ಹೆಬ್ಬೆರಳಿಗಿಂತಲೂ ಸಣ್ಣ, ನಾಣ್ಯಕ್ಕಿಂತಲೂ ತೆಳ್ಳಗಿದೆ ಈ ಮೊಬೈಲ್ ಪೋನ್!


Updated:December 28, 2017, 6:04 PM IST
ಹೆಬ್ಬೆರಳಿಗಿಂತಲೂ ಸಣ್ಣ, ನಾಣ್ಯಕ್ಕಿಂತಲೂ ತೆಳ್ಳಗಿದೆ ಈ ಮೊಬೈಲ್ ಪೋನ್!

Updated: December 28, 2017, 6:04 PM IST
ನೀವು ವಿಶ್ವದ ಅತೀ ಚಿಕ್ಕ ಮೊಬೈಲ್ ಪೋನ್ ನೋಡಿದ್ದೀರಾ? ಈ ಫೋನ್ ಹೆಬ್ಬೆರಳಿನಷ್ಟೇ ಚಿಕ್ಕದಾಗಿದ್ದು, ಇದನ್ನು ನೀವು ನಿಮ್ಮ ಅಂಗೈಯೊಳಗೆ ಅಡಗಿಸಿಡಬಹುದಾಗಿದೆ. ಅಬ್ಬಾ...! ಹೀಗೂ ಸಾಧ್ಯವೇ ಎಂದು ಅಚ್ಚರಿಪ್ಟ್ಉಕೊಳ್ಳಬೇಡಿ, ಯಾಕೆಂದರೆ ಈ ಫೋನ್ ಅದೆಷ್ಟು ಚಿಕ್ಕದಾಗಿದೆಯೋ ಅಷ್ಟೇ ಕ್ಯೂಟ್ ಆಗಿದೆ. ಅಲ್ಲದೇ ನಿಮ್ಮ ಜೇಬಿನಲ್ಲಿರುವ ನಾಣ್ಯಕ್ಕಿಂತಲೂ ಈ ಫೋನ್ ತೆಳ್ಳಗಾಗಿದೆ.

  • ಅಂಗೈಯೊಳಗೆ ಅಡಗಿಸಿಡಬಹುದು ಈ ಮೊಬೈಲ್ ಫೋನ್:ಗ್ಯಾಜೆಟ್ ಪ್ರಿಯರಿಗೆ ಈ ಫೋನ್ ಒಂದು ಚಮತ್ಕಾರಿ ಗಿಫ್ಟ್​ಗಿಂತ ಕಡಿಮೆಯಲ್ಲ. ಮೊದಲ ಬಾರಿ ನೋಡಿದಾಗ ಅಂಗೈಯೊಳಗೆ ಮುಚ್ಚಿಟ್ಟುಕೊಳ್ಳಲು ಸಾದ್ಯವಾಗುವಷ್ಟು, ಚಿಕ್ಕ ಮೊಬೈಲ್ ಕೂಡಾ ಇದೆಯೇ ಎಂದು ಅಚ್ಚರಿಪಟ್ಟುಕೊಳ್ಳುವಲ್ಲಿ ಅನುಮಾನವಿಲ್ಲ. ಇನ್ನು ಈ ಮೊಬೈಲ್​ನ ಸಿಮ್ ಬದಲಾಯಿಸಲು ಕೂಡಾ ಸಾಧ್ಯವಿದ್ದು, ಯಾವುದೇ ನೆಟ್ವರ್ಕ್​ನಲ್ಲಿ ಇದು ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಇತರ ಮೊಬೈಲ್​ಗಳಲ್ಲಿರುವ ಫೀಚರ್ಸ್​ ಇದು ಹೊಂದಿದ್ದು, ಇದರಲ್ಲಿ ನೀವು ಸಂಭಾಷಣೆ ಮಾಡುವುದರೊಂದಿಗೆ, ಸ್ನೇಹಿತರೊಂದಿಗೆ ಚಾಟ್ ಕೂಡಾ ಮಾಡಬಹುದಾಗಿದೆ. ಹಾಗಾದ್ರೆ ಈ ನೂತನ ಫೋನ್ ಯಾವುದು ಅಂತೀರಾ? ಇಲ್ಲಿದೆ ವಿವರ

  • 2ಜಿ ನೆಟ್ವರ್ಕ್ ಸಪೋರ್ಟ್ ಮಾಡುತ್ತದೆ ಈ ಫೋನ್:

  • Loading...


ಈ ಫೋನ್ 2ಜಿ ನೆಟ್ವರ್ಕ್​ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಇದು ಒಂದು ರೀತಿಯಲ್ಲಿ ಟಾಪ್ ಎಂಡ್ ಟೆಕ್ಸ್​ ಮೊಬೈಲ್ ಫೋನ್ ಆಗಿದ್ದು, ಇದರಲ್ಲಿ ಇಂಟರ್ನೆಟ್ ಕನೆಕ್ಟಿವಿಟಿ ನೀಡಲಾಗಿಲ್ಲ.

  • ಮೂರು ದಿನಗಳವರೆಗೆ ಬರುತ್ತದೆ ಬ್ಯಾಟರಿ:


ಈ ಸ್ಮಾರ್ಟ್ ಫೋನ್ ಹೆಸರು ಜೈನ್ಕೋ ಟಿನಿ ಟಿ1 ಆಗಿದೆ. ಇದರ ಬ್ಯಾಟರಿ ಬ್ಯಾಕ್​ಅಪ್ ಹೊಂದಿದ್ದು, 3 ದಿನಗಳ ಸ್ಟೆಪ್​ ಬೈ ಟೈಮ್ ಹಾಗೂ 180 ನಿಮಿಷಗಳ ಟಾಕ್ ಟೈಮ್ ನೀಡುತ್ತದೆ. ಇದರಲ್ಲಿ ಇತರ ಸ್ಮಾರ್ಟ್​ಫೋನ್​ಗಳಂತೆ ನ್ಯಾನೋ ಸಿಮ್​ ಕೂಡಾ ಸಿಗುತ್ತದೆ.

  • ಫೀಚರ್ಸ್:


ಜೈನ್ಕೋ ಟಿನಿ ಟಿ1 ಸ್ಮಾರ್ಟ್​ಫೋನ್​ನಲ್ಲಿ ನೀವು 300 ಜನರ ನಂಬರ್ ಸೇವ್​ ಮಾಡಿಟ್ಟುಕೊಳ್ಳಬಹುದು. ಇದರಲ್ಲಿ 50ಕ್ಕೂ ಅಧಿಕ ಸಂದೇಶಗಳನ್ನು ಸೇವ್ ಮಾಡಬಹುದಾಗಿದ್ದು, 32 ಜಿಬಿ ರಾಮ್ ಹಾಗೂ 32 ಜಿಬಿ ರೋಮ್ ಕೊಡಲಾಗುತ್ತದೆ. ಅಲ್ಲದೇ ಇದರೊಂದಿಗೆ ಮೈಕ್ರೋ USB ಚಾರ್ಜರ್ ಕೂಡಾ ನೀಡಲಾಗುತ್ತದೆ.

Smallest Smatphone


  • ಕೇವಲ 2 ಇಂಚಿನ ಸ್ಮಾರ್ಟ್​ಫೋನ್:


ಈ ಸ್ಮಾರ್ಟ್​ಫೋನ್ ಕೇವಲ 1. 82 ಇಂಚಿನದ್ದಾಗಿದೆ. ಇದರ ತೂಕ 13 ಗ್ರಾಂ ಹಾಗೂ ಉದ್ದ 21 ಎಮ್​ಎಮ್​ ಆಗಿದೆ.

  • ಈ ಫೋನ್ ನಿರ್ಮಿಸಿದವರಾರು?


ಅತಿ ಚಿಕ್ಕ ಈಸ್ಮಾರ್ಟ್​ಫೋನ್​ನನ್ನು Zanco ಹೆಸರಿನ ಕಂಪೆನಿ ನಿರ್ಮಿಸಿದೆ. ಈ ಕಂಪೆನಿ 2007 ರಲ್ಲಿ ಆರಂಭವಾದ ಈ ಕಂಪೆನಿ ಮೊಬೈಲ್ ತಯಾರಿಕಾ ಕಂಪೆನಿಯಾಗಿದೆ. ಕೊನೆಗೂ ಈ ಕಂಪೆನಿ ವಿಶ್ವದ ಅತಿ ಚಿಕ್ಕ ಸ್ಮಾರ್ಟ್​ಫೋನ್​ ನಿರ್ಮಿಸುವಲ್ಲಿ ಯಶಶ್ವಿಯಾಗಿದೆ.
First published:December 28, 2017
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...