ಮ್ಯೂಸಿಕ್ ಗ್ಯಾಜೆಟ್ಗಳು (Music Gadgets) ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಲ್ಲಿರುವ ಸಾಧನಗಳಾಗಿವೆ. ಅದೇ ರೀತಿ ಟೆಕ್ ಕಂಪೆನಿಗಳು ಕೂಡ ಮಾರುಕಟ್ಟೆಗೆ ಹೊಸಹೊಸ ಮಾದರಿಯ ಸಾಧನಗಳನ್ನು ಪರಿಚಯಿಸುತ್ತಿದೆ. ಇದೀಗ ಭಾರತದ ಮಾರುಕಟ್ಟೆಗೆ ಫಿಲಿಪ್ಸ್ ಕಂಪೆನಿಯ (Philips) ಹೊಸ ಹೆಡ್ಫೋನ್ಗಳನ್ನು (Headphones) ಬಿಡುಗಡೆ ಮಾಡಿದೆ. ಈ ಹೊಸ ಹೆಡ್ಫೋನ್ ಎಎನ್ಸಿ ಪ್ರೋ, ವೇಗದ ಚಾರ್ಜಿಂಗ್ ಸೇರಿದಂತೆ ಹಲವು ಆಕರ್ಷಕ ಫೀಚರ್ಸ್ಗಳನ್ನು ಒಳಗೊಂಡಿದೆ. ಇದು ಫೋನ್ ಕಾಲ್ಗಳನ್ನು ಮಾಡುವುದಕ್ಕೆ ಸ್ವೈಪ್ ಟಚ್ ಕಂಟ್ರೋಲ್ ಫೀಚರ್ಸ್ ಅನ್ನು ಬೆಂಬಲಿಸಲಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಹೆಡ್ಫೋನ್ಗಳು ಬಿಡುಗಡೆಯಾಗಲಿದ್ದು, ಭಾರೀ ಅಗ್ಗದ ಬೆಲೆಯಲ್ಲಿ ಬಿಡುಗಡೆಯಾಗುವ ಹೆಡ್ಫೋನ್ ಇದಾಗಲಿದೆ.
ಭಾರತದ ಮಾರುಕಟ್ಟೆಗೆ ಇದೀಗ ಫಿಲಿಪ್ಸ್ ಕಂಪೆನಿಯ ಫಿಲಿಪ್ಸ್ TAH8506BK ಎಂಬ ಹೆಡ್ಫೋನ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಇದು ಲಗ್ಗೆಯಿಡಲಿದ್ದು, ಇದರ ಫೀಚರ್ಸ್, ಬೆಲೆ ಬಗ್ಗೆ ಬಿಡುಗಡೆಯ ಮುಂಚೆನೇ ಸೋರಿಕೆಯಾಗಿದೆ. ಇದರ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಫೀಚರ್ಸ್ ಹೇಗಿದೆ?
ಫಿಲಿಪ್ಸ್ ಕಂಪೆನಿ ತನ್ನ ಬ್ರಾಂಡ್ನ ಅಡಿಯಲ್ಲಿ ಗ್ಯಾಜೆಟ್ಸ್ಗಳನ್ನು, ಸೌಂಡ್ಬಾರ್ಗಳನ್ನು ಬಿಡುಗಡೆ ಮಾಡಿದೆ. ಇದೀಗ ಫಿಲಿಪ್ಸ್ TAH8506BK ಹೆಡ್ಫೋನ್ ಅತ್ಯಾಕರ್ಷಕ ಫೀಚರ್ಸ್ಗಳ ಮೂಲಕ ತನ್ನ ಗ್ರಾಹಕರನ್ನು ಗಮನಸೆಳೆಯುತ್ತಿದೆ. ಇದು ಆಂಬಿಯೆಂಟ್ ಮೋಡ್ ಬಳಕೆದಾರರಿಗಾಗಿ ಬ್ಯಾಕ್ಗ್ರೌಂಡ್ ಸೌಂಡ್ ಅನ್ನು ನೀಡಲಿದೆ. ಇನ್ನು ಈ ಹೆಡ್ಫೋನ್ಗಳು 40mm ಆಡಿಯೋ ಡ್ರೈವರ್ಗಳನ್ನು ಒಳಗೊಂಡಿದ್ದು, ಹೈ-ರೆಸ್ ಆಡಿಯೋಗೆ ಬೆಂಬಲವನ್ನು ನೀಡಲಿದೆ.
ಇದನ್ನೂ ಓದಿ: ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಜಿಯೋ 5ಜಿ ಸೇವೆ ಆರಂಭ: ಎಲ್ಲೆಲ್ಲಿ? ಇಲ್ಲಿದೆ ಲಿಸ್ಟ್
ಈ ಹೆಡ್ಫೋನ್ನಲ್ಲಿ 4 EQ ಸ್ಟೆಪ್ಸ್ಗಳನ್ನು ಪ್ರಿಸೆಟ್ ಮಾಡಲಾಗಿದೆ. ಅವುಗಳೆಂದರೆ, ಬಾಸ್, ವಾಯ್ಸ್, ಪವರ್ ಮತ್ತು ಟ್ರಾವೆಲ್ ಗಳೆಂದು ಹೆಸರಿಸಲಾಗಿದೆ. ಈ ಮೋಡ್ಗಳನ್ನು ಫಿಲಿಪ್ಸ್ ಹೆಡ್ಫೋನ್ ಅಪ್ಲಿಕೇಶನ್ ಮೂಲಕ ಸುಲಭವಾಗಿ ಕಸ್ಟಮೈಸ್ ಮಾಡಬಹುದಾಗಿದೆ.
ಕನೆಕ್ಟಿವಿಟಿ ಫೀಚರ್ಸ್
ಇನ್ನು ಈ ಹೆಡ್ಫೋನ್ ಎಎನ್ಸಿ ಫೀಚರ್ಸ್ ಅನ್ನು ಒಳಗೊಂಡಿದೆ. ಜೊತೆಗೆ ಈ ಹೆಡ್ಫೋನ್ ಬ್ಲೂಟೂತ್ ಮಲ್ಟಿಪಾಯಿಂಟ್ ಕನೆಕ್ಟಿವಿಟಿ ಫೀಚರ್ಸ್ ಅನ್ನು ಕೂಡ ಪಡೆದಿದೆ. ಇದು ಬಳಕೆದಾರರಿಗೆ ಎರಡು ಡಿವೈಸ್ಗಳಿಗೆ ಏಕಕಾಲದಲ್ಲಿ ಕನೆಕ್ಟ್ ಮಾಡಲು ಅನುವು ಮಾಡಿಕೊಡುತ್ತದೆ.
ಬ್ಯಾಟರಿ ಫೀಚರ್ಸ್
ಇನ್ನು ಈ ಡಿವೈಸ್ ಅನ್ನು ಒಮ್ಮೆ ಫುಲ್ ಚಾರ್ಜ್ ಮಾಡಿದ್ರೆ 60 ಗಂಟೆಗಳವರೆಗಿನ ಪ್ಲೇಬ್ಯಾಕ್ ಟೈಂ ನೀಡಲಿದೆ. ಇದು ಎಎನ್ಸಿ ಇಲ್ಲದೆ ಆಕ್ಟಿವ್ ಮಾಡಿದರೆ 45 ಗಂಟೆಗಳವರೆಗಿನ ಬ್ಯಾಟರಿ ಬಾಳಿಕೆ ನೀಡಲಿದೆ. ಅಲ್ಲದೆ ಈ ಹೆಡ್ಫೋನ್ ವೇಗದ ಚಾರ್ಜಿಂಗ್ಸಾಮರ್ಥ್ಯವನ್ನು ಸಹ ಹೊಂದಿದೆ. ಆದ್ದರಿಂದ ಈ ಹೆಡ್ಫೋನ್ ಅನ್ನು ನೀವು ಕೇವಲ 15 ನಿಮಿಷಗಳ ಕಾಲ ಚಾರ್ಜ್ ಮಾಡಿದರೆ 8 ಗಂಟೆಗಳವರೆಗಿನ ಪ್ಲೇಟೈಮ್ ಅವಕಾಶವನ್ನು ನೀಡುತ್ತದೆ.
ಬೆಲೆ ಮತ್ತು ಲಭ್ಯತೆ
ಫಿಲಿಪ್ಸ್ TAH8506BK ಹೆಡ್ಫೋನ್ ಭಾರತದಲ್ಲಿ 10,999 ರೂಪಾಯಿ ಬೆಲೆಯನ್ನು ಹೊಂದಿದೆ. ಇದೀಗ ಈ ಹೆಡ್ಫೋನ್ ಕೆಲವೇದಿನಗಳಲ್ಲಿ ಮಾರುಕಟ್ಟೆಗೆ ಲಗ್ಗಯಿಡಲಿದ್ದು, ಪ್ರಮುಖ ಇಕಾಮರ್ಸ್ ವೆಬ್ಸೈಟ್ಗಳಲ್ಲಿ ಮತ್ತು ಆಫ್ಲೈನ್ ಮಾರುಕಟ್ಟೆಗಳಲ್ಲಿ ಖರೀದಿಸಲು ಅವಕಾಶ ಸಿಗಲಿದೆ.
ಇತ್ತೀಚೆಗೆ ಫಿಲಿಪ್ಸ್ ಕಂಪೆನಿ ಮಾರುಕಟ್ಟೆಗೆ ತನ್ನ ಬ್ರಾಂಡ್ನ ಅಡಿಯಲ್ಲಿ ಎರಡು ಸೌಂಡ್ಬಾರ್ಗಳನ್ನು ಬಿಡುಗಡೆ ಮಾಡಿದೆ.
ಫಿಲಿಪ್ಸ್ TAB8947 3.1.2 CH ಸೌಂಡ್ಬಾರ್ನ ಫೀಚರ್ಸ್
ಫಿಲಿಪ್ಸ್ TAB8947 3.1.2 CH ಸೌಂಡ್ಬಾರ್ 8 ಇಂಟಿಗ್ರೇಟೆಡ್ ಆಡಿಯೋ ಡ್ರೈವರ್ ಅನ್ನು ಹೊಂದಿದೆ. ಇದು 3.1.2 ಚಾನೆಲ್ಗಳನ್ನು ಮತ್ತು 8-ಇಂಚಿನ ಸಬ್ ವೂಫರ್ ಅನ್ನು ಹೊಂದಿರಲಿದೆ. ಇನ್ನು ಈ ಸೌಂಡ್ಬಾರ್ ಕ್ಲಿಯರ್ ಸೌಂಡ್ ಮಾತ್ರವಲ್ಲದೆ ಹೆಚ್ಚಿನ ಬಾಸ್ಅನ್ನು ಕೂಡ ಹೊಂದಿರಲಿದೆ.
ಫಿಲಿಪ್ಸ್ TAB7807 3.1 CH
ಫಿಲಿಪ್ಸ್ TAB7807 3.1 CH ಸೌಂಡ್ಬಾರ್ ಕೂಡ 3.1-ಚಾನೆಲ್ ಅನ್ನು ಹೊಂದಿದೆ. ಆದರೆ ಇದು 6 ಇಂಟಿಗ್ರೇಟೆಡ್ ಆಡಿಯೋ ಡ್ರೈವರ್ಗಳನ್ನು ಹೊಂದಿದೆ. ಇದರಲ್ಲಿ ಸಂಪೂರ್ಣ ಸಿಸ್ಟಮ್ಗೆ ವಯರ್ಲೆಸ್ ಮೂಲಕ ಕನೆಕ್ಟ್ ಮಾಡುವ 8-ಇಂಚಿನ ಸಬ್ ವೂಫರ್ ಅನ್ನು ನೀಡಲಾಗಿದೆ. ಈ ಫಿಲಿಪ್ಸ್ ಸೌಂಡ್ಬಾರ್ನ ಎರಡೂ ತುದಿಯಲ್ಲಿ ಎರಡು ಹೆಚ್ಚುವರಿ ಸ್ಪೀಕರ್ಗಳನ್ನು ನೀಡಿದ್ದೇವೆ ಎಂದು ಫಿಲಿಪ್ಸ್ ಕಂಪೆನಿ ಹೇಳಿಕೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ