Twinkling Stars: ಕಡಿಮೆ ಆಗುತ್ತಿವೆಯಂತೆ ಆಕಾಶದಲ್ಲಿನ ನಕ್ಷತ್ರಗಳ ಸಂಖ್ಯೆ! ಏನ್ ಹೇಳ್ತಾರೆ ನೋಡಿ ಸಂಶೋಧಕರು?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಹೆಚ್ಚುತ್ತಿರುವ ಬೆಳಕಿನ ಮಾಲಿನ್ಯದಿಂದಾಗಿ ರಾತ್ರಿ ಆಕಾಶವು ಮಿನುಗುವ ನಕ್ಷತ್ರಗಳು ಈಗ ಮುಂಚೆ ತರಹ ಅಷ್ಟೊಂದು ಮಿನುಗುತ್ತಿಲ್ಲವಂತೆ, ಎಂದರೆ ನಕ್ಷತ್ರಗಳು ಮುಸುಕಾಗುತ್ತಿವೆ ಎಂದು ಹೊಸ ಅಧ್ಯಯನವು ಕಂಡು ಹಿಡಿದಿದೆ.

 • Share this:

  ಬಾಲ್ಯದಲ್ಲಿ ಊಟ ಮಾಡದೆ ಹಟ ಹಿಡಿದಾಗ ಅಮ್ಮ ನಮ್ಮನ್ನು ತನ್ನ ಕಂಕುಳಲ್ಲಿ ಎತ್ತಿಕೊಂಡು ಒಂದು ಕೈಯಲ್ಲಿ ಅನ್ನ ಮತ್ತು ತುಪ್ಪ ಕಲಿಸಿದ ಬಟ್ಟಲನ್ನು ಹಿಡಿದು, ಅದೇ ಕೈಯ ಬೆರಳುಗಳನ್ನು ಕತ್ತಲೆ ತುಂಬಿದ ಆಕಾಶದತ್ತ (Sky) ಫಳ-ಫಳ ಅಂತ ಹೊಳೆಯುವ ನಕ್ಷತ್ರಗಳನ್ನು ತೋರಿಸುತ್ತಾ ಊಟ ಮಾಡಿಸಿದ್ದು ಯಾರಿಗೆ ತಾನೇ ಮರೆಯುವುದಕ್ಕೆ ಸಾಧ್ಯ ಹೇಳಿ. ಆ ಮಿನುಗುವ ನಕ್ಷತ್ರಗಳು- (Twinkling Stars) ನಮ್ಮನ್ನು ಆಗ ಮಂತ್ರಮುಗ್ದರನ್ನಾಗಿಸಿರುವುದಂತೂ ನಿಜ ಅಂತ ಹೇಳಬಹುದು. ಈಗಲೂ ಸಹ ಕತ್ತಲೆ ತುಂಬಿದ ಕಪ್ಪು ಆಕಾಶದಲ್ಲಿ ಮಿನುಗುವ ನಕ್ಷತ್ರ ನೋಡೋದು ಅಂದ್ರೆ ಅನೇಕರಿಗೆ ಖುಷಿ ಕೊಡುವ ವಿಚಾರ ಅಂತ ಹೇಳಬಹುದು. ಎಷ್ಟೋ ಜನ ರಾತ್ರಿ ಹೊತ್ತು (Night Time) ಆಕಾಶದಲ್ಲಿ ನಕ್ಷತ್ರಗಳನ್ನ ನೋಡ್ತಾ ನೋಡ್ತಾ ಮನೆಯ ಮೇಲ್ಛಾವ ಣಿ ಮೇಲೆಯೇ ಮಲಗುತ್ತಾರೆ. ಚಿಕ್ಕಮಕ್ಕಳಿಗಂತೂ ಆ ನಕ್ಷತ್ರಗಳ ಬಗ್ಗೆ ಸಾವಿರಾರು ಕುತೂಹಲ ಹುಟ್ಟಿಸುವ ಪ್ರಶ್ನೆಗಳು ತಲೆಯಲ್ಲಿ ಗಿರಕಿ ಹೊಡೆಯುತ್ತಿರುತ್ತವೆ ಅಂತ ಹೇಳಬಹುದು.


  ಆದರೆ ಈಗೇಕೆ ಈ ನಕ್ಷತ್ರಗಳ ಬಗ್ಗೆ ಮಾತಾಡ್ತಾ ಇದ್ದೀವಿ ಅಂತ ನಿಮಗೆ ಅನ್ನಿಸುತ್ತಿರಬಹುದು ಅಲ್ಲವೇ? ಇಲ್ಲೊಂದು ಆಶ್ಚರ್ಯಪಡಿಸುವ ಸುದ್ದಿಯಿದೆ ನೋಡಿ.


  ಬೆಳಕಿನ ಮಾಲಿನ್ಯದಿಂದ ಮುಸುಕಾಗುತ್ತಿವೆಯಂತೆ ನಕ್ಷತ್ರಗಳು


  ಹೆಚ್ಚುತ್ತಿರುವ ಬೆಳಕಿನ ಮಾಲಿನ್ಯದಿಂದಾಗಿ ರಾತ್ರಿ ಆಕಾಶವು ಮಿನುಗುವ ನಕ್ಷತ್ರಗಳು ಈಗ ಮುಂಚೆ ತರಹ ಅಷ್ಟೊಂದು ಮಿನುಗುತ್ತಿಲ್ಲವಂತೆ, ಎಂದರೆ ನಕ್ಷತ್ರಗಳು ಮುಸುಕಾಗುತ್ತಿವೆ ಎಂದು ಹೊಸ ಅಧ್ಯಯನವು ಕಂಡು ಹಿಡಿದಿದೆ.
  50,000 ಕ್ಕೂ ಹೆಚ್ಚು ಹವ್ಯಾಸಿ ಸ್ಟಾರ್‌ಗೆಜರ್ ಗಳಿಂದ ಎಂದರೆ ಖಗೋಳಶಾಸ್ತ್ರಜ್ಞರಿಂದ ಸಂಗ್ರಹಿಸಿದ ಡೇಟಾವನ್ನು ವಿಶ್ಲೇಷಿಸಿದಾಗ, ವಿದ್ಯುತ್ ದೀಪಗಳ ನಿರಂತರ ರಾತ್ರಿಯ ಪ್ರಕಾಶದಿಂದ ಉಂಟಾಗುತ್ತಿರುವ ಬೆಳಕಿನ ಮಾಲಿನ್ಯವು ಇದಕ್ಕೆ ಮುಖ್ಯವಾದ ಕಾರಣ ಅಂತ ಸಂಶೋಧಕರು ಕಂಡುಕೊಂಡಿದ್ದಾರೆ.


  ಕಡಿಮೆ ಆಗುತ್ತಿವೆಯೇ ಆಕಾಶದಲ್ಲಿನ ನಕ್ಷತ್ರಗಳ ಸಂಖ್ಯೆ?


  2011 ರಿಂದ 2022 ರವರೆಗೆ ವೀಕ್ಷಣಾ ಸ್ಥಳಗಳಲ್ಲಿ ವರದಿಯಾದ ಗೋಚರ ನಕ್ಷತ್ರಗಳ ಸಂಖ್ಯೆಯು ಒಂದು ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ, ಇದು ರಾತ್ರಿ ಆಕಾಶದ ಹೊಳಪಿನಲ್ಲಿ ವಾರ್ಷಿಕವಾಗಿ 7 ರಿಂದ 10 ಪ್ರತಿಶತದಷ್ಟು ಹೆಚ್ಚಳವನ್ನು ಸೂಚಿಸುತ್ತದೆ. ಇದು ಈ ಹಿಂದೆ ಉಪಗ್ರಹ ದತ್ತಾಂಶವನ್ನು ಬಳಸಿಕೊಂಡು ಅಳೆಯುವುದಕ್ಕಿಂತ ಹೆಚ್ಚಾಗಿದೆ ಅಂತ ಹೇಳಬಹುದು.


  ಸಾಂಕೇತಿಕ ಚಿತ್ರ


  ಸೈನ್ಸ್ ಎಂಬ ನಿಯತಕಾಲಿಕದಲ್ಲಿ ಪ್ರಕಟವಾದ ಸಂಶೋಧನೆಗಳ ಪ್ರಕಾರ, ಕೃತಕ ಬೆಳಕಿನ ಪರಿಣಾಮವಾಗಿ ಹಿನ್ನೆಲೆ ಆಕಾಶದಲ್ಲಿ ವಾರ್ಷಿಕ ಶೇಕಡಾ 10 ರಷ್ಟು ಹೆಚ್ಚಳದಿಂದ ರಾತ್ರಿ ಆಕಾಶದಲ್ಲಿನ ಮಂದ ನಕ್ಷತ್ರಗಳು ಮರೆಮಾಡಲ್ಪಡುತ್ತಿವೆ.


  ಈ ನಕ್ಷತ್ರಗಳ ಬಗ್ಗೆ ಏನ್ ಹೇಳ್ತಾರೆ ಭೌತಶಾಸ್ತ್ರಜ್ಞ ನೋಡಿ..


  "ನಾವು ವರ್ಷದಿಂದ ವರ್ಷಕ್ಕೆ ನಕ್ಷತ್ರಗಳನ್ನು ನೋಡುವ ಸಾಧ್ಯತೆಯನ್ನು ಕಳೆದುಕೊಳ್ಳುತ್ತಿದ್ದೇವೆ. ನೀವು ಇನ್ನೂ ಮಂದ ನಕ್ಷತ್ರಗಳನ್ನು ನೋಡಬಹುದಾದರೆ, ನೀವು ತುಂಬಾ ಕತ್ತಲೆಯಿರುವ ಸ್ಥಳದಲ್ಲಿ ನಿಂತುಕೊಂಡು ನೋಡಬಹುದು. ಆದರೆ ನೀವು ಪ್ರಕಾಶಮಾನವಾದ ನಕ್ಷತ್ರಗಳನ್ನು ನೋಡಿದರೆ, ನೀವು ತುಂಬಾನೇ ಕಡಿಮೆ ಬೆಳಕಿನ ಮಾಲಿನ್ಯ ಇರುವ ಸ್ಥಳದಲ್ಲಿ ನಿಂತಿರುವಿರಿ ಎಂದರ್ಥ" ಎಂದು ಸ್ಯಾಂಟಿಯಾಗೊ ಡಿ ಕಾಂಪೋಸ್ಟೆಲಾ ವಿಶ್ವವಿದ್ಯಾಲಯದ ಭೌತಶಾಸ್ತ್ರಜ್ಞ ಫ್ಯಾಬಿಯೊ ಫಾಲ್ಚಿ ಮಾಧ್ಯಮ ಸಂಸ್ಥೆಗೆ ತಿಳಿಸಿದರು.


  ಉಪಗ್ರಹ ವೀಕ್ಷಣೆಗಳನ್ನು ಆಧರಿಸಿದ 2017 ರ ಅಧ್ಯಯನವು ರಾತ್ರಿಯಲ್ಲಿ ಕೃತಕವಾಗಿ ಬೆಳಗಿದ ಭೂಮಿಯ ಹೊರಾಂಗಣ ಮೇಲ್ಮೈಯು ಪ್ರಕಾಶ ಮತ್ತು ವಿಸ್ತೀರ್ಣದಲ್ಲಿ ವಾರ್ಷಿಕವಾಗಿ ಸುಮಾರು 2 ಪ್ರತಿಶತದಷ್ಟು ಬೆಳೆಯುತ್ತಿದೆ ಎಂದು ಕಂಡುಹಿಡಿದಿದೆ. ಬೆಳಕಿನ ಮಾಲಿನ್ಯವು ಜನರು ಮತ್ತು ಪ್ರಾಣಿಗಳ ಮೇಲೆ ಅದರ ಪರಿಸರ ಪರಿಣಾಮಗಳ ಬಗ್ಗೆ ಕಳವಳವನ್ನು ಹೆಚ್ಚಿಸಿದೆ. ಉದಾಹರಣೆಗೆ, ಬೆಳಕಿನ ಮಾಲಿನ್ಯವು ಮಿಂಚು ಹುಳುಗಳಿಗೆ ಹೇಗೆ ಅಪಾಯಕಾರಿಯಾಗಿದೆ ಎಂಬುದನ್ನು ಸಂಶೋಧನೆಯು ತೋರಿಸಿದೆ.


  ಇದನ್ನೂ ಓದಿ: Google ವಿರುದ್ಧ ಮತ್ತೊಂದು ಮೊಕದ್ದಮೆ ದಾಖಲು- ಅಷ್ಟಕ್ಕೂ ಟೆಕ್​ ದೈತ್ಯ ಮಾಡಿದ್ದೇನು?


  “10 ಪ್ರತಿಶತದಷ್ಟು ವಾರ್ಷಿಕ ಬದಲಾವಣೆಯು ನಾನು ನಿರೀಕ್ಷಿಸಿದ್ದಕ್ಕಿಂತ ತುಂಬಾ ಹೆಚ್ಚಾಗಿದೆ ಮತ್ತು ಇದನ್ನು ನೀವು ನಿಮ್ಮ ಜೀವಿತಾವಧಿಯಲ್ಲಿ ಸ್ಪಷ್ಟವಾಗಿ ಗಮನಿಸುತ್ತೀರಿ" ಎಂದು ಪಾಟ್ಸ್ ಡ್ಯಾಮ್ ನ ಜರ್ಮನ್ ರಿಸರ್ಚ್ ಸೆಂಟರ್ ಫಾರ್ ಜಿಯೋಸೈನ್ಸ್ ನ ಅಧ್ಯಯನದ ಸಹ-ಲೇಖಕ ಮತ್ತು ಭೌತಶಾಸ್ತ್ರಜ್ಞ ಕ್ರಿಸ್ಟೋಫರ್ ಕೈಬಾ ಹೇಳಿದರು. ಕೈಬಾ ಅವರು ಉದಾಹರಣೆ ನೀಡುತ್ತಾ ಒಂದು ಮಗು ಹುಟ್ಟಿದಾಗ ರಾತ್ರಿಯಲ್ಲಿ 250 ನಕ್ಷತ್ರಗಳಿದ್ದರೆ, ಆ ಮಗುವಿಗೆ 18 ವರ್ಷ ತುಂಬುವ ಹೊತ್ತಿಗೆ, ಕೇವಲ 100 ನಕ್ಷತ್ರಗಳು ಮಾತ್ರ ಗೋಚರಿಸುತ್ತವೆ.

  Published by:Prajwal B
  First published: