• ಹೋಂ
  • »
  • ನ್ಯೂಸ್
  • »
  • ಮೊಬೈಲ್- ಟೆಕ್
  • »
  • Samsung Smartphones: ಸ್ಯಾಮ್​ಸಂಗ್ ಕಂಪೆನಿಯ ಬಹುನಿರೀಕ್ಷಿತ ಎರಡು ಸ್ಮಾರ್ಟ್​​ಫೋನ್​ಗಳ ಅನಾವರಣ! ಹೇಗಿದೆ ಫೀಚರ್ಸ್​?

Samsung Smartphones: ಸ್ಯಾಮ್​ಸಂಗ್ ಕಂಪೆನಿಯ ಬಹುನಿರೀಕ್ಷಿತ ಎರಡು ಸ್ಮಾರ್ಟ್​​ಫೋನ್​ಗಳ ಅನಾವರಣ! ಹೇಗಿದೆ ಫೀಚರ್ಸ್​?

ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್​23 ಸೀರಿಸ್​ ಸ್ಮಾರ್ಟ್​ಫೋನ್​

ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್​23 ಸೀರಿಸ್​ ಸ್ಮಾರ್ಟ್​ಫೋನ್​

ಸ್ಯಾಮ್​ಸಂಗ್ ಕಂಪೆನಿಯ ಗ್ಯಾಲಕ್ಸಿ ಎಸ್​23 ಸೀರಿಸ್​ನ ಸ್ಮಾರ್ಟ್​​ಫೋನ್​ಗಳು ಮಾರುಕಟ್ಟೆಗೆ ಕಾಲಿಟ್ಟಿದೆ. ಈ ಸೀರಿಸ್​ನಲ್ಲಿ ಸ್ಯಾಮ್​ಸಂಗ್ ಗ್ಯಾಲಕ್ಸಿ  ಎಸ್​​23, ಗ್ಯಾಲಕ್ಸಿ ಎಸ್​23+ ಮತ್ತು ಗ್ಯಾಲಕ್ಸಿ ಎಸ್​23 ಅಲ್ಟ್ರಾ ಸ್ಮಾರ್ಟ್​​ಫೋನ್​ಗಳು ಬಿಡುಗಡೆಯಾಗಿದೆ. ಹಾಗಿದ್ರೆ ಈ ಸ್ಮಾರ್ಟ್​​ಫೋನ್​ನ ಫೀಚರ್ಸ್, ಬೆಲೆ ಬಗ್ಗೆ ಕಂಪ್ಲೀಟ್ ಮಾಹಿತಿ ಈ ಲೇಖನದಲ್ಲಿದೆ.

ಮುಂದೆ ಓದಿ ...
  • Share this:

    ಸ್ಮಾರ್ಟ್​​​ಫೋನ್​ಗಳಿಗೆ ಟೆಕ್ ಮಾರುಕಟ್ಟೆಯಲ್ಲಿ (Tech Market) ಎಲ್ಲಿಲ್ಲದ ಬೇಡಿಕೆ. ಹಲವಾರು ಸ್ಮಾರ್ಟ್​​ಫೋನ್​ಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಸ್ಯಾಮ್​ಸಂಗ್ ಕಂಪೆನಿ (Samsung Company) ಎಂದಾಗ ಎಲ್ಲರಿಗೂ ಮೊದಲು ನೆನಪಾಗೋದೇ ಈ ಕಂಪೆನಿಯ ಮೊಬೈಲ್​ಗಳು. ಭಾರೀ ಹಿಂದಿನಿಂದ ಪ್ರಚಲಿತದಲ್ಲಿರುವ ಕಂಪೆನಿ ಸ್ಯಾಮ್​ಸಂಗ್. ಇದು ತನ್ನ  ಬ್ರಾಂಡ್​ನ ಅಡಿಯಲ್ಲಿ ಸಾಕಷ್ಟು ಸ್ಮಾರ್ಟ್​​ಫೋನ್​ (Smartphones)ಗಳನ್ನು, ಟೆಕ್​ ಡಿವೈಸ್​ಗಳನ್ನು ಬಿಡುಗಡೆ ಮಾಡುವ ಮೂಲಕ ಬಹಳಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಈ ಹಿಂದೆ ಸ್ಯಾಮ್​ಸಂಗ್ ಕಂಪೆನಿಯಿಂದ ಒಂದೇ ಸೀರಿಸ್​ನಲ್ಲಿ 3 ಸ್ಮಾರ್ಟ್​ಫೋನ್​ಗಳು ಬರಲಿವೆ ಎಂದು ಸುದ್ದಿಯಾಗಿತ್ತು. ಇದರ ಫೀಚರ್ಸ್ ಮೂಲಕವೇ ಬಹಳಷ್ಟು ಮಾರುಕಟ್ಟೆಯಲ್ಲಿ ಸಂಚಲನವನ್ನೂ ಮೂಡಿಸಿತ್ತು. ಇದೀಗ ಬಹುನಿರೀಕ್ಷಿತ ಆ ಸ್ಮಾರ್ಟ್​​ಫೋನ್​ಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.


    ಸ್ಯಾಮ್​ಸಂಗ್ ಕಂಪೆನಿಯ ಗ್ಯಾಲಕ್ಸಿ ಎಸ್​23 ಸೀರಿಸ್​ನ ಸ್ಮಾರ್ಟ್​​ಫೋನ್​ಗಳು ಮಾರುಕಟ್ಟೆಗೆ ಕಾಲಿಟ್ಟಿದೆ. ಈ ಸೀರಿಸ್​ನಲ್ಲಿ ಸ್ಯಾಮ್​ಸಂಗ್ ಗ್ಯಾಲಕ್ಸಿ  ಎಸ್​​23, ಗ್ಯಾಲಕ್ಸಿ ಎಸ್​23+ ಮತ್ತು ಗ್ಯಾಲಕ್ಸಿ ಎಸ್​23 ಅಲ್ಟ್ರಾ ಸ್ಮಾರ್ಟ್​​ಫೋನ್​ಗಳು ಬಿಡುಗಡೆಯಾಗಿದೆ. ಹಾಗಿದ್ರೆ ಈ ಸ್ಮಾರ್ಟ್​​ಫೋನ್​ನ ಫೀಚರ್ಸ್, ಬೆಲೆ ಬಗ್ಗೆ ಕಂಪ್ಲೀಟ್ ಮಾಹಿತಿ ಈ ಲೇಖನದಲ್ಲಿದೆ.


    ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್​​23 ಸ್ಮಾರ್ಟ್​​ಫೋನ್​


    ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್​23 ಸ್ಮಾರ್ಟ್‌ಫೋನ್‌ 6.1 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡೈನಾಮಿಕ್‌ ಅಮೋಲ್ಡ್​ 2X ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 120Hz ರಿಫ್ರೆಶ್‌ ರೇಟ್‌ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಪ್ರೊಟೆಕ್ಷನ್‌ ಅನ್ನು ಆ್ಯಡ್​ ಮಾಡಿದೆ. ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್​​23 ಸ್ಮಾರ್ಟ್​ಫೋನ್​ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8 ಜೆನ್​ 2 ಎಸ್​ಓಸಿ ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದ್ದು, ಇದು ಆಂಡ್ರಾಯ್ಡ್‌ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8 ಜಿಬಿ ರ್‍ಯಾಮ್ ಮತ್ತು 512ಜಿಬಿ ಇಂಟರ್ನಲ್​ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ.




    ಕ್ಯಾಮೆರಾ ಫೀಚರ್ಸ್


    ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್​23 ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆ್ಯಂಗಲ್ ಮತ್ತು ಮೂರನೇ ಕ್ಯಾಮೆರಾ 10 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್‌ ಅನ್ನು ಹೊಂದಿದೆ. ಇನ್ನು ಸೆಲ್ಫಿಗಾಗಿ 12 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಕ್ಯಾಮೆರಾವನ್ನು ಅಳವಡಿಸಲಾಗಿದೆ


    ಬ್ಯಾಟರಿ ಫೀಚರ್ಸ್


    ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್​23 ಸ್ಮಾರ್ಟ್‌ಫೋನ್‌ ಕೇವಲ 3,900mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಈ ಬ್ಯಾಟರಿಯು 25W ವೈರ್ಡ್ ಚಾರ್ಜಿಂಗ್ ಮತ್ತು 15W ವೈರ್​​ಲೆಸ್ ವೇಗದ​ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿದೆ . ಇದರ ಮೂಲಕ ಬ್ಯಾಟರಿಯನ್ನು ಕೇವಲ 30 ನಿಮಿಷಗಳಲ್ಲಿ 50% ಚಾರ್ಜಿಂಗ್‌ ಮಾಡಬಹುದು ಎಂದು ಸ್ಯಾಮ್‌ಸಂಗ್‌ ಕಂಪೆನಿ ಹೇಳಿಕೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6E, ಬ್ಲೂಟೂತ್ 5.3, ವೈಫೈ ಡೈರೆಕ್ಟ್ ಮತ್ತು ಯುಎಸ್​​ಬಿ ಟೈಪ್ ಸಿ ಪೋರ್ಟ್ ಅನ್ನು ಬೆಂಬಲಿಸಲಿದೆ.


    ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್​23 ಸೀರಿಸ್​ ಸ್ಮಾರ್ಟ್​ಫೋನ್​


    ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಸ್​23 ಪ್ಲಸ್​ ಸ್ಮಾರ್ಟ್​ಫೋನ್​


    ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್​23 ಪ್ಲಸ್​ ಸ್ಮಾರ್ಟ್‌ಫೋನ್‌ 6.6 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡೈನಾಮಿಕ್‌ ಅಮೋಲೆಡ್‌ 2X ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 48Hz ನಿಂದ 120Hz ವರೆಗಿನ ರಿಫ್ರೆಶ್‌ ರೇಟ್‌ ಅನ್ನು ಬೆಂಬಲಿಸಲಿದೆ. ಈ ಸ್ಮಾರ್ಟ್‌ಫೋನ್‌ ಗೇಮ್ ಮೋಡ್‌ನಲ್ಲಿ 240Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಅನ್ನು ನೀಡಲಿದೆ. ಇನ್ನು ಡಿಸ್‌ಪ್ಲೇ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಪ್ರೊಟೆಕ್ಷನ್‌ ಅನ್ನು ಪಡೆದುಕೊಂಡಿದೆ. ಇದು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8 Gen 2 SoC ಪ್ರೊಸೆಸರ್ ಬಲವನ್ನು ಹೊಂದಿದ್ದು, ಆಂಡ್ರಾಯ್ಡ್‌ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.


    ಕ್ಯಾಮೆರಾ ಫೀಚರ್ಸ್​ ಹೇಗಿದೆ?


    ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್​23 ಪ್ಲಸ್​ ಸ್ಮಾರ್ಟ್‌ಫೋನ್‌ ವಿಶೇಷವಾಗಿ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆ್ಯಂಗಲ್​ ಮತ್ತು ಮೂರನೇ ಕ್ಯಾಮೆರಾ 10 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್‌ ಅನ್ನು ಒಳಗೊಂಡಿದೆ. ಹಾಗೆಯೇ ಸೆಲ್ಫಿಗಾಗಿ 12 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಕ್ಯಾಮೆರಾವನ್ನು ಅಳವಡಿಸಲಾಗಿದೆ.


    ಬ್ಯಾಟರಿ ಫೀಚರ್ಸ್​


    ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್​23 ಪ್ಲಸ್​​ ಸ್ಮಾರ್ಟ್‌ಫೋನ್‌ 4,700mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯು 45W ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇದರ ಮೂಲಕ ಸ್ಮಾರ್ಟ್‌ಫೋನ್‌ ಅನ್ನು ಕೇವಲ 30 ನಿಮಿಷಗಳಲ್ಲಿ 65% ನಷ್ಟು ಚಾರ್ಜ್​ ಮಾಡಬಹುದು ಎಂದು ಕಂಪೆನಿ ಹೇಳಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ, 4ಜಿ ಎಲ್​ಟಿಇ, ವೈಫೈ 6ಇ, ಬ್ಲೂಟೂತ್ 5.3 ಮತ್ತು ಯುಎಸ್​ಬಿ ಟೈಪ್ ಸಿ ಪೋರ್ಟ್ ಅನ್ನು ಬೆಂಬಲಿಸಲಿದೆ.


    ಇದನ್ನೂ ಓದಿ: ChatGPT ಸಂಸ್ಥೆಯಿಂದ ಮತ್ತೆ ಹೊಸ ಟೂಲ್‌ ಬಿಡುಗಡೆ, ಆದ್ರೆ ಬಳಕೆದಾರರಿಗೆ ಮಾತ್ರ ಬಿಗ್​ ಶಾಕ್!


    ಬೆಲೆ ಮತ್ತು ಲಭ್ಯತೆ


    ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್​23 ಸ್ಮಾರ್ಟ್‌ಫೋನ್‌ ಬೇಸ್ ಮಾಡೆಲ್‌ 8ಜಿಬಿ ರ್‍ಯಾಮ್ ಮತ್ತು 128ಜಿಬಿ ಸ್ಟೋರೇಜ್ ರೂಪಾಂತರದ ಆಯ್ಕೆಯು $799 ಅಂದರೆ ಭಾರತದಲ್ಲಿ ಅಂದಾಜು 65,500 ರೂಪಾಯಿ ಬೆಲೆ ಹೊಂದಿದೆ. ಇನ್ನು ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಪ್ಲಸ್​ ಸ್ಮಾರ್ಟ್‌ಫೋನ್‌ 8 ಜಿಬಿ ರ್‍ಯಾಮ್ ಮತ್ತು 256ಜಿಬಿ ಸ್ಟೋರೇಜ್ ಆಯ್ಕೆಗೆ $999 ಅಂದರೆ ಭಾರತದಲ್ಲಿ ಸುಮಾರು 81,900 ರೂಪಾಯಿ ಬೆಲೆಯನ್ನು ಹೊಂದಿದೆ.

    Published by:Prajwal B
    First published: