• ಹೋಂ
  • »
  • ನ್ಯೂಸ್
  • »
  • ಮೊಬೈಲ್- ಟೆಕ್
  • »
  • Bengaluru: ಕಾರಿನ ಜಿಪಿಎಸ್ ಟ್ರ್ಯಾಕರ್​ನಿಂದ ಪತ್ತೆಯಾಯ್ತು ಹೆಂಡತಿಯ ಆಫೇರ್​, ಪತ್ನಿಯ ಕೆಲಸ ನೋಡಿ ಶಾಕ್ ಆದ ಪತಿ

Bengaluru: ಕಾರಿನ ಜಿಪಿಎಸ್ ಟ್ರ್ಯಾಕರ್​ನಿಂದ ಪತ್ತೆಯಾಯ್ತು ಹೆಂಡತಿಯ ಆಫೇರ್​, ಪತ್ನಿಯ ಕೆಲಸ ನೋಡಿ ಶಾಕ್ ಆದ ಪತಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

Cheating Story: ಈಗಂತೂ ಪತಿ ತನ್ನ ಪತ್ನಿಗೆ ಮೋಸ ಮಾಡಿ ಬೇರೆ ಹೆಣ್ಣಿನ ಜೊತೆ ಸಂಬಂಧ ಇಟ್ಟುಕೊಳ್ಳುವುದು ಮತ್ತು ಪತ್ನಿ ತನ್ನ ಗಂಡನನ್ನು ಬಿಟ್ಟು ಬೇರೆ ಪುರುಷನ ಜೊತೆ ಪ್ರೀತಿಯಲ್ಲಿ ಬೀಳುವುದು. ಇತ್ತೀಚೆಗೆ ಈ ರೀತಿಯ ಅನೇಕ ಪ್ರಕರಣಗಳು ಬೆಳಕಿಗೆ ಬರುತ್ತವೆ. ಹೀಗೆ ಇಲ್ಲೊಂದು ಘಟನೆ ನಡೆದಿದ್ದು, ಬೆಂಗಳೂರಿನ ವ್ಯಕ್ತಿಯೊಬ್ಬರಿಗೆ ತಮ್ಮ ಹೆಂಡತಿ ತನಗೆ ಮೋಸ ಮಾಡುತ್ತಿದ್ದಾಳೆ ಅಂತ ಕಾರಿನಲ್ಲಿ ಅಳವಡಿಸಿದ ಜಿಪಿಎಸ್ ಟ್ರ್ಯಾಕರ್ ನಿಂದ ತಿಳಿದಿದೆ ನೋಡಿ.

ಮುಂದೆ ಓದಿ ...
  • Trending Desk
  • 2-MIN READ
  • Last Updated :
  • Bangalore [Bangalore], India
  • Share this:

ಈಗಂತೂ ಪತಿ ತನ್ನ ಪತ್ನಿಗೆ (Husband And Wife) ಮೋಸ ಮಾಡಿ ಬೇರೆ ಹೆಣ್ಣಿನ ಜೊತೆ ಸಂಬಂಧ ಇಟ್ಟುಕೊಳ್ಳುವುದು ಮತ್ತು ಪತ್ನಿ ತನ್ನ ಗಂಡನನ್ನು ಬಿಟ್ಟು ಬೇರೆ ಪುರುಷನ ಜೊತೆ ಪ್ರೀತಿಯಲ್ಲಿ ಬೀಳುವುದು. ಹೀಗೆ ಪ್ರತಿದಿನ ಮೊಬೈಲ್ (Mobile)​ ಆನ್ ಮಾಡಿದರೆ ಸಾಕು, ಇಂತಹ ಅನೇಕ ರೀತಿಯ ಅನೈತಿಕ ಸಂಬಂಧಗಳ (Immoral Relationship) ಪ್ರಕರಣಗಳು (Case) ನಮಗೆ ನೋಡಲು ಸಿಗುತ್ತವೆ. ಇಂತಹ ಅನೈತಿಕ ಸಂಬಂಧಗಳು ಎಷ್ಟೇ ಕದ್ದು ಮುಚ್ಚಿ ಮಾಡಿದರೂ ಸಹ ಒಂದಲ್ಲ ಒಂದು ದಿನ ಇಂತಹ ಸುದ್ದಿ ಬೆಳಕಿಗೆ ಬಂದೇ ಬರುತ್ತದೆ.


ಹೀಗೆ ಇಲ್ಲೊಂದು ಘಟನೆ ನಡೆದಿದ್ದು, ಬೆಂಗಳೂರಿನ ವ್ಯಕ್ತಿಯೊಬ್ಬರಿಗೆ ತಮ್ಮ ಹೆಂಡತಿ ತನಗೆ ಮೋಸ ಮಾಡುತ್ತಿದ್ದಾಳೆ ಅಂತ ಕಾರಿನಲ್ಲಿ ಅಳವಡಿಸಿದ ಜಿಪಿಎಸ್ ಟ್ರ್ಯಾಕರ್ ನಿಂದ ತಿಳಿದಿದೆ ನೋಡಿ.


ಕಾರಿನಲ್ಲಿದ್ದ ಜಿಪಿಎಸ್ ಟ್ರ್ಯಾಕರ್ ನಿಂದ ಹೊರ ಬಿತ್ತು ಹೆಂಡತಿಯ ಮೋಸ


ಬೆಂಗಳೂರು ಮೂಲದ ವ್ಯಕ್ತಿಯೊಬ್ಬರು ತಮ್ಮ ಪತ್ನಿ ವಿರುದ್ಧ ದೂರು ದಾಖಲಿಸಿಕೊಳ್ಳಿ ಎಂದು ಬೆಂಗಳೂರು ನಗರದ ಮಹಾಲಕ್ಷ್ಮಿಪುರಂ ಪೊಲೀಸ್ ಠಾಣೆಗೆ ಮತ್ತು ನ್ಯಾಯಾಲಯಕ್ಕೆ ಸಂಪರ್ಕಿಸಿದ್ದಾರೆ ಎಂದು ವರದಿಯಾಗಿದೆ. ಕುಟುಂಬದ ಕಾರಿನ ಜಿಪಿಎಸ್ ಡೇಟಾವನ್ನು ಪರಿಶೀಲಿಸಿದಾಗ ತನ್ನ ಪತ್ನಿ ತನಗೆ ಮೋಸ ಮಾಡುತ್ತಿರುವುದನ್ನು ಪತಿ ಕಂಡುಕೊಂಡಿದ್ದಾರೆ.


ಇದನ್ನೂ ಓದಿ: ರೀಚಾರ್ಜ್ ಮಾಡದೆಯೂ ಈಗ ಫ್ರೀಯಾಗಿ ಕರೆ ಮಾಡಬಹುದು, ಹೇಗಂತೀರಾ? ಇಲ್ಲಿದೆ ವಿವರ


ತನ್ನ ಸ್ಮಾರ್ಟ್‌ಫೋನ್ ಗೆ ಸಂಪರ್ಕ ಹೊಂದಿದ ಜಿಪಿಎಸ್ ಟ್ರ್ಯಾಕರ್ ತನ್ನ ಹೆಂಡತಿಯ ಅನೈತಿಕ ಸಂಬಂಧದ ಬಗ್ಗೆ ತಿಳಿದುಕೊಳ್ಳಲು ಸಹಾಯ ಮಾಡಿದೆ ಅಂತ ಹೇಳಲಾಗುತ್ತಿದೆ ನೋಡಿ. ಆಕೆ ಮತ್ತು ಆಕೆಯ ಪ್ರಿಯಕರನ ವಿರುದ್ಧ ಪೊಲೀಸರಲ್ಲಿ ದೂರು ದಾಖಲಿಸಬೇಕೆಂದು ಅವನು ಹೇಳಿದ್ದಾನೆ ಎಂದು ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.


ತಾನು 2014 ರಲ್ಲಿ ಮದುವೆಯಾಗಿದ್ದು, ತಮಗೆ ಆರು ವರ್ಷದ ಹೆಣ್ಣು ಮಗು ಇದೆ ಅಂತ ಆ ವ್ಯಕ್ತಿ ಹೇಳಿದ್ದಾನೆ. ಅವರು ನಗರದ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ರಾತ್ರಿ ವೇಳೆಯಲ್ಲಿ ಕೆಲಸ ಮಾಡುತ್ತಿದ್ದರು. ತನ್ನ ಕಾರಿನ ಜಿಪಿಎಸ್ ಡೇಟಾವನ್ನು ನೋಡುವವರೆಗೂ ಅವರಿಗೆ ಅವರ ಸಂಸಾರ ಚೆನ್ನಾಗಿಯೇ ನಡೆದಿದೆ ಅಂತ ಅನ್ನಿಸಿತ್ತು ಎಂದು ಅವರು ಹೇಳಿದರು.


ಸಾಂಕೇತಿಕ ಚಿತ್ರ


ಕಾರಿನಲ್ಲಿ ಜಿಪಿಎಸ್ ಟ್ರ್ಯಾಕರ್ ಅಳವಡಿಸಿದ್ದರ ಬಗ್ಗೆ ಪತಿ ಯಾರಿಗೂ ಹೇಳಿರಲಿಲ್ವಂತೆ


ತನ್ನ ಕಾರಿನಲ್ಲಿ ಜಿಪಿಎಸ್ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಅಳವಡಿಸಿದ್ದರ ಬಗ್ಗೆ ಅವರು ತಮ್ಮ ಪತ್ನಿಗೆ ಮತ್ತು ಇನ್ನಿತರೆ ಕುಟುಂಬದ ಸದಸ್ಯರಿಗೆ ಯಾರಿಗೂ ತಿಳಿಸಿರಲಿಲ್ಲವಂತೆ.


"ಕಳೆದ ವರ್ಷ ಒಂದು ದಿನ, ನಾನು ಕಚೇರಿಯಲ್ಲಿ ನೈಟ್​ ಶಿಪ್ಟ್​​ನಲ್ಲಿ ಕೆಲಸ ಮಾಡುತ್ತಿದ್ದಾಗ ನನ್ನ ಕಾರನ್ನು ಯಾರೋ ಹೊರ ತೆಗೆದಿದ್ದಾರೆ ಎಂದು ನಾನು ಕಂಡುಕೊಂಡೆ. ಜಿಪಿಎಸ್ ನಲ್ಲಿ ಮಧ್ಯರಾತ್ರಿಯ ವೇಳೆಗೆ ಕಾರು ಕೆಐಎ ದಿಕ್ಕಿನಲ್ಲಿ ಚಲಿಸಿ ಹೋಟೆಲ್ ವೊಂದರ ಹೊರಗೆ ನಿಂತಿದೆ ಎಂದು ತೋರಿಸಿದೆ.


ಬೆಳಿಗ್ಗೆ 5 ಗಂಟೆಯ ನಂತರ ಅದನ್ನು ಮನೆಯ ಬಳಿ ತಂದು ನಿಲ್ಲಿಸಲಾಗಿದೆ. ನಾನು ಹೋಟೆಲ್ ಗೆ ಹೋಗಿ ವಿಚಾರಿಸಿದಾಗ ಅಲ್ಲಿ ನನ್ನ ಹೆಂಡತಿ ಮತ್ತು ಅವಳ ಗೆಳೆಯ ತಮ್ಮ ವೋಟರ್ ಐಡಿಗಳನ್ನು ಬಳಸಿಕೊಂಡು ಒಂದು ರೂಮ್​ ಅನ್ನು ಬುಕ್ ಮಾಡಿಕೊಂಡಿದ್ದು ನನಗೆ ತಿಳಿಯಿತು" ಎಂದು ಆ ವ್ಯಕ್ತಿ ಹೇಳಿದ್ದಾರೆ.




ಜಿಪಿಎಸ್ ಟ್ರ್ಯಾಕರ್ ನಲ್ಲಿರುವ ಡೇಟಾವನ್ನು ನೋಡಿ ಅವರಿಬ್ಬರ ಲವ್ವಿ ಡವ್ವಿ ಬಗ್ಗೆ ತಿಳಿದುಕೊಂಡಾಗ ತನ್ನ ಹೆಂಡತಿ ಮತ್ತು ಅವಳ ಸ್ನೇಹಿತ ತನಗೆ ಬೆದರಿಕೆ ಹಾಕಿದ್ದಾರೆ ಎಂದು ವ್ಯಕ್ತಿ ಹೇಳಿದ್ದಾರೆ.


ಐಪಿಸಿ ಸೆಕ್ಷನ್ 417 (ವಂಚನೆ), 420 (ವಂಚನೆ ಮತ್ತು ಅಪ್ರಾಮಾಣಿಕವಾಗಿ ಆಸ್ತಿ ವಿತರಣೆಗೆ ಪ್ರಚೋದನೆ), 506 (ಕ್ರಿಮಿನಲ್ ಬೆದರಿಕೆ) ಮತ್ತು 120 ಬಿ (ಕ್ರಿಮಿನಲ್ ಪಿತೂರಿ) ಸೇರಿದಂತೆ ಐಪಿಸಿಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ನ್ಯಾಯಾಲಯ ಪೊಲೀಸರಿಗೆ ನಿರ್ದೇಶನ ನೀಡಿದೆ. ಸದ್ಯಕ್ಕೆ ಆ ಮಹಿಳೆ ಬೇರೆ ಊರಿನಲ್ಲಿ ವಾಸಿಸುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆಕೆಗೆ ನೋಟಿಸ್ ನೀಡಿದ್ದಾರೆ.

First published: