• Home
 • »
 • News
 • »
 • tech
 • »
 • Twitter: ಟ್ವಿಟರ್‌ಗೆ ಟಕ್ಕರ್‌ ನೀಡಲು ಸಜ್ಜಾಗಿದೆ ಮಾಸ್ಟೋಡಾನ್ ಅಪ್ಲಿಕೇಶನ್! ಏನಿದು ಹೊಸ ಆ್ಯಪ್‌ ಇಲ್ಲಿದೆ ಮಾಹಿತಿ

Twitter: ಟ್ವಿಟರ್‌ಗೆ ಟಕ್ಕರ್‌ ನೀಡಲು ಸಜ್ಜಾಗಿದೆ ಮಾಸ್ಟೋಡಾನ್ ಅಪ್ಲಿಕೇಶನ್! ಏನಿದು ಹೊಸ ಆ್ಯಪ್‌ ಇಲ್ಲಿದೆ ಮಾಹಿತಿ

ಟ್ವಿಟರ್‌ ಮತ್ತು ಮಾಸ್ಪೋಡನ್‌ ಅಪ್ಲಿಕೇಶನ್

ಟ್ವಿಟರ್‌ ಮತ್ತು ಮಾಸ್ಪೋಡನ್‌ ಅಪ್ಲಿಕೇಶನ್

ಇಲ್ಲಿ ಮಾಸ್ಟೋಡಾನ್​ ಎಂಬ ಅಪ್ಲಿಕೇಶನ್‌ ಟ್ವಿಟರ್‌ನ ಫೀಚರ್ಸ್‌ನಂತೆಯೇ ವಿಶೇಷತೆಗಳನ್ನು ಒಳಗೊಂಡಿದೆ. ಆದ್ದರಿಂದ ಬಹಳ ಬೇಗನೆ ಜನರನ್ನು ಆಕರ್ಷಿಸಿ ಇದೀಗ ಟ್ವಿಟರ್‌ಗೆ ಟಕ್ಕರ್‌ ನೀಡಲು ಸಜ್ಜಾಗಿದೆ.

 • Share this:

  ಟ್ವಿಟರ್ (Twitter) ಸಾಮಾಜಿಕ ಮಾಧ್ಯಮವನ್ನು (Social Media) ಎಲಾನ್ ಮಸ್ಕ್ (Elon Musk) ಸ್ವಾಧೀನಪಡಿಸಿಕೊಳ್ಳುತ್ತಿದ್ದಂತೆ ಉದ್ಯೋಗಿಗಳ ವಜಾ, ದುಡ್ಡು ಕೊಟ್ರೆ ಮಾತ್ರ ವೆರಿಫೈಯ್ಡ್ (Verified) ಬ್ಲೂ ಟಿಕ್ (Blue Tick) ಹೀಗೆ ಹಲವು ಮಹತ್ವದ ಬದಲಾವಣೆಗಳನ್ನು ತಂದಿದ್ದಾರೆ. ಈ ಎಲ್ಲಾ ನಿಯಮಗಳು (Rules) ಬಳಕೆದಾರರ ಆಕ್ರೋಶಕ್ಕೆ ಸಹ ಗುರಿಯಾಗಿದೆ. ಹೀಗಾಗಿ ಕೆಲವು ಬಳಕೆದಾರರು ಟ್ವಿಟರ್ ಪರ್ಯಾಯ ವೇದಿಕೆಗಳನ್ನು ಹುಡುಕಲು ಮುಂದಾಗಿದ್ದಾರೆ. ಈ ವೇದಿಕೆಗಳು ಟ್ವಿಟರ್‌ನಂತೆಯೇ ಫಿಚರ್ಸ್‌ ಅನ್ನು ಜನರಿಗೆ ನೀಡುತ್ತದೆ. ಟ್ವಿಟರ್‌ ಕೆಲವೊಂದು ಮಹತ್ತರವಾದ ಬದಲಾವಣೆಯಿಂದ ಈ ರೀತಿಯ ನಿರ್ಧಾರಗಳನ್ನು ಬಳಕೆದಾರರು ಕೈಗೊಂಡಿದ್ದಾರೆ.


  Ser


  ಟ್ವಿಟರ್‌ಗೆ ಮಾಸ್ಟೋಡಾನ್‌ ಟಕ್ಕರ್


  ಬಹುತೇಕ ಟ್ವಿಟರ್ ಬಳಕೆದಾರರು ಈಗ ಮಾಸ್ಟೋಡಾನ್‌ನತ್ತ ತಮ್ಮ ಚಿತ್ತ ಹರಿಸಿದ್ದಾರೆ. ಹೌದು, ಮಾಸ್ಟೋಡಾನ್ ಟ್ವಿಟರ್ ನಂತೆ  ಸಾಮಾಜಿಕ ಮಾಧ್ಯಮ ವೇದಿಕೆಯಾಗಿದೆ ಮತ್ತು ಮಾಸ್ಟೋಡಾನ್ ಅನ್ನು ಈಗಾಗಲೇ ಟ್ವಿಟರ್‌ನ ಪ್ರತಿಸ್ಪರ್ಧಿ ಎಂದು ಸಹ ಹೇಳಲಾಗುತ್ತಿದೆ.


  ಇದನ್ನೂ ಓದಿ: ಈಗಲೇ ನಿಮ್ಮ ಕ್ರೋಮ್ ಬ್ರೌಸರ್ ಅಪ್ಡೇಟ್ ಮಾಡಿ, ಇಲ್ಲವಾದಲ್ಲಿ ಹ್ಯಾಕ್ ಆಗೋದು ಪಕ್ಕಾ


  ಜನಪ್ರಿಯವಾಗುತ್ತಿದೆ ಮಾಸ್ಟೋಡಾನ್‌


  2016ರಲ್ಲಿ ಆರಂಭವಾದ ಈ ಮೈಕ್ರೋಬ್ಲಾಗಿಂಗ್‌ ವೇದಿಕೆ ಮಾಸ್ಟೋಡಾನ್‌ ಆರು ವರ್ಷಗಳ ಹಿಂಎದೆ ಪ್ರಾರಂಭವಾಗಿದೆ. ಆದರೆ ಇತ್ತೀಚೆಗೆ ಇದು ಜನಪ್ರಿಯ ವೇದಿಕೆಯಾಗುತ್ತಿದೆ. ಈ ಸಾಮಾಜಿಕ ನೆಟ್‌ವರ್ಕ್ ಈಗ 6 ಲಕ್ಷದ  55 ಸಾವಿರ ಬಳಕೆದಾರರನ್ನು ಹೊಂದಿದೆ, ಮತ್ತು ಕಳೆದ ವಾರದಲ್ಲಿ 2 ಲಕ್ಷದ 30 ಸಾವಿರಕ್ಕೂ ಹೆಚ್ಚು ಬಳಕೆದಾರರು ಇಲ್ಲಿ ಹೊಸದಾಗಿ ಸೇರ್ಪಡೆಯಾಗಿದ್ದಾರೆ.


  The Mastodon app is set to give Twitter a Tucker Here is the information about what is the new app
  ಮಾಸ್ಬೋಡನ್‌ ಆ್ಯಪ್‌


  ಹೇಗಿದೆ ಮಾಸ್ಟೋಡಾನ್‌?


  ನೀವು ಮೊದಲ ಬಾರಿಗೆ ಲಾಗ್ ಇನ್ ಮಾಡಿದಾಗ ನೀವು ವಿಭಿನ್ನ ವಿಷಯಕ್ಕಾಗಿ ವಿಭಿನ್ನ ಖಾತೆಗಳನ್ನು ಅನುಸರಿಸಬೇಕಾಗುತ್ತದೆ ಮತ್ತು ನೀವು ಆಸಕ್ತಿದಾಯಕ ವಿಷಯವನ್ನು ಪೋಸ್ಟ್ ಮಾಡಿದರೆ ನೀವು ಅನುಸರಿಸುವವರನ್ನು ಸಹ ಪಡೆಯಬಹುದು.


  ಇಲ್ಲಿ ಖಾತೆ ಬಳಕೆದಾರರು ಪೋಸ್ಟ್‌ಗಳನ್ನು ಬರೆಯಬಹುದು ಇದನ್ನು "ಟೂಟ್ಸ್" ಎಂದು ಕರೆಯುತ್ತಾರೆ. ಇಲ್ಲಿಯೂ ಸಹ ನೀವು ಲೈಕ್‌ ಮಾಡಬಹುದು, ರೀಪೋಸ್ಟ್‌ ಮಾಡಬಹುದು, ಫಾಲೋ ಕೂಡ ಮಾಡಬಹುದು.


  ಸರ್ವರ್‌ಗಳು ಯಾವುವು?


  ಮಾಸ್ಟೋಡಾನ್ ಟ್ವಿಟರ್ ನಂತೆ ಕೇಂದ್ರಿತ ಸಾಮಾಜಿಕ ವೇದಿಕೆಯಾಗಿದ್ದು ಇದರಲ್ಲಿ ಸರ್ವರ್ ಮೂಲಕ ಹಲವು ಗ್ರೂಪ್ ಗಳಿಗೆ ನೀವು ಸೇರಬಹುದಾಗಿದೆ. ಎಲ್ಲದ್ದಕ್ಕಿಂತ ಹೆಚ್ಚಾಗಿ ಇದೊಂದು ಓಪನ್ ಸೋರ್ಸ್ ವೇದಿಕೆಯಾಗಿರುವದರಿಂದ ಇದು ಹೆಚ್ಚಾಗಿ ಕ್ರೌಡ್ ಫಂಡಿಂಗ್ ಮೂಲಕ ತನ್ನ ಕಾರ್ಯಚಟುವಟಿಕೆಗಳನ್ನು ಸಕ್ರಿಯವಾಗಿರಿಸುತ್ತದೆ.


  ನೀವು ಸೈನ್ ಅಪ್ ಮಾಡಿದಾಗ ಮಾಡಬೇಕಾದ ಮೊದಲ ಕೆಲಸವೆಂದರೆ ಸರ್ವರ್ ಅನ್ನು ಆಯ್ಕೆ ಮಾಡುವುದು. ಇಲ್ಲಿ ಯುಕೆ, ಸಾಮಾಜಿಕ, ತಂತ್ರಜ್ಞಾನ, ಗೇಮಿಂಗ್ ಹೀಗೆ ಹಲವು ವಿಷಯಾಧಾರಿತ ಸರ್ವರ್‌ಗಳು ಇವೆ. ಇಲ್ಲಿ ನೀವು ಯಾವುದೇ ಸರ್ವರ್‌ ಹೊಂದಿದ್ದರೂ ಸಹ ಇತರರನ್ನು ಫಾಲೋ ಮಾಡಬಹುದು.


  ನೀವು ಜನರನ್ನು ಹುಡುಕುವುದು ಹೇಗೆ?


  ನೀವು ಆಯ್ಕೆಮಾಡುವ ಸರ್ವರ್ ನಿಮ್ಮ ಬಳಕೆದಾರರ ಹೆಸರಿನ ಭಾಗವಾಗುತ್ತದೆ. ಉದಾಹರಣೆಗೆ, ಒಬ್ಬರದ್ದು ಟ್ವಿಟರ್ ಅಕೌಂಟ್‌ ಹ್ಯಾಂಡಲ್, zsk ಆಗಿದೆ ಎಂದು ಭಾವಿಸೋಣ. ಮತ್ತು ಇಲ್ಲಿ ಅವರು UK ಸರ್ವರ್ ಅನ್ನು ಆಯ್ಕೆ ಮಾಡಿದ್ದಾರೆ ಎಂದಾದರೆ ಇಲ್ಲಿ ಆ ಬಳಕೆದಾರರ ಹೆಸರು @zsk@mastodonapp.uk ಎಂದಾಗುತ್ತದೆ.


  ನೀವು ಒಂದೇ ಸರ್ವರ್‌ನಲ್ಲಿದ್ದರೆ, ನೀವು ವ್ಯಕ್ತಿಯ ಹೆಸರನ್ನು ಬಳಸಿಕೊಂಡು ಹುಡುಕಬಹುದು, ಆದರೆ ಅವರು ಬೇರೆ ಸರ್ವರ್‌ನಲ್ಲಿದ್ದರೆ ನಿಮಗೆ ಅವರ ಪೂರ್ಣ ವಿಳಾಸ ಬೇಕಾಗುತ್ತದೆ. ನೀವು ಹ್ಯಾಶ್‌ಟ್ಯಾಗ್‌ಗಳನ್ನು ಸಹ ಹುಡುಕಬಹುದು.


  ಮಾಸ್ಟೋಡಾನ್ ಮಿತಿಗಳೇನು?


  ಎಲ್ಲಾ ಸರ್ವರ್‌ಗಳು ತಮ್ಮದೇ ಆದ ನಿಯಮಗಳನ್ನು ಹೊಂದಿರುತ್ತವೆ. ಕೆಲವು ಸರ್ವರ್‌ಗಳು ಹೆಚ್ಚಿನ ಪ್ರಮಾಣದ ದ್ವೇಷಪೂರಿತ ವಿಷಯವನ್ನು ಹೊಂದಿರುವಂತೆ ತೋರುವ ಇತರರಿಗೆ ಲಿಂಕ್ ಮಾಡದಿರಲು ಆಯ್ಕೆ ಮಾಡುತ್ತವೆ. ಎಲ್ಲಾ ಸಮುದಾಯಗಳು ಅಥವಾ ನಿದರ್ಶನಗಳಲ್ಲಿ ನಿರ್ದಿಷ್ಟ ನಿಯಮಗಳನ್ನು ರಚಿಸಲಾಗಿದೆ.


  The Mastodon app is set to give Twitter a Tucker Here is the information about what is the new app
  ಮಾಸ್ಬೋಡನ್‌ ಆ್ಯಪ್‌


  ಬಳಕೆದಾರರು ಅವುಗಳಲ್ಲಿ ಯಾವುದನ್ನಾದರೂ ಅನುಸರಿಸಲು ವಿಫಲವಾದರೆ, ನಿರ್ವಾಹಕರು ಖಾತೆಯನ್ನು ಅಥವಾ ಬಳಕೆದಾರರನ್ನು ಸಹ ನಿಷೇಧಿಸಬಹುದು. ಆದರೆ ಹೆಚ್ಚುವರಿಯಾಗಿ, ಮಾಸ್ಟೋಡಾನ್ ಸಾಮಾಜಿಕ ನೆಟ್‌ವರ್ಕ್ ಅನ್ಯದ್ವೇಷ, ಜನಾಂಗೀಯ, ಲೈಂಗಿಕ ಸಂದೇಶಗಳು ಮತ್ತು ಮಕ್ಕಳ ಅಶ್ಲೀಲತೆಯಂತಹ ಕನಿಷ್ಠ ಮಾನದಂಡಗಳನ್ನು ಹೊಂದಿದೆ.


  ಜಾಹೀರಾತುಗಳಿವೆಯೇ?


  ಸಾಮಾಜಿಕ ಜಾಲತಾಣಗಳನ್ನು ಬಳಸುವವರಿಗೆ ದೊಡ್ಡ ತಲೆನೋವೇ ಈ ಜಾಹೀರಾತುಗಳು. ಆದರೆ ವ್ಯತಿರಿಕ್ತವಾಗಿ ಮಾಸ್ಟೋಡಾನ್‌ನಲ್ಲಿ ಜಾಹೀರಾತುಗಳು ಇಲ್ಲ. ಇಲ್ಲಿ ನೀವು ಪೋಸ್ಟ್‌ಗಳನ್ನು ಹೇಗೆ ವೀಕ್ಷಿಸುತ್ತೀರಿ ಎಂಬ ವಿಷಯದಲ್ಲಿ ಮಾಡುವಂತೆ ಮಾಸ್ಟೋಡಾನ್ ಕೂಡ ಕ್ಯುರೇಟೆಡ್ ಅನುಭವವನ್ನು ನೀಡುವುದಿಲ್ಲ.


  ಇದು ಬಳಸಲು ಉಚಿತವೇ?


  ಎಲ್ಲಾ ಸಾಮಾಜಿಕ ಮಾಧ್ಯಮಗಳು ಸಹ ಅದರದ್ದೇ ಆದ ಕೆಲ ಅಪಾಯಗಳನ್ನು ಹೊಂದಿರುತ್ತವೆ. ಇದು ಬಳಕೆದಾರರು ಹೇಗೆ ಅದನ್ನು ಉಪಯೋಗಿಸುತ್ತಾರೆ ಎಂಬುದರ ಮೇಲೆ ನಿರ್ಧಾರವಾಗಿರುತ್ತದೆ.


  ಇದನ್ನೂ ಓದಿ: ನಿಮ್ಮ ಕಂಪ್ಯೂಟರ್ ನಿಧಾನವಾಗಿದೆಯೇ? ಈ ಟ್ರಿಕ್ಸ್‌ ಫಾಲೋ ಮಾಡಿ


  ಇಲ್ಲೂ ಸಹ ನೀವು ಯಾವ ಸರ್ವರ್‌ನಲ್ಲಿರುವಿರಿ ಎಂಬುದರ ಮೇಲೆ ಅವಲಂಬಿತವಾಗಿದೆ. ಕೆಲ ಸರ್ವರ್‌ಗಳು ದೇಣಿಗೆಯನ್ನು ಕೇಳುತ್ತಿದ್ದಾರೆ. ಆದರೆ ಮಾಸ್ಟೋಡಾನ್ ಹೆಚ್ಚಾಗಿ ಉಚಿತವಾಗಿದೆ.

  Published by:Harshith AS
  First published: