ಚಾಟ್‌ಜಿಪಿಟಿ (CahtGPT) ಇತ್ತೀಚೆಗೆ ವಿಶ್ವದಾದ್ಯಂಥ ಬಾರೀ ಸಂಚಲನ ಸೃಷ್ಟಿಸಿದೆ. ಗೂಗಲ್ಗೆ ಪ್ರಬಲ ಪೈಪೋಟಿ ನೀಡುವ ದೃಷ್ಟಿಯಿಂದ ಈ ಟೆಕ್ನಾಲಜಿ ಹುಟ್ಟಿಕೊಂಡಿದ್ದು, ಇದೀಗ ಸಾಕಷ್ಟು ಜನರು ಇದರ ಉಪಯೋಗಗಳನ್ನು ಪಡೆದುಕೊಂಡಿದ್ದಾರೆ. ಇನ್ನು ಕೆಲ ಸಂಶೋಧಕರು ಇದರಿಂದ ಎಷ್ಟು ಉಪಯೋಗವಿದೆಯೋ ಅಷ್ಟೇ ತೊಂದರೆಗಳು ಸಹ ಇದೆ ಎಂದಿದ್ದಾರೆ. ಚಾಟ್‌ಜಿಪಿಟಿ ಎಂಬುದು ಮಾನವನಂತೆ ಆಲೋಚಿಸಿ ಬಳಕೆದಾರರು ಕೇಳಿದ ಪ್ರಶ್ನೆಗಳಿಗೆ ಕ್ಷಣಮಾತ್ರದಲ್ಲಿ ನಿಖರವಾಗಿ ಉತ್ತರಿಸುವಂತಹ ಒಂದು ತಂತ್ರಜ್ಞಾನವಾಗಿದೆ. ಆದರೆ ಈ ಟೆಕ್ನಾಲಜಿಯನ್ನು ಇತ್ತೀಚೆಗೆ ಕೆಲ ಶಾಲಾ-ಕಾಲೇಜುಗಳಲ್ಲಿ ಬ್ಯಾನ್ (School-College Baned ChatGPT) ಮಾಡಲಾಗಿದೆ. ಈ ಮಧ್ಯೆ ಬಳಕೆದಾರರಿಗೆ ಇದೀಗ ಚಾಟ್‌ಜಿಪಿಟಿ ವಿಷಯದಲ್ಲಿ ಶಾಕಿಂಗ್ ಸುದ್ದಿಯೊಂ ದು ಸಂಶೋಧಕರು (ChatGPT Hack) ಹೇಳಿದ್ದಾರೆ.
ಚಾಟ್‌ಜಿಪಿಟಿ ಮೂಲಕ ಯಾವುದೇ ಪರೀಕ್ಷೆಯ ಉತ್ತರವನ್ನು ತಿಳಿಯಬಹುದು, ಲವ್ ಲೆಟರ್ನಿಂದ ಹಿಡಿದು ಮೊಬೈಲ್ ಬಳಕೆದಾರರು ಕೇಳುವಂತಹ ಯಾವುದೇ ಪ್ರಶ್ನೆಗೆ ಕ್ಷಣಮಾತ್ರದಲ್ಲಿ ಮನುಷ್ಯರಂತೆಯೇ ಉತ್ತರ ನೀಡುತ್ತದೆ. ಆದರೆ ಇದೀಗ ಈ ಹೆಸರಿನಲ್ಲಿ ಕೆಲ ಕಿಡಿಕೇಡಿಗಳು ಬಳಕೆದಾರರ ಡೇಟಾವನ್ನು ಕದಿಯುವ ಪ್ರಯತ್ನ ಮಾಡುತ್ತಿದ್ದಾರೆಂದು ವರದಿಯಾಗಿದೆ. ಇದರಿಂದ ಎಚ್ಚರಿಜೆಯಿಂದಿರಬೇಕು ಎಂದೂ ಸಂಶೋಧಕರು ಬಳಕೆದಾರರಿಗೆ ತಿಳಿಸಿದ್ದಾರೆ.
ಚಾಟ್‌ಜಿಪಿಟಿ ಆ್ಯಪ್ ಹೆಸರಿನಲ್ಲಿ ಡೇಟಾ ಹ್ಯಾಕ್
ಚಾಟ್‌ಜಿಪಿಟಿ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾದಂತೆ ನಕಲಿ ಚಾಟ್‌ಜಿಪಿಟಿ ಆರ್ಭಟ ಸಹ ಹೆಚ್ಚಾಗಿದೆ. ಅದರಂತೆ ಕ್ಯಾಸ್ಪರ್ಸ್ಕಿ ಸಂಶೋಧಕರು ಹೊಸ ಮಾಲ್‌ವೇರ್ ಅನ್ನು ಫೋಬೋ ಎಂದು ಗುರುತಿಸಿದ್ದು, ಚಾಟ್‌ಜಿಪಿಟಿ ಆ್ಯಪ್ನ ಹೆಸರಲ್ಲಿ ಈ ಹೊಸ ಮಾಲ್‌ವೇರ್ ಮೂಲಕ ದಾಳಿ ಮಾಡುತ್ತಿರುವುದನ್ನು ಕಂಡುಕೊಳ್ಳಲಾಗಿದೆ. ಈ ಅಪ್ಲಿಕೇಶನ್ ಮೂಲಕ ಮಾಲ್ವೇರ್ಗಳು ಬಳಕೆದಾರರ ಡೇಟಾ, ಬ್ಯಾಂಕ್ ಹಣವನ್ನು ದೋಚುತ್ತಿದ್ದಾರೆ.
ಇದನ್ನೂ ಓದಿ: ಐಫೋನ್ 14 ಪ್ಲಸ್ ಸ್ಮಾರ್ಟ್ಫೋನ್ ಮೇಲೆ ಭರ್ಜರಿ ಡಿಸ್ಕೌಂಟ್! ಕೆಲವು ದಿನಗಳವರೆಗೆ ಮಾತ್ರ
ಹಣದ ಆಸೆ ತೋರಿಸಿ ಬಳಕೆದಾರರ ಡೇಟಾ ವಂಚನೆ
ಇನ್ನು ಈ ಹ್ಯಾಕಿಂಗ್ಗೆ ಸಂಬಂಧಿಸಿದ ಕುರಿತು ಸಂಶೋಧಕರು ಬಳಕೆದಾರರಿಗೆ ಮಾಹಿತಿ ನೀಡಿದ್ದು, ನಕಲಿ ಡೆಸ್ಕ್‌ಟಾಪ್ ಆ್ಯಪ್ಗಳ ಲಿಂಕ್‌ಗಳು ಫೇಸ್‌ಬುಕ್, ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಆಗುತ್ತಿದೆ. ಈ ಲಿಂಕ್ ಹೊಂದಿರುವ ಕೆಲವು ಸೋಶಿಯಲ್ ಮೀಡಿಯಾ ಪೋಸ್ಟ್‌ಗಳಲ್ಲಿ ಕಂಡುಬಂದಂತೆ ಈ ಆ್ಯಪ್ ಅನ್ನು ಡೌನ್‌ಲೋಡ್ ಮಾಡುವುದರಿಂದ ನಿಮ್ಮ ಬ್ಯಾಂಕ್ ಖಾತೆಗೆ $50 (4,136ರೂಪಾಯಿ) ಕ್ರೆಡಿಟ್ ಆಗುತ್ತದೆ ಎಂದು ಬಳಕೆದಾರರನ್ನು ನಂಬಿಸುತ್ತಿದ್ದಾರೆ. ಒಂದು ವೇಳೆ ಬಳಕೆದಾರರು ಇದನ್ನು ನಂಬಿ ಒಂದು ವೇಳೆ ಆ ಲಿಂಕ್ ಬಳಸಿ ಆ್ಯಪ್ ಡೌನ್‌ಲೋಡ್ ಮಾಡಲು ಮುಂದಾದರೆ ಬಳಕೆದಾರರ ಡೇಟಾ ಸಂಪೂರ್ಣವಾಗಿ ವಂಚಕರ ಕೈ ಸೇರುವುದು ಗ್ಯಾರಂಟಿ.
ಈಗಾಗಲೇ ಕೆಲ ದೇಶದಲ್ಲಿ ದಾಳಿ
ಇನ್ನು ಈ ಬಗ್ಗೆ ಹ್ಯಾಕರ್ಸ್‌ಗಳು ವಿಶ್ವದಾದ್ಯಂತ ವಂಚನೆ ಮಾಡುವ ನಿರ್ಧಾರದಲ್ಲಿದ್ದು, ಡೆಸ್ಕ್‌ಟಾಪ್ ಕ್ಲೈಂಟ್ ಆಫ್ರಿಕಾ, ಏಷ್ಯಾ, ಯುರೋಪ್ ಮತ್ತು ಅಮೆರಿಕಾದ ಬಳಕೆದಾರರ ಮೇಲೆ ಈ ದಾಳಿ ನಡೆಯುತ್ತಿವೆ ಎಂದು ಸಂಶೋಧಕರು ಮಾಹಿತಿ ನೀಡಿದ್ದಾರೆ. ಈ ಮೂಲಕ ಅವರು ತನ್ನ ಆರ್ಥಿಕ ವ್ಯವಹಾರಕ್ಕಾಗಿ, ಜಾಹೀರಾತಿಗಾಗಿ ಮಾಡಿದ ಇತರೆ ಖರ್ಚುಗಳನ್ನು, ಬಳಕೆದಾರರ ಡೇಟಾಗಳನ್ನು ಕದಿಯುವ ಪ್ರಯತ್ನ ಮಾಡುತ್ತಿದ್ದಾರೆ.
ಚಾಟ್ಜಿಪಿಟಿಗೆ ಸಂಬಂಧಿಸಿ ಯಾವುದೇ ಆ್ಯಪ್ ಇಲ್ಲ
ಛ ಟೆಕ್ನಾಲಜಿಗಾಗಿ ಇದುವರೆಗೆ ಯಾವುದೇ ಅಧಿಕೃತ ಆ್ಯಪ್ ಕ್ರಿಯೇಟ್ ಮಾಡಲಾಗಿಲ್ಲ. ಎಐ ಚಾಲಿತ ಚಾಟ್‌ಬಾಟ್ ಬಳಕೆ ಉಚಿತವಾಗಿದ್ದು, ಈ ಪ್ಲಾಟ್‌ಫಾರ್ಮ್ ಪ್ರವೇಶಿಸಲು ಬಳಕೆದಾರರು ನೋಂದಣಿ ಮಾಡಬೇಕಿದೆ. ಜೊತೆಗೆ ಓಪನ್ ಎಐ ನಲ್ಲಿ ಇತ್ತೀಚೆಗೆ ಪಾವತಿಸಿದ ಆವೃತ್ತಿಯನ್ನು ಸಹ ಪ್ರಾರಂಭಿಸಿದೆ. ಇದರ ನಡುವೆ ನೀವು ಈ ಸೇವೆ ಪಡೆಯಬೇಕು ಎಂದರೆ ಮೈಕ್ರೋಸಾಫ್ಟ್ ಬಿಂಗ್ ಸರ್ಚ್ ಮತ್ತು ಎಡ್ಜ್ ಬ್ರೌಸರ್ ಅನ್ನು ಬಳಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ