ಮಾರುಕಟ್ಟೆಯಲ್ಲಿ ಸ್ಮಾರ್ಟ್ಫೋನ್ಗಳ (Smartphones) ಬಗ್ಗೆ ಮಾತಾಡೋ ಹಾಗೇನೇ ಇಲ್ಲ. ಯಾಕೆಂದರೆ ದಿನಕ್ಕೆ ಒಂದರಂತೆ ಇತ್ತೀಚೆಗೆ ಸ್ಮಾರ್ಟ್ಫೋನ್ಗಳು ಬಿಡುಗಡೆಯಾಗುತ್ತಲೇ ಇದೆ. ಸ್ಮಾರ್ಟ್ಫೋನ್ ಎಂದರೆ ಮಾನವನ ಜೀವನ ಅಗತ್ಯ ಸಾಧನವಾಗಿಬಿಟ್ಟಿದೆ. ಏಕೆಂದರೆ ಈ ಸ್ಮಾರ್ಟ್ಫೋನ್ ಮೂಲಕ ಈಗಿನ ಕಾಲದಲ್ಲಿ ಯಾವುದೇ ಕೆಲಸವನ್ನೂ ಮಾಡಬಹುದಾಗಿದೆ. ಅದ್ರಲ್ಲೂ ಗೇಮರ್ಗಳಿಗಾಗಿಯೇ (Gamers) ಕೆಲವೊಂದು ಸ್ಮಾರ್ಟ್ಫೋನ್ಗಳು ಬಿಡುಗಡೆಯಾಗುತ್ತಿದೆ. ಮಾರುಕಟ್ಟೆಯಲ್ಲಿ ಈಗೀಗ ಗೇಮಿಂಗ್ ಸ್ಮಾರ್ಟ್ಫೋನ್ಗಳು (Gaming Smartphones) ಬಹಳಷ್ಟು ಜನಪ್ರಿಯತೆಯನ್ನು ಪಡೆದಿದೆ. ಇದೀಗ ಈ ಸಾಲಿಗೆ ಹೊಸ ಗೇಮಿಂಗ್ ಸ್ಮಾರ್ಟ್ಫೋನ್ ಒಂದು ಸೇರ್ಪಡೆಯಾಗುತ್ತಿದ್ದು, ಮಾರುಕಟ್ಟೆಯಲ್ಲಿ ಹೊಸ ಸಂಚಲನ್ನೇ ಮೂಡಿಸಲಿದೆ.
ನುಬಿಯಾ ಎಂಬ ಸ್ಮಾರ್ಟ್ಫೋನ್ ಕಂಪೆನಿ ಇದೀಗ ಹೊಸ ನುಬಿಯಾ ರೆಡ್ ಮ್ಯಾಜಿಕ್ 8 ಪ್ರೋ ಎಂಬ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಿದೆ. ಹಾಗಿದ್ರೆ ಈ ಸ್ಮಾರ್ಟ್ಫೊನ್ನ ಫೀಚರ್ಸ್ ಹೇಗಿದೆ? ಬೆಲೆ ಹೇಗಿದೆ ಎಂಬುದನ್ನು ಈ ಲೇಖನದ ಮೂಲಕ ತಿಳಿಯಿರಿ.
ನುಬಿಯಾ ರೆಡ್ ಮ್ಯಾಜಿಕ್ 8 ಪ್ರೋ ಸ್ಮಾರ್ಟ್ಫೋನ್ ಫೀಚರ್ಸ್
ನುಬಿಯಾ ರೆಡ್ ಮ್ಯಾಜಿಕ್ 8 ಪ್ರೋ ಸ್ಮಾರ್ಟ್ಫೋನ್ ಹೆಚ್ಕಚಿನ ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯ ಹೊಂದಿರುವ 6.8 ಇಂಚಿನ ಓಎಲ್ಇಡಿ ಡಿಸ್ಪ್ಲೇಯನ್ನ ಹೊಂದಿದೆ. ಇನ್ನು ಈ ಡಿಸ್ಪ್ಲೇಯು 960Hz ಟಚ್ ಸ್ಯಾಂಪ್ಲಿಂಗ್ ರೇಟ್ ಅನ್ನು ಹೊಂದಿದ್ದು, 120Hz ರಿಫ್ರೆಶ್ ದರ ಪಡೆದಿದೆ. ಹಾಗೆಯೇ 1300 ನಿಟ್ಸ್ನಷ್ಟು ಬ್ರೈಟ್ನೆಸ್ ಸಾಮರ್ಥ್ಯವನ್ನು ಹೊಂದಿದೆ. ಇದು 520Hz ಶೋಲ್ಡರ್ ಟ್ರಿಗರ್ ಹೊಂದಿದ್ದು, ಇದು ಗೇಮ್ಗಳಿಗೆ ಪೂರಕವಾಗಿದೆ.
ಕ್ಯಾಮೆರಾ ಫೀಚರ್ಸ್
ನುಬಿಯಾ ರೆಡ್ ಮ್ಯಾಜಿಕ್ 8 ಪ್ರೋ ಸ್ಮಾರ್ಟ್ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಇನ್ನು ಸೆಲ್ಫಿಗಾಗಿ ಮತ್ತು ವಿಡಿಯೋ ಕಾಲ್ಗಾಗಿ 16 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಒಳಗೊಂಡಿದೆ.
ಬ್ಯಾಟರಿ ಫೀಚರ್ಸ್
ನುಬಿಯಾ ರೆಡ್ ಮ್ಯಾಜಿಕ್ 8 ಪ್ರೊ ಸ್ಮಾರ್ಟ್ಫೋನ್ 6000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಅನ್ನು ಒಳಗೊಂಡಿದೆ. ಇನ್ನು ಈ ಬ್ಯಾಟರಿ 80W ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿದೆ.
ಇತರೆ ಫೀಚರ್ಸ್
ನುಬಿಯಾ ರೆಡ್ ಮ್ಯಾಜಿಕ್ 8 ಪ್ರೋ ಸ್ಮಾರ್ಟ್ಫೋನ್ನ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್ಸ್ಪಾಟ್, ವೈಫೈ, ಫಿಂಗರ್ಪ್ರಿಂಟ್ ಸ್ಕ್ಯಾನರ್, ಎನ್ಎಫ್ಸಿ ಮತ್ತು ಬ್ಲೂಟೂತ್ ಅನ್ನು ಬೆಂಬಲಿಸಲಿದೆ.
ಪ್ರೊಸೆಸರ್ ಸಾಮರ್ಥ್ಯ
ನುಬಿಯಾ ರೆಡ್ ಮ್ಯಾಜಿಕ್ 8 ಪ್ರೋ ಸ್ಮಾರ್ಟ್ಫೋನ್ ನುಬಿಯಾ ರೆಡ್ ಮ್ಯಾಜಿಕ್ 8 ಪ್ರೋ ಪ್ರೊಸೆಸರ್ ಅನ್ನು ಹೊಂದಿದೆ. ಈ ಸ್ಮಾರ್ಟ್ಫೋನ್ ಆಂಡ್ರಾಯ್ಡ್ 13 ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೇಯೇ ಈ ಸ್ಮಾರ್ಟ್ಫೋನ್ 8 ಜಿಬಿ ರ್ಯಾಮ್ 12ಜಿಬಿ ರ್ಯಾಮ್ ಹಾಗೂ 256ಜಿಬಿ ಮತ್ತು 16ಜಿಬಿ ರ್ಯಾಮ್ + 512ಜಿಬಿ ಸ್ಟೋರೇಜ್ ಸಾಮರ್ಥ್ಯದಲ್ಲಿ ಬಿಡುಗಡೆಯಾಗಲಿದೆ ಎಂದು ಕಂಪೆನಿ ಹೇಳಿದೆ. ಇದಲ್ಲದೆ ಇದು ಫ್ಯಾನ್, 3ಡಿ ಐಸ್-ಗ್ರೇಡ್ ಡ್ಯುಯಲ್ ಪಂಪ್ ಮತ್ತು ಸ್ಕ್ರೀನ್ಗಳು ಹೀಟ್ ಆಗದಂತಹ ಫೀಚರ್ಗಳನ್ನು ಹೊಂದಿದೆ
ಬೆಲೆ ಮತ್ತು ಲಭ್ಯತೆ
ನುಬಿಯಾ ರೆಡ್ ಮ್ಯಾಜಿಕ್ 8 ಪ್ರೋ ಸ್ಮಾರ್ಟ್ಫೋನ್ 12ಜಿಬಿ ರ್ಯಾಮ್ ಮತ್ತಿ 256ಜಿಬಿ ಸ್ಟೋರೇಜ್ ಹೊಂದಿದ ಸ್ಮಾರ್ಟ್ಫೋನ್ನ ಬೆಲೆಯು $650 ಅಂದರೆ ಭಾರತದಲ್ಲಿ ಅಂದಾಜು 53,200 ರೂಪಾಯಿ ಆಗಿದೆ.
ಇದನ್ನೂ ಓದಿ: ಲೆನೋವೋ ಕಂಪೆನಿಯ ಮೊದಲ 5ಜಿ ಟ್ಯಾಬ್ ಅನ್ನು ಕೇವಲ 10 ಸಾವಿರ ರೂಪಾಯಿಗೆ ಖರೀದಿಸಿ!
ಹಾಗೆಯೇ 16ಜಿಬಿ ರ್ಯಾಮ್ ಮತ್ತು 512ಜಿಬಿ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದ ಸ್ಮಾರ್ಟ್ಫೋನ್ನ ಬೆಲೆಯು $800 ಅಂದರೆ ಭಾರತದಲ್ಲಿ ಅಂದಾಜು 65,500 ರೂಪಾಯಿಗಳಷ್ಟು ಇರುತ್ತದೆ ಎಂದು ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ