• Home
  • »
  • News
  • »
  • tech
  • »
  • IPhone 15: ಬಿಡುಗಡೆಗೂ ಮುನ್ನವೇ ಲೀಕ್ ಆಯ್ತು ಐಫೋನ್​ 15 ಸೀರಿಸ್ ಸ್ಮಾರ್ಟ್​​ಫೋನ್​ಗಳ​ ಬೆಲೆ!

IPhone 15: ಬಿಡುಗಡೆಗೂ ಮುನ್ನವೇ ಲೀಕ್ ಆಯ್ತು ಐಫೋನ್​ 15 ಸೀರಿಸ್ ಸ್ಮಾರ್ಟ್​​ಫೋನ್​ಗಳ​ ಬೆಲೆ!

ಐಫೋನ್ 15 ಸೀರಿಸ್​ನ ಸ್ಮಾರ್ಟ್​​ಫೋನ್

ಐಫೋನ್ 15 ಸೀರಿಸ್​ನ ಸ್ಮಾರ್ಟ್​​ಫೋನ್

ಆ್ಯಪಲ್ ಕಂಪೆನಿಯಿಂದ ಮುಂಬರುವ ಸ್ಮಾರ್ಟ್​​​ಫೋನ್​ ಯಾವುದು ಎಂದು ಕೇಳಿದ್ರೆ ಅದು ಐಫೋನ್​ 15 ಸೀರಿಸ್​​ ಮೊಬೈಲ್​ಗಳು. ಈ ಸ್ಮಾರ್ಟ್​ಫೋನ್​ ಮಾರುಕಟ್ಟೆಯಲ್ಲಿ ಬಿಡುಗಡೆಗೆ ಮೊದಲೇ ಭಾರೀ ಸಂಚಲನವನ್ನು ಮೂಡಿಸಿವೆ. ಇದೀಗ ಐಫೋನ್ 15 ಸೀರಿಸ್​ನ ಸ್ಮಾರ್ಟ್​​ಫೋನ್​ಗಳ ಬೆಲೆ ಸೋಶಿಯಲ್​ ಮೀಡಿಯಾದಲ್ಲಿ ಸೋರಿಕೆಯಾಗಿದ್ದು, ಇದರ ಕಂಪ್ಲೀಟ್​ ಡೀಟೇಲ್ಸ್​ ಇಲ್ಲಿದೆ.

ಮುಂದೆ ಓದಿ ...
  • Share this:

    ಜಗತ್ತಿನಲ್ಲೇ ಮೊಬೈಲ್​ ಮಾರುಕಟ್ಟೆಯಲ್ಲಿ (Mobile Market) ದುಬಾರಿ ಬೆಲೆಯನ್ನು  ಹೊಂದಿದ್ದರೂ ಅತೀ ಹೆಚ್ಚು ಬೇಡಿಕೆಯಲ್ಲಿರುವ ಕಂಪೆನಿಯೆಂದರೆ ಅದು ಆ್ಯಪಲ್​. ಇತ್ತೀಚೆಗೆ ಈ ಕಂಪೆನಿ ಮೇಕ್​ ಇಂಡಿಯಾ ಯೋಜನೆಯನ್ನು (Make In India) ಮಾಡುವಲ್ಲಿ ಗಮನ ಹರಿಸುತ್ತಿದೆ. ಆ್ಯಪಲ್​ ಕಂಪೆನಿ ತನ್ನ ಬ್ರಾಂಡ್​ಗಳ ಅಡಿಯಲ್ಲಿ ಸಾಕಷ್ಟು ಟೆಕ್​ ಡಿವೈಸ್​ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದರಲ್ಲಿ ಸ್ಮಾರ್ಟ್​​ಫೋನ್​ಗಳು ಸಹ ಒಂದಾಗಿದೆ. ಮೊಬೈಲ್​ ಮಾರುಕಟ್ಟೆಯಲ್ಲಿ ಹೊಸ ವಿನ್ಯಾಸ ಮತ್ತು ಫೀಚರ್​ಗಳನ್ನು ಒಳಗೊಂಡ ಸ್ಮಾರ್ಟ್​ಫೋನ್​ಗಳನ್ನು ಪರಿಚಯಿಸುವ ಮೂಲಕ ಆ್ಯಪಲ್​ ಕಂಪೆನಿ ಮಾರಾಟದಲ್ಲಿ ಯಶಸ್ಸನ್ನು ಕಂಡಿದೆ ಎಂದು ಹೇಳಬಹುದು. ಇತ್ತೀಚೆಗೆ ಐಫೋನ್​ 15 (IPhone 15 Series) ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿದೆ.


    ಹೌದು, ಆ್ಯಪಲ್ ಕಂಪೆನಿಯಿಂದ ಮುಂಬರುವ ಸ್ಮಾರ್ಟ್​​​ಫೋನ್​ ಯಾವುದು ಎಂದು ಕೇಳಿದ್ರೆ ಅದು ಐಫೋನ್​ 15 ಸೀರಿಸ್​​ ಮೊಬೈಲ್​ಗಳು. ಈ ಸ್ಮಾರ್ಟ್​ಫೋನ್​ ಮಾರುಕಟ್ಟೆಯಲ್ಲಿ ಬಿಡುಗಡೆಗೆ ಮೊದಲೇ ಭಾರೀ ಸಂಚಲನವನ್ನು ಮೂಡಿಸಿವೆ. ಇದೀಗ ಐಫೋನ್ 15 ಸೀರಿಸ್​ನ ಸ್ಮಾರ್ಟ್​​ಫೋನ್​ಗಳ ಬೆಲೆ ಸೋಶಿಯಲ್​ ಮೀಡಿಯಾದಲ್ಲಿ ಸೋರಿಕೆಯಾಗಿದ್ದು, ಇದರ ಕಂಪ್ಲೀಟ್​ ಡೀಟೇಲ್ಸ್​ ಇಲ್ಲಿದೆ.


    ವರದಿಯ ಪ್ರಕಾರ


    ಅಂದಹಾಗೆ ಇದೀಗ ಆ್ಯಪಲ್ ಐಫೋನ್‌ 15 ಸೀರಿಸ್​ನ ಬೆಲೆ ಆನ್‌ಲೈನ್‌ನಲ್ಲಿ ಲೀಕ್‌ ಆಗಿದೆ. ಫೋರ್ಬ್ಸ್‌ನ ವರದಿಯ ಪ್ರಕಾರ, ಐಫೋನ್‌ 15 ಮತ್ತು ಐಫೋನ್‌ 15 ಪ್ರೋ ಮಾಡೆಲ್‌ಗಳ ನಡುವೆ ಬೆಲೆಯಲ್ಲಿ ಭಾರೀ ವ್ಯತ್ಯಾಸ ಇರಬಹುದು ಎಂದೂ ಹೇಳಲಾಗಿದೆ. ಹಾಗೆಯೇ ಆ್ಯಪಲ್ ಈ ವರ್ಷದ ಐಫೋನ್ 15 ಪ್ರೋ ಸೀರಿಸ್​ನ ಬೆಲೆಯನ್ನು ಹೆಚ್ಚಿಸುವ ಸಾಧ್ಯತೆ ಇದ್ದು, ಇದು ಐಫೋನ್ 15 ಪ್ಲಸ್‌ನೊಂದಿಗೆ ಅಂತರವನ್ನು ಇನ್ನಷ್ಟು ವಿಸ್ತರಿಸುತ್ತದೆ' ಎಂದು ತಿಳಿದುಬಂದಿದೆ.




    ಐಫೋನ್​ 15 ಸೀರಿಸ್​ ಸ್ಮಾರ್ಟ್​​ಫೋನ್​ನ ಬೆಲೆಗಳು


    ಹೊಸದಾಗಿ ಆ್ಯಪಲ್ ಕಂಪೆನಿಯಿಂದ ಬಿಡುಗಡೆಯಾಗುತ್ತಿರುವ ಐಫೋನ್ 15 ಫೋನ್‌ $799 ಅಂದರೆ ಭಾರತದಲ್ಲಿ 65,166 ರೂಪಾಯಿ ಬೆಲೆಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಆದರೆ ಐಫೋನ್ 15 ಪ್ಲಸ್‌ $899 ಅಂದರೆ ಭಾರತದಲ್ಲಿ 73,322 ರೂಪಾಯಿ ಬೆಲೆಯಲ್ಲಿ ಬಿಡುಗಡೆ ಆಗಬಹುದು ಎಂದು ವರದಿಯಿಂದ ತಿಳಿದುಬಂದಿದೆ. ಅದೇ ರೀತಿ ಆ್ಯಪಲ್ ಐಫೋನ್ 15 ಪ್ರೋ ಮತ್ತು ಐಫೋನ್ 15 ಅಲ್ಟ್ರಾ ಕ್ರಮವಾಗಿ $ 1,099 ಭಾರತದಲ್ಲಿ ಸುಮಾರು 89,635 ರೂಪಾಯಿ ಮತ್ತು $ 1,199 ಅಂದರೆ ಭಅರತದಲ್ಲಿ ಅಂದಾಜು 97, 794 ರೂಪಾಯಿ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಬಹುದು ಎಂದು ವರದಿಯಾಗಿದೆ.


    ಐಫೋನ್​ 15 ಸೀರಿಸ್​​ನ ಫೀಚರ್ಸ್ ಬಗ್ಗೆ ನಿರೀಕ್ಷೆ


    ಇನ್ನು ಆ್ಯಪಲ್​ ನೂತನ ಐಫೋನ್ 15 ಮತ್ತು ಐಫೋನ್ 15 ಪ್ಲಸ್‌ ಫೋನ್‌ಗಳ ಕ್ಯಾಮೆರಾದ ಸೆನ್ಸಾರ್‌ ಸಾಮರ್ಥ್ಯವನ್ನು ಗುಣಮಟ್ಟದಲ್ಲಿ ಅಳವಡಿಸುವ ನಿರೀಕ್ಷೆಯಿದೆ. ಐಫೋನ್ 15 ಮತ್ತು ಐಫೋನ್ 15 ಪ್ಲಸ್‌ ಫೋನ್‌ಗಳು ಮೂರು ಕ್ಯಾಮೆರಾ ಹೊಂದಿರಬಹುದು ಎಂದು ಅಂದಾಜಿಸಲಾಗಿದೆ.


    ಐಫೋನ್ 15 ಸೀರಿಸ್​ನ ಸ್ಮಾರ್ಟ್​​ಫೋನ್


    ಈ ಎರಡು ಸ್ಮಾರ್ಟ್​ಫೋನ್​ಗಳ ಮುಖ್ಯ ಕ್ಯಾಮೆರಾವು 48 ಮೆಗಾ ಪಿಕ್ಸಲ್‌ ವೈಡ್ ಲೆನ್ಸ್‌ ಸೆನ್ಸಾರ್‌ ಅನ್ನು ಹೊಂದಿರಬಹುದು. ಇನ್ನು ಐಫೋನ್ 15 ಮಾದರಿಗಳು ಆಪ್ಟಿಕಲ್ ಜೂಮ್ ಅಥವಾ ಲಿಡಾರ್ ಸ್ಕ್ಯಾನರ್‌ಗಾಗಿ ಟೆಲಿಫೋಟೋ ಲೆನ್ಸ್‌ನೊಂದಿಗೆ ಬರುವುದಿಲ್ಲ ಎಂದು ವರದಿಯಾಗಿದೆ.


    ಐಫೋನ್​ 15 ಸೀರಿಸ್​ನ ಸ್ಮಾರ್ಟ್​​​ಫೋನ್​ಗಳ ಕುರಿತು ಈಗಾಗಲೇ ಹಲವು ಫೀಚರ್ಸ್​ಗಳು ಬಿಡುಗಡೆಯಾಗಿವೆ. ಮುಂಬರುವ ಆ್ಯಪಲ್​ ಕಂಪೆನಿಯ ಫೋನ್​ಗಳು ಎರಡು ಪ್ರೋ ವರ್ಷನ್​ಗಳಲ್ಲಿ ಬರಬಹುದು ಎಂದು ಹೇಳಲಾಗಿದೆ. ಇನ್ನು ಆ್ಯಪಲ್​ ವಾಚ್​ ತರಹದ ವಿನ್ಯಾಸದಂತೆ ಈ ಮೊಬೈಲ್​ಗಳ ಡಿಸ್​ಪ್ಲೇ ಸಹ ಕರ್ವ್​ ಮಾದರಿಯ ಅಂಚುಗಳನ್ನು ಹೊಂದಿರಬಹದು ಎಂದು ಹೇಳುತ್ತದೆ. ಇನ್ನು ಈ ಸೀರಿಸ್​ನ ಐಫೋನ್​ಗಳ ಡಿಸ್​ಪ್ಲೇ ಕಳೆದ ವರ್ಷದಂತೆ ಫೀಚರ್ಸ್​ಗಳನ್ನು ಒಳಗೊಂಡಿರಬಹುದು ಎನ್ನಲಾಗಿದೆ.


    ಇದನ್ನೂ ಓದಿ: ಕರ್ನಾಟಕದ 5 ಜಿಲ್ಲೆಗಳಲ್ಲಿ ಜಿಯೋ 5ಜಿ ಸೇವೆ ಆರಂಭ! ಎಲ್ಲೆಲ್ಲಿ ಲಭ್ಯ?


    ಪ್ರೊಸೆಸರ್​ ಸಾಮರ್ಥ್ಯ


    ಆ್ಯಪಲ್​ ಐಫೋನ್‌ 15 ಪ್ರೋ ಮಾಡೆಲ್‌ ಫೋನ್‌ ಆ್ಯಪಲ್ ಎ17 ಚಿಪ್‌ಸೆಟ್‌ ಒಳಗೊಂಡಿರಲಿದ್ದು, 8ಜಿಬಿ ರ್‍ಯಾಮ್ ಆಯ್ಕೆಯನ್ನು ಹೊಂದಿರಲಿದೆ. ಹಾಗೆಯೇ ಐಫೋನ್‌ 15 ಹಾಗೂ ಐಫೋನ್‌ 15 ಪ್ಲಸ್‌ ಮಾಡೆಲ್‌ಗಳು ಎ16 ಬಯೋನಿಕ್‌ ಚಿಪ್‌ಸೆಟ್‌ ಇರಲಿದೆ ಎಂದು ಸೋರಿಕೆಯಾದ ಮಾಹಿತಿಯಿಂದ ತಿಳಿದುಬಂದಿದೆ.

    Published by:Prajwal B
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು