ಪ್ರಸ್ತುತ ಜಗತ್ತಿನಲ್ಲಿ ಟೆಕ್ನಾಲಜಿ ಮಾರುಕಟ್ಟೆಗಳು (Technology Market) ಬಹಳಷ್ಟು ಅಭಿವೃದ್ಧಿಯಾಗುತ್ತಿದೆ. ಅದ್ರಲ್ಲೂ ಜಾಗತಿಕ ಮಾರುಕಟ್ಟೆಯಲ್ಲಿ ಸ್ಮಾರ್ಟ್ಫೋನ್ಗಳಂತೂ ವ್ಯಾಪಕವಾಗಿ ಬೆಳವಣಿಗೆಯನ್ನು ಕಂಡಿದೆ. ಇದಕ್ಕೆ ಕಾರಣ ಈ ಸ್ಮಾರ್ಟ್ಫೋನ್ನಲ್ಲಿರುವಂತಹ ಫೀಚರ್ಸ್ ಅಂತಾನೇ ಹೇಳ್ಬಹುದು. ಹಿಂದೆಲ್ಲಾ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಮಾಹಿತಿಯನ್ನು ತಿಳಿಸ್ಬೇಕಾದರೆ ಪತ್ರದ ಮೂಲಕ ಹೇಳುತ್ತಿದ್ದರು. ಆದರೆ ಈ ಸ್ಮಾರ್ಟ್ಫೋನ್ಗಳು ಬಂದ ನಂತರ ಎಲ್ಲವೂ ಇದರ ಮೂಲಕವೇ ಸಾಧ್ಯವಾಗುತ್ತದೆ. ಆದರೆ ಇದರ ಬಳಕೆಗೆ ಇಂತಿಷ್ಟು ಸಮಯ ಎಂಬುದು ಇದೆ. ನಂತರ ಮೊಬೈಲ್ ಚಾರ್ಜ್ (Mobile Charge) ಮುಗಿಯುತ್ತದೆ. ಇದಕ್ಕಾಗಿಯೇ ಅನೇಕ ಕಂಪೆನಿಗಳು ಪವರ್ ಬ್ಯಾಂಕ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಆದರೆ ಇಲ್ಲೊಬ್ಬರು ವಿಶ್ವದಲ್ಲೇ ಅತೀ ದೊಡ್ಡ ಪವರ್ ಬ್ಯಾಂಕ್ (Power Bank) ಅನ್ನು ಉತ್ಪಾದನೆ ಮಾಡಿದ್ದಾರೆ.
ಸಾಮಾನ್ಯವಾಗಿ ನಾವೆಲ್ಲರೂ ಹೆಚ್ಚೆಂದರೆ 10000mAh, 15000mAh ಬ್ಯಾಟರಿ ಬ್ಯಾಕಪ್ ಹೊಂದಿರುವ ಪವರ್ಬ್ಯಾಂಕ್ ಅನ್ನು ನೋಡಿರಬಹುದು. ಆದರೆ ಇಲ್ಲೊಂದು ತಯಾರಿಸಿರುವ ಪವರ್ ಬ್ಯಾಂಕ್ ಅನ್ನು ನೋಡಿದ್ರೆ ಗಾಬರಿಯಾಗ್ತೀರಾ. ಯಾಕೆಂದರೆ ಇಲ್ಲೊಬ್ಬರು ವಿಶ್ವದ ಅತೀ ಹೆಚ್ಚು ಸಾಮರ್ಥ್ಯದ ಪವರ್ ಬ್ಯಾಂಕ್ ಅನ್ನು ತಯಾರಿಸಿದ್ದಾರೆ. ಹಾಗಿದ್ರೆ ಈ ಪವರ್ ಬ್ಯಾಂಕ್ನ ಸ್ಪೆಷಲ್ ಫೀಚರ್ಸ್ ಏನೆಲ್ಲಾ ಇದೆ ಎಂಬುದನ್ನು ಈ ಲೇಖನದ ಮೂಲಕ ತಿಳಿಯಿರಿ.
ಸ್ಥಾಪಕ ಯಾರು?
ಚೀನಾ ಮೂಲದ ಎಲೆಕ್ಟ್ರಾನಿಕ್ಸ್ ಹ್ಯಾಂಡಿ ಗೆಂಗ್ ಎಂಬುವವರು ತನ್ನ ಕೈಚಳಕದ ಮೂಲಕ ಇತ್ತೀಚೆಗೆ ದೊಡ್ಡ ಗಾತ್ರಸ ಪವರ್ ಬ್ಯಾಂಕ್ ಒಂದನ್ನು ಸಿದ್ಧಪಡಿಸಿದ್ದಾರೆ. ಜನವರಿಯಲ್ಲಿ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ತಾನು ತಯಾರಿಸಿದಂತಹ ಪವರ್ ಬ್ಯಾಂಕ್ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಜೊತೆಗೆ ಪವರ್ ಬ್ಯಾಂಕ್ ಅನ್ನು ತಯಾರಿಸಿದ ವಿಧಾನವನ್ನು ಸಹ ಆ ವಿಡಿಯೋ ಮೂಲಕ ವಿವರಿಸಿದ್ದಾರೆ.
ಈ ಪವರ್ ಬ್ಯಾಂಕ್ನ ಸ್ಪೆಷಲ್ ಫೀಚರ್ಸ್
ಚೀನಾ ಮೂಲದ ಎಲೆಕ್ಟ್ರಾನಿಕ್ಸ್ ಹ್ಯಾಂಡಿ ಗೆಂಗ್ ಎಂಬುವವರು ಸಿದ್ಧಪಡಿಸಿದ ಆ ಪವರ್ ಬ್ಯಾಂಕ್ ಸಾಮರ್ಥ್ಯ ಬರೋಬ್ಬರಿ 27,000,000MAH ಬ್ಯಾಕಪ್ ಅನ್ನು ಹೊಂದಿದೆ. ಈ ಪವರ್ ಬ್ಯಾಂಕ್ನ ವಿಶೇಷ ಫೀಚರ್ ಏನೆಂದರೆ ಇದರ ಮೂಲಕ ಏಕಕಾಲದಲ್ಲಿ ಬರೋಬ್ಬರಿ 5 ಸಾವಿರ ಸ್ಮಾರ್ಟ್ಫೋನ್ಗಳನ್ನು ಚಾರ್ಜ್ ಮಾಡಬಹುದಾಗಿದೆ.
ವಿನ್ಯಾಸ ಹೇಗಿದೆ?
ಈ ಬೃಹತ್ ಆಕಾರದ ಪವರ್ ಬ್ಯಾಂಕ್ 60 ಪೋರ್ಟ್ಗಳನ್ನು ಹೊಂದಿದೆ. ಜೊತೆಗೆ ಇದನ್ನು 5.9x3.9 ಅಡಿ ಉದ್ದದಲ್ಲಿ ವಿನ್ಯಾಸ ಮಾಡಿದ್ದಾರೆ. ಇನ್ನು ಇದರ ಔಟ್ಪುಟ್ ಚಾರ್ಜಿಂಗ್ ಕನೆಕ್ಟರ್ಗಳ ಮೂಲಕ 220W ವಿದ್ಯುತ್ ವೋಲ್ಟೇಜ್ ಅನ್ನು ಇದು ಬೆಂಬಲಿಸುತ್ತದೆ. ಇನ್ನು ಈ ಪವರ್ ಬ್ಯಾಂಕ್ನ ಸಾಮಾನ್ಯ ಸಾಧನಗಳಿಗಿಂತ ದೊಡ್ಡದಾಗಿರುವುದರಿಂದ ಒದನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕೊಂಡೊಯ್ಯಲು ಚಕ್ರವನ್ನು ಅಳಡಿಸಿದ್ದಾರೆ ಎಂದು ಹೇಳಲಾಗಿದೆ.
ಇದೆಷ್ಟೇ ಅಲ್ಲದೆ ಈ ಪವರ್ ಬ್ಯಾಂಕ್ ಮೂಲಕ ಟಿವಿ, ವಾಷಿಂಗ್ ಮೆಷಿನ್ಗಳಂತಹ ಪ್ರಮುಖ ಎಲೆಕ್ಟ್ರಾನಿಕ್ ಸಾಧನಗಳನ್ನು ರನ್ ಮಾಡಬಹುದಾಗಿದೆ. ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಚಾರ್ಜ್ ಮಾಡುವಂತಹ ಫೀಚರ್ ಅನ್ನು ಇದರಲ್ಲಿ ಅಳವಡಿಸಲಾಗಿದೆ.
ವರದಿಗಳ ಪ್ರಕಾರ
ಕೆಲವೊಂದು ವರದಿಗಳ ಪ್ರಕಾರ, ಹ್ಯಾಂಡಿ ಗೆಂಗ್ ತಯಾರಿಸಿರುವ ಪವರ್ ಬ್ಯಾಂಕ್ 3,000MAh ಬ್ಯಾಟರಿ ಬ್ಯಾಕಪ್ನಿಂದ 5,000MAH ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿರುವ ಸ್ಮಾರ್ಟ್ಫೋನ್ಗಳನ್ನು ಚಾರ್ಜ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದ್ದಾರೆ. ಇನ್ನು ಎಲಕ್ಟ್ರಿಕ್ ಕಾರುಗಳಲ್ಲಿ ಬರುವಂತಹ ಬ್ಯಾಟರಿಯನ್ನೇ ಹೋಲುವ ಬ್ಯಾಟರಿಯನ್ನು ಇದರಲ್ಲಿ ಬಳಸಿದ್ದಾರೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ಸಿಕ್ಕ ಸಿಕ್ಕ ಚಾರ್ಜರ್ನಲ್ಲಿ ಎಂದಿಗೂ ಮೊಬೈಲ್ ಚಾರ್ಜರ್ ಮಾಡ್ಬಾರ್ದು! ಏಕೆ ಗೊತ್ತಾ?
ಹ್ಯಾಂಡಿ ಗೆಂಗ್ ಅವರ ಅಭಿಪ್ರಾಯ
ಈ ಸಾಧನವನ್ನು ತಯಾರಿಸಿದ ಕರಿತು ಮಾತನಾಡಿದ ಹ್ಯಾಂಡಿ ಗೆಂಗ್, ಪ್ರತಿಯೊಬ್ಬರು ನನಗಿಂತಲೂ ದೊಡ್ಡಮಟ್ಟಿನ ಪವರ್ ಬ್ಯಾಂಕ್ ಅನ್ನು ಹೊಂದಿದ್ದಾರೆ. ಅದಕ್ಕೆ ಹೋಲಿಸಿದಾಗ ನಾನು ಹೊಂದಿರುವ ಪವರ್ ಬ್ಯಾಂಕ್ನ ಸಣ್ಣದಾಗಿ ಕಾಣುತ್ತಿತ್ತು. ಇದೇ ಕಾರಣಕ್ಕಾಗಿ ನಾನು 27,000,000mAh ಪೋರ್ಟಬಲ್ ಚಾರ್ಜರ್ ಹೊಂದಿದ ಪವರ್ ಬ್ಯಾಂಕ್ ಅನ್ನು ಸಿದ್ಧಪಡಿಸಿದ್ದೇನೆ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ