• Home
 • »
 • News
 • »
 • tech
 • »
 • Cheapest 5G Lava Mobile: ದೇಶದಲ್ಲೇ ಮೊದಲ ಬಾರಿಗೆ ಅತೀ ಕಡಿಮೆ ಬೆಲೆಯ 5ಜಿ ಮೊಬೈಲ್‌ ಬಿಡುಗಡೆ!

Cheapest 5G Lava Mobile: ದೇಶದಲ್ಲೇ ಮೊದಲ ಬಾರಿಗೆ ಅತೀ ಕಡಿಮೆ ಬೆಲೆಯ 5ಜಿ ಮೊಬೈಲ್‌ ಬಿಡುಗಡೆ!

ಲಾವಾ ಬ್ಲೇಜ್‌ 5ಜಿ ಮೊಬೈಲ್

ಲಾವಾ ಬ್ಲೇಜ್‌ 5ಜಿ ಮೊಬೈಲ್

ಇದೀಗ 5ಜಿ ಮೊಬೈಲ್ ಯುಗದಲ್ಲಿ‌ ದೇಶದಲ್ಲೇ ಮೊದಲ ಬಾರಿಗೆ ಅತೀ ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಈ ಮೊಬೈಲ್‌ ಉತ್ತಮ ಗುಣಮಟ್ಟದ ಫೀಚರ್ಸ್‌ ಅನ್ನು ಹೊಂದಿದೆ̤ ಅತೀ ಕಡಿಮೆ ಬೆಲೆಗೆ ಬಿಡುಗಡೆಯಾಗುತ್ತಿರುವ ಮೊಬೈಲ್‌ ಲಾವಾ ಬ್ಲೇಜ್‌ 5ಜಿ ಆಗಿದೆ

 • Share this:

  ಇತ್ತೀಚಿಗೆ 5ಜಿ ನೆಟ್‌ವರ್ಕ್‌ (5G Network) ಸೇವೆ ದೇಶದೆಲ್ಲೆಡೆ ಪ್ರಾರಂಭವಾಗಿದ್ದು. ಈ ಮಧ್ಯೆ 5ಜಿ ಮೊಬೈಲ್‌ಗಳನ್ನೇ (5G Mobiles) ಕಂಪನಿಗಳು ಉತ್ಪಾದಿಸುತ್ತಿದೆ. ಇದರಿಂದ ಗ್ರಾಹಕರು ಕೂಡ ಉತ್ತಮ ಗುಣಮಟ್ಟದ 5ಜಿ ಫೋನ್‌ಗಳನ್ನು ಖರೀದಿ ಮಾಡಲು ಕಾಯ್ತಾ ಇದ್ದಾರೆ. ಇತ್ತೀಚಿಗೆ ಮೊಬೈಲ್‌ ಬಳಕೆದಾರರ ಸಂಖ್ಯೆ ಕೂಡ ಹೆಚ್ಚುತ್ತಲೇ ಇದೆ. ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಮೊಬೈಲ್‌ ಕಂಪನಿಗಳು (Mobile Company) ತನ್ನ ಉತ್ಪನ್ನವನ್ನು ಹೆಚ್ಚಿಸುತ್ತಿದೆ. ಲಾಕ್‌ಡೌನ್‌ (Lockdown) ಆಗಿನಿಂದಂತೂ ಜನರು ಎಲ್ಲಾ ಕೆಲಸಗಳನ್ನು ಮೊಬೈಲ್‌ನಲ್ಲೇ ಮಾಡಲು ಶುರುಮಾಡಿದ್ದಾರೆ. ಆದರೆ ಕೆಲವೊಮ್ಮೆ ನೆಟ್‌ವರ್ಕ್‌ ಆಗಿರಬಹುದು, ಮೊಬೈಲ್‌ ಸಮಸ್ಯೆ ಆಗಿರಬಹುದು ಇವೆಲ್ಲವನ್ನು ಬಳಕೆದಾರರು ಎದುರಿಸುತ್ತಿದ್ದರು. ಆದರೆ ಇನ್ನು ಮುಂದೆ ಈ 5ಜಿ ನೆಟ್‌ವರ್ಕ್‌ ಅಥವಾ ಮೊಬೈಲ್ ಸೇವೆಯಿಂದ ಈ ಎಲ್ಲಾ ಸಮಸ್ಯೆಗಳು ದೂರವಾಗಬಹುದು. ಲಾವಾ ಬ್ಲೇಜ್‌ 5ಜಿ (Lava Blaze 5G) ಎಂಬ ಮೊಬೈಲ್‌ ಬಿಡುಗಡೆಯಾಗುತ್ತಿರುವ ಅತೀ ಕಡಿಮೆಯ ಮೊಬೈಲ್‌ ಆಗಿದೆ.


  ಇದೀಗ 5ಜಿ ಮೊಬೈಲ್ ಯುಗದಲ್ಲಿ‌ ದೇಶದಲ್ಲೇ ಮೊದಲ ಬಾರಿಗೆ ಅತೀ ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಈ ಮೊಬೈಲ್‌ ಉತ್ತಮ ಗುಣಮಟ್ಟದ ಫೀಚರ್ಸ್‌ ಅನ್ನು ಹೊಂದಿದೆ. ಅತೀ ಕಡಿಮೆ ಬೆಲೆಗೆ ಬಿಡುಗಡೆಯಾಗುತ್ತಿರುವ ಮೊಬೈಲ್‌ ಲಾವಾ ಬ್ಲೇಜ್‌ 5ಜಿ ಆಗಿದೆ


  ಲಾವಾ ಬ್ಲೇಜ್‌ 5ಜಿ ಮೊಬೈಲ್‌


  ಭಾರತದ ಪ್ರಮುಖ ಮೊಬೈಲ್ ತಯಾರಕರಾದ ಲಾವಾ (LAVA) ಅಂತಿಮವಾಗಿ ತನ್ನ ಕೈಗೆಟುಕುವ 5G ಸ್ಮಾರ್ಟ್‌ಫೋನ್ ಲಾವಾ ಬ್ಲೇಜ್ 5G (Lava Blaze 5G) ಅನ್ನು ಅಧಿಕೃತವಾಗಿ ಘೋಷಿಸಿದೆ. ಕೆಲವೇ ದಿನಗಳಲ್ಲಿ ಫೋನ್‌ನ ಫೀಚರ್ಸ್ ಬಗ್ಗೆ ಅತ್ಯಂತ ರಹಸ್ಯವಾಗಿಟ್ಟಿದ್ದ ಲಾವಾ ಇಂದು ಫೋನ್‌ನ ಬೆಲೆ ವಿವರಗಳನ್ನು ಬಹಿರಂಗಪಡಿಸಿದೆ.


  The lowest price 5G mobile launched for the first time in the country!
  ಲಾವಾ ಬ್ಲೇಜ್‌ 5ಜಿ ಮೊಬೈಲ್


  ವಾಸ್ತವವಾಗಿ ಈ ಫೋನ್‌ನ ಬೆಲೆ 10,000 ರೂಪಾಯಿಗಳ ಒಳಗೆ ಇರುತ್ತದೆ ಎಂದು ಈ ಹಿಂದೆ ಸುಳಿವು ನೀಡಿತ್ತು. ಈ ಲಾವಾ ಬ್ಲೇಜ್ 5G ಫೋನ್ ಬೆಲೆ ಕೇವಲ ರೂ.9999 ಆಗಿದ್ದರೂ ಸಹ ಫೋನ್‌ನ ವಿಶೇಷತೆಗಳು ಮತ್ತು ವೈಶಿಷ್ಟ್ಯಗಳು ಆಕರ್ಷಕವಾಗಿವೆ ಎಂಬುದರಲ್ಲಿ ಸಂದೇಹವಿಲ್ಲ.


  ಲಾವಾ ಬ್ಲೇಜ್ 5ಜಿ  ಫೀಚರ್ಸ್‌ಗಳು:


  • ಈ ಲಾವಾ ಬ್ಲೇಜ್ 5ಜಿ  ಸ್ಮಾರ್ಟ್‌ಫೋನ್ 6.5 ಇಂಚಿನ HD+ ರೆಸಲ್ಯೂಶನ್ ಮತ್ತು 90Hz ರಿಫ್ರೆಶ್ ರೇಟ್ ಡಿಸ್‌ಪ್ಲೇ ಹೊಂದಿದೆ.

  • ಡಿಸ್ಪ್ಲೇಯು ವಾಟರ್ ಡ್ರಾಪ್ ನಾಚ್ ವಿನ್ಯಾಸದೊಂದಿಗೆ ಬರುತ್ತದೆ ಮತ್ತು ನಾಚ್ 8MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

  • ಸೆಕ್ಯುರಿಟಿಯ ದೃಷ್ಟಿಯಿಂದ ಈ ಫೋನ್ ಹಿಂಭಾಗದಲ್ಲಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ.


  The lowest price 5G mobile launched for the first time in the country!
  ಲಾವಾ ಬ್ಲೇಜ್‌ 5ಜಿ ಮೊಬೈಲ್


  • ಲಾವಾ ಬ್ಲೇಜ್ 5ಜಿ ಅನ್ನು ಮೀಡಿಯಾಟೆಕ್ 5G ಪ್ರೊಸೆಸರ್ ಡೈಮೆನ್ಸಿಟಿ 700 ಆಕ್ಟಾ ಕೋರ್ ಪ್ರೊಸೆಸರ್ ಹೊಂದಿದೆ.‌

  • ಈ ಫೋನ್ 4G RAM ಮತ್ತು 3GB ವರ್ಚುವಲ್ RAM ವೈಶಿಷ್ಟ್ಯದೊಂದಿಗೆ ಬರುತ್ತದೆ. 

  •  ಇದಲ್ಲದೆ ಈ ಫೋನ್‌ನ ಇಂಟರ್ನಲ್‌ ಸ್ಟೋರೇಜ್ 128ಜಿಬಿ ಆಗಿರುತ್ತದೆ.


  ಕ್ಯಾಮೆರಾ ಮತ್ತು ಬ್ಯಾಟರಿ:

  • ಲಾವಾ ಬ್ಲೇಜ್ 5G (Lava Blaze 5G) ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್‌ಅನ್ನು ಹೊಂದಿದೆ.

  • ಮ್ಯಾಕ್ರೋ ಕ್ಯಾಮೆರಾಗಳೊಂದಿಗೆ EIS ಬೆಂಬಲದೊಂದಿಗೆ 50MP ಮೈನ್ ಕ್ಯಾಮೆರಾವನ್ನು ಒಳಗೊಂಡಿದೆ.‌

  • ಈ 5ಜಿ ಸ್ಮಾರ್ಟ್‌ಫೋನ್ Android 12 OS ನಲ್ಲಿ ಕಾರ್ಯನಿರ್ವಹಿಸುತ್ತದೆ.‌

  • ಇದು 5,000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.

  • ಇನ್ನು ಈ ಫೋನ್‌ನ ನೆಟ್‌ವರ್ಕ್‌ ಫೀಚರ್ಸ್‌ ಬಗ್ಗೆ ಹೇಳುವುದಾದರೆ ಇದು ಡ್ಯುಯಲ್ ಸಿಮ್, ವೈ-ಫೈ 6, ಬ್ಲೂಟೂತ್ 5.1, ಜಿಪಿಎಸ್, ಯುಎಸ್‌ಬಿ ಟೈಪ್-ಸಿ ಪೋರ್ಟ್ ಮತ್ತು 3.5 ಎಂಎಂ ಆಡಿಯೊ ಜಾಕ್ ಅನ್ನು ಬೆಂಬಲಿಸುತ್ತದೆ.

  Published by:Harshith AS
  First published: