರನ್ನು ಸೇರಿಸುವಂತಹ ಆಯ್ಕೆಯನ್ನು ನೀಡುತ್ತಿರುವುದನ್ನು ಬಳಕೆದಾರರು ಸಖತ್ ಕಣ್ರಿ ಅನ್ನುವಂತಹ ಅಭಿಪ್ರಾಯವನ್ನು ವ್ಯಕ್ತಪಡಿಸುವಂತೆ ಮಾಡಿದೆ. ಬನ್ನಿ ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯೊಣ.


    ಈ ವರ್ಷದ ಆರಂಭದಲ್ಲಿ ಮಾರ್ಕ್ ಜುಕರ್‌ಬರ್ಗ್ ಘೋಷಿಸಿದ ಹೊಸ WhatsApp Communities  ಫೀಚರ್  ಇದೀಗ WhatsApp ಬೀಟಾ ಬಳಕೆದಾರರಿಗೆ ಕಾಣಿಸಕೊಂಡಿದೆ. ಆಂಡ್ರಾಯ್ಡ್‌ನಲ್ಲಿ ವಾಟ್ಸಾಪ್ ಬೀಟಾ ವಿ2.22.193 ಗೆ ಅಪ್‌ಡೇಟ್ ಮಾಡಿದ ಕೆಲವು WhatsApp ಬಳಕೆದಾರರಿಗೆ ಕಮ್ಯುನಿಟೀಸ್ ಟ್ಯಾಬ್ ಕಾಣಿಸಿಕೊಂಡಿದ್ದು, ಈ ಫೀಚರ್ ಸಹಾಯದಿಂದ 10 ಗುಂಪುಗಳನ್ನು ರಚಿಸುವ ಅವಕಾಶವಿದೆ. ಇವುಗಳಲ್ಲಿ ಒಂದು ಗುಂಪಿನಲ್ಲಿ ಕನಿಷ್ಠ 512 ಮಂದಿಯನ್ನು ಸೇರಿಸಬಹುದಾದ ಆಯ್ಕೆ ಇದೆ ಎಂದು WhatsApp ಬೀಟಾ ಟ್ರ್ಯಾಕರ್ WABetaInfo ವರದಿಯಲ್ಲಿ ತಿಳಿಸಲಾಗಿದೆ. ಹಾಗಾದರೆ, ಈ ಹೊಸ WhatsApp Communities ಫೀಚರ್ ಹೇಗಿದರಲಿದೆ?, ಇದರಿಂದ ಬಳಕೆದಾರರಿಗೆ ಆಗುವ ಲಾಭಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.


    ಪೋಷಕರಿಗೆ ಇಲ್ಲಿದೆ ಸಿಹಿಸುದ್ದಿ


    WhatsApp ಅಪ್ಲಿಕೇಶನ್ ನಲ್ಲಿ ಆಡ್ಮಿನ್‌ಗಳು ನಿರ್ದಿಷ್ಟ ಗುಂಪುಗಳಿಗೆ ಅಥವಾ ಇಡೀ ಸಮುದಾಯಕ್ಕೆ ಪ್ರಕಟಣೆ ಗುಂಪಿನ ಮೂಲಕ ಸಂದೇಶಗಳನ್ನು ಕಳುಹಿಸಲು ಸಾಧ್ಯವಾಗುವಂತೆ WhatsApp Communities ಫೀಚರ್  ಅನ್ನು ರಿಲೀಸ್ ಮಾಡಲಾಗಿದೆ.  ಈ ಫೀಚರ್  ಪ್ರತ್ಯೇಕ ಗುಂಪುಗಳನ್ನು ಒಟ್ಟುಗೂಡಿಸಲು ಸಕ್ರಿಯಗೊಳಿಸುತ್ತದೆ ಎಂದು WhatsApp ಸಂಸ್ಥೆ ತಿಳಿಸಿದೆ.


    There is a feature called communities in WhatsApp What is the new feature
    ಸಾಂಕೇತಿಕ ಚಿತ್ರ


    ಉದಾಹರಣೆಗೆ, ಶಾಲಾ ಮಕ್ಕಳು ಕಡ್ಡಾಯವಾಗಿ ಓದಬೇಕಾದ ವಿಷಯಗಳನ್ನು                   ಹಂಚಿಕೊಳ್ಳಲು ಎಲ್ಲಾ ಪೋಷಕರನ್ನು ಒಟ್ಟಿಗೆ ಸೇರಿಸಬಹುದು ಮತ್ತು ನಿರ್ದಿಷ್ಟ ತರಗತಿಗಳು, ಪಠ್ಯೇತರ ಚಟುವಟಿಕೆಗಳು ಅಥವಾ ಸ್ವಯಂಸೇವಕ ಅಗತ್ಯಗಳ ಬಗ್ಗೆ ಗುಂಪುಗಳನ್ನು ಹೊಂದಿಸಬಹುದಾಗಿದೆ. ಈ ಗುಂಪುಗಳು ನಿರ್ದಿಷ್ಟ ಉದ್ದೇಶಕ್ಕಾಗಿ ರಚಿಸಿಕೊಳ್ಳಬಹುದಾದ ಸಮುದಾಯದ ಗ್ರೂಪ್‌ಗಳಾಗಿ ಕಾರ್ಯನಿರ್ವಹಿಸಲಿವೆ.


    ಇದನ್ನೂ ಓದಿ: Sound Box Volume Tips: ಮೊಬೈಲ್ ಸ್ಪೀಕರ್ ಡಿಜೆ ಸೌಂಡ್‌ ಸಿಸ್ಟಮ್‌ನಂತೆ ಕೇಳಿಸಲು ಹೀಗೆ ಮಾಡಿ


    ವಾಟ್ಸಪ್ ನಲ್ಲಿ ಕಮ್ಯುನಿಟೀಸ್ ಫೀಚರ್ ನ  ವಿಶೇಷತೆ ಏನು ಗೊತ್ತಾ?


    ನಿರ್ದಿಷ್ಟ ಉದ್ದೇಶಕ್ಕಾಗಿ ರಚಿಸಿಕೊಳ್ಳಬಹುದಾದ ಸಮುದಾಯದ ಗ್ರೂಪ್‌ನಲ್ಲಿ ಆಹ್ವಾನಿಸಲಾದ ಬಳಕೆದಾರರು ತಮ್ಮ ಆಸಕ್ತಿಗಳ ಆಧಾರದ ಮೇಲೆ ಯಾವ ಗ್ರೂಪ್ ಅನ್ನು ಸೇರಬೇಕೆಂದು ನಿರ್ಧರಿಸಬಹುದು. ಒಂದು ಗ್ರೂಪ್‌ನಲ್ಲಿ 512 ಜನರು ಇರುವ ಒಂದು ಸಮುದಾಯದ ಜನರು ತಮ್ಮ ಅಗತ್ಯ ವಿಷಯಗಳನ್ನು ಹಂಚಿಕೊಳ್ಳಲು ಮತ್ತು ಪಡೆದುಕೊಳ್ಳಲು ಸಾಧ್ಯವಾಗಲಿದೆ. ಇದರಿಂದ ಸಾಮಾನ್ಯ WhatsApp ಗ್ರೂಪ್‌ಗಳಂತೆ ಈ ಗ್ರೂಪ್‌ಗಳಲ್ಲಿ ಅನ್ಯ ವಿಷಯಗಳ ಬಗ್ಗೆ ಅರ್ಥವಿಲ್ಲದೆ ಚರ್ಚೆಗೆ ಅವಕಾಶವಿರುವುದಿಲ್ಲ. ಇನ್ನು ಗೌಪ್ಯತೆಯ ಕಾರಣಗಳಿಗಾಗಿ ಗುಂಪುಗಳಲ್ಲಿನ ಸದಸ್ಯರ ಸಂಖ್ಯೆಯನ್ನು ಅಡ್ಮಿನ್ ಹೊರತಾಗಿ ಇತರರಿಗೆ ಕಾಣಿಸದೇ ಇರುವ ಹಾಗೆ ಈ ಗ್ರೂಪ್‌ಗಳ  ಫೀಚರ್  ತರಲಾಗಿದೆ. ಅಂದರೇ, ಇದು ನಿರ್ದಿಷ್ಟ ಸಮುದಾಯದ ಜನರು ಮಾತ್ರ ಸೇರಿಕೊಳ್ಳಬಹುದಾದ ವ್ಯವಸ್ಥೆಯನ್ನು ತರಲಿದೆ.


    ಇದನ್ನೂ ಓದಿ: Gadgets Cleaning Tips: ಸ್ಪೀಕರ್‌ ಕ್ಲೀನ್ ಮಾಡೋದು ಹೇಗೆ? ಇಲ್ಲಿದೆ ನೋಡಿ ಸಖತ್ ಮಾಹಿತಿ


    ವಾಟ್ಸಪ್ ನಲ್ಲಿ ಕಮ್ಯುನಿಟೀಸ್ ಫೀಚರ್ ಯಾವಾಗ ಸಿಗಲಿದೆ?


    ಮೊದಲೇ ಹೇಳಿದಂತೆ, ಪ್ರಸ್ತುತ ಆಂಡ್ರಾಯ್ಡ್‌ನಲ್ಲಿ WhatsApp ಬೀಟಾ ವಿ2.22.193 ಗೆ ಅಪ್‌ಡೇಟ್ ಮಾಡಿದ ಕೆಲವು WhatsApp ಬಳಕೆದಾರರಿಗೆ ಕಮ್ಯುನಿಟೀಸ್ ಟ್ಯಾಬ್ ಕಾಣಿಸಿಕೊಂಡಿದೆ. ವಾಟ್ಸಾಪ್ ಬೀಟಾ ವಿ2.22.193 ಗೆ ಅಪ್‌ಡೇಟ್ ಮಾಡಿದ ಬಳಕೆದಾರರು ತಮ್ಮ ಮುಖ್ಯ WhatsApp ಪರದೆಯಲ್ಲಿ ಹೊಸ ಕಮ್ಯುನಿಟೀಸ್ ಟ್ಯಾಬ್ ಅನ್ನು ನೋಡಿದ್ದು, ಅದು ಎಡಭಾಗದಲ್ಲಿರುವ ಕ್ಯಾಮರಾ ಟ್ಯಾಬ್ ಅನ್ನು ಬದಲಾಯಿಸಿರುವುದು ಕಂಡುಬಂದಿದೆ. ಇದರೊಂದಿಗೆ ಆಂಡ್ರಾಯ್ಡ್ ಹಾಗೂ ಐಒಎಸ್‌ನ ಎಲ್ಲಾ ವರ್ಷನ್‌ಗಳಿಗೆ ಶೀಘ್ರದಲ್ಲೇ ಈ ಹೊಸ ಫೀಚರ್ ಬರುವ ನಿರೀಕ್ಷೆ ಇದೆ ಎಂದು WABetaInfo ವರದಿಯಲ್ಲಿ ತಿಳಿಸಲಾಗಿದೆ.

    First published: