ಸ್ಮಾರ್ಟ್ವಾಚ್ಗಳು (Smartwatches) ಇತ್ತೀಚೆಗೆ ಟೆಕ್ ಮಾರುಕಟ್ಟೆಯಲ್ಲಿ ಭಾರೀ ಮುಂಚೂಣಿಯಲ್ಲಿದೆ. ಹೆಚ್ಚಿನ ಜನರು ಸ್ಮಾರ್ಟ್ವಾಚ್ಗಳನ್ನು ಹೆಚ್ಚಾಗಿ ಫ್ಯಾಶನ್ನ ದೃಷ್ಟಿಯಿಂದ ಬಳಕೆ ಮಾಡ್ತಾರೆ. ಆದರೆ ಇದು ಒಬ್ಬ ವ್ಯಕ್ತಿಯ ಜೀವವನ್ನೂ ಉಳಿಸಬಲ್ಲದು ಎಂದು ಹೆಚ್ಚಿನ ಜನರಿಗೆ ತಿಳಿದಿಲ್ಲ. ನೀವು ಈಗಾಗಲೇ ಆ್ಯಪಲ್ ಫೋನ್ ಅಥವಾ ಆ್ಯಪಲ್ ವಾಚ್ (Apple Watch) ಹಲವು ಜನರ ಜೀವ ಉಳಿಸಿದೆ (Saved Peoples Lives) ಎಂದು ಕೇಳಿರಬಹುದು, ಓದಿರಬಹುದು. ಅದರಂತೆ ಈಗ ಆ್ಯಪಲ್ ವಾಚ್ ಇದೇ ರೀತಿಯ ಮಹತ್ವದ ಕೆಲಸವೊಂದನ್ನು ಮಾಡಿದೆ. ಅದರಲ್ಲೂ ಆ ವ್ಯಕ್ತಿ ಎಚ್ಚರ ಆಗುವವರೆಗೂ ಎಚ್ಚರಿಕೆ ನೀಡಿರುವುದು ಮತ್ತೊಂದು ವಿಷಯ.
ಆ್ಯಪಲ್ ಸ್ಮಾರ್ಟ್‌ವಾಚ್ ಬಳಕೆದಾರರ ಜೀವವನ್ನು ಉಳಿಸುವಲ್ಲಿ ಮಹತ್ವದ ಕಾರ್ಯ ಮಾಡುತ್ತಾ ಬರುತ್ತಿದ್ದು, ಇದೀಗ ಈ ವಾಚ್ ಸಾವಿನ ಅಂಚಿನಲ್ಲಿದ್ದ ವ್ಯಕ್ತಿಯ ಜೀವ ಉಳಿಸಿ ಭಾರೀ ಚರ್ಚೆಗೆ ಒಳಗಾಗಿದೆ. ಹಾಗಿದ್ರೆ, ಆ್ಯಪಲ್ ವಾಚ್ ಮಾಡಿದ ಮಹತ್ಕಾರ್ಯವಾದರೂ ಏನು?, ಇದು ಬಳಕೆದಾರರಿಗೆ ಹೇಗೆಲ್ಲಾ ಸಹಾಯಕವಾಗಲಿದೆ ಎಂಬ ಮಾಹಿತಿಯನ್ನು ತಿಳಿಬೇಕಾದ್ರೆ ಈ ಲೇಖನವನ್ನು ಓದಿ.
ಆ ವಾಚ್ ಯಾವುದು?
ಆ್ಯಪಲ್ ವಾಚ್ ಜೀವ ಉಳಿಸುವ ವಿಷಯದಲ್ಲಿ ಗ್ರಾಹಕರಿಂದ ಬಹಳಷ್ಟು ರೀತಿಯಲ್ಲಿ ಗುರುತಿಸಿಕೊಂಡಿದೆ. ಈ ವಾಚ್ನಲ್ಲಿರುವಂತಹ ಹೃದಯ ಬಡಿತದ ಮಾನಿಟರ್, ತುರ್ತು ಎಸ್‌ಒಗಳು, ಇನ್‌ಬಿಲ್ಟ್ ಆರೋಗ್ಯ ಮತ್ತು ತುರ್ತು ಫೀಚರ್ಸ್‌ಗಳು ಸಾಕಷ್ಟು ಗ್ರಾಹಕರಿಗೆ ಅನುಕೂಲವಾಗಿದೆ. ಅದರಂತೆ ಆ್ಯಪಲ್ ವಾಚ್‌ಸೀರಿಸ್ 7 ಜೀವನ್ಮರಣದ ಹೋರಾಟದಲ್ಲಿದ್ದ ವ್ಯಕ್ತಿಯನ್ನೇ ಬದುಕಿಸಿ ಸೈ ಎನಿಸಿಕೊಂಡಿದೆ.
ಪಲ್ಸ್ ಮಾನಿಟರ್ ಫೀಚರ್
ಆ್ಯಪಲ್ ವಾಚ್‌ನಲ್ಲಿ ಇರುವ ಪಲ್ಸ್ ಮಾನಿಟರ್ ಫೀಚರ್ಸ್ ಈಗಾಗಲೇ ಹಲವಾರು ಜನರ ಆರೋಗ್ಯವನ್ನು ಮೇಲ್ವಿಚಾರಣೆ ಮಾಡುವ ಮೂಲಕ ಬಳಕೆದಾರರಿಗೆ ಅವರ ಆರೋಗ್ಯದಲ್ಲಾಗಿರುವ ಏರುಪೇರುಗಳನ್ನು ತಿಳಿಸುತ್ತದೆ. ಹಾಗೆಯೇ ಇಲ್ಲೋರ್ವ ಬಳಕೆದಾರರು ಈ ವಾಚ್ ಮೂಲಕ ನಾಡಿ ಬಡಿತ ಹೆಚ್ಚಾಗಿರುವುದನ್ನು ಕಂಡುಕೊಂಡಿದ್ದಾರೆ. ಜೊತೆಗೆ ತೀವ್ರವಾದ ಆಂತರಿಕ ರಕ್ತಸ್ರಾವದ ಮಾಹಿತಿ ಸಹ ಈ ವೇಳೆ ತಿಳಿದುಬಂದಿದೆ.
ಇದನ್ನೂ ಓದಿ: ಭಾರೀ ಸಂಚಲನ ಮೂಡಿಸುತ್ತಿದೆ ಓಟಿಪಿ ಹಗರಣ! ಈ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿ
ಬದುಕಿದ ವ್ಯಕ್ತಿ ಯಾರು?
ರೆಡ್ಡಿಟ್ ಪ್ರೊಫೈಲ್ ನಲ್ಲಿ ಡಿಜಿಟಲ್ ಮೊಫೊ ಎಂದು ಹೆಸರಿಟ್ಟುಕೊಂಡಿರುವ ವ್ಯಕ್ತಿ ಕೆಲವು ದಿನಗಳ ಹಿಂದೆ ಆ್ಯಪಲ್ ವಾಚ್‌ನಿಂದ ಬದುಕುಳಿದಿದ್ದಾರೆ. ಆ ವೇಳೆ ಅವರಿಗೆ ಸ್ಮಾರ್ಟ್‌ವಾಚ್ ಮೂಲಕ ಹೆಚ್ಚಿನ ನಾಡಿ ರೇಟ್ ಮಾಹಿತಿ ತಿಳಿದುಬಂದಿದೆ. ಈ ಮೂಲಕ ಅವರು ಹಲವಾರು ಎಚ್ಚರಿಕೆಗಳನ್ನು ಪಡೆದುಕೊಂಡಿದ್ದಾರೆ. ವಿಷಯ ಏನೆಂದರೆ ಅವರು ಡಿಎನ್‌ಡಿ ಮೋಡ್ ಅನ್ನು ಸಕ್ರಿಯಗೊಳಿಸಿದ್ದರಿಂದಾಗಿ ಅವರು ಯಾವುದೇ ವಾಯ್ಸ್ ನೋಟಿಫಿಕೇಶನ್ ಅನ್ನು ಸ್ವೀಕಾರ ಮಾಡಲು ಸಾಧ್ಯವಾಗಿಲ್ಲ. ಅದಾಗ್ಯೂ ವಾಚ್ 10 ಕ್ಕೂ ಹೆಚ್ಚು ಎಚ್ಚರಿಕೆಗಳನ್ನು ನೀಡಿದೆ. ಜೊತೆಗೆ ಎಚ್ಚರಿಕೆಗೆ ಪ್ರತಿಕ್ರಿಯೆ ನೀಡುವವರೆಗೂ ಇದು ತನ್ನ ಕೆಲಸ ಮುಂದುವರೆಸಿದೆಯಂತೆ.
ವೈದ್ಯರಿಗೆ ವಿಡಿಯೋ ಕಾಲ್
ಇದಾದ ನಂತರ ಕೆಲಸದ ಒತ್ತಡದಿಂದ ಹೀಗೆ ಆಗುತ್ತಿದೆ ಎಂದು ವ್ಯಕ್ತಿ ಸುಮ್ಮನಾಗಿದ್ದಾರೆ. ಆದರೆ, ಕೊನೆಗೂ ನಾಡಿ ಬಡಿತದ ಎಚ್ಚರಿಕೆ ಹಾಗೂ ನಾಡಿ ಬಡಿತದ ತೀವ್ರತೆ ಹೆಚ್ಚಾಗಿದ್ದರಿಂದ ಏನಾದರೂ ಸಮಸ್ಯೆ ಇರಬಹುದೇ ಎಂದು ಭಾವಿಸಿಕೊಂಡು ವೈದ್ಯರನ್ನು ವಿಡಿಯೋ ಕರೆ ಮೂಲಕ ಸಂಪರ್ಕಿಸಿದ್ದಾರೆ. ಬಳಿಕ ಮಾಹಿತಿ ಪಡೆದ ವೈದ್ಯರು ತಕ್ಷಣವೇ ಆಂಬ್ಯುಲೆನ್ಸ್‌ಗೆ ಕರೆ ಮಾಡಲು ಮಾಹಿತಿ ನೀಡಿದ್ದಾರೆ.
ವೈದ್ಯರು ಮೊದಲಿಗೆ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದಾರೆಂದು ಭಾವಿಸಿದರಾದರೂ ನಂತರದ ಪರೀಕ್ಷೆಗಳ ಪ್ರಕಾರ ಜೀರ್ಣಾಂಗವ್ಯೂಹದಲ್ಲಿ ರಕ್ತಸ್ರಾವ ಉಂಟಾಗಿದೆ ಎಂದು ತಿಳಿದುಬಂದಿದೆ. ಇದಕ್ಕೆ ಕಾರಣ ಆ್ಯಪಲ್ ವಾಚ್ನ ಆ ಫೀಚರ್ ಅಂತಾನೇ ಹೇಳ್ಬಹುದು. ಇದು ಮಾಹಿತಿ ನೀಡಿರದಿದ್ದರೆ ಈ ಸಮಸ್ಯೆ ಸಾವಿಗೂ ಕಾರಣವಾಗಬಹುದಿತ್ತು ಎಂದು ಹೇಳುತ್ತಾರೆ ವೈದ್ಯರು.
ಇತ್ತೀಚಿನ ಸ್ಮಾರ್ಟ್ವಾಚ್ಗಳಲ್ಲಿ ಹೆಚ್ಚಾಗಿ ಆರೋಗ್ಯಕ್ಕೆ ಸಂಬಂಧಿತ ಸೆನ್ಸಾರ್ಗಳನ್ನು ಆ್ಯಡ್ ಮಾಡಲಾಗುತ್ತಿದೆ. ಆದ್ದರಿಂದ ಬಳಕೆದಾರರಿಗೆ ಅವರ ಆರೋಗ್ಯದಲ್ಲಿ ಏನಾದರು ಸಮಸ್ಯೆಗಳಾದರೂಇದು ತಕ್ಷಣ ನಾಟಿಫಿಕೇಶನ್ ನೀಡುತ್ತದೆ. ಈ ಸೆನ್ಸಾರ್ ಹೊಂದಿರುವ ಸ್ಮಾರ್ಟ್ವಾಚ್ಗಳಲ್ಲಿ ಆ್ಯಪಲ್ ವಾಚ್ಗಳು ಭಾರೀ ಮುಂಚೂಣಿಯಲ್ಲಿದೆ. ಇನ್ನು ಈ ಸ್ಮಾರ್ಟ್ವಾಚ್ಗಳು ಮುಖ್ಯವಾಗಿ ಪಲ್ಸ್ ಮಾನಿಟರ್, ಹೃದಯದ ಬಡಿತದ ಮಾನಿಟರ್ ಮೂಲಕ ಆರೋಗ್ಯದ ಸಮಸ್ಯೆಯನ್ನು ತಿಳಿಯುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ