ಈಗಿನ ದಿನದಲ್ಲಿ ಶಿಕ್ಷಣ (Education) ಎಂಬುದು ಹೇಗೆ ಮುಖ್ಯವೋ ಅದೇ ರೀತಿ ಉದ್ಯೋಗ ಸಹ ಅಷ್ಟೇ ಮುಖ್ಯವಾಗಿದೆ. ಆದರೆ ಈಗ ಯಾರಿಗೂ ಕೆಲಸವೇ ಇಲ್ಲವೆಂಬಂತಾಗಿದೆ. ಈ ಮಧ್ಯೆ ಕೆಲವು ಟೆಕ್ ದೈತ್ಯ ಕಂಪೆನಿಗಳು ಇತ್ತೀಚೆಗೆ ಉದ್ಯೋಗಿಗಳನ್ನು ವಜಾ ಮಾಡುತ್ತಿದ್ದು (Layoff), ಇದನ್ನು ಗಮನಿಸಿದ ಹ್ಯಾಕರ್ಸ್‌ಗಳು ಇದನ್ನೇ ಬಂಡವಾಳವಾಗಿ ಇಟ್ಟುಕೊಂಡಿದ್ದಾರೆ. ಸದ್ಯಕ್ಕೆ ಹಲವಾರು ನಿರುದ್ಯೋಗಿಗಳು ಉದ್ಯೋಗ ಹುಡುಕುತ್ತಿದ್ದು, ಇನ್ನೂ ಕೆಲವರು ಇರುವ ಉದ್ಯೋಗ ಕಳೆದುಕೊಂಡು ಬೇರೆ ಯಾವುದಾದರೂ ಕೆಲಸ ಸಿಕ್ಕರೆ ಸಾಕು ಅಂತಾ ಸಿಕ್ಕ ಸಿಕ್ಕಲ್ಲಿ ಅಪ್ಲಿಕೇಶನ್ ಹಾಕುತ್ತಿದ್ದಾರೆ. ಇದನ್ನೇ ಸದುಪಯೋಗಪಡಿಸಿಕೊಂಡಿರುವ ಹ್ಯಾಕರ್ಸ್‌ಗಳು (Hackers) ಉದ್ಯೋಗ ಇಲ್ಲದೆ ಕಷ್ಟ ಅನುಭವಿಸುತ್ತಿರುವ ಯುವಕರ ಬಾಳಲ್ಲಿ ಇನ್ನಷ್ಟು ನೋವು ನೀಡುತ್ತಿದ್ದಾರೆ.
ಹಾಗಿದ್ರೆ ಕೆಲಸ ಹುಡುಕುತ್ತಿರುವ ನಿರುದ್ಯೋಗಿಗಳಿಗೆ ಹ್ಯಾಕರ್ಸ್ ಯಾವ ರೀತಿ ವಂಚನೆ ಮಾಡುತ್ತಿದ್ದಾರೆ? ಇದರಿಂ ತಪ್ಪಿಸಿಕೊಳ್ಳೋದು ಹೇಗೆ ಎಂದು ಈ ಲೇಖನದಲ್ಲಿದೆ ಓದಿ.
ನಕಲಿ ಕಂಪೆನಿಗಳಿಂದ ಇಮೇಲ್
ಆರ್ಥಿಕ ಹಿಂಜರಿತದಿಂದಾಗಿ ಜಾಗತಿಕವಾಗಿ ಹಲವು ಸಮಸ್ಯೆಗಳು ಈಗಾಗಲೇ ನಿರ್ಮಾಣ ಆಗಿವೆ. ಇದರ ನಡುವೆ ಸೈಬರ್ ಅಪರಾಧಿಗಳು ಸೂಕ್ಷ್ಮ ಮಾಹಿತಿಯನ್ನು ಕದಿಯಲು ಮುಂದಾಗಿದ್ದು, ಉದ್ಯೋಗಾಕಾಂಕ್ಷಿಗಳನ್ನು ಗುರಿಯಾಗಿಸಲು ಫಿಶಿಂಗ್ ಮತ್ತು ಮಾಲ್‌ವೇರ್ ಪ್ರಚಾರಗಳನ್ನು ಬಳಸುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದರ ಜೊತೆಗೆ ಉದ್ಯೋಗ ಹುಡುಕುತ್ತಿರುವವರು ಸಹ ನಕಲಿ ಕಂಪೆನಿಗಳು ಅಥವಾ ನೇಮಕಾತಿ ಏಜೆನ್ಸಿಗಳಿಂದ ಇಮೇಲ್‌ಗಳನ್ನು ಸ್ವೀಕರಿಸುತ್ತಿದ್ದಾರೆ.
ಇದನ್ನೂ ಓದಿ: ಹೋಳಿ ಹಬ್ಬದ ಪ್ರಯುಕ್ತ ಐಫೋನ್ ಮೇಲೆ ಬಂಪರ್ ಡಿಸ್ಕೌಂಟ್! ಕೆಲವು ದಿನಗಳವರೆಗೆ ಮಾತ್ರ
ಇನ್ನು ಈ ಮೇಲ್ ಅಥವಾ ಇನ್ನಿತರೆ ಮೂಲದಲ್ಲಿ ಬರುವ ಸಂದೇಶಗಳಲ್ಲಿ ಹ್ಯಾಕರ್ಸ್‌ಗಳು ತಮ್ಮ ಗುರಿ ಈಡೇರಿಸಿಕೊಳ್ಳಲು ಮುಂದಾಗಿದ್ದು, ಇದರಲ್ಲಿ ಪಾಸ್‌ವರ್ಡ್ ಹಾಗೂ ಹಣದ ವಹಿವಾಟಿನ ಎಲ್ಲಾ ಮಾಹಿತಿಯನ್ನು ಉದ್ಯೋಗಾಕಾಂಕ್ಷಿಗಳಿಗೆ ತಿಳಿಯದಂತೆ ಪಡೆದುಕೊಳ್ಳುತ್ತಿದ್ದಾರೆ. ಈ ಮೇಲ್ಗಳನ್ನು ಓಪನ್ ಮಾಡಿದ್ರೆ ಸಾಕು ಬಳಕೆದಾರರ, ಉದ್ಯೋಗಾಕಾಂಕ್ಷಿಗಳ ಡೇಟಾ ಎಲ್ಲವೂ ಲೀಕ್ ಆಗುತ್ತದೆ.
ಇಮೇಲ್ನಲ್ಲಿ ಏನಿರುತ್ತದೆ?
ಮೊದಲಿಗೆ ಒಂದು ಉದ್ಯೋಗ ಕುರಿತು ಮೇಲ್ ಒಂದನ್ನು ಕಳುಹಿಸುತ್ತಾರೆ. ಅದರಲ್ಲಿ ಉದ್ಯೋಗಕ್ಕೆ ಸಂಬಂಧಪಟ್ಟ ಮಾಹಿತಿ, ಲಿಂಕ್ ಆ್ಯಡ್ ಆಗಿರುತ್ತದೆ. ಜೊತೆಗೆ ಮಾಲ್‌ವೇರ್‌ನಿಂದ ದುರುದ್ದೇಶಪೂರಿತ ಸಾಫ್ಟ್‌ವೇರ್ ಅನ್ನು ಡೌನ್‌ಲೋಡ್ ಮಾಡಲು ಕೇಳುತ್ತಾರೆ. ಇದರಿಂದಾಗಿ ಬಳಕೆದಾರರ ಖಾಸಗಿ ಡೇಟಾ ಹಾಗೂ ಇನ್ನಿತರೆ ಮಾಹಿತಿಗಳು ಹ್ಯಾಕರ್ಸ್‌ಗಳ ವಶವಾಗುತ್ತದೆ.
ಇದರ ಉದ್ದೇಶ ಏನು?
ಇನ್ನು ಉದ್ಯೋಗ ಬಯಸುವವರೇ ಈ ಹ್ಯಾಕರ್ಸ್ಗಳಿಗೆ ಗುರಿಯಾಗಿದ್ದಾರೆ. ಏಕೆಂದರೆ ಇವರ ಹಸಿವು ಏನೆಂದು ಸರಿಯಾಗಿ ಅವರು ಮೊದಲೇ ತಿಳಿದುಕೊಂಡಿರುತ್ತಾರೆ. ಉದ್ಯೋಗದ ವಿಷಯದಲ್ಲಿ ಚೆಲ್ಲಾಟ ಆಡುತ್ತಿರುವ ಹ್ಯಾಕರ್ಸ್ ಸೂಕ್ಷ್ಮ ಮಾಹಿತಿಗೆ ಅನಧಿಕೃತ ಪ್ರವೇಶವನ್ನು ಪಡೆಯಲು, ವೈಯಕ್ತಿಕ ಡೇಟಾವನ್ನು ಕದಿಯಲು ಮತ್ತು ಸಂಸ್ಥೆಯ ಕಾರ್ಯಾಚರಣೆಗಳನ್ನು ಅಡ್ಡಿಪಡಿಸುವ ಗುರಿಯನ್ನು ಹೊಂದಿದ್ದಾರೆ ಎನ್ನಲಾಗಿದೆ. ಅದರಲ್ಲೂ ಯಾವುದೇ ಮೇಲ್ ಅಥವಾ ದಾಖಲಾತಿ ಮೂಲಕ ಸಂವಹನ ನಡೆಸುವಾಗ ಕದ್ದ ದಾಖಲೆಗಳನ್ನೇ ಬಳಕೆ ಮಾಡಿಕೊಳ್ಳುತ್ತಿದ್ದು, ಇದರಿಂದಾಗಿ ಜನರು ಸುಲಭವಾಗಿ ಮೋಸಕ್ಕೆ ಒಳಗಾಗುತ್ತಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಹೆಚ್ಚಾಗಿ ಎಲ್ಲೆಲ್ಲಿ ಈ ರೀತಿಯ ಘಟನೆಗಳು ಸಂಭವಿಸಿವೆ?
ಶೇಕಡಾ 70 ಕ್ಕಿಂತ ಹೆಚ್ಚು ಯುಎಸ್ ಅನ್ನು ಹ್ಯಾಕರ್ಸ್‌ಗಳು ಗುರಿಯಾಗಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದ್ದು. ಇದೇ ರೀತಿಯ ದಾಳಿಗಳು ಜಪಾನ್, ಐರ್ಲೆಂಡ್, ಯುಕೆ, ಸ್ವೀಡನ್, ಪೆರು, ಭಾರತ, ಫಿಲಿಪೈನ್ಸ್, ಜರ್ಮನಿ ಮತ್ತು ಹೆಚ್ಚಿನ ದೇಶಗಳಲ್ಲಿಯೂ ಕಂಡು ಬಂದಿದೆ ಎನ್ನಲಾಗಿದೆ.
ಎಚ್ಚರದಿಂದಿರುವುದು ಒಳ್ಳೆಯದು
ಯಾವುದೇ ಒಂದು ಲಿಂಕ್ ಬಂದಾಗ ಅದನ್ನು ಸರಿಯಾಗಿ ಚೆಕ್ ಮಾಡಿಕೊಂಡು, ನಂತರ ಅದನ್ನು ಓಪನ್ ಮಾಡ್ಬೇಕು. ಇನ್ನು ಯಾವುದೇ ಬ್ಯಾಂಕ್ನಿಂದ ಲಿಂಕ್ ಬಂದಾಗಲು ಅದನ್ನು ಓಪನ್ ಮಾಡುವ ಬದಲು, ಹತ್ತಿರದ ಬ್ಯಾಂಕ್ನ ಬ್ರಾಂಚ್ನ ಅನ್ನು ಸಂಪರ್ಕಿಸುವುದು ಒಳ್ಳೆಯದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ