• Home
 • »
 • News
 • »
 • tech
 • »
 • Mobile Ban: ಈ ಶಾಲೆಯಲ್ಲಿ ಮಕ್ಕಳ ಮೊಬೈಲ್ ಬಳಕೆಗೆ ಬಿತ್ತು ಬ್ರೇಕ್, ಓದಿನಲ್ಲಿ ಈಗ ವಿದ್ಯಾರ್ಥಿಗಳು ಫಾಸ್ಟ್!

Mobile Ban: ಈ ಶಾಲೆಯಲ್ಲಿ ಮಕ್ಕಳ ಮೊಬೈಲ್ ಬಳಕೆಗೆ ಬಿತ್ತು ಬ್ರೇಕ್, ಓದಿನಲ್ಲಿ ಈಗ ವಿದ್ಯಾರ್ಥಿಗಳು ಫಾಸ್ಟ್!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇತ್ತೀಚೆಗೆ ಸ್ಮಾರ್ಟ್​ಫೋನ್​ ಉತ್ಪಾದನೆ ಹೆಚ್ಚುತ್ತಿರುವಾಗ ಬಳಕೆಯೂ ಅಷ್ಟೇ ಹೆಚ್ಚಾಗಿದೆ. ಅದ್ರಲ್ಲೂ ಕೊರೋನಾ ಬಂದಾಗಿನಿಂದ ಮಕ್ಕಳ ಕೂಡ ಸ್ಮಾರ್ಟ್​​ಫೋನ್​ ಬಳಸುತ್ತಿದ್ದಾರೆ. ಆದರೆ ಇಲ್ಲೊಂದು ದೇಶದ ಹೈಸ್ಕೂಲ್​ನಲ್ಲಿ ಸ್ಮಾರ್ಟ್​​ಫೋನ್ ಬಳಕೆ ಮಾಡುವುದನ್ನೇ ನಿಷೇಧಿಸಿದ್ದಾರೆ. ಕಾರಣವೇನೆಂಬುದನ್ನು ನೀವೇ ನೋಡಿ.

ಮುಂದೆ ಓದಿ ...
 • Share this:

  ಕೋವಿಡ್‌ (Covid) ಬಂದ ಮೇಲಂತೂ ಮೊಬೈಲ್ (Mobiles) ಗಳು ಮಕ್ಕಳ‌ ಮನಸ್ಸಿನ ಮೇಲೆ ಎಷ್ಟು ಪರಿಣಾಮ ಬೀರುತ್ತಿವೆ ಎಂದು ಊಹಿಸಲು ಸಹ ಅಸಾಧ್ಯವಾದಂತಾಗಿದೆ. ಹೌದು ಕಳೆದ ಕೆಲ ವರ್ಷಗಳಿಂದ ಯಾವ ಮಕ್ಕಳ ಕೈ‌ಯಲ್ಲೂ ನೋಡಿದರೂ ಸಹ ಮೊಬೈಲ್ ಕಾಣುತ್ತಿದೆ. ಕಳೆದ ವರ್ಷ ಕೊರೋನಾ ನಂತರ ಮತ್ತಷ್ಟು ಮಕ್ಕಳ ಕೈಗೆ ನಾವೇ ಸ್ಮಾರ್ಟ್ ಫೋನ್ (Smartphone) ಕೊಟ್ಟು ಆನ್​ಲೈನ್ (Online)​ ಕ್ಲಾಸ್ ಅಟೆಂಡ್ ಮಾಡಿ ಎನ್ನುತ್ತಿದ್ದೇವೆ. ಆದರೆ ಬೆರಳ ತುದಿಯಲ್ಲಿ ಬೇಕಾದ್ದು ನೋಡಲು ಸಿಗುವ ಮೊಬೈಲ್ ಅನ್ನು ಮಕ್ಕಳ ಕೈಗೆ ಕೊಟ್ಟು ಮಕ್ಕಳನ್ನು ಸ್ವತಃ ನಾವುಗಳೇ ದಾರಿ ತಪ್ಪಿಸ್ತಾ ಇದೀವಾ ಎನ್ನುವಂತಾಗಿದೆ.


  ಹೌದು ಮೊಬೈಲ್​​, ಇಂಟರ್ನೆಟ್, ಸೋಷಿಯಲ್‌ ಮೀಡಿಯಾ ಎಲ್ಲವನ್ನೂ ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳಬಹುದು. ಹಾಗೆಯೇ ಅದರಿಂದ ಬೇರೆ ಹಾದಿಯನ್ನು ಸಹ ಹಿಡಿಯಬಹುದು. ಆದರೆ ಮಕ್ಕಳನ್ನು ಒಳ್ಳೆಯದಕ್ಕಿಂತ ಹೆಚ್ಚಾಗಿ ಬೇಡದ್ದೇ ಆಕರ್ಷಣೆ ಮಾಡುವುದು ಅವರ ವಯೋ ಸಹಜ ಗುಣವಾಗಿದೆ. ಆದರೆ ಅಮೆರಿಕಾವೊಂದರ ಶಾಲೆಯಲ್ಲಿ ಮೊಬೈಲ್‌ ಪೋನ್‌ಗಳನ್ನು ಬ್ಯಾನ್‌ ಮಾಡುವ ಮೂಲಕ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಕಾರಣವಾಗಿದೆ.


  ನ್ಯೂಯಾರ್ಕ್‌ ಪೋಸ್ಟ್‌ನ ವರದಿ ಏನ್‌ ಹೇಳ್ತಿದೆ?


  ಕೋವಿಡ್-19 ಸಾಂಕ್ರಾಮಿಕ ರೋಗದ ನಂತರ ಯುನೈಟೆಡ್ ಸ್ಟೇಟ್ಸ್‌ನ ವಾಯುವ್ಯ ಮ್ಯಾಸಚೂಸೆಟ್ಸ್‌ನಲ್ಲಿರುವ ಬಕ್ಸ್‌ಟನ್ ಶಾಲೆಯಲ್ಲಿ ತರಗತಿಗಳು ಪ್ರಾರಂಭವಾದಾಗ, ಅಧ್ಯಾಪಕರು “ಸ್ಮಾರ್ಟ್‌ಫೋನ್‌ಗಳ ಬಳಕೆ ಹೆಚ್ಚಾದಂತೆ, ಮಕ್ಕಳಲ್ಲಿ ಸಾಮಾನ್ಯವಾಗಿ ಯೋಚಿಸುವ ಪ್ರಜ್ಞೆಯು ಕಡಿಮೆಯಾಗಬಹುದು. ವಿದ್ಯಾರ್ಥಿಗಳು ಇನ್ನು ಮುಂದೆ ಶಾಲೆಯಲ್ಲಿ ಮೊಬೈಲ್‌ಗಳನ್ನು ಬಳಸುವುದಿಲ್ಲ” ಎಂದು ನ್ಯೂಯಾರ್ಕ್ ಪೋಸ್ಟ್‌ನಲ್ಲಿನ ವರದಿ ತಿಳಿಸಿದೆ.


  ಇದನ್ನೂ ಓದಿ: ಸದ್ಯದಲ್ಲೇ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಜಿಯೋ 5ಜಿ ಸ್ಮಾರ್ಟ್​ಫೋನ್! ಇದರ ಫೀಚರ್ಸ್​ಗೆ ಫಿದಾ ಆಗ್ತೀರಾ


  ವಿದ್ಯಾರ್ಥಿಗಳು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಸಾಕಷ್ಟು ಸಮಯವನ್ನು ಕಳೆಯುವುದರಿಂದ ಮುಖಾಮುಖಿ ಸಂವಹನದ ಮೂಲಭೂತ ಅಂಶಗಳನ್ನು ಸಂಪೂರ್ಣವಾಗಿ ಮರೆತಿದ್ದಾರೆ ಎಂದು ಗಮನಿಸಿದ ಶಾಲೆಯ ಮುಖ್ಯಸ್ಥ ಪೀಟರ್ ಬೆಕ್ ಮೊಬೈಲ್‌ ನಿಷೇಧಕ್ಕೆ ತೀರ್ಮಾನಿಸಿದರು.ವಿದ್ಯಾರ್ಥಿಗಳು ಪರಸ್ಪರ ಸಂಭಾಷಣೆ ನಡೆಸಲು ಕಷ್ಟಪಡುತ್ತಿದ್ದಾರೆ. ಇತರ ಜನರೊಂದಿಗೆ ಬೆರೆಯುವ ಮತ್ತು ಅವರಿಂದ ಕಲಿಯುವ ಸಾಮರ್ಥ್ಯವನ್ನು ಸಹ ಕಳೆದುಕೊಳ್ಳುತ್ತಿದ್ದಾರೆ ಎಂದು ಬೆಕ್‌ ಅವರು ಹೇಳಿದರು.


  ಶಾಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಮೊಬೈಲ್‌ ಬಳಸುವ ಹಾಗಿಲ್ಲ..!


  ಇದನ್ನೆಲ್ಲ ಗಮನಿಸಿದ ಶಾಲೆಯ ಅಧ್ಯಾಪಕರು ಸ್ಮಾರ್ಟ್‌ಫೋನ್‌ಗಳ ಮೇಲೆ ನಿಷೇಧ ಹೇರಲು ನಿರ್ಧರಿಸಿದ್ದಾರೆ. ಸಂಸ್ಥೆಯು 114-ಎಕರೆ ಕ್ಯಾಂಪಸ್‌ನಲ್ಲಿ ಐಫೋನ್‌ಗಳು ಮತ್ತು ಆಂಡ್ರಾಯ್ಡ್‌ಗಳನ್ನು ಬಳಸದಂತೆ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಿಬ್ಬಂದಿಗಳ ಮೇಲೂ ಸಹ ನಿಷೇಧ ಹೇರಿವೆ.


  “ಮೊಬೈಲ್‌ ನಿಷೇಧವು ಸೆಪ್ಟೆಂಬರ್‌ನಲ್ಲಿ ಕಳೆದ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಜಾರಿಗೆ ಬಂದಿತು ಮತ್ತು ಈ ನಿಯಮವು ಯಶಸ್ವಿಯಾಗಿ ಮುನ್ನಡೆಯುತ್ತಿದೆ” ಎಂದು ಸುದ್ದಿ ಮಾಧ್ಯಮ ಔಟ್‌ಲೆಟ್ ತಿಳಿಸಿದೆ.


  ಮೊಬೈಲ್‌ ನಿಷೇಧದ ಕುರಿತು ಶಾಲಾ ಮುಖ್ಯಸ್ಥರ ಅಭಿಪ್ರಾಯವೇನು?


  "ಶಾಲಾ ಆವರಣದಲ್ಲಿ ಮೊಬೈಲ್‌ ಅನ್ನು ನಿಷೇಧ ಮಾಡಿದಾಗಿನಿಂದ, ವಿದ್ಯಾರ್ಥಿಗಳು ಸವೋತ್ತಮ ಬೆಳವಣಿಗೆಯನ್ನು ಹೊಂದುತ್ತಿದ್ದಾರೆ. ಅವರು ಈ ಹೊಸ ಬದಲಾವಣೆಗೆ ಚೆನ್ನಾಗಿ ಹೊಂದಿಕೊಂಡಿದ್ದಾರೆ" ಎಂದು ಶಾಲಾ ಮುಖ್ಯಸ್ಥ ಬೆಕ್‌ ಅವರು ಹೇಳಿದರು.


  “ಈ ಪ್ರಕಟಣೆಯನ್ನು ಕೇಳಿ ಕೆಲವು ವಿದ್ಯಾರ್ಥಿಗಳು ಭಯಭೀತರಾಗಿದ್ದರು. ತಮ್ಮ ಜೀವನದ ಪ್ರತಿ ಸೆಕೆಂಡಿನ ನಿರ್ಣಾಯಕ ಭಾಗವಾಗಿ ಬದಲಾಗಿರುವ ಈ ಮೊಬೈಲ್‌ ಅನ್ನು ಬಿಟ್ಟು ಇರುವುದು ಸಾಧ್ಯವಾ ಎಂದು ಊಹಿಸಿರಬಹುದು” ಎಂದು ಶಾಲಾ ಮುಖ್ಯಸ್ಥರು ಹೇಳಿದರು.


  ಮಕ್ಕಳಿಗಾಗಿ ಇನ್ನೊಂದು ಲೈಟ್​ ಫೋನ್:


  ಶಾಲೆಯ ಸಮೀಪದಲ್ಲಿ ವಾಸಿಸುವ ವಿದ್ಯಾರ್ಥಿಗಳು ತಮ್ಮ ಫೋನ್‌ಗಳನ್ನು ಮನೆಯಲ್ಲಿಯೇ ಇರಿಸಬೇಕಾಗುತ್ತದೆ. ಆದರೆ ಬೋರ್ಡಿಂಗ್‌ನಲ್ಲಿರುವವರು ತಮ್ಮ ಮೊಬೈಲ್‌ಗಳನ್ನು ಸೆಮಿಸ್ಟರ್ ಅಂತ್ಯದವರೆಗೆ ಶಾಲಾ ಸಂಯೋಜಕರ ಕಚೇರಿಯಲ್ಲಿ ಇರಿಸಬೇಕಾಗುತ್ತದೆ. ಇದರ ಜೊತೆಗೆ, ಮೊಬೈಲ್‌ ಬಳಕೆ ಇಲ್ಲವೆಂದ ತಕ್ಷಣ ವಿದ್ಯಾರ್ಥಿಗಳು ಚಿಂತೆಗೀಡಾಗುವ ಅವಶ್ಯಕತೆ ಇಲ್ಲ. ಪ್ರತಿ ವಿದ್ಯಾರ್ಥಿಗೆ ಲೈಟ್ ಫೋನ್ ನೀಡಲಾಗಿದೆ ಎಂದು ಶಾಲಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಮೊಬೈಲ್‌ ಪೋನ್‌ ಕನಿಷ್ಠ ಫೀಚರ್‌ಗಳನ್ನು ಒಳಗೊಂಡ ಗ್ಯಾಜೆಟ್ ಆಗಿದೆ. ಇದು ಕರೆಗಳು ಮತ್ತು ಮೇಸೆಜ್‌ಗಳನ್ನು ಮಾಡಬಹುದು.


  ಶಾಲಾ ವೆಬ್​ಸೈಟ್​ನ ಪ್ರಕಾರ:


  ಶಾಲಾ ವೆಬ್‌ಸೈಟ್‌ನ ಪ್ರಕಾರ, “ಈ ಲೈಟ್‌ ಪೋನ್‌ ಸೋಷಿಯಲ್‌ ಮೀಡಿಯಾ, ಕ್ಲಿಕ್‌ಬೈಟ್ ಸುದ್ದಿ, ಇಮೇಲ್, ಇಂಟರ್ನೆಟ್ ಬ್ರೌಸರ್ ಇತ್ಯಾದಿಗಳನ್ನು ಒಳಗೊಂಡಿರುವುದಿಲ್ಲ” ಎಂದು ತಿಳಿಸಿದೆ.


  ಡೆಸ್ಕ್​ಟಾಪ್​ ಸೌಲಭ್ಯ:


  ವಿದ್ಯಾರ್ಥಿಗಳು ಶಾಲಾ ದಿನದ ಕೊನೆಯಲ್ಲಿ ಸೋಷಿಯಲ್‌ ಮೀಡಿಯಾವನ್ನು ಪ್ರವೇಶಿಸಲು ಡೆಸ್ಕ್‌ಟಾಪ್ ಕಂಪ್ಯೂಟರ್‌ಗಳನ್ನು ಸಹ ಬಳಸಬಹುದು ಎಂದು ತಿಳಿಸಲಾಗಿದೆ.


  "ವಿದ್ಯಾರ್ಥಿಗಳು ಶೈಕ್ಷಣಿಕ ಕೆಲಸವನ್ನು ಮಾಡಲು ಹೆಚ್ಚು ಸಮಯವನ್ನು ಕಳೆಯುತ್ತಿದ್ದಾರೆ. ಕಲೆಯ ಮೂಲಕ ಸೃಜನಶೀಲವಾಗಿ ತಮ್ಮನ್ನು ತಾವು ವ್ಯಕ್ತಪಡಿಸುತ್ತಿದ್ದಾರೆ. ಒಬ್ಬರನ್ನೊಬ್ಬರು ತಿಳಿದುಕೊಳ್ಳುತ್ತಾ, ತಮ್ಮನ್ನು ತಾವು ಸಹ ತಿಳಿದುಕೊಳ್ಳುತ್ತಿದ್ದಾರೆ” ಎಂದು ಹೇಳಿದರು.


  ಅಧ್ಯಾಪಕರೊಬ್ಬರ ಅಭಿಪ್ರಾಯ:


  “ಈ ಹಿಂದೆ ವಿದ್ಯಾರ್ಥಿಗಳು ಪದೇ ಪದೇ ವಾಶ್‌ರೂಮ್‌ಗೆ ಹೋಗುತ್ತೇವೆ ಎಂದು ಹೇಳಿ ಬಾತ್‌ರೂಮ್‌ನಲ್ಲಿ ತಮ್ಮ ಮೊಬೈಲ್‌ ಫೋನ್​ಗೆ ಬಂದಿರುವ ಮೇಸೆಜ್‌ಗಳು ಅಥವಾ ಟಿಕ್‌ಟಾಕ್‌ ವಿಡಿಯೋಗಳನ್ನು ನೋಡಲು ಬಳಸುತ್ತಿದ್ದರು. ಆದರೆ ಈಗ ವಿದ್ಯಾರ್ಥಿಗಳು ವಾಶ್‌ರೂಮ್‌ಗೆ ಹೋಗಲು ಅನುಮತಿ ಪಡೆಯುವುದು ತೀರಾ ಕಡಿಮೆ” ಎಂದು ಅಧ್ಯಾಪಕರೊಬ್ಬರು ಹೇಳಿದ್ದಾರೆ.

  Published by:Prajwal B
  First published: