• Home
  • »
  • News
  • »
  • tech
  • »
  • WhatsApp Update: ವಾಟ್ಸಾಪ್​ನಲ್ಲಿ ಕೊನೆಗೂ ಬಂತು ಬಹುಬೇಡಿಕೆಯ ಫೀಚರ್, ಬಳಕೆದಾರರು ಫುಲ್ ಖುಷ್

WhatsApp Update: ವಾಟ್ಸಾಪ್​ನಲ್ಲಿ ಕೊನೆಗೂ ಬಂತು ಬಹುಬೇಡಿಕೆಯ ಫೀಚರ್, ಬಳಕೆದಾರರು ಫುಲ್ ಖುಷ್

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ವಾಟ್ಸಾಪ್​ ಇದೀಗ ತನ್ನ ಗ್ರಾಹಕರಿಗಾಗಿ ಮೂಲ ಗುಣಮಟ್ಟದಲ್ಲೇ ಫೋಟೋಗಳನ್ನು ಶೇರ್​ ಮಾಡುವ ಫೀಚರ್​ ಅನ್ನು ಪರಿಚಯಿಸಿದೆ. ಇದು ಈ ಬಾರಿಯ ಹೊಸ ಫೀಚರ್​ ಆಗಿದ್ದು, ಇದನ್ನು ಯಾವ ರೀತಿ ಬಳಕೆ ಮಾಡುವುದು ಎಂದು ತಿಳಿಬೇಕಾದ್ರೆ ಈ ಲೇಖನವನ್ನು ಓದಿ.

  • Share this:

    WhatsApp Update: ವಾಟ್ಸಾಪ್​ನಲ್ಲಿ ಕೊನೆಗೂ ಬಂತು ಬಹುಬೇಡಿಕೆಯ ಫೀಚರ್, ಬಳಕೆದಾರರು ಫುಲ್ ಖುಷ್ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ (Messaging Application) ಆಗಿರುವ ವಾಟ್ಸಾಪ್​ ತನ್ನ ಬಳಕೆದಾರರಿಗೆ ದಿನ ಹೋದಂತೆ ಹೊಸ ಫೀಚರ್ಸ್​ಗಳನ್ನು ಪರಿಚಯಿಸುತ್ತಲೇ ಇದೆ. ವಾಟ್ಸಾಪ್ (WhatsApp)​ ಕಳೆದ ವರ್ಷದಲ್ಲಿ ತನ್ನ ಬಳಕೆದಾರರಿಗೆ ಅನುಕೂಲವಾಗುವಂತಹ ಸಾಕಷ್ಟು ಫೀಚರ್ಸ್​​ಗಳನ್ನು ಬಿಡುಗಡೆ ಮಾಡಿದೆ. ಅದರ ಜೊತೆಗೆ ಮುಂದಿನ ವರ್ಷದಲ್ಲಿ ಇನ್ನೂ ಹಲವಾರು ಫೀಚರ್ಸ್​ಗಳು ಬಿಡುಗಡೆಯಾಗಲಿವೆ ಎಂದು ಹೇಳಿತ್ತು. ಅದೇ ರೀತಿ ಇದೀಗ ಮೆಟಾ ಮಾಲೀಕತ್ವದಲ್ಲಿರುವ ವಾಟ್ಸಾಪ್​ ಬಳಕೆದಾರರ ಬಹುದಿನ ಬೇಡಿಕೆಯ ಫೀಚರ್​ ಅನ್ನು ಬಿಡುಗಡೆ ಮಾಡಿದೆ. ಈ ಮೂಲಕ ಎಷ್ಟೇ ಗುಣಮಟ್ಟದಲ್ಲಿದ್ದರೂ ಫೋಟೋಗಳನ್ನು (Photo Sharing Update) ಅದೇ ಫಾರ್ಮ್ಯಾಟ್​​ನಲ್ಲಿ ಶೇರ್​ ಮಾಡಬಹುದಾಗಿದೆ. ಇದು ಈ ಬಾರಿ ವಾಟ್ಸಾಪ್​ ಪರಿಚಯಿಸಿದ ಹೊಸ ಅಪ್ಡೇಟ್​ ಆಗಿದೆ.


    ವಾಟ್ಸಾಪ್​ ಇದೀಗ ತನ್ನ ಗ್ರಾಹಕರಿಗಾಗಿ ಮೂಲ ಗುಣಮಟ್ಟದಲ್ಲೇ ಫೋಟೋಗಳನ್ನು ಶೇರ್​ ಮಾಡುವ ಫೀಚರ್​ ಅನ್ನು ಪರಿಚಯಿಸಿದೆ. ಇದು ಈ ಬಾರಿಯ ಹೊಸ ಫೀಚರ್​ ಆಗಿದ್ದು, ಇದನ್ನು ಯಾವ ರೀತಿ ಬಳಕೆ ಮಾಡುವುದು ಎಂದು ತಿಳಿಬೇಕಾದ್ರೆ ಈ ಲೇಖನವನ್ನು ಓದಿ.


    ಏನಿದು ವಾಟ್ಸಾಪ್​ನ ಹೊಸ ಫೀಚರ್​?


    ವಾಟ್ಸಾಪ್​ನಲ್ಲಿ ಈ ಹಿಂದೆಲ್ಲಾ ಫೋಟೋಗಳನ್ನು ಇನ್ನೊಬ್ಬರಿಗೆ ಶೇರ್​ ಮಾಡಬೇಕಾದರೆ ಅದರ ಗುಣಮಟ್ಟವನ್ನು ಕಳೆದುಕೊಳ್ಳುತ್ತಿತ್ತು. ಆದರೆ ಇನ್ಮುಂದೆ ಆ ತೊಂದರೆ ಇರುವುದಿಲ್ಲ ಎಂದು ವಾಟ್ಸಾಪ್ ತಿಳಿಸಿದೆ. ಏಕೆಂದರೆ ಇನ್ಮುಂದೆ ಒಂದು ಫೋಟೋ ಯಾವ ಗುಣಮಟ್ಟದಲ್ಲಿದೆಯೋ ಅದೇ ಗುಣಮಟ್ಟದಲ್ಲಿ ಶೇರ್​ ಮಾಡುವಂತಹ ಆಯ್ಕೆಯೂ ಬರಲಿದೆ. ಈ ಮೂಲಕ ಯಾವುದೇ ಕ್ಲಾರಿಟಿಯ ಸಮಸ್ಯೆಗಳು ಎದುರಾಗುವುದಿಲ್ಲ.




    ಇದರಿಂದ ಉಪಯೋಗವೇನು?


    ವಾಟ್ಸಾಪ್‌ ಪರಿಚಯಿಸಲಿರುವ ಹೊಸ ಫೀಚರ್ಸ್‌ ನಿಮಗೆ ಫೋಟೋ ಗುಣಮಟ್ಟವನ್ನು ಆಯ್ಕೆ ಮಾಡಲು ಅನುಮತಿಸಲಿದೆ. ಅಂದರೆ ನೀವು ಸೆಂಡ್‌ ಮಾಡುವ ಫೋಟೋ ಗುಣಮಟ್ಟ ಹೇಗಿರಬೇಕು ಅನ್ನೊದನ್ನ ನೀವೇ ನಿರ್ಧಾರ ಮಾಡಬಹುದಾಗಿದೆ. ಇದರಿಂದ ನಿಮ್ಮ ಫೋಟೋ ಮೂಲ ಗುಣಮಟ್ಟದಲ್ಲಿ ಯಾವುದೇ ಬದಲಾವಣೆ ಇಲ್ಲದಂತೆ ಸೆಂಡ್‌ ಮಾಡುವ ಅವಕಾಶ ನಿಮಗೆ ಲಭ್ಯವಾಗಲಿದೆ. ಸದ್ಯ ಆಂಡ್ರಾಯ್ಡ್‌ ಡಿವೈಸ್‌ನಲ್ಲಿ ಈ ಫೀಚರ್ಸ್‌ ಲಭ್ಯವಾಗಲಿದ್ದು, ಇದು ಇತ್ತೀಚಿನ ಬೀಟಾ ಅಪ್‌ಡೇಟ್  2.23.2.11ನಲ್ಲಿ ಲಭ್ಯವಾಗಲಿದೆ ಎಂದು ವರಿದಯಾಗಿದೆ.


    3 ರೀತಿಯಲ್ಲಿ ಆಯ್ಕೆಯಿರುತ್ತದೆ


    ಇನ್ನು ವಾಟ್ಸಾಪ್​ ಪರಿಚಯಿಸಿರುವ ಈ ಹೊಸ ಫೀಚರ್ಸ್‌ ಬಳಕೆದಾರರಿಗೆ ಹೆಚ್ಚಿನ ರೆಸಲ್ಯೂಶನ್ ಹೊಂದಿರುವ ಫೋಟೋ ವನ್ನು ಶೇರ್​ ಮಾಡಲು ಅವಕಾಶ ನೀಡಲಿದೆ ಎಂದು ಹೇಳಲಾಗಿದೆ. ಇತ್ತೀಚಿನ ಬೀಟಾ ಆವೃತ್ತಿ 2.21.15.7 ನಲ್ಲಿ ಕೂಡ ವಾಟ್ಸಾಪ್‌ ಮೂರು ರೀತಿಯ ಫೋಟೋ ಗುಣಮಟ್ಟವನ್ನು ಆಯ್ಕೆ ಮಾಡುವ ಅವಕಾಶಗಳನ್ನು ಕಲ್ಪಿಸಿದೆ.


    ಸಾಂಕೇತಿಕ ಚಿತ್ರ


    ಇನ್ನು ಈ ಆಯ್ಕೆಯು ವಾಟ್ಸಪ್‌ ಸೆಟ್ಟಿಂಗ್ಸ್‌ನಲ್ಲಿ ಬಳಕೆದಾರರಿಗೆ ಬೇಕಾಗುವ ಹಾಗೆ ಸೆಟ್​ ಮಾಡಿಟ್ಟುಕೊಳ್ಳಬಹುದಾಗಿದೆ. ಇದನ್ನು ಟ್ಯಾಪ್‌ ಮಾಡುವ ಮೂಲಕ ಫೋಟೋ ಗುಣಮಟ್ಟವನ್ನು ಆಯ್ಕೆ ಮಾಡಬಹುದು ಮತ್ತು ಶೇರ್​ ಮಾಡಬಹುದು ಎಂದು ವಾಬೀಟಾಇನ್ಫೋ ವರದಿಯಲ್ಲಿ ತಿಳಿಸಿದೆ.


    ಇದನ್ನೂ ಓದಿ: ಹೆಚ್​ಪಿ ಕಂಪೆನಿಯ ಬಹುನಿರೀಕ್ಷಿತ ಲ್ಯಾಪ್​ಟಾಪ್​ ಮಾರುಕಟ್ಟೆಗೆ ಲಗ್ಗೆ! ಫೀಚರ್ಸ್​ ಹೇಗಿದೆ ಗೊತ್ತಾ?


    ಗ್ರಾಹಕರ ಅಗತ್ಯದ ಫೀಚರ್ ಇದಾಗಲಿದೆ


    ಈ ಕ್ವಾಲಿಟಿಯಲ್ಲಿ ಫೋಟೋ ಶೇರ್​ ಮಾಡುವ ಫೀಚರ್​​ ಗ್ರಾಹಕರು ಭಾರೀ ದಿನಗಳಿಂದ ಬಯಸುತ್ತಿದ್ದ ಫೀಚರ್ ಆಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ವಾಟ್ಶಾಪ್​ ಕೂಡ ಈ ಫೀಚರ್​ ಅನ್ನು ಪರಿಚಯಿಸಿದೆ. ಈ ಹಿಂದೆ ಒಂದು ಫೋಟೋವನ್ನು ಶೇರ್​ ಮಾಡುವಾಗ ಅದರ ಮೂಲ ಗುಣಮಟ್ಟದಲ್ಲಿ ಶೇರ್​ ಆಗಬೇಕಾದರೆ ಡಾಕ್ಯುಮೆಂಟ್​ ಮಾಡುವ ಮೂಲಕ ಶೇರ್​ ಮಾಡಬೇಕಿತ್ತು. ಆದರೆ ಇನ್ನು ಈ ರೀತಿಯ ವಿಧಾನದ ಅಗತ್ಯವನ್ನು ತಪ್ಪಿಸುವ ಕಾರಣಕ್ಕೆ ಈ ಫೀಚರ್​ ಅನ್ನು ಪರಿಚಯಿಸಲಾಗಿದೆ ಎಂದು ವಾಟ್ಸಾಪ್ ತಿಳಿಸಿದೆ.

    Published by:Prajwal B
    First published: