OnePlus And Hasselblad: ಮೊಬೈಲ್​ ಫೋಟೋಗ್ರಾಫಿಗೆ ಹೊಸ ಟಚ್ ನೀಡಲಿದೆ ಒನ್​ಪ್ಲಸ್-ಹ್ಯಾಸೆಲ್​ಬ್ಲಾಡ್

ಈ ಹಿಂದೆ ಸ್ಮಾರ್ಟ್​ಫೋನ್​ನಲ್ಲಿ ಹೊಸ ಕಾರ್ಯಕ್ಷಮತೆ ಮತ್ತು ಓಎಸ್ ಅನುಭವ ಪರಿಚಯಿಸಿದ್ದ ಒನ್​ಪ್ಲಸ್ ಇದೀಗ ಮೊಬೈಲ್ ಕ್ಯಾಮೆರಾಗಳಿಗಾಗಿಯೇ ಹೆಚ್ಚಿನ ಒತ್ತು ನೀಡಲಿದೆ.

Hasselblad,oneplus

Hasselblad,oneplus

  • Share this:
    ಸ್ಮಾರ್ಟ್​ಫೋನ್ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ಹುಟ್ಟುಹಾಕಿರುವ ಒನ್‌ಪ್ಲಸ್ ಮೊಬೈಲ್ ಕಂಪೆನಿಯು, ಆಕರ್ಷಕ ಬೆಲೆ ಹಾಗೂ ಅತ್ಯುತ್ತಮ ಫೀಚರ್ಸ್​ಗಳನ್ನು ಪರಿಚಯಿಸುವ ಮೂಲಕ ಈಗಾಗಲೇ ಮನೆಮಾತಾಗಿದೆ. ಇದೀಗ ಕಂಪೆನಿಯು ಹೊಸ ಕ್ಯಾಮೆರಾ ಫೀಚರ್​ನ್ನು ಪರಿಚಯಿಸಲು ಮುಂದಾಗಿದೆ. ಅದು ಕೂಡ ಹ್ಯಾಸೆಲ್‌ಬ್ಲಾಡ್ ಕಂಪೆನಿಯ ಸಹಭಾಗಿತ್ವದೊಂದಿಗೆ ಎಂಬುದು ವಿಶೇಷ. ಹೌದು ,ಕ್ಯಾಮೆರಾ ಕ್ಷೇತ್ರದ ಪ್ರಸಿದ್ಧ ಕಂಪೆನಿ ಹ್ಯಾಸೆಲ್​ಬ್ಲಾಡ್ ಜೊತೆಗೂಡಿ ಮುಂಬರುವ ದಿನಗಳಲ್ಲಿ ಒನ್​ಪ್ಲಸ್ ವಿಶೇಷ ಕ್ಯಾಮೆರಾ ಫೋನ್​ನ್ನು ಪರಿಚಯಿಸಲಿದೆ. ಮೂನ್​ಶಾಟ್ ಸಂದೇಶದೊಂದಿಗೆ ಹೊರಬರಲಿರುವ ಈ ಸ್ಮಾರ್ಟ್​ಫೋನ್​ ಮೂಲಕ ಅತೀ ದೂರದವರೆಗೆ ಫೋಕಸ್ ಮಾಡಬಹುದು ಎಂಬುದು ವಿಶೇಷ.

    ಹ್ಯಾಸೆಲ್‌ಬ್ಲಾಡ್‌ನೊಂದಿಗೆ ಒನ್‌ಪ್ಲಸ್ ಹೊಸ ಮೂರು ವರ್ಷಗಳ ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿದ್ದು, ಒನ್‌ಪ್ಲಸ್‌ನ ಮುಂದಿನ ಜನರೇಶನ್​ ಸ್ಮಾರ್ಟ್‌ಫೋನ್‌ಗಳಲ್ಲಿ ಹೊಸ ಕ್ಯಾಮೆರಾ ಅನುಭವ ಸಿಗಲಿದೆ. ಅಲ್ಲದೆ ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಒನ್‌ಪ್ಲಸ್ 9 ಸಿರೀಸ್​ನಲ್ಲೂ ಹ್ಯಾಸೆಲ್​ಬ್ಲಾಡ್​ ಕ್ಯಾಮೆರಾ ಸೌಲಭ್ಯವಿರಲಿದೆ.



    ಛಾಯಾಚಿತ್ರದ ಕ್ಷೇತ್ರದ ಅತ್ಯುನ್ನತ ಕಂಪೆನಿ ಹ್ಯಾಸೆಲ್​ಬ್ಲಾಡ್​:
    ಹ್ಯಾಸೆಲ್​ಬ್ಲಾಡ್ ಒಂದು ಇಮೇಜಿಂಗ್ ಮತ್ತು ಕ್ಯಾಮೆರಾ ಉತ್ಪಾದನಾ ಕಂಪನಿಯಾಗಿದೆ. ಕಳೆದ 8 ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಈ ಕಂಪೆನಿ ಪ್ರಸ್ತುತ ತನ್ನ 80 ನೇ ವರ್ಷವನ್ನು ಆಚರಿಸುತ್ತಿದೆ. ಈ ಎಂಟು ದಶಕಗಳಲ್ಲಿ, ನಮ್ಮ ಸಮಾಜ ಮತ್ತು ಸಂಸ್ಕೃತಿಯನ್ನು ವ್ಯಾಖ್ಯಾನಿಸಿರುವ ಅತ್ಯುತ್ತಮ ಚಿತ್ರಗಳನ್ನು ಮತ್ತು ಕ್ಷಣಗಳನ್ನು ಸೆರೆಹಿಡಿಯುವಲ್ಲಿ ಮುಂಚೂಣಿಯಲ್ಲಿರುವ ಲೆನ್ಸ್​ಗಳನ್ನು ಮತ್ತು ಕ್ಯಾಮೆರಾಗಳನ್ನು ಪೂರೈಸಿದ ಹೆಗ್ಗಳಿಕೆ ಈ ಕಂಪೆನಿಗೆ ಸಲ್ಲುತ್ತದೆ.

    ಛಾಯಾಗ್ರಹಣಕ್ಕೆ ಬೇಕಾದ ಎಲ್ಲಾ ಅಂಶಗಳು ಮತ್ತು ಅನ್ವೇಷಿಸುವುದರ ಜೊತೆಗೆ ಹೊಸ ಇಮೇಜಿಂಗ್ ಗುಣಮಟ್ಟವನ್ನು ಹ್ಯಾಸೆಲ್‌ಬ್ಲಾಡ್ ಪರಿಚಯಿಸುತ್ತಾ ಬಂದಿದೆ. ಈ ಕಂಪೆನಿ ಬಿಡುಗಡೆ ಮಾಡಿದ್ದ ಎಕ್ಸ್ 1 ಡಿ ಕ್ಯಾಮೆರಾವನ್ನು 2018 ರಲ್ಲಿ ವಿಶ್ವದ ಅತ್ಯುತ್ತಮ ಕ್ಯಾಮೆರಾ ಎಂದು ಪರಿಗಣಿಸಲಾಗಿತ್ತು. ಅಲ್ಲದೆ ಪ್ರಪಂಚದಾದ್ಯಂತದ ಅನೇಕ ಕ್ರಿಯೇಟರ್ಸ್ ಮತ್ತು ಕಲಾವಿದರ ನೆಚ್ಚಿನ ಬ್ರ್ಯಾಂಡ್ ಕೂಡ ಇದಾಗಿದೆ.

    ಕಳೆದ ಶತಮಾನದ ಮಾನವನ ಪ್ರಮುಖ ಸಾಧನೆಗಳಲ್ಲಿ ಒಂದು ಪರಿಗಣಿಸಲಾಗಿರುವ ಚಂದ್ರನ ಮೇಲಿನ ಮೊದಲ ಹೆಜ್ಜೆಗಳ ಚಿತ್ರಗಳನ್ನು ತೆಗೆದಿರುವುದು ಕೂಡ ಇದೇ ಕಂಪೆನಿಯ ಕ್ಯಾಮೆರಾಗಳ ಮೂಲಕ ಎಂಬುದು ವಿಶೇಷ. ನಾಸಾ ಸಂಶೋಧಕರೇ ಈ ಬ್ರ್ಯಾಂಡ್ ಅನ್ನು ನಂಬಿರುವುದು ಹ್ಯಾಸೆಲ್​ಬ್ಲಾಡ್​ ಕಂಪೆನಿಗೆ ಸಿಕ್ಕ ಕಿರೀಟ ಎಂದೇ ಹೇಳಬಹುದು. ಅಪೊಲೊ 11 ಮೂನ್ ಮಿಷನ್‌ನ ಭಾಗವಾಗಿ ಚಂದ್ರನ ಮೇಲೆ ಮಾನವನ ಮೊದಲ ಹೆಜ್ಜೆಗಳನ್ನು ಸೆರೆಹಿಡಿದ ಈ ಕ್ಯಾಮೆರಾಗಳ ಅನುಭವವನ್ನು ಇನ್ಮುಂದೆ ಮೂನ್​ಶಾಟ್ ಮೂಲಕ ಒನ್​ಪ್ಲಸ್ ಮೊಬೈಲ್​ ಗ್ರಾಹಕರು ಕೂಡ ಅಸ್ವಾದಿಸಬಹುದು.

    ಹ್ಯಾಸೆಲ್‌ಬ್ಲಾಡ್ ಎಕ್ಸ್ ಒನ್‌ಪ್ಲಸ್ ಒಂದು ಡಿಜಿಟಲ್ ಇಮೇಜಿಂಗ್ ಕ್ರಾಂತಿ:
    ಛಾಯಾಗ್ರಹಣದ ಮಾನದಂಡಗಳನ್ನು ಮರುಹೊಂದಿಸುವ ಮಹತ್ವಾಕಾಂಕ್ಷೆಯ ಗುರಿಯೊಂದಿಗೆ ಒನ್‌ಪ್ಲಸ್ ಮತ್ತು ಹ್ಯಾಸೆಲ್‌ಬ್ಲಾಡ್ ಮೂರು ವರ್ಷಗಳ ಕಾರ್ಯತಂತ್ರದ ಸಹಭಾಗಿತ್ವವನ್ನು ಹೊಂದಿದ್ದಾರೆ. ಈ ಸಹಭಾಗಿತ್ವದ ಮೂಲಕ ಇಮೇಜಿಂಗ್ ಅನುಭವವನ್ನು ಇನ್ನಷ್ಟು ಸುಧಾರಿಸಿ, ಸಾಮಾನ್ಯ ಬಳಕೆದಾರರು ಮತ್ತು ವೃತ್ತಿಪರರು ತಮ್ಮ ಮನಸ್ಸಿನಲ್ಲಿರುವ ಚಿತ್ರಗಳನ್ನು ಸುಲಭವಾಗಿ ಸೆರೆಹಿಡಿಯಲು ಸಹಾಯ ಮಾಡುವ ಉದ್ದೇಶವನ್ನು ಒನ್​ಪ್ಲಸ್ ಕಂಪೆನಿ ಹೊಂದಿದೆ.

    ಸರಳ ಉದ್ದೇಶ: ಸಾಂಪ್ರದಾಯಿಕ ಛಾಯಾಗ್ರಹಣದ ಜೊತೆಗೆ ಅತ್ಯುನ್ನತ ಇಮೇಜಿಂಗ್ ಗುಣಮಟ್ಟದೊಂದಿಗೆ ಕಂಪ್ಯೂಟೇಶನಲ್ ಫೋಟೋಗ್ರಫಿಗೆ ಕ್ಯಾಮೆರಾ ವ್ಯವಸ್ಥೆಯನ್ನು ರಚಿಸುವುದು ಒನ್​ ಪ್ಲಸ್ ಹಾಗೂ ಹ್ಯಾಸೆಲ್​ವುಡ್ ಒಪ್ಪಂದದ ಮೂಲ ಉದ್ದೇಶವಾಗಿದೆ.

    ಕುತೂಹಲಕ್ಕೆ ಕಿಚ್ಚು ಹಚ್ಚಿದ ಒನ್​ಪ್ಲಸ್:
    ಒನ್‌ಪ್ಲಸ್ ಕಂಪೆನಿಯು ಈ ವರ್ಷ ತನ್ನ ಗಮನವನ್ನು ಕ್ಯಾಮೆರಾದತ್ತ ಇರಿಸಲು ನಿರ್ಧರಿಸಿದೆ. ಕಂಪೆನಿಯು ಅತ್ಯುತ್ತಮ ಆಯ್ಕೆ ನೀಡಲು ಈ ಹಿಂದೆ ಏನೆಲ್ಲಾ ಮಾಡಿತ್ತು ಎಂಬುದು ಒನ್​ಪ್ಲಸ್ ಟ್ರ್ಯಾಕ್ ರೆಕಾರ್ಡ್‌ನಿಂದ ನಮಗೆ ತಿಳಿದಿದೆ. ಈ ಹಿಂದೆ ಸ್ಮಾರ್ಟ್​ಫೋನ್​ನಲ್ಲಿ ಹೊಸ ಕಾರ್ಯಕ್ಷಮತೆ ಮತ್ತು ಓಎಸ್ ಅನುಭವ ಪರಿಚಯಿಸಿದ್ದ ಒನ್​ಪ್ಲಸ್ ಇದೀಗ ಮೊಬೈಲ್ ಕ್ಯಾಮೆರಾಗಳಿಗಾಗಿಯೇ ಹೆಚ್ಚಿನ ಒತ್ತು ನೀಡಲಿದೆ. ಇದರಿಂದ ಮುಂದಿನ ದಿನಗಳಲ್ಲಿ ಹ್ಯಾಸೆಲ್‌ಬ್ಲಾಡ್‌ನೊಂದಿಗಿನ ಸಹಭಾಗಿತ್ವದ ಮೂಲಕ ಏನು ನೀಡಲಿದೆ ಎಂಬುದರ ಕುತೂಹಲ ಇದೀಗ ಸ್ಮಾರ್ಟ್​ಫೋನ್ ಪ್ರಿಯರಲ್ಲಿ ಮನೆಮಾಡಿದೆ.



    ಒನ್‌ಪ್ಲಸ್ ಮತ್ತು ಹ್ಯಾಸೆಲ್‌ಬ್ಲಾಡ್ ಜಂಟಿಯಾಗಿ ಅಭಿವೃದ್ಧಿಪಡಿಸಿದ ಚಿತ್ರಗಳ ಬಣ್ಣಗಳ ಸೊಲುಷನ್ - “ ನ್ಯಾಚುರಲ್ ಕಲರ್​ ಕ್ಯಾಲಿಬ್ರೆಷನ್ ವಿತ್ ಹ್ಯಾಸೆಲ್​ಬ್ಲಾಡ್” - ಒನ್‌ಪ್ಲಸ್ ಕ್ಯಾಮೆರಾಗಳಲ್ಲಿ ನಿಖರ ಮತ್ತು ನೈಸರ್ಗಿಕವಾದ ಬಣ್ಣಗಳನ್ನು ತೋರಿಸಲಿದೆ. ಇದು ಭವಿಷ್ಯದ ಸ್ಮಾರ್ಟ್‌ಫೋನ್ ಕ್ಯಾಮೆರಾಗಳ ಬಣ್ಣ ಮಾಪನಾಂಕವಾಗಿಯೂ ಕಾರ್ಯನಿರ್ವಹಿಸಲಿದೆ. ಹೊಸ ಒನ್‌ಪ್ಲಸ್ ಸಿರೀಸ್​ನ ಸ್ಮಾರ್ಟ್‌ಫೋನ್‌ಗಳು 2021 ಮಾರ್ಚ್ 23 ರಂದು ಬಿಡುಗಡೆಯಾಗಲಿದ್ದು, ರಾತ್ರಿ 8.30 ರಿಂದ ನೀವು ಈ ಲೈವ್​ ಕಾರ್ಯಕ್ರಮವನ್ನು ಈ ಲಿಂಕ್ ಮೂಲಕ ವೀಕ್ಷಿಸಬಹುದು.
    Published by:zahir
    First published: