• ಹೋಂ
  • »
  • ನ್ಯೂಸ್
  • »
  • ಮೊಬೈಲ್- ಟೆಕ್
  • »
  • Infinix Note 12i: ಲಗ್ಗೆಯಿಟ್ಟಿದೆ ಇನ್ಫಿನಿಕ್ಸ್​ ಕಂಪೆನಿಯ ಹೊಸ ಮೊಬೈಲ್! ಫೀಚರ್ಸ್​ ನೋಡಿದ್ರೆ ಗ್ಯಾರಂಟಿ ಖರೀದಿಸ್ತೀರಾ

Infinix Note 12i: ಲಗ್ಗೆಯಿಟ್ಟಿದೆ ಇನ್ಫಿನಿಕ್ಸ್​ ಕಂಪೆನಿಯ ಹೊಸ ಮೊಬೈಲ್! ಫೀಚರ್ಸ್​ ನೋಡಿದ್ರೆ ಗ್ಯಾರಂಟಿ ಖರೀದಿಸ್ತೀರಾ

ಇನ್ಫಿನಿಕ್ಸ್​ ನೋಟ್​​ 12ಐ ಸ್ಮಾರ್ಟ್​ಫೋನ್​

ಇನ್ಫಿನಿಕ್ಸ್​ ನೋಟ್​​ 12ಐ ಸ್ಮಾರ್ಟ್​ಫೋನ್​

ಇನ್ಫಿನಿಕ್ಸ್​ ಕಂಪೆನಿ ತನ್ನ ಬ್ರಾಂಡ್​ನ ಅಡಿಯಲ್ಲಿ ಇನ್ಫಿನಿಕ್ಸ್​ ನೋಟ್​ 12ಐ ಸ್ಮಾರ್ಟ್​​ಫೋನ್​ ಅನ್ನು ಬಿಡುಗಡೆ ಮಾಡಿದೆ. ಈ ಕಂಪೆನಿ ಬಜೆಟ್​ ಬೆಲೆಯಲ್ಲಿ ಸ್ಮಾರ್ಟ್​ಫೋನ್​ಗಳನ್ನು ತಯಾರಿಸುವಲ್ಲಿ ಭಾರೀ ಜನಪ್ರಿಯತೆಯನ್ನು ಪಡೆದಿದೆ. ಸದ್ಯ ಬಿಡುಗಡೆಯಾಗಿರುವ ಸ್ಮಾರ್ಟ್​​ಫೋನ್​ ಕೂಡಾ ಬಜೆಟ್​ ಬೆಲೆಯದ್ದಾಗಿದ್ದು, ಫೀಚರ್ಸ್​ ಹೇಗಿದೆ ಎಂದು ತಿಳಿಬೇಕಾದರೆ ಈ ಲೇಖನವನ್ನು ಓದಿ.

ಮುಂದೆ ಓದಿ ...
  • Share this:

    ಇತ್ತೀಚೆಗೆ ಸ್ಮಾರ್ಟ್​​ಫೋನ್​ಗಳು (Smartphones) ಮಾರುಕಟ್ಟೆಯಲ್ಲಿ ಹೊಸ ಹೊಸ ರೀತಿಯಲ್ಲಿ ಬಿಡುಗಡೆಯಾಗುತ್ತಲೇ ಇದೆ. ಟೆಕ್ ಮಾರುಕಟ್ಟೆಯಲ್ಲಿ ಸ್ಮಾರ್ಟ್​​​ವಾಚ್​ಗಳಿಗೆ ಭಾರೀ ಬೇಡಿಕೆ. ಭಾರತದಲ್ಲಿ ಜನಪ್ರಿಯ ಕಂಪೆನಿಯಾಗಿರುವ ಇನ್ಫಿನಿಕ್ಸ್ ಕಂಪೆನಿ (Infinix Company) ಸಾಕಷ್ಟು ಸ್ಮಾರ್ಟ್​​ಫೋನ್​ಗಳನ್ನು ಬಿಡುಗಡೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ತನ್ನದೇ ಆದಂತಹ ಒಂದು ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಬಹಳ ಹಿಂದಿನಿಂದ ಪ್ರಚಲಿತದಲ್ಲಿರುವ ಈ ಕಂಪೆನಿ ಇದೀಗ ಭಾರತದಲ್ಲಿ (India) ಹೊಸ ಸ್ಮಾರ್ಟ್​ಫೋನ್​ ಅನ್ನು ಪರಿಚಯಿಸಲು ಸಜ್ಜಾಗಿದೆ. ಇನ್ಫಿನಿಕ್ಸ್​ ನೋಟ್​ ಸೀರಿಸ್​ನಲ್ಲಿ ಬಿಡುಗಡೆಯಾಗಲಿರುವ ಇನ್ಫಿನಿಕ್ಸ್​ನ ಹೊಸ ಸ್ಮಾರ್ಟ್​ಫೋನ್​ ತನ್ನ ವಿನ್ಯಾಸದ ಮೂಲಕವೇ ಜನರಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟಿಸಿತ್ತು.


    ಇನ್ಫಿನಿಕ್ಸ್​ ಕಂಪೆನಿ ತನ್ನ ಬ್ರಾಂಡ್​ನ ಅಡಿಯಲ್ಲಿ ಇನ್ಫಿನಿಕ್ಸ್​ ನೋಟ್​ 12ಐ ಸ್ಮಾರ್ಟ್​​ಫೋನ್​ ಅನ್ನು ಬಿಡುಗಡೆ ಮಾಡಿದೆ. ಈ ಕಂಪೆನಿ ಬಜೆಟ್​ ಬೆಲೆಯಲ್ಲಿ ಸ್ಮಾರ್ಟ್​ಫೋನ್​ಗಳನ್ನು ತಯಾರಿಸುವಲ್ಲಿ ಭಾರೀ ಜನಪ್ರಿಯತೆಯನ್ನು ಪಡೆದಿದೆ. ಸದ್ಯ ಬಿಡುಗಡೆಯಾಗಿರುವ ಸ್ಮಾರ್ಟ್​​ಫೋನ್​ ಕೂಡಾ ಬಜೆಟ್​ ಬೆಲೆಯದ್ದಾಗಿದ್ದು, ಫೀಚರ್ಸ್​ ಹೇಗಿದೆ ಎಂದು ತಿಳಿಬೇಕಾದರೆ ಈ ಲೇಖನವನ್ನು ಓದಿ.


    ಇನ್ಫಿನಿಕ್ಸ್​ ನೋಟ್​ 12ಐ ಸ್ಮಾರ್ಟ್​​​ಫೋನ್ ಫೀಚರ್ಸ್​


    ಇನ್ಫಿನಿಕ್ಸ್​ ಬಿಡುಗಡೆ ಮಾಡಿರುವಂತಹ ಈ ಹೊಸ ಸ್ಮಾರ್ಟ್​ಫೋನ್​ ವಿಶೇಷ ವಿನ್ಯಾಸವನ್ನು ಹೊಂದಿದೆ. ಇನ್ಫಿನಿಕ್ಸ್​ ನೋಟ್​ 12ಐ ಸ್ಮಾರ್ಟ್‌ಫೋನ್‌ 6.7 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಅಮೋಲ್ಡ್​ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 1,080x2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು 180Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಬೆಂಬಲಿಸಲಿದೆ. ಹಾಗೆಯೇ 1,000 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಇನ್ನು ಇಈ ಸ್ಮಾರ್ಟ್​​​ಫೋನ್​ನ ಡಿಸ್​​ಪ್ಲೇಯ ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್​ 3 ಪ್ರೊಟೆಕ್ಷನ್​ ಅನ್ನು ಹೊಂದಿದೆ.




    ಕ್ಯಾಮೆರಾ ಫೀಚರ್ಸ್


    ಇನ್ಫಿನಿಕ್ಸ್​ ನೋಟ್​ 12ಐ ಸ್ಮಾರ್ಟ್‌ಫೋನ್‌ ಹಿಂಭಾಗದಲ್ಲಿ ಟ್ರಿಪಲ್​ ರಿಯರ್​ ಕ್ಯಾಮೆರಾ ಸೆಟಪ್​ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಅದೇ ರೀತಿ ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಮತ್ತು ಮೂರನೇ ಕ್ಯಾಮೆರಾ QVGA ರೆಸಲ್ಯೂಶನ್‌ ಅನ್ನು ಒಳಗೊಂಡಿದೆ. ಇನ್ನು ಸೆಲ್ಫಿಗಾಗಿ ಮತ್ತು ವಿಡಿಯೋ ಕಾಲ್​ಗಾಗಿ 8 ಮೆಗಾಪಿಕ್ಸೆಲ್​ ಸೆನ್ಸಾರ್​ ಸಾಮರ್ಥ್ಯದ ಕ್ಯಾಮೆರಾವನ್ನು ಒಳಗೊಂಡಿದೆ.


    ಪ್ರೊಸೆಸರ್​ ಸಾಮರ್ಥ್ಯ


    ಇನ್ಫಿನಿಕ್ಸ್‌ ನೋಟ್‌ 12ಐ ಸ್ಮಾರ್ಟ್‌ಫೋನ್‌ ಮೀಡಿಯಾಟೆಕ್‌ ಹಿಲಿಯೋ ಜಿ85 ಎಸ್​ಓಸಿ ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್​ಫೋನ್​ ಆಂಡ್ರಾಯ್ಡ್‌ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 4 ಜಿಬಿ ರ್‍ಯಾಮ್ ಮತ್ತು 64 ಜಿಬಿ ಇಂಟರ್ನಲ್​ ಸ್ಟೋರೇಜ್‌ ಸಾಮರ್ಥ್ಯದಲ್ಲಿ ಈ ಸ್ಮಾರ್ಟ್​​ಫೋನ್ ಬಿಡುಗಡೆಯಾಗಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಬೆಂಬಲದೊಂದಿಗೆ 512 ಜಿಬಿವರೆಗೆ ಸ್ಟೋರೇಜ್​ ಸಾಮರ್ಥ್ಯವನ್ನು ಇನ್ನಷ್ಟು ವಿಸ್ತರಿಸಬಹುದಾಗಿದೆ.


    ಬ್ಯಾಟರಿ ಫೀಚರ್ಸ್​


    ಇನ್ಫಿನಿಕ್ಸ್‌ ಕಂಪೆನಿಯ ಈ ಹೊಸ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್​ ಅನ್ನು ಹೊಂದಿದೆ. ಈ ಬ್ಯಾಟರಿಯು 33W ವೇಗದ ಚಾರ್ಜಿಂಗ್‌ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತದೆ.


    ಇನ್ಫಿನಿಕ್ಸ್​ ನೋಟ್​​ 12ಐ ಸ್ಮಾರ್ಟ್​ಫೋನ್​


    ಇತರೆ ಫೀಚರ್ಸ್​


    ಇನ್ನು ಈ ಸ್ಮಾರ್ಟ್​ಫೋನ್​ನ ಕನೆಕ್ಟಿವಿಟಿ ಆಯ್ಕೆಗಳಲ್ಲಿ 4ಜಿ, ವೈಫೈ, ಬ್ಲೂಟೂತ್ 5.0, ಜಿಪಿಎಸ್​ ಮತ್ತು ಯುಎಸ್​ಬಿ ಟೈಪ್ ಸಿ ಪೋರ್ಟ್ ಅನ್ನು ಬೆಂಬಲಿಸಲಿದೆ. ಇದು ಆಂಬಿಯೆಂಟ್ ಲೈಟ್ ಸೆನ್ಸಾರ್​, ಜಿ-ಸೆನ್ಸಾರ್​, ಪ್ರಾಕ್ಸಿಮಿಟಿ ಸೆನ್ಸಾರ್‌, ಗೈರೊಸ್ಕೋಪ್, ಮ್ಯಾಗ್ನೆಟೋಮೀಟರ್ ಮತ್ತು ಫಿಂಗರ್‌ಪ್ರಿಂಟ್ ಸೆನ್ಸಾರ್‌ ಅನ್ನು ಸಹ ಒಳಗೊಂಡಿದೆ.


    ಇದನ್ನೂ ಓದಿ: ಫೈರ್​ಬೋಲ್ಟ್​ ಕಂಪೆನಿಯ ಹೊಸ ಬಜೆಟ್​ ಬೆಲೆಯ ಸ್ಮಾರ್ಟ್​ವಾಚ್ ಬಿಡುಗಡೆ! ಬೆಲೆ ಎಷ್ಟು?


    ಬೆಲೆ ಮತ್ತು ಲಭ್ಯತೆ


    ಇನ್ಫಿನಿಕ್ಸ್‌ ನೋಟ್‌ 12ಐ ಸ್ಮಾರ್ಟ್‌ಫೋನ್‌ ಭಾರತದಲ್ಲಿ ಕೇವಲ 9,999 ರೂಪಾಯಿ ಬೆಲೆಯಲ್ಲಿ ಲಭ್ಯವಾಗಲಿದೆ. ಇದು ಫೋರ್ಸ್ ಬ್ಲಾಕ್ ಮತ್ತು ಮೆಟಾವರ್ಸ್ ಬ್ಲೂ ಬಣ್ಣದ ಆಯ್ಕೆಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಇನ್ನು ಈ ಸ್ಮಾರ್ಟ್‌ಫೋನ್‌ ಇದೇ ಜನವರಿ 30 ರಂದು ಫ್ಲಿಪ್‌ಕಾರ್ಟ್ ಮೂಲಕ ಫಸ್ಟ್​ ಸೇಲ್ ಆರಂಭಿಸುತ್ತದೆ. ಲಾಂಚ್‌ ಆಫರ್‌ ಪ್ರಯುಕ್ತ ಗ್ರಾಹಕರು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಮೂಲಕ ಖರೀದಿಸಿದರೆ 5% ಕ್ಯಾಶ್‌ಬ್ಯಾಕ್‌ ಆಫರ್‌ ಅನ್ನು ಪಡೆಯಬಹುದು.

    Published by:Prajwal B
    First published: