ಟೆಕ್ನಾಲಜಿ ಕಂಪೆನಿಗಳು (Technology Company) ಇತ್ತೀಚೆಗೆ ಬಹಳಷ್ಟು ಅಭಿವೃದ್ಧಿಯಾಗುತ್ತಿದೆ. ಹೊಸ ಹೊಸ ಅನ್ವೇಷಣೆಗಳನ್ನು ಮಾಡುವ ಮೂಲಕ ಮಾರುಕಟ್ಟೆಗೆ ಹೊಸ ಮಾದರಿಯ ತಂತ್ರಜ್ಞಾನಗಳನ್ನು ಬಿಡುಗಡೆ ಮಾಡುತ್ತದೆ. ಅದ್ರಲ್ಲೂ ಈಗಿನ ಕಾಲಮಾನದಲ್ಲಿ ಲ್ಯಾಪ್ಟಾಪ್ಗಳಂತೂ ವಿಶೇಷ ಫೀಚರ್ಸ್ಗಳೊಂದಿಗೆ ಬಿಡುಗಡೆಯಾಗುತ್ತಿದೆ. ಆದರೆ ಕೆಲವೊಂದು ಬಾರಿ ನಾವು ಬಳಕೆ ಮಾಡುವಂತಹ ಲ್ಯಾಪ್ಟಾಪ್ ಅಥವಾ ಕಂಪ್ಯೂಟರ್ಗಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಪ್ರೊಸೆಸರ್ (Desktop Processor) ಗುಣಮಟ್ಟದಲ್ಲಿ ಇರದೇ ಇರುವುದು. ಆದರೆ ಇದೀಗ ಇಂಟೆಲ್ ಕಂಪೆನಿ (Intel Company) ಈ ತೊಂದರೆಯನ್ನು ತಪ್ಪಸುವ ಕಾರಣಕ್ಕೆ ಹೊಸ ಪ್ರೊಸೆಸರ್ ಒಂದನ್ನು ಲಾಂಚ್ ಮಾಡಲು ರೆಡಿಯಾಗಿದೆ. ಈ ಪ್ರೊಸೆಸರ್ ಬಹಳಷ್ಟು ಫೀಚರ್ಸ್ಗಳನ್ನು ಒಳಗೊಂಡಿದ್ದು, ಕಂಪ್ಯೂಟರ್ಗಳು ವೇಗವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ.
ಜನಪ್ರಿಯ ಟೆಕ್ನಾಲಜಿ ಕಂಪೆನಿಯಾಗಿರುವ ಇಂಟೆಲ್ ಇಂದು ತನ್ನ 13 ನೇ ಜೆನ್ ಇಂಟೆಲ್ ಕೋರ್ i9-13900KS ಡೆಸ್ಕ್ಟಾಪ್ ಪ್ರೊಸೆಸರ್ ಬಗ್ಗೆ ಘೋಷಣೆ ಮಾಡಿದೆ. ಈ ಪ್ರೊಸೆಸರ್ ವಿಶ್ವದ ಅತ್ಯಂತ ವೇಗದ ಡೆಸ್ಕ್ಟಾಪ್ ಪ್ರೊಸೆಸರ್ ಆಗಿರಲಿದೆ ಎಂದು ಕಂಪೆನಿ ಹೇಳಿದೆ.
ಇಂಟೆಲ್ ಡೆಸ್ಕ್ಟಾಪ್ ಪ್ರೊಸೆಸರ್ನ ಫೀಚರ್ಸ್ ಹೇಗಿದೆ?
ಇಂಟೆಲ್ ಕಂಪೆನಿಯಿಂದ ಹೊಸ ಮಾದರಿಯಲ್ಲಿ ಬಿಡುಗಡೆಯಾಗುತ್ತಿರುವ ಡೆಸ್ಕ್ಟಾಪ್ ಪ್ರೊಸೆಸರ್ ಇಂಟೆಲ್ ಥರ್ಮಲ್ ವೆಲಾಸಿಟಿ ಬೂಸ್ಟ್ನೊಂದಿಗೆ 6ಜಿಹೆಚ್ಝಡ್ ವರೆಗೆ ಟರ್ಬೊ ಆವರ್ತನವನ್ನು ಹೊಂದಿರುತ್ತದೆ ಎಂದು ಕಂಪೆನಿ ಹೇಳಿದೆ. ಹಾಗೆಯೇ ಇದು ಪಿಸಿ ಉದ್ಯಮದಲ್ಲಿ ಓವರ್ಕ್ಲಾಕಿಂಗ್ ಇಲ್ಲದೆ ಆ ವೇಗವನ್ನು ತಲುಪುವ ಮೊದಲ ಸಿಪಿಯು ಆಗಿರಲಿದೆ.
13 ನೇ ಜನ್ ಇಂಟೆಲ್ ಕೋರ್ i9-13900KS ಪ್ರೊಸೆಸರ್ ಇಂಟೆಲ್ ಅಡಾಪ್ಟಿವ್ ಬೂಸ್ಟ್ ಟೆಕ್ನಾಲಜಿಯೊಂದಿಗೆ ಪ್ಯಾಕ್ ಆಗಿರಲಿದ್ದು, ಇದು ಹೆಚ್ಚಿನ ಮಲ್ಟಿಕೋರ್ ಟರ್ಬೊ ಫೀಚರ್ಸ್ಗಳನ್ನು ಹೊಂದಿದೆ. ಈ ಕೋರ್ಗಳು ಕಂಪ್ಯೂಟರ್ ಗೇಮರ್ಗಳಿಗೆ ಉತ್ತಮ ಅನುಭವವನ್ನು ನೀಡಲಿದೆ ಎಂದು ಕಂಪೆನಿ ತಿಳಿಸಿದೆ.
ವಿನ್ಯಾಸ
ಇನ್ನು ಈ ಇಂಟೆಲ್ನ ಪ್ರೊಸೆಸರ್ನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಈ ಹೊಸ ಪ್ರೊಸೆಸರ್ ಒಟ್ಟು 24 ಕೋರ್ಗಳನ್ನು ಹೊಂದಿರಲಿದೆ. ಇದರಲ್ಲಿ ಎಂಟು ಕಾರ್ಯಕ್ಷಮತೆ ಕೋರ್ಗಳು ಮತ್ತು 16 ಎಫಿಸಿಯೆಂಟ್ ಕೋರ್ಗಳು, 32 ಥ್ರೆಡ್ಗಳು ಇರಲಿವೆ. ಈ ಮೂಲಕ ನಿಮ್ಮ ಕಂಪ್ಯೂಟರ್ ಇನ್ನೂ ವೇಗವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ.
ಇದರೊಂದಿಗೆ ಈ ಸಾಧನ 150W ಪ್ರೊಸೆಸರ್ ಬೇಸ್ ಪವರ್, 36ಎಮ್ಬಿ ಇಂಟೆಲ್ ಸ್ಮಾರ್ಟ್ ಕ್ಯಾಶ್ ಹಾಗೂ 16 PCIe 5.0 ಲೇನ್ಗಳು ಮತ್ತು ನಾಲ್ಕು PCIe 4.0 ಲೇನ್ಗಳನ್ನು ಒಳಗೊಂಡಿದೆ. ಒಟ್ಟಾರೆ 20 PCIe ಲೇನ್ಗಳು ಇದರಲ್ಲಿವೆ.
ಇನ್ನು ಈ ಇಂಟೆಲ್ ಪ್ರೊಸೆಸರ್ನ ಸ್ಟೋರೇಜ್ ಸಾಮರ್ಥ್ಯದ ಬಗ್ಗೆ ಹೇಳುವುದಾದರೆ ಇದು DDR5 5600 MT/s ಮತ್ತು DDR4 3200 MT/s ವರೆಗೆ ಬೆಂಬಲವನ್ನು ನೀಡಲಿದೆ.
ಮದರ್ಬೋರ್ಡ್ ಫೀಚರ್ಸ್
ಇಂಟೆಲ್ ತನ್ನ 13 ನೇ ಜೆನ್ ಇಂಟೆಲ್ ಕೋರ್ i9-13900KS ಪ್ರೊಸೆಸರ್ Z790 ಮತ್ತು Z690 ಮದರ್ಬೋರ್ಡ್ಗಳೊಂದಿಗೆ ಹೊಂದಿಕೊಳ್ಳುತ್ತದಂತೆ. ಅದರಲ್ಲೂ ಇತ್ತೀಚಿನ ಬಿಐಓಎಸ್ ನೊಂದಿಗೆ ಉತ್ತಮ ಗೇಮಿಂಗ್ ಮತ್ತು ಕಂಟೆಂಟ್ ಕ್ರಿಯೇಟರ್ಸ್ಗಳನ್ನು ಗಮನದಲ್ಲಿಟ್ಟುಕೊಂಡು ರಚಿಸಲಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: 75 ಸಾವಿರದ ಸ್ಮಾರ್ಟ್ಫೋನ್ ಅನ್ನು ಕೇವಲ 15 ಸಾವಿರ ರೂಪಾಯಿಗೆ ಪಡೆಯಿರಿ! ಯಾವುದು ಆ ಸ್ಮಾರ್ಟ್ಫೋನ್?
ಬೆಲೆ ಮತ್ತು ಲಭ್ಯತೆ
ಇಂಟೆಲ್ ಕಂಪೆನಿ ಪರಿಚಯಿಸಿದ ಈ ವಿಶೇಷ ಮಾದರಿಯ ಡೆಸ್ಕ್ಟಾಪ್ ಪ್ರೊಸೆಸರ್ ಜನವರಿ 12, 2023 ರಿಂದ ಜಾಗತಿಕವಾಗಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತದೆ. ಇನ್ನು ಈ ಪ್ರೊಸೆಸರ್ $699 ಅಂದರೆ ಭಾರತದಲ್ಲಿ ಸುಮಾರು 56,813 ರೂಪಾಯಿಗಳ ಆರಂಭಿಕ ಬೆಲೆಯಲ್ಲಿ ಲಭ್ಯವಿರುತ್ತದೆ. ಹಾಗೆಯೇ ಇದನ್ನು ಜನವರಿ 12ರಿಂದ ವಿಶ್ವದಾದ್ಯಂತ ರೀಟೇಲ್ ಸ್ಟೋರ್ಗಳಲ್ಲಿಯೂ ಖರೀದಿ ಮಾಡಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ