Nikon D780: ಮಾರುಕಟ್ಟೆಗೆ ಬರಲಿರುವ ನಿಕಾನ್ ಡಿ780 ಬೆಲೆ, ವಿಶೇಷತೆಗಳೇನು ಗೊತ್ತಾ?

2020ರ ಜನವರಿ ತಿಂಗಳಾಂತ್ಯಕ್ಕೆ ಹೊಸ ನಿಕಾನ್ ಡಿ780 ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಫೆಬ್ರವರಿ ಆರಂಭದಲ್ಲಿ ದೇಶಾದ್ಯಂತ ಗ್ರಾಹಕರು ಈ ಹೊಸ ಕ್ಯಾಮೆರಾವನ್ನು ಖರೀದಿಸಬಹುದಾಗಿದೆ. ಐಎಸ್​ಒ ಮಟ್ಟ 100-51,200 ಇದೆ.

Rajesh Duggumane | news18-kannada
Updated:January 16, 2020, 12:20 PM IST
Nikon D780: ಮಾರುಕಟ್ಟೆಗೆ ಬರಲಿರುವ ನಿಕಾನ್ ಡಿ780 ಬೆಲೆ, ವಿಶೇಷತೆಗಳೇನು ಗೊತ್ತಾ?
ನಿಕಾನ್​ ಡಿ780
  • Share this:
ಕ್ಯಾಮೆರಾ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಿಕಾನ್ ಸಂಸ್ಥೆ ಇದೀಗ ಎಫ್‍ಎಕ್ಸ್ ಫಾರ್ಮೆಟ್‍ನ ಡಿ780 ಕ್ಯಾಮೆರಾವನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಅತಿ ವೇಗದಲ್ಲಿ ಫೋಟೋಗಳನ್ನು ಕ್ಲಿಕ್ಕಿಸಲು ಹಾಗೂ ಅತ್ಯುತ್ತಮ ಗುಣಮಟ್ಟದ ಫೋಟೋಗಳನ್ನು ಸೆರೆಹಿಡಿಯಲು ಈ ಕ್ಯಾಮೆರಾ ಸಹಕಾರಿಯಾಗಲಿದೆ.

ನಿಕಾನ್​ ಪರಿಚಯಿಸಿದ ಕ್ಯಾಮೆರಾಗಳ ಪೈಕಿ ಅತಿ ವೇಗವಾಗಿ ಕೆಲಸ ನಿರ್ವಹಿಸುವ ಸಾಲಿಗೆ ಡಿ780 ಕ್ಯಾಮೆರಾ ಕೂಡ ಸೇರುತ್ತದೆ. ಇನ್ನು, ಕಡಿಮೆ ಬೆಳಕಿದ್ದಾಗ ಛಾಯಾಗ್ರಾಹಕ ಫೋಕಸ್​ ಮಾಡಲು ಹರಸಾಹಸ ಪಡಬೇಕು. ಆದರೆ, ಡಿ780ಯಲ್ಲಿ ಈ ಸಮಸ್ಯೆ ಎದುರಾಗುವುದೇ ಇಲ್ಲ. ಇದರಲ್ಲಿ ಇಂಟರ್​ ಚೇಂಜೇಬಲ್ ಎಫ್ ಮೌಂಟ್ ಲೆನ್ಸ್ ಇದ್ದು, ಬ್ಯಾಟರಿ ಲೈಫ್ ಹೆಚ್ಚಿದೆ.

ಹೊಸ ನಿಕಾನ್ ಡಿ780 2020ರ ಜನವರಿ ತಿಂಗಳಾಂತ್ಯಕ್ಕೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಫೆಬ್ರವರಿ ಆರಂಭದಲ್ಲಿ ದೇಶಾದ್ಯಂತ ಗ್ರಾಹಕರು ಈ ಹೊಸ ಕ್ಯಾಮೆರಾವನ್ನು ಖರೀದಿಸಬಹುದಾಗಿದೆ. ಐಎಸ್​ಒ ಮಟ್ಟ 100-51,200 ಇದೆ. ಬ್ಲ್ಯೂಟುತ್​ ಹಾಗೂ ವೈಫೂ ವ್ಯವಸ್ಥೆ ಕೂಡ ಇದಕ್ಕಿದೆ. 3.2 ಇಂಚು ಉದ್ದದ ಸ್ಕ್ರೀನ್​ಅನ್ನು ಇದು ಹೊಂದಿದೆ.ಇದನ್ನೂ ಓದಿ: ಜಿಯೋ ವೈ-ಫೈ ಕರೆ; ಯಾವ ಯಾವ ಸ್ಮಾರ್ಟ್​ಫೋ​ನ್​ಗಳಿಗೆ ಲಭ್ಯ; ಇಲ್ಲಿದೆ ಮಾಹಿತಿ

ಹೊಸ ನಿಕಾನ್ ಡಿ780 ಬಾಡಿ ಬೆಲೆ 1,98,995 ರೂಪಾಯಿ. 24-120 ಎಂಎಂ ವಿಆರ್ ಲೆನ್ಸ್ ಜೊತೆಗೆ ಈ ಕ್ಯಾಮೆರಾ ಬೆಲೆ 2,42,495 ರೂಪಾಯಿ. ಹೀಗಾಗಿ ವೃತ್ತಿಪರ ಛಾಯಾಗ್ರಾಹಕರಿಗೆ ಈ ಕ್ಯಾಮೆರಾ ಸಹಕಾರಿಯಾಗಲಿದೆ.
First published:January 16, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading