• Home
 • »
 • News
 • »
 • tech
 • »
 • Whatsapp: ವಾಟ್ಸಪ್​ನಲ್ಲಿ ಬರೋ ಲಿಂಕ್ ​ಎಲ್ಲ ಓಪನ್ ಮಾಡ್ತೀರಾ? ಇಲ್ನೋಡಿ ಈ ಶಿಕ್ಷಕಿ ಹೀಗೆ 21 ಲಕ್ಷ ಕಳೆದುಕೊಂಡಿದ್ದಾರೆ!

Whatsapp: ವಾಟ್ಸಪ್​ನಲ್ಲಿ ಬರೋ ಲಿಂಕ್ ​ಎಲ್ಲ ಓಪನ್ ಮಾಡ್ತೀರಾ? ಇಲ್ನೋಡಿ ಈ ಶಿಕ್ಷಕಿ ಹೀಗೆ 21 ಲಕ್ಷ ಕಳೆದುಕೊಂಡಿದ್ದಾರೆ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ವಾಟ್ಸಪ್​ನಲ್ಲಿ ಬಂದಂತಹ ಒಂದು ಲಿಂಕ್‌ ಕ್ಲಿಕ್ ಮಾಡಿ ಬರೋಬ್ಬರಿ 21 ಲಕ್ಷ ರೂಪಾಯಿ ಕಳೆದುಕೊಂಡಿರುವ ಭಯಾನಕ ಘಟನೆಯನ್ನು ನೀವು ಕೇಳಿದ್ರೆ ಗಾಬರಿ ಆಗ್ತಿರಾ.

 • Share this:

  ವಾಟ್ಸಪ್ (What's app) ಬಳಕೆದಾರರಿಗೆ ಆಸೆ ಹುಟ್ಟಿಸುವಂತಹ ಲಿಂಕ್‌ಗಳನ್ನು (Link) ಕಳುಹಿಸುವ ಮೂಲಕ ಮೋಸ, ದರೋಡೆ, ವಂಚನೆ ಎಸಗುತ್ತಿರುವ ಹಲವಾರು ಪ್ರಕರಣಗಳು ನಡೆದಿವೆ. ವಂಚಕರು ದುಬಾರಿ ಉಡುಗೊರೆಗಳನ್ನು ನೀಡುವುದಾಗಿ ಭರವಸೆ ನೀಡುವ ನಕಲಿ ಲಿಂಕ್‌ಗಳನ್ನು ಹಂಚಿಕೊಂಡಿದ್ದಾರೆ. ಈ ಸ್ಪ್ಯಾಮ್ ಲಿಂಕ್‌ಗಳು ವಿಂಡೋಸ್ ಪಿಸಿ, ಆಂಡ್ರಾಯ್ಡ್ ಮತ್ತು ಐಒಎಸ್ ಸ್ಮಾರ್ಟ್‌ಫೋನ್‌ಗಳಿಗೆ (Smart Phone) ವೈರಸ್ (Virus) ಅನ್ನು ತರುತ್ತಿದೆ ಎಂದು CNBC ವರದಿ ಮಾಡಿದೆ. ಅದಗ್ಯೂ ಇದುವರೆಗೆ ಹಲವು ರೀತಿಯ ಸ್ಕ್ಯಾಮ್ ನಡೆಯುತ್ತಿವೆ. ಹೀಗಿರುವಾಗ ಓರ್ವ ಶಿಕ್ಷಕಿ (Teacher) ಕೇವಲ ಒಂದು  ವಾಟ್ಸಪ್ ಲಿಂಕ್ ಕ್ಲಿಕ್ಕಿಸುದರ ಮೂಲಕ 21 ಸಾವಿರ ರೂಪಯಿಯನ್ನು ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.


  ವಾಟ್ಸಪ್​ನಲ್ಲಿ ಬಂದಂತಹ ಒಂದು ಲಿಂಕ್‌ ಕ್ಲಿಕ್ ಮಾಡಿ ಬರೋಬ್ಬರಿ 21 ಲಕ್ಷ ರೂಪಾಯಿ ಕಳೆದುಕೊಂಡಿರುವ ಭಯಾನಕ ಘಟನೆಯೊಂದು ಆಂಧ್ರ ಪ್ರದೇಶದಲ್ಲಿ ವರದಿಯಾಗಿದೆ.  ವಾಟ್ಸಪ್​ನಲ್ಲಿ ಅನಾಮಿಕರು ಕಳುಹಿಸಿದ ವಂಚನೆಯ ಲಿಂಕ್ ಮೇಲೆ ಕ್ಲಿಕ್ ಮಾಡಿದ ಆಂಧ್ರ ಪ್ರದೇಶದ ಮದನಪಲ್ಲೆ ಪಟ್ಟಣದ ನಿವೃತ್ತ ಶಿಕ್ಷಕಿಯೋರ್ವರ ಬ್ಯಾಂಕ್ ಖಾತೆಯಿಂದ 21 ಲಕ್ಷ ರೂಪಾಯಿಯನ್ನು ಎಗರಿಸಲಾಗಿದ್ದು, ಸ್ಮಾರ್ಟ್‌ಫೋನ್, ಸೈಬರ್ ಸುರಕ್ಷತೆ ಮತ್ತು ಆಧುನಿಕ ತಂತ್ರಜ್ಞಾನದ ಅರಿವಿಲ್ಲದಿದ್ದರೆ ನಮ್ಮ ಜೀವನ ಹೇಗೆ ಸರ್ವನಾಶವಾಗುತ್ತದೆ ಎಂಬುದಕ್ಕೆ ಇದೊಂದು ದೊಡ್ಡ ಸಾಕ್ಷಿಯಾಗಿದೆ.


  The teacher who saw the WhatsApp link, hear the terrible story of losing 21 lakhs
  ಸಾಂಕೇತಿಕ ಚಿತ್ರ


  ಹೀಗಿರುವಾಗ  ನಾವೆಲ್ಲರು ಈ ತರಹದ ತೊಂದರೆಯಿಂದ ತಪ್ಪಿಸಿಕೊಳ್ಳಲು ಕೇಲವು ವಿಚಾರಗಳನ್ನು ನಾವು ತಿಳಿದಿರಬೇಕು. ಇಲ್ಲದಿದ್ದಲಿ ನಾವು ಈ ರೀತಿಯ ಸ್ಕ್ಯಾಮ್​ಗಳಿಗೆ ಬಲಿಯಾಗುತ್ತೆವೆ. ಇಂತಹ ತೊಂದರೆಯಿಂದ ಪಾರಗುವುದು ಹೇಗೆ, ಮತ್ತು ಶಿಕ್ಷಕಿ 21 ಸಾವಿರ ರೂಪಾಯಿಯನ್ನು ಕಳೆದುಕೊಂಡ ಆ ಕಥೆಯನ್ನು ತಿಳಿಯೋಣ ಬನ್ನಿ.


  ವಾಟ್ಸಪ್ ಲಿಂಕ್ ವಂಚನೆ ಅಂದ್ರೆ ಏನು ಗೊತ್ತಾ?


  ವಾಟ್ಸಪ್ ಬಳಕೆದಾರರಿಗೆ ಆಸೆ ಹುಟ್ಟಿಸುವಂತಹ ವಿಚಾರಗಳನ್ನು ಮೊದಲಿಗೆ ಮಾತನಾಡುವುದು, ಬಳಿಕ ನಿಮಗೆ ವಾಟ್ಸಪ್ ಮೂಲಕವೇ ಕೆಲವೊಂದು ಪೋಟೋಗಳನ್ನು ಕಳುಹಿಸಿ  ಮರುಳುಮಾಡಲು ಮುಂದಾಗುತ್ತರೆ. ಬಳಿಕ ನಿಮ್ಮ ಖಾತೆಯ ವಿಚಾರ, ಹಣದ ವಿಚಾರದ ಬಗ್ಗೆ ನಿಮ್ಮಲ್ಲಿ ಕೇಳಲಾರಂಭಿಸುತ್ತಾರೆ. ನಂತರ ನಿಮಗೆ ವಾಟ್ಸಪ್ ಮೂಲಕ ಲಿಂಕ್​ಗಳನ್ನು ನೀಡಲಾಗುತ್ತದೆ. ನಾವೇನಾದರೂ ತಪ್ಪಿ ಆ ಲಿಂಕ್​ನ ಕ್ಲಿಕ್ ಮಾಡಿದ್ರೆ ನಮ್ಮ ಖಾತೆಯ ಹಣ ಕಾಣೆಯಾಗುತ್ತೆ. ಈ ಶಿಕ್ಷಕಿಯ ಕಥೆಯು ಹೀಗೆ ಆದದ್ದು.


  ಇದನ್ನೂ ಓದಿ: Bluetooth App: ನಿಮ್ಮ ಮೊಬೈಲ್​ನಲ್ಲಿ ಈ ರೀತಿಯ ಆ್ಯಪ್​ಗಳು ಇದ್ರೆ ಈಗಲೇ ಡಿಲೀಟ್ ಮಾಡಿ


  ವಾಟ್ಸಪ್ ಲಿಂಕ್ ಕ್ಲಿಕ್ ಮಾಡಿದರೆ ಏನಾಗುತ್ತದೆ?


  ಲಿಂಕ್ ಕ್ಲಿಕ್ ಮಾಡಿದ ಬಳಿಕ ಆ ಲಿಂಕ್  ಒಂದು ಪೇಜ್​ ಮಾದರಿಯಲ್ಲಿ ಪರಿವರ್ತನೆಯಾಗುತ್ತದೆ. ಬಳಿಕ ನಿಮ್ಮ ವಿಚಾರಗಳನ್ನು ಕೇಳಲಾರಂಭಿಸುತ್ತದೆ. ನಿಮ್ಮ ಹೆಸರು, ವಿಳಾಸ, ಬ್ಯಾಂಕ್ ದಾಖಲೆ,  ಈ ಮಾದರಿಯ ವಿಚಾರವನ್ನು ತಿಳಿದುಕೊಂಡ ಬಳಿಕ ಒಂದು ಸಣ್ಣ ಆಟವನ್ನು ಆಡಿಸುತ್ತಾರೆ. ಅದರಲ್ಲಿ ನೀವು ವೀಜೆತರಾಗಿದ್ದಿರ ಎಂಬುವುದಾಗಿ ತಿಳಿಸಿ. ನೀವು 1 ಲಕ್ಷ ರೂಪಾಯಿಯನ್ನು ಗೆದ್ದಿದ್ದೀ್ರ ನಾವು ಒಂದು ಓಟಿಪಿಯನ್ನು ಕಳುಹಿಸಿದ್ದೆವೆ. ಅದನ್ನು ನೀವು ತಿಳಿಸಿ, ನಿಮ್ಮ ಖಾತಿಗೆ ಹಣವನ್ನು ಹಾಕುತ್ತೆವೆ ಎಂದು  ಹೇಳಿ ಮೋಸ ಮಾಡುತ್ತಾರೆ. ಇವೆಲ್ಲ ಡಾರ್ಕ್​ ವೆಬ್ ಬಳಸುವ  ಸ್ಕ್ಯಾಮ್​ರ್ಸ್ ಮಾಡುವ ಕೆಲಸವಾಗಿದೆ. ಇವರನ್ನು ಪತ್ತೆಹಚ್ಚುವುದು ಸುಲಭದ ಕೆಲಸವಲ್ಲ ಎಂದು ಸೈಬರ್ ಸಂಸ್ಥೆ ತಿಳಿಸಿದೆ.


  ಕೇವಲ ಒಂದು ಲಿಂಕ್ ನಿಂದ ಸ್ಮಾರ್ಟ್‌ಫೋನ್‌ ಹ್ಯಾಕ್ ಮಾಡಬಹುದು


  ಹೌದು ಖಂಡಿತವಾಗಿಯೂ ಸಾಧ್ಯವಿದೆ. ವಾಟ್ಸಪ್​ನಲ್ಲಿ ಅಥವಾ ಇನ್ಯಾವುದೇ ತಾಣದಲ್ಲಿ ಬಂದಂತಹ ಲಿಂಕ್ ಮೂಲಕ ಸ್ಮಾರ್ಟ್‌ಫೋನ್ ಅನ್ನು ಹ್ಯಾಕ್ ಮಾಡುವುದು ಸಾಧ್ಯವಾಗುತ್ತದೆ. ಆದರೆ, ಇದು ಸ್ವಲ್ಪ ಕಷ್ಟಸಾಧ್ಯವಾಗಿರುವುದರಿಂದ ಮಾಲ್‌ವೇರ್, ಆಡ್‌ವೇರ್ ಅಥವಾ PUA ಗಳಿಂದ ಸೈಬರ್ ಕ್ರಿಮಿನಲ್‌ಗಳು ನಮ್ಮ ಸ್ಮಾರ್ಟ್‌ಫೋನ್ ಅನ್ನು ದೂರದಿಂದಲೇ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಶಕ್ತರಾಗಿದ್ದಾರೆ. anydesk ಸಾಫ್ಟ್‌ವೇರ್ ಮೂಲಕ ಒಂದು ಕಂಪ್ಯೂಟರ್ ಸ್ಕ್ರೀನ್ ಅನ್ನು ಹೇಗೆ ಮತ್ತೊಬ್ಬರು ದೂರದಲ್ಲಿ ಎಲ್ಲೋ ಕುಳಿತು ನಿಯಂತ್ರಿಸುವ ರೀತಿಯಲ್ಲಿ ನಮ್ಮ ಸ್ಮಾರ್ಟ್‌ಫೋನ್ ಅನ್ನು ಕ್ರಿಮಿನಲ್‌ಗಳು ದೂರದಿಂದಲೇ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾರೆ.


  ಇದನ್ನೂ ಓದಿ: Twitter Story: ಎಲಾನ್ ಮಸ್ಕ್ ಮಾಜಿ ಗೆಳತಿಯ ಟ್ವಿಟರ್ ಖಾತೆ ಕಣ್ಮರೆ! ಇದರ ಅಸಲಿ ಕಥೆ ಏನು ಗೊತ್ತಾ?


  ಇದಕ್ಕಾಗಿ ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ನಿಮಗೆ ತಿಳಿಯದಂತಹ ಮಾಲ್‌ವೇರ್ ಒಂದು ಅವರಿಗೆ ಸಹಾಯ ಮಾಡುತ್ತಿರುತ್ತದೆ. ಇಷ್ಟು ಸಿಕ್ಕರೆ ಸಾಕು ನಿಮ್ಮ ಬ್ಯಾಂಕ್ ವ್ಯವಹಾರಗಳ ಮಾಹಿತಿ ಎಲ್ಲವೂ ಅವರ ಕೈಯಲ್ಲಿರುತ್ತದೆ. ಬಳಿಕ ಏನು ಮಾಡಿದರು ನಿಮ್ಮ ವಿಚಾರ, ಹಣ, ಯಾವುದು ಮರಳಿಸಿಗುವುದಿಲ್ಲ. ಹೀಗಾಗಿ ಅನಾಮಿಕರು ಯಾವುದಾದರು ಸಂದೇಶವನ್ನು ಕಳುಹಿಸಿದರೆ, ಅದನ್ನು ನಿರ್ಲಕ್ಷಿಸಿ. ಯಾವುದೇ ಮಾದರಿಯಾ ಓಟಿಪಿಯನ್ನು ಶೇರ್ ಮಾಡಬೇಡಿ.

  Published by:ವಾಸುದೇವ್ ಎಂ
  First published: