• Home
 • »
 • News
 • »
 • tech
 • »
 • Book Air 13 Laptop: ಇದು ಶಿಯೋಮಿ ಪರಿಚಯಿಸುತ್ತಿರುವ ಹೊಸ ಲ್ಯಾಪ್‌ಟಾಪ್, ಬೆಲೆ ಎಷ್ಟು ಗೊತ್ತಾ?

Book Air 13 Laptop: ಇದು ಶಿಯೋಮಿ ಪರಿಚಯಿಸುತ್ತಿರುವ ಹೊಸ ಲ್ಯಾಪ್‌ಟಾಪ್, ಬೆಲೆ ಎಷ್ಟು ಗೊತ್ತಾ?

ಶಿಯೋಮಿ ಪರಿಚಯಿಸುತ್ತಿರುವ Mi Laptop Air 13 ಲ್ಯಾಪ್‌ಟಾಪ್

ಶಿಯೋಮಿ ಪರಿಚಯಿಸುತ್ತಿರುವ Mi Laptop Air 13 ಲ್ಯಾಪ್‌ಟಾಪ್

ಹೊಸ ಶಿಯೋಮಿ ಲ್ಯಾಪ್‌ಟಾಪ್ ಡಿಸ್‌ಪ್ಲೇಯನ್ನು 360 ಡಿಗ್ರಿವರೆಗೆ ತಿರುಗಿಸುವ ಹೊಸ ಫೀಚರ್ ಇದರಲ್ಲಿದೆ. ಹಾಗಿದ್ರೆ ಇದರ ಬೆಲೆ ಎಷ್ಟು? ಏನೆಲ್ಲಾ ಪ್ರಮುಖ ಫೀಚರ್ಸ್‌ ಪಡೆದಿದೆ ಎಂಬುದನ್ನು ತಿಳಿಯಬೇಕಾ? ಇಲ್ಲಿದೆ ಮಾಹಿತಿ...

 • Share this:

  ಶಿಯೋಮಿ ಸ್ಮಾರ್ಟ್‌ಫೋನ್‌ (Xiaomi Smartphone) ತಯಾರಿಕೆಯಲ್ಲಿ ಬಹಳಷ್ಟು ಉನ್ನತ ಮಟ್ಟದಲ್ಲಿರುವ ಕಂಪೆನಿಯಾಗಿದೆ. ಶಿಯೋಮಿಯು ತಂತ್ರಜ್ಞಾನ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ಗಳ ಮೂಲಕ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದೆ. ಸ್ಮಾರ್ಟ್‌ಫೋನ್‌ ತಯಾರಕಾ ಕಂಪೆನಿಗಳಲ್ಲಿ ಶಿಯೋಮಿ ಸಹ ಪ್ರಮುಖ ಕಂಪೆನಿಯಾಗಿದೆ. ಇದರ ನಡುವೆ ರೆಡ್ಮಿ ನೋಟ್ 12 (Redmi Note 12) ಸೀರಿಸ್‌ನ ಗ್ಯಾಜೆಟ್‌ಗಳನ್ನು (Gadget) ಲಾಂಚ್‌ (Launch) ಮಾಡಲಾಗಿದೆ. ಇದು ಹಲವು ಫೀಚರ್ಸ್‌ಗಳನ್ನು (Features) ಒಳಗೊಂಡಿದ್ದು ಸದ್ಯದಲ್ಲೇ ಮಾರುಕಟ್ಟೆಯಲ್ಲಿ ದೊರೆಯುತ್ತದೆ ಎಂದು ಹೇಳಿದ್ದಾರೆ. ಅಲ್ಲದೇ ರೆಡ್ಮಿ ನೋಟ್ 12 5G (Redmi Note 12 5G), ನೋಟ್ 12 ಪ್ರೊ 5G (Note 12 Pro), ನೋಟ್ 12 ಪ್ರೊ+ 5G ಮತ್ತು ನೋಟ್ 12 ಎಕ್ಸ್‌ಪ್ಲೋರರ್‌ (Redmi Note 12 Explorer)  ವರ್ಷನ್‌ ಅನ್ನು ಕೂಡ ಬಿಡುಗಡೆ ಮಾಡಲಾಗಿದೆ. ಈ ಎಲ್ಲದರ  ನಡುವೆ ಶಿಯೋಮಿ 'ಬುಕ್ ಏರ್ 13' (Book Air 13) ಎಂಬ ಹೊಸ ಲ್ಯಾಪ್‌ಟಾಪ್ (Laptop) ಅನ್ನು ಸಹ ಲಾಂಚ್‌ ಮಾಡಿದೆ


  ಹೊಸ ಶಿಯೋಮಿ ಲ್ಯಾಪ್‌ಟಾಪ್ ಎರಡು ವೇರಿಯಂಟ್‌ನಲ್ಲಿ ಲಭ್ಯವಿದೆ. ಡಿಸ್‌ಪ್ಲೇಯನ್ನು ಸುಮಾರು 360 ಡಿಗ್ರಿವರೆಗೆ ತಿರುಗಿಸಲು ಅನುಕೂಲಕರವಾದ ರಚನೆ ಪಡೆದಿದೆ. ಜೊತೆಗೆ ಡಾಲ್ಬಿ ಅಟ್ಮಾಸ್ ಬೆಂಬಲ ಇರುವ ಎರಡು ಸ್ಪೀಕರ್‌ ಆಯ್ಕೆ ಇದರಲ್ಲಿದೆ. ಹಾಗಿದ್ರೆ ಇದರ ಬೆಲೆ ಎಷ್ಟು, ಏನೆಲ್ಲಾ ಪ್ರಮುಖ ಫೀಚರ್ಸ್‌ ಹೊಂದಿದೆ ಎಂಬುದನ್ನು ತಿಳೀಬೇಕಾ? ಇಲ್ಲಿದೆ ಮಾಹಿತಿ.


  ಶಿಯೋಮಿ ಬುಕ್ ಏರ್ 13 ಲ್ಯಾಪ್‌ಟಾಪ್‌ನ ಫೀಚರ್ಸ್:‌


  ಡಿಸ್‌ಪ್ಲೇ ವಿವರ


  ಈ ಬುಕ್ ಏರ್ 13 ಲ್ಯಾಪ್‌ಟಾಪ್ 13.3 ಇಂಚಿನ E4 OLED ಡಿಸ್‌ಪ್ಲೇ ಹೊಂದಿದ್ದು, ಈ ಡಿಸ್‌ಪ್ಲೇ 2880 x 1800 ಪಿಕ್ಸೆಲ್ ರೆಸಲ್ಯೂಶನ್ ನೀಡುತ್ತದೆ. ಹಾಗೆಯೇ  600nits ಬ್ರೈಟ್‌ನೆಸ್ ಫೀಚರ್ಸ್‌, 60Hz ರಿಫ್ರೆಶ್ ರೇಟ್‌ ಫೀಚರ್ಸ್‌ ಪಡೆದಿದೆ. ಇದರೊಂದಿಗೆ ಈ ಡಿಸ್‌ಪ್ಲೇ ಟಚ್‌ ಸ್ಕ್ರೀನ್‌ ಫೀಚರ್ಸ್‌ ಪಡೆದಿದ್ದು, ಡಾಲ್ಬಿ ವಿಷನ್‌ಗೆ ಸಪೋರ್ಟ್‌ ಮಾಡುತ್ತದೆ.


  The new laptop introduced by Xiaomi How much is the price
  ಶಿಯೋಮಿ ಬುಕ್‌ ಏರ್‌ 13 ಲ್ಯಾಪ್‌ಟಾಪ್


  ಇದನ್ನೂ ಓದಿ: 5G ಸೇವೆ ಆರಂಭದ ಬೆನ್ನಲ್ಲೇ ಸ್ಮಾರ್ಟ್‌ಪೋನ್‌ ಖರೀದಿಗೆ ಈ ವರ್ಷ ಸೂಕ್ತವಲ್ಲ ಎನ್ನುತ್ತಿರುವ ತಜ್ಞರು!


  ಪ್ರೊಸೆಸರ್‌ ವಿವರ


  ಈ ಲ್ಯಾಪ್‌ಟಾಪ್‌ i7-1250U CPU ಹಾಗೂ i5-1230U ನ ಎರಡು ಕಾನ್ಫಿಗರೇಶನ್‌ಗಳಲ್ಲಿ ಲಭ್ಯ ಇದೆ. ಇಂಟೆಲ್‌ನ 12 ನೇ ತಲೆಮಾರಿನ ಸಿಪಿಯುಗಳ ಬಲದ ಜೊತೆಗೆ ಇಂಟೆಲ್ ಐರಿಶ್ Xe ಜಿಪಿಯು ಆಯ್ಕೆ ಇದರಲ್ಲಿದೆ. ಇನ್ನು 16GB RAM ಹಾಗೂ 512GB ಸ್ಟೋರೇಜ್‌ ಸಾಮರ್ಥ್ಯದಲ್ಲಿ  ಲಭ್ಯವಾಗಲಿದೆ, ಈ ಲ್ಯಾಪ್‌ಟಾಪ್ ವಿಂಡೋಸ್ 11 ಅನ್ನು ರನ್ ಮಾಡುತ್ತದೆ.


  ಬ್ಯಾಟರಿ ಸಾಮರ್ಥ್ಯ


  ಶಿಯೋಮಿ ಬುಕ್ ಏರ್ 13 ಲ್ಯಾಪ್‌ಟಾಪ್ 58.3WHr ಸಾಮರ್ಥ್ಯದ ಬ್ಯಾಟರಿ ಆಯ್ಕೆ ಹೊಂದಿದ್ದು, 65 ವ್ಯಾಟ್ಸ್ ಚಾರ್ಜಿಂಗ್‌ಗೆ ಬೆಂಬಲ ನೀಡುತ್ತದೆ. ಇದರೊಂದಿಗೆ ಯುಎಸ್‌ಬಿ ಟೈಪ್-ಸಿ ಥಂಡರ್‌ಬೋಲ್ಟ್ 4 ಪೋರ್ಟ್‌, 3.5 ಎಂಎಂ ಹೆಡ್‌ಫೋನ್ ಜ್ಯಾಕ್, ವೈಫೈ-6E ,ಬ್ಲೂಟೂತ್ 5.2 ಆವೃತ್ತಿ ಸೇರಿದಂತೆ ಇನ್ನಿತರೆ ಕನೆಕ್ಟಿವಿಟಿ ಆಯ್ಕೆಯನ್ನು ಪಡೆದುಕೊಂಡಿದೆ.‌‌


  The new laptop introduced by Xiaomi How much is the price
  ಶಿಯೋಮಿ ಬುಕ್‌ ಏರ್‌ 13 ಲ್ಯಾಪ್‌ಟಾಪ್


  ಇತರೆ ಫೀಚರ್ಸ್‌


  ಈ ಲ್ಯಾಪ್‌ಟಾಪ್ 8MP ವೆಬ್‌ಕ್ಯಾಮ್ ಅನ್ನು ಹೊಂದಿದ್ದು, ಎರಡು ಮೈಕ್ರೊಫೋನ್‌ಗಳು ಮತ್ತು ದೊಡ್ಡ ಟಚ್‌ಪ್ಯಾಡ್‌ನೊಂದಿಗೆ ಪ್ಯಾಕ್‌ ಆಗಿದೆ. ಕೀಬೋರ್ಡ್ ಬ್ಯಾಕ್‌ಲಿಟ್ ಫೀಚರ್ಸ್‌ ಹೊಂದಿದ್ದು, ಪವರ್ ಬಟನ್ ಸುತ್ತಲೂ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಆಯ್ಕೆಯನ್ನೂ ಸಹ ನೀಡಲಾಗಿದೆ. ಇನ್ನುಳಿದಂತೆ ಈ ಲ್ಯಾಪ್‌ಟಾಪ್ 1.2 ಕೆಜಿ ತೂಕ ಹೊಂದಿದ್ದು, 12 ಮಿ.ಮೀ ದಪ್ಪ ಇದೆ.


  ಬೆಲೆ ಹಾಗೂ ಲಭ್ಯತೆ


  ಬುಕ್ ಏರ್ 13 ಪ್ರಸ್ತುತ ಚೀನಾದಲ್ಲಿ ಮಾತ್ರ ಲಾಂಚ್‌ ಆಗಿದೆ. ಈ ಲ್ಯಾಪ್‌ಟಾಪ್‌ ಎರಡು ಕಾನ್ಫಿಗರೇಶನ್‌ಗಳಲ್ಲಿ ಲಭ್ಯ ಇದೆ. ಇದರಲ್ಲಿ ಬುಕ್ ಏರ್ 13 ಕೋರ್ i5-1230U ವೇರಿಯಂಟ್‌ಗೆ CNY 4999 ಅಂದರೆ ಭಾರತದಲ್ಲಿ ಸುಮಾರು 57,000 ರೂಪಾಯಿಗಳು ಇವೆ. ಹಾಗೆಯೇ ಮತ್ತು ಕೋರ್ i7-1250U CPU ವೇರಿಯಂಟ್‌ಗೆ CNY 5599 ಅಂದರೆ ಭಾರತದಲ್ಲಿ ಸುಮಾರು 63,800 ರೂಪಾಯಿ ಆಗಿದೆ.


  ಇದನ್ನೂ ಓದಿ: Xiaomi Redmi Note 12 ಸೀರಿಸ್‌ ರಿಲೀಸ್​ ಡೇಟ್​ ಫಿಕ್ಸ್​, ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಹೊಸ ಫೋನ್


  ಭಾರತವೂ ಸೇರಿದಂತೆ ಇತರೆ ದೇಶಗಳಲ್ಲಿ ಈ ಲ್ಯಾಪ್‌ಟಾಪ್‌ ಯಾವಾಗ ಲಭ್ಯ ಎಂಬುದರ ಬಗ್ಗೆ ಮಾಹಿತಿ ಇನ್ನು ಸ್ಪಷ್ಟನೆ ಇಲ್ಲ.

  Published by:Harshith AS
  First published: