• Home
 • »
 • News
 • »
 • tech
 • »
 • Hookee Fitness Device: ವಿಶ್ವದ ಮೊದಲ ಸ್ಮಾರ್ಟ್ ಪೋರ್ಟಬಲ್ ಉಪಕರಣ; ಇಲ್ಲಿದೆ ಕಂಪ್ಲೀಟ್​ ಮಾಹಿತಿ

Hookee Fitness Device: ವಿಶ್ವದ ಮೊದಲ ಸ್ಮಾರ್ಟ್ ಪೋರ್ಟಬಲ್ ಉಪಕರಣ; ಇಲ್ಲಿದೆ ಕಂಪ್ಲೀಟ್​ ಮಾಹಿತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹ್ಯಾಲಿಟಸ್‌ ಸಂಸ್ಥೆಯ ತಂಡವು ಜಿಮ್ ಹಾಗೂ ಫಿಟ್‌ನೆಸ್ ಪ್ರೇಮಿಗಳಿಗೆಂದೇ ಹೂಕಿ ಎಂಬ ಫಿಟ್‌ನೆಸ್ ಉಪಕರಣವನ್ನು ನಿರ್ಮಿಸಿದ್ದು, ಇದು 100 ಕ್ಕಿಂತಲೂ ಅಧಿಕ ವ್ಯಾಯಾಮಗಳನ್ನು ಬೆಂಬಲಿಸುತ್ತದೆ. ಮಹಿಳೆಯರು ಹಾಗೂ ಪುರುಷರು ಹೂಕಿಯಲ್ಲಿ ತಮಗೆ ಹೊಂದುವ ವ್ಯಾಯಾಮವನ್ನು ಮಾಡಬಹುದಾಗಿದೆ.

 • Share this:

  ಇಂದಿನ ದಿನಗಳಲ್ಲಿ ಫಿಟ್‌ನೆಸ್ (Fitness) ಎಂಬುದು ಪ್ರಮುಖ ಕಾಳಜಿಯಾಗಿ ಮಾರ್ಪಟ್ಟಿದೆ. ಸಾಂಕ್ರಾಮಿಕ ರೋಗಗಳು ಜೊತೆಗೆ ಹಠಾತ್ ಸಂಭವಿಸುವ ಹೃದಯಾಘಾತದಂತಹ (Heart Attack) ಪ್ರಕರಣಗಳು ಜನರು ಹೆಚ್ಚು ಹೆಚ್ಚು ಆರೋಗ್ಯದತ್ತ ವಾಲುವಂತೆ ಮಾಡುತ್ತಿದೆ. ಆರೋಗ್ಯವಾಗಿರುವುದು ಸುಸ್ಥಿರವಾಗಿರುವುದು, ಯಾವುದೇ ಕಾಯಿಲೆಗಳಿಲ್ಲದೆ ರೋಗ ರುಜಿನಗಳಿಂದ ಮುಕ್ತರಾಗಿರುವುದು ಎಂಬ ಅಂಶಕ್ಕೆ ಮಹತ್ವ ನೀಡುತ್ತದೆ. ಪೋಷಕಾಂಶ ಭರಿತ ಆಹಾರ ಪದ್ಧತಿಯೊಂದಿಗೆ ಸೂಕ್ತವಾದ ವ್ಯಾಯಾಮ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಇನ್ನಷ್ಟು ಪ್ರಯೋಜನಗಳನ್ನು ಒದಗಿಸುತ್ತದೆ.


  ಜಿಮ್, ಯೋಗ, ನಡಿಗೆ, ಓಟ ಹೀಗೆ ಬೇರೆ ಬೇರೆ ವಿಧವಾದ ವ್ಯಾಯಾಮಗಳಿದ್ದು ಉತ್ತಮ ಆಹಾರ ಪದ್ಧತಿಯೊಂದಿಗೆ ಇವುಗಳನ್ನು ಅಳವಡಿಸುವುದು ಆರೋಗ್ಯಕ್ಕೆ ಇನ್ನಷ್ಟು ಸೇರ್ಪಡುವ ಅಂಶಗಳಾಗಿವೆ. ಇದಿಷ್ಟು ಮಾತ್ರವಲ್ಲದೆ ನಿಮ್ಮನ್ನು ನೀವು ಚಟುವಟಿಕೆಯಿಂದ ಇರಿಸಿಕೊಳ್ಳುವುದೂ ಕೂಡ ಆರೋಗ್ಯವಂತರಾಗಿರಲು ಸಹಕಾರಿಯಾಗಿದೆ. ಬೇರೆ ಬೇರೆ ವಿಧವಾದ ಹೊರಾಂಗಣ ಆಟಗಳನ್ನು ಆಡುವುದು, ಜೂಂಬಾ, ನೃತ್ಯ ಕಲಿಕೆ ಹೀಗೆ ವ್ಯಾಯಾಮ ಮಾಡಲು ಬರೀ ಉಪಕರಣಗಳೇ ಬೇಕು ಎಂದೇನಿಲ್ಲ.


  ಹೂಕಿ ಫಿಟ್‌ನೆಸ್ ಉಪಕರಣ


  ಜಿಮ್‌ಗೆ ನಿತ್ಯವೂ ಹೋಗುವವರು ಒಂದು ದಿನ ಜಿಮ್ ಮಾಡದಿದ್ದರೂ ತುಂಬಾ ಬೇಸರ ಪಡುತ್ತಾರೆ. ವ್ಯಾಯಾಮ ಮಾಡದೇ ಏನೂ ಕಳೆದುಕೊಂಡ ಭಾವನೆ ಅವರನ್ನು ಕಾಡುತ್ತದೆ. ಕಾರಣಾಂತರಗಳಿಂದ ಒಮ್ಮೊಮ್ಮೆ ಜಿಮ್‌ಗೆ ಹೋಗುವುದು ಸಾಧ್ಯವಿರುವುದಿಲ್ಲ ಆಗ ವ್ಯಾಯಾಮ ಮಾಡಲು ಬೇರೇನಾದರೂ ಉಪಕರಣಗಳ ಅವಶ್ಯಕತೆ ಇರುತ್ತದೆ. ಫಿಟ್‌ನೆಸ್ ಎಂದರೆ ಅಚ್ಚುಮೆಚ್ಚಾಗಿದ್ದು ಅದಕ್ಕೆ ತಕ್ಕಂತಿರುವ ವ್ಯಾಯಾಮ ಉಪಕರಣ ನೀವು ಹುಡುಕುತ್ತಿದ್ದರೆ ಹೂಕಿ ನಿಮಗೆ ಅತ್ಯುತ್ತಮ ಎಂದೆನಿಸಿದೆ.


  ಇದನ್ನೂ ಓದಿ: ಸ್ಮಾರ್ಟ್​ಫೋನ್​ ಬಳಸ್ತೀರಾ? ತಕ್ಷಣ ಈ ಸೆಟ್ಟಿಂಗ್ ಮಾಡ್ಕೊಳ್ಳಿ

  ಹ್ಯಾಲಿಟಸ್‌ ಸಂಸ್ಥೆಯ ತಂಡವು ಜಿಮ್ ಹಾಗೂ ಫಿಟ್‌ನೆಸ್ ಪ್ರೇಮಿಗಳಿಗೆಂದೇ ಹೂಕಿ ಎಂಬ ಫಿಟ್‌ನೆಸ್ ಉಪಕರಣವನ್ನು ನಿರ್ಮಿಸಿದ್ದು, ಇದು 100 ಕ್ಕಿಂತಲೂ ಅಧಿಕ ವ್ಯಾಯಾಮಗಳನ್ನು ಬೆಂಬಲಿಸುತ್ತದೆ. ಮಹಿಳೆಯರು ಹಾಗೂ ಪುರುಷರು ಹೂಕಿಯಲ್ಲಿ ತಮಗೆ ಹೊಂದುವ ವ್ಯಾಯಾಮವನ್ನು ಮಾಡಬಹುದಾಗಿದೆ.


  ಕೊಂಡೊಯ್ಯಲು ಸುಲಭ


  ಮನೆಯಲ್ಲೇ ವೃತ್ತಿಪರ ಜಿಮ್‌ನಂತಹ ಅನುಭವವನ್ನು ಪಡೆದುಕೊಳ್ಳಲು ಹೂಕಿ ಸಹಕಾರಿಯಾಗಿದೆ. ಈ ಜಿಮ್ ಉಪಕರಣವನ್ನು ನೀವು ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದಾಗಿದ್ದು ಬಳಸಲು ಸುಲಭ ಹಾಗೂ ನಿಮ್ಮ ಫಿಟ್‌ನೆಸ್ ಜರ್ನಿಗೆ ಹೇಳಿಮಾಡಿಸಿರುವ ಉಪಕರಣವಾಗಿದೆ.  ಹೂಕಿಯ ಚಿತ್ರ

  ಫಿಟ್‌ನೆಸ್‌ಗೆ ಅನುಕೂಲಕರವಾಗಿರುವ ಉಪಕರಣ


  ರೊಬೊಟಿಕ್ ಮತ್ತು ಹೈಡ್ರಾಲಿಕ್ ತಂತ್ರಜ್ಞಾನವನ್ನು ಬಳಸಿಕೊಂಡು ಹಗುರವಾದ ವಿನ್ಯಾಸದಲ್ಲಿ ಉಪಕರಣ ತಯಾರಾಗಿದ್ದು 4500N/lbs ವರೆಗೆ ಸಹಕಾರಿಯಾಗಿದೆ. ಹೆಚ್ಚಿನ ಕಸರತ್ತು ಮಾಡುವಾಗ ಯಾವುದೇ ಅಪಘಾತ ಉಂಟಾಗದಂತೆ ತಡೆಯಲು ಹೈಡ್ರಾಲಿಕ್ ರೆಸಿಸ್ಟೆನ್ಸಿ ಜಿಮ್ ಉಪಕರಣದಲ್ಲಿದೆ.


  ಬೇರೆ ಬೇರೆ ಫಿಟ್‌ನೆಸ್‌ಗೂ ಸಹಕಾರಿ


  ಕಾರ್ಡಿಯೊ, ಮಸಲ್ ಬಿಲ್ಡಿಂಗ್ ಹೀಗೆ ನಿಮ್ಮ ಎಲ್ಲಾ ರೀತಿಯ ವರ್ಕ್‌ಔಟ್‌ಗೆ ಈ ಜಿಮ್ ಉಪಕರಣ ಸಹಕಾರಿಯಾಗಿದೆ. ಈ ಉಪಕರಣ ಬಳಸಿಕೊಂಡು ತೂಕ ಎತ್ತುವ ವೇಟ್ ಟ್ರೈನಿಂಗ್ ಕೂಡ ಮಾಡಬಹುದಾಗಿದೆ.  ಸಾಂದರ್ಭಿಕ ಚಿತ್ರ

  ಹೂಕಿಯಲ್ಲಿ ಯಾವುದೇ ವ್ಯಾಯಾಮ ಮಾಡಬಹುದು


  ನಿಮ್ಮ ಯಾವುದೇ ಪ್ರಕಾರದ ವ್ಯಾಯಾಮಕ್ಕೆ ಹೂಕಿ ಅತ್ಯುತ್ತಮ ಸಾಧನ ಎಂದೆನಿಸಿದೆ. ಯಾವುದೇ ಅಡೆತಡೆಯಿಲ್ಲದೆ ನಿರಂತರವಾಗಿ ಪ್ರಯಾಸವಿಲ್ಲದೆ ನೀವು ಹೂಕಿಯ ಮೂಲಕ ವ್ಯಾಯಾಮ ಮಾಡಬಹುದಾಗಿದೆ.


  ಹೂಕಿ ಉಪಕರಣದ ಇನ್ನೊಂದು ಪ್ರಯೋಜನವೆಂದರೆ ನೀವು ವೃತ್ತಿಪರರೊಂದಿಗೆ ತರಬೇತಿಯನ್ನು ಪಡೆದುಕೊಳ್ಳಬಹುದಾಗಿದೆ. ಹ್ಯಾಲಿಟಸ್ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಂಡು ನಿಮ್ಮ ಫೋನ್ ಅನ್ನು ಜೋಡಿಸಿ. ನಿಮ್ಮ ನೈಜ ಸಮಯದ ಫಿಟ್‌ನೆಸ್ ಅಂಕಿಅಂಶವನ್ನು ಡಿವೈಸ್‌ನಲ್ಲಿ ನಮೂದಿಸಿ ಹಾಗೂ ನಿಮ್ಮ ವರ್ಕ್‌ಔಟ್ ಅನ್ನು ಟ್ರ್ಯಾಕ್ ಮಾಡಬಹುದಾಗಿದೆ.


  ನಿರಂತರ ವರ್ಕ್‌ಔಟ್ ಅನುಭವ


  ಒಂದೇ ಕ್ಲಿಕ್‌ನಲ್ಲಿ ಆ್ಯಪ್‌ಗೆ ನಿರಂತರವಾಗಿ ನ್ಯಾವಿಗೇಟ್ ಮಾಡಬಹುದಾಗಿದೆ. ಹೀಗಾಗಿ ವರ್ಕ್‌ಔಟ್ ತಪ್ಪಿಹೋಗುತ್ತದೆ ಎಂಬ ಚಿಂತೆ ಇರುವುದಿಲ್ಲ.


  ಹೂಕಿ ಪೂರ್ಣ ದೇಹದ ವರ್ಕ್‌ಔಟ್‌ಗೆ ಬೆಂಬಲ ನೀಡುತ್ತದೆ


  ಹೂಕಿ 100 ಕ್ಕಿಂತಲೂ ಹೆಚ್ಚಿನ ವ್ಯಾಯಾಮಗಳಿಗೆ ಬೆಂಬಲ ನೀಡುತ್ತದೆ ಹಾಗೂ ಎಲ್ಲಾ ರೀತಿಯ ಸ್ನಾಯುಗಳಿಗೆ ಇದು ಅತ್ಯುತ್ತಮವಾಗಿದೆ ನೀವು ಜಿಮ್‌ನಲ್ಲಿ ಮಾಡುವ ಬೇರೆ ಬೇರೆ ವ್ಯಾಯಾಮಗಳನ್ನು ಹೂಕಿ ಬಳಸಿ ಮಾಡಬಹುದಾಗಿದೆ.ಈ ಡಿವೈಸ್ ಹಗುರವಾಗಿದ್ದು ತೂಕ 2.5 ಕೆಜಿಯಾಗಿದೆ ಹಾಗೂ ಉದ್ದ 75 ಸೆಮೀ ಎಂದೆನಿಸಿದೆ.


  Published by:Prajwal B
  First published: