• Home
  • »
  • News
  • »
  • tech
  • »
  • Technology: 5ಜಿ ಡಿವೈಸ್ ತಯಾರಕರು ಸಾಫ್ಟ್‌ವೇರ್ ನವೀಕರಣಗಳನ್ನು ಬಿಡುಗಡೆ ಮಾಡದಿರಲು ಕಾರಣಗಳೇನು?

Technology: 5ಜಿ ಡಿವೈಸ್ ತಯಾರಕರು ಸಾಫ್ಟ್‌ವೇರ್ ನವೀಕರಣಗಳನ್ನು ಬಿಡುಗಡೆ ಮಾಡದಿರಲು ಕಾರಣಗಳೇನು?

5ಜಿ

5ಜಿ

5G Network: ಪ್ರಸ್ತುತ ಜನರು 5ಜಿ ನೆಟ್​ವರ್ಕ್​ಗಾಗಿ ಕಾಯುತ್ತಾ ಇದ್ದಾರೆ. ಇದರ ಅಪ್ಡೇಟ್​ ಆಗುವುದನ್ನೇ ಕಾಯುತ್ತಾ ಇದ್ದವರಿಗೆ ಹೊಸ ಸುದ್ಧಿಯೊಂದು ಬಂದಿದೆ. ತಂತ್ರಜ್ಞಾನವು ಅಭಿವೃದ್ಧಿ ಆಗ್ತಾನೇ ಇದೆ.

  • Share this:

ಬೆಂಗಳೂರು (Bengaluru) ಮೂಲದ ಟೆಕ್ ನಿರ್ವಾಹಕರೊಬ್ಬರು ವೇಗವಾದ ಡೇಟಾ  (Data) ಪ್ರಯೋಜನವನ್ನು ಪಡೆಯಲು ಹಾಗೂ ಉತ್ತಮ ಗುಣಮಟ್ಟದ ಎಚ್‌ಡಿ ವಿಡಿಯೋವನ್ನು ಕ್ಷಣಮಾತ್ರದಲ್ಲಿ ಡೌನ್‌ಲೋಡ್ ಮಾಡುವ ಬಯಕೆಯಿಂದ ದುಬಾರಿ ಐಫೋನ್ 14 ಖರೀದಿಸಲು ಕೊಂಚ ಹಣ ಖರ್ಚುಮಾಡಿದ್ದಾರೆ. ಏರ್‌ಟೆಲ್‌ನ ಸೇವೆಗಳನ್ನು ಹೊಸ ಡಿವೈಸ್‌ನಲ್ಲಿ ಪಡೆದುಕೊಳ್ಳುವ ಧಾವಂತದಿಂದ ನಿರ್ವಾಹಕರು ಹೊಸ ಐಫೋನ್ 14 ಅನ್ನು ಖರೀದಿಸಿದ್ದು ಇದೀಗ ನಿರಾಶೆಗೆ ಕಾರಣವಾಗಿದೆ. ಹೊಸ ಯುಗದ upಆರಂಭ ಎಂಬ ಶೀರ್ಷಿಕೆಯೊಂದಿಗೆ ಭಾರತದಲ್ಲಿ ಅಕ್ಟೋಬರ್ 1 ರಂದು ಸೇವೆಗಳ ಆರಂಭವನ್ನು ಕಂಡಿದ್ದು ನಿಜವಾದರೂ ಡಿವೈಸ್ (Device) ತಯಾರಕರು ಇನ್ನೂ ಕೂಡ 5ಜಿ ಸಾಫ್ಟ್‌ವೇರ್ ಅಪ್‌ಡೇಟ್ ಅನ್ನು ಬಿಡುಗಡೆ ಮಾಡಿಲ್ಲ ಎಂದು ಭಾರತಿ ಏರ್‌ಟೆಲ್ ಐಫೋನ್ 14 ಖರೀದಿದಾರರಿಗೆ ಸಂದೇಶವನ್ನು ಕಳುಹಿಸಿದೆ.


5ಜಿ ಆರಂಭಗೊಳ್ಳಲು ಸಮಯ ಬೇಕು


ಈ ವಿಷಯದಲ್ಲಿ ಐಫೋನ್ 14 ಖರೀದಿದಾರರು ಮಾತ್ರವಲ್ಲದೆ ಬಹಳಷ್ಟು ಜನರಿದ್ದಾರೆ ಎಂಬುದಂತೂ ಸತ್ಯ. ರಿಲಯನ್ಸ್ ಜಿಯೋ ಇನ್‌ಫೋಕಾಮ್‌ನ 5ಜಿ ಸೇವೆಗೆ ಸೈನ್ ಅಪ್ ಮಾಡಿದ ದೆಹಲಿಯ ಗ್ರಾಹಕರು ಟೆಲ್ಕೊದ ಸ್ವಾಗತ ಕೊಡುಗೆಗೆ ಇನ್ನೂ ಆಹ್ವಾನ ಸ್ವೀಕರಿಸಿಲ್ಲ. Jio ಇನ್ನೂ ತನ್ನ 5G ಸ್ಟ್ಯಾಂಡ್‌ಲೋನ್ ನೆಟ್‌ವರ್ಕ್‌ನೊಂದಿಗೆ ಸಾಧನ ಹೊಂದಾಣಿಕೆಯನ್ನು ಪರಿಶೀಲಿಸುತ್ತಿದೆ ಎಂಬ ಸಂದೇಶವನ್ನು ಗ್ರಾಹಕರು ಸ್ವೀಕರಿಸಿದ್ದಾರೆ.


ಆಯ್ದ ನಗರಗಳಲ್ಲಿರುವ ಉನ್ನತ ಮಟ್ಟದ ಸ್ಮಾರ್ಟ್‌ಫೋನ್‌ಗಳು ಈ ತಿಂಗಳ ಆರಂಭದಲ್ಲಿ ಏರ್‌ಟೆಲ್ ಆರಂಭಿಸಿದ 5ಜಿ ಸೇವೆ ಹಾಗೂ ಜಿಯೋ ಆರಂಭಿಸಿರುವ ಬೀಟಾ ಟ್ರಯಲ್‌ಗಳನ್ನು ಪಡೆಯಬಹುದು ಎಂದು ಸಂಸ್ಥೆಗಳು ಹೇಳಿತ್ತು.


ಇದನ್ನೂ ಓದಿ: ನೋಕಿಯಾ ಎನ್73 5ಜಿ ಡಿವೈಸ್ ಫೀಚರ್ಸ್ ಹೀಗಿರಲಿದೆಯಂತೆ, ಖರೀದಿಸಲು ಹೀಗೆ ಮಾಡಿ

ಆದರೆ 5ಜಿ ಸಂಪರ್ಕವನ್ನು ಡಿವೈಸ್‌ಗಳಲ್ಲಿ ಪಡೆದುಕೊಳ್ಳಲು ಸಾಕಷ್ಟು ಸಮಯ ಹಿಡಿಯಬಹುದು ಎಂಬ ಸತ್ಯವನ್ನು ಬಳಕೆದಾರರು ಮನಗಂಡಿದ್ದಾರೆ. ಆ್ಯಪಲ್ ಡಿವೈಸ್‌ಗಳು ಡಿಸೆಂಬರ್ ವೇಳೆಗೆ ಮಾತ್ರ 5G ನವೀಕರಣಗಳನ್ನು ಪಡೆಯುತ್ತವೆ ಎಂಬುದು ವರದಿಯಾಗಿದ್ದರೂ ಡಿವೈಸ್‌ಗಳು ಸಿದ್ಧಗೊಂಡಿದ್ದರೂ ಬಿಡುಗಡೆ ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ ಎಂದಾಗಿದೆ.


ಉನ್ನತ ಬ್ರ್ಯಾಂಡ್‌ಗಳ ವಿವಿಧ ಸ್ಮಾರ್ಟ್‌ಫೋನ್ ಡಿವೈಸ್‌ಗಳಾದ ಸ್ಯಾಮ್‌ಸಂಗ್, ಆ್ಯಪಲ್, ಒನ್‌ಪ್ಲಸ್ ಏರ್‌ಟೆಲ್ ಹಾಗೂ ಜಿಯೋದ 5ಜಿ ನೆಟ್‌ವರ್ಕ್‌ಗಳನ್ನು ಬೆಂಬಲಿಸದೇ ಇರುವುದು ಸರಕಾರವು ಕ್ರಮ ತೆಗೆದುಕೊಳ್ಳಲು ಪ್ರೇರೇಪಿಸಿದೆ.ಸ್ಮಾರ್ಟ್‌ಫೋನ್ ತಯಾರಕರು ವಾರಕ್ಕೆ ಎರಡು ಬಾರಿ ನೆಟ್‌ವರ್ಕ್ ರೋಲ್‌ಔಟ್ ಸ್ಥಿತಿಗತಿಯ ಬಗ್ಗೆ ಸರಕಾರಕ್ಕೆ ವರದಿ ನೀಡಬೇಕಾಗಿದೆ.


ಹೆಚ್ಚು ಸಮಯ ಬೇಕಾಗುತ್ತದೆ


ಉನ್ನತ ಟೆಲ್ಕೊ ಕಾರ್ಯನಿರ್ವಾಹಕರು ಮತ್ತು ವಲಯ ವಿಶ್ಲೇಷಕರು, ಆದಾಗ್ಯೂ, ವಾಹಕಗಳು ಮತ್ತು ಸಾಧನ ಪರಿಸರ ವ್ಯವಸ್ಥೆಯ ಪಾಲುದಾರರು 5G ನೆಟ್‌ವರ್ಕ್‌ಗಳನ್ನು ಹೊರತರಲು ಮತ್ತು ಹ್ಯಾಂಡ್‌ಸೆಟ್‌ಗಳನ್ನು ಪರೀಕ್ಷಿಸಲು ಕೇವಲ ಒಂದೂವರೆ ತಿಂಗಳ ನಂತರ ಪ್ರಾರಂಭಿಸುವ ಬದಲು ಹೆಚ್ಚಿನ ಸಮಯವನ್ನು ನೀಡಿದ್ದರೆ ತಕ್ಷಣದ 5G ಸಂಪರ್ಕ ಸವಾಲುಗಳನ್ನು ನಿವಾರಿಸಬಹುದಿತ್ತು ಎಂದು ತಿಳಿಸಿದ್ದಾರೆ.


ಸರಕಾರವು ಅತ್ಯಂತ ವೇಗದಿಂದ 5ಜಿ ಸ್ಪೆಕ್ಟ್ರಮ್ ಹಂಚಿಕೆಯತ್ತ ಮುಖಮಾಡಿದೆ. ಹಾಗೂ ಕೆಲವೊಂದು ಅಂಶಗಳು 5ಜಿ ಸೇವೆಗಳ ಬಗ್ಗೆ ಉನ್ನತ ನಿರೀಕ್ಷೆಗಳನ್ನು ಹುಟ್ಟುಹಾಕಿವೆ ಇದರಿಂದ ಕೆಲವೊಂದು ಡಿವೈಸ್‌ಗಳು ಹಾಗೂ ಸ್ಥಳಗಳಲ್ಲಿ 5ಜಿ ಸೇವೆ ದೊರೆಯದೇ ಇರುವುದು ತೀವ್ರ ನಿರಾಶೆಯನ್ನುಂಟು ಮಾಡಿದೆ ಎಂದು ದೂರಸಂಪರ್ಕ ತಜ್ಞ ಜೈದೀಪ್ ಘೋಷ್ ತಿಳಿಸಿದ್ದಾರೆ.


ಚೀನಾದಲ್ಲಿ 5ಜಿ ಸೇವೆಯು ಹರಾಜಿನ ಐದು ತಿಂಗಳ ನಂತರ ಆರಂಭಗೊಂಡಿದ್ದು ಜರ್ಮನಿಯಲ್ಲಿ ಈ ವ್ಯವಸ್ಥೆಯನ್ನು ಪ್ರಾರಂಭಿಸಲು ಸುಮಾರು 15 ತಿಂಗಳುಗಳನ್ನು ತೆಗೆದುಕೊಂಡಿದೆ ಎಂಬುದು ಜೈದೀಪ್ ಅವರ ಮಾತಾಗಿದೆ.


ಇದನ್ನೂ ಓದಿ: ಭಾರತದಲ್ಲಿ ಚೀನಾದ ಸ್ಮಾರ್ಟ್‌ಫೋನ್ ಮಾರುಕಟ್ಟೆ ಹೇಗಿದೆ?

ಭಾರತದಲ್ಲಿ ಕೂಡ 3ಜಿ ಹಾಗೂ 4ಜಿ ಸೇವೆಗಳನ್ನು ಹೊರತರಲು ಬಹಳಷ್ಟು ಸಮಯ ದೊರೆತಿತ್ತು ಹಾಗಾಗಿಯೇ ಗ್ರಾಹಕರು ತಡೆರಹಿತವಾದ ಅನುಭವವನ್ನು ಹೊಂದಿದ್ದಾರೆ ಎಂಬುದು ಜೈದೀಪ್ ಅವರ ಮಾತಾಗಿದೆ.


5ಜಿ ವಿಷಯದಲ್ಲಿ ಸಮಯ ಸಾಲುತ್ತಿಲ್ಲ ಹಾಗೂ ರೋಲ್‌ಔಟ್‌ಗಳನ್ನು ಅನಿಯಂತ್ರಿತವಾಗಿ ಮಾಡಲು ಸಾಧ್ಯವಾಗದ ಕಾರಣ ಪ್ರಕ್ರಿಯೆಗೆ ಐದರಿಂದ ಆರು ತಿಂಗಳು ಬೇಕು ಎಂದು ಉನ್ನತ ಕಾರ್ಯನಿರ್ವಾಹರೊಬ್ಬರು ತಿಳಿಸಿದ್ದಾರೆ.

First published: