ಸ್ಮಾರ್ಟ್ಫೋನ್ಗಳೆಂದರೆ (Smartphones) ಯಾರಿಗೆ ಇಷ್ಟ ಇಲ್ಲ ಹೇಳಿ. ಈಗಿನ ದಿನದಲ್ಲಿ ಯಾರ ಕೈ ನೋಡಿದ್ರೂ ಸ್ಮಾರ್ಟ್‌ಫೋನ್‌ಗಳು ಇದ್ದೇ ಇರುತ್ತದೆ. ಆದರೆ ಇತ್ತೀಚೆಗೆ ಕೆಲವೊಂದು ಸ್ಮಾರ್ಟ್‌ಫೋನ್‌ಗಳು ಬ್ಲಾಸ್ಟ್ (Mobile Blast) ಆಗುತ್ತಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಹೆಚ್ಚಿನ ಜನರಿಗೆ ಸ್ಮಾರ್ಟ್‌ಫೋನ್‌ಗಳು ಹಲವಾರು ರೀತಿಯಲ್ಲಿ ಸಹಕಾರಿಯಾಗುತ್ತದೆ. ಯಾವುದೇ ಕೆಲಸವನ್ನು ಸಹ ಕ್ಷಣಮಾತ್ರದಲ್ಲಿ ಸ್ಮಾರ್ಟ್ಫೋನ್ ಮೂಲಕ ಮಾಡಿಮುಗಿಸಬಹುದಾಗಿದೆ. ಒಂದು ರೀತಿಯಲ್ಲಿ ಸ್ಮಾರ್ಟ್ಫೋನ್ ಅನ್ನು ಮಿನಿ ಲ್ಯಾಪ್ಟಾಪ್ ಅಂತಾನೇ ಹೇಳ್ಬಹುದು. ಏಕೆಂದರೆ ಹಿಂದೆಲ್ಲಾ ಯಾವುದೇ ಸೈಬರ್ಗೆ (Cyber) ಸಂಬಂಧಪಟ್ಟ ಮಾಹಿತಿಯನ್ನು ತಿಳಿಬೇಕಂದ್ರು ಲ್ಯಾಪ್ಟಾಪ್ ಮೂಲಕ ನೋಡುತ್ತಿದ್ದರು. ಆದ್ರೆ ಈಗ ಕೇವಲ ಸ್ಮಾರ್ಟ್ಫೋನ್ ಮೂಲಕವೇ ನೋಡಬಹುದಾಗಿದೆ.
ಹೌದು, ಇದೀಗ ಸ್ಮಾರ್ಟ್ಫೋನ್ ಬಳಕೆದಾರರಿಗೆ ಬಿಗ್ಶಾಕ್ ಒಂದನ್ನು ನೀಡಿದೆ. ಇತ್ತೀಚೆಗೆ ಜನಪ್ರಿಯ ಮೊಬೈಲ್ ತಯಾರಕ ಕಂಪೆನಿಯ ಸ್ಮಾರ್ಟ್ಫೋನ್ ಒಂದು ಬ್ಲಾಸ್ಟ್ ಆಗಿದೆ. ಹಾಗಿದ್ರೆ ಇದರ ಬಗ್ಗೆ ಕಂಪ್ಲೀಟ್ ಮಾಹಿತಿ ಈ ಲೇಖನದಲ್ಲಿದೆ.
ಶಿಯೋಮಿ 11 ಲೈಟ್ NE 5ಜಿ
ಇತ್ತೀಚೆಗೆ ಜನಪ್ರಿಯ ಸ್ಮಾರ್ಟ್ಫೋನ್ ಕಂಪೆನಿಯಾಗಿರುವ ಸ್ಯಾಮ್ಸಂಗ್ ಮತ್ತು ಒನ್ಪ್ಲಸ್ ಕಂಪೆನಿಯ ಸ್ಮಾರ್ಟ್‌ಫೋನ್‌ಗಳು ಬ್ಲಾಸ್ಟ್ ಆಗಿತ್ತು ಎಂಬ ಸುದ್ದಿ ಹರಡಿತ್ತು. ಇದರಿಂದ ಮೊಬೈಲ್ ಬಳಕೆದಾರರಲ್ಲಿ ಭಯವನ್ನು ಹುಟ್ಟುಹಾಕಿತ್ತು. ಇದೀಗ ಮತ್ತೊಂದು ಕಂಪೆನಿಯ ಸ್ಮಾರ್ಟ್ಫೋನ್ ಬ್ಲಾಸ್ಟ್ ಆಗಿದೆ. ಶಿಯೋಮಿ ಕಂಪೆನಿಯಿಂದ ಇತ್ತೀಚೆಗೆ ಬಿಡುಗಡೆಯಾದ ಶಿಯೋಮಿ 11 ಲೈಟ್ ಎನ್ಇ 5ಜಿ ಸ್ಮಾರ್ಟ್ಫೋನ್ ಬ್ಲಾಸ್ಟ್ ಆಗಿದೆ.
ಇದನ್ನೂ ಓದಿ: ಸ್ಮಾರ್ಟ್‌ಫೋನ್‌ಗಳು ಬ್ಲಾಸ್ಟ್ ಆಗಲು ಕಾರಣವೇನು ಗೊತ್ತಾ? ಈ ಟಿಪ್ಸ್ ಫಾಲೋ ಮಾಡಿ ಮೊಬೈಲ್ ಸೇಫ್!
ವರದಿಯ ಪ್ರಕಾರ
ಇನ್ನು ಈ ಬ್ಲಾಸ್ಟ್ ಆದ ಬಗ್ಗೆ 91 ಮೊಬೈಲ್ಸ್ ವರದಿ ಮಾಡಿದ್ದು, ಈ ಘಟನೆ ಬಿಹಾರದ ಭಾಗಲ್ಪುರ ಪ್ರದೇಶದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ಇನ್ನು ಈ ಘಟನೆ ಮೊಹಿಯುದ್ದೀನ್ ನಗರದಲ್ಲಿ ವಾಸಿಸುವ ವ್ಯಕ್ತಿ ಸ್ಮಾರ್ಟ್ಫೋನ್ ಬ್ಲಾಸ್ಟ್ ಆಗಿದೆ. ಇನ್ನು ಇದರ ವಿಡಿಯೋವನ್ನು ಶೇರ್ ಮಾಡಿದ್ದು, ಇದರಲ್ಲಿ ಹಾಸಿಗೆಯ ಮೇಲೆ ಇರುವಂತಹ ಮೊಬೈಲ್ನಲ್ಲಿ ಬೆಂಕಿಯನ್ನು ಕಾಣಬಹುದಾಗಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಫೋನ್‌ಗೆ ಬೆಂಕಿ ಹೊತ್ತಿಕೊಂಡಾ ಈ ಮೊಬೈಲ್ ಚಾರ್ಜರ್‌ಗೆ ಕನೆಕ್ಟ್ ಆಗಿರಲಿಲ್ಲ. ಹಾಸಿಗೆಯ ಮೇಲೆ ಇಟ್ಟಿದ್ದ ಶಿಯೋಮಿ 11 ಲೈಟ್ NE 5ಜಿ ಫೋನ್‌ಗೆ ಇದ್ದಕ್ಕಿದ್ದಂತೆ ಬೆಂಕಿಹಿಡಿದು ಹೊಗೆ ಬರಲಾರಂಭಿಸಿದೆ.
ಸ್ಪೋಟಗೊಳ್ಳಲು ಕಾರಣ
ಇನ್ನು ಈ ಘಟನೆಯ ಭಾಗವಾಗಿ ಯಾರ ಜೀವಕ್ಕೂ ಅಪಾಯವಾಗ್ಲಿಲ್ಲ ಎಂದು ತಿಳಿದುಬಂದಿದೆ. ಆದರೆ ಈ ಸ್ಮಾರ್ಟ್ಫೋನ್ ಯಾಕೆ ಬ್ಲಾಸ್ಟ್ ಆಗಿದೆ ಎಂದು ತಿಳಿದುಬಂದಿಲ್ಲ. ಆದರೆ ತನಿಖೆಯ ನಂತರ ಬ್ಯಾಟರಿಯಲ್ಲಿ ಪಂಕ್ಚರ್ ಗುರುತುಗಳು ಕಂಡುಬಂದಿವೆ. ಈ ಮೂಲಕ ಮೊಬೈಲ್ ಬ್ಲಾಸ್ಟ್ ಆಗಲು ಕಾರಣ ಬಳಕೆದಾರರೇ ಎಂದು ಪತ್ತೆಯಾಗಿದೆ. ಇದರಿಂದ ಕಂಪೆನಿಯ ಯಾವುದೇ ತಪ್ಪಿಲ್ಲ ಎಂದು ಕಂಪೆನಿ ಹೇಳಿದೆ.
ಸಾಮಾನ್ಯವಾಗಿ ಸ್ಮಾರ್ಟ್ಫೋನ್ ಬ್ಲಾಸ್ಟ್ ಆಗಲು ಕಾರಣಗಳು:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ