Longest Call In The World: ಈ ಮಹಾನುಭಾವರು ಮಾತಾಡಿದ್ದು ಬರೋಬ್ಬರಿ 46 ಗಂಟೆ! ಇದು ಜಗತ್ತಿನ ಅತೀ ದೀರ್ಘ ಫೋನ್ ಕಾಲ್!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Tech News: ಸಾಮಾನ್ಯವಾಗಿ ನಾವು ಏನಾದರು ಅಗತ್ಯವಿದ್ದಾಗ ಯಾರಿಗಾದರು ಕಾಲ್​ ಹೆಚ್ಚೆಂದರೆ ಒಂದರಿಂದ 2 ಗಂಟೆಗಳ ಕಾಲ ಮಾತನಾಡುತ್ತೇವೆ. ಆದರೆ ಇಲ್ಲೊಬ್ಬರು ಮೊಬೈಲ್​​ನಲ್ಲಿ ಕರೆಯಲ್ಲಿ ಮಾತನಾಡಿದ ಸಮಯ ಕೇಳಿದ್ರೆ ಶಾಕ್​ ಆಗ್ತೀರಾ. ಇದೆ ಅಂತೆ ವಿಶ್ವದ ಅತೀ ಹೆಚ್ಚು ಸಮಯಗಳ ಕಾಲ ಮಾತನಾಡಿದ ಕರೆ.

ಮುಂದೆ ಓದಿ ...
  • Share this:

ಇಂದಿನ ದಿನದಲ್ಲಿ ಮೊಬೈಲ್ (Mobile) ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಫೋನ್ ಬಳಸುತ್ತಿದ್ದಾರೆ. ಇಂದಿನ ಯುಗದಲ್ಲಿ ಫೋನ್ ಇಲ್ಲದೆ ಬದುಕುವುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಕೇವಲ ವಾಯ್ಸ್ ಕಾಲ್, ವಿಡಿಯೋ ಕಾಲ್, ಫೋನ್ ನಿಂದ ಮೆಸೇಜ್ ಗಳಂತಹ ಪ್ರಮುಖ ಕೆಲಸಗಳನ್ನು ಮಾಡುವುದಲ್ಲದೇ, ಇದರೊಂದಿಗೆ ಬ್ಯಾಂಕ್ ಮತ್ತು ಪೇಮೆಂಟ್​​ಗೆ ಸಂಬಂಧಿಸಿದ ಕೆಲಸವೂ ನಡೆಯುತ್ತದೆ. ಅಂದಹಾಗೆ, ಫೋನ್ ಅನ್ನು ಹಲವು ವರ್ಷಗಳಿಂದ ಬಳಸಲಾಗುತ್ತಿದೆ ಮತ್ತು ನಾವು ಪ್ರತಿದಿನ ಜನರೊಂದಿಗೆ ಗಂಟೆಗಟ್ಟಲೆ ಮಾತನಾಡುತ್ತೇವೆ. ಆದರೆ ಜಗತ್ತಿನಲ್ಲಿ ಯಾರು ಹೆಚ್ಚು ಕಾಲ ಮಾತನಾಡುತ್ತಾರೆ ಅಥವಾ ವಿಶ್ವದ ಅತಿ ಹೆಚ್ಚು ಸಮಯ ಮಾತನಾಡಿದ ಫೋನ್​ ಕರೆಯ (The Longest Phone Call In The World) ಅವಧಿ ಎಷ್ಟು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? 


ಹೌದು, ಸಾಮಾನ್ಯವಾಗಿ ನಾವು ಏನಾದರು ಅಗತ್ಯವಿದ್ದಾಗ ಯಾರಿಗಾದರು ಕಾಲ್​ ಹೆಚ್ಚೆಂದರೆ ಒಂದರಿಂದ 2 ಗಂಟೆಗಳ ಕಾಲ ಮಾತನಾಡುತ್ತೇವೆ. ಆದರೆ ಇಲ್ಲೊಬ್ಬರು ಮೊಬೈಲ್​​ನಲ್ಲಿ ಕರೆಯಲ್ಲಿ ಮಾತನಾಡಿದ ಸಮಯ ಕೇಳಿದ್ರೆ ಶಾಕ್​ ಆಗ್ತೀರಾ. ಇದೆ ಅಂತೆ ವಿಶ್ವದ ಅತೀ ಹೆಚ್ಚು ಸಮಯಗಳ ಕಾಲ ಮಾತನಾಡಿದ ಕರೆ.


ಸುಮಾರು 46 ಗಂಟೆಗಳಿಗೂ ಹೆಚ್ಚು ಕಾಲ ಮಾತುಕತೆ ನಡೆದಿದೆ


ಈ ಫೋನ್ ಕರೆ ಎರಿಕ್ ಆರ್ ಬ್ರೂಸ್ಟರ್ ಮತ್ತು ಹಾರ್ವರ್ಡ್ ವಿಶ್ವವಿದ್ಯಾನಿಲಯದ ಆವೆರಿ ಎ ಲಿಯೊನಾರ್ಡ್ ನಡುವೆ ನಡೆದಿದೆ. ಇಬ್ಬರೂ ಸುಮಾರು 46 ಗಂಟೆ 12 ನಿಮಿಷ 52 ಸೆಕೆಂಡ್ ಗಳ ಕಾಲ ಕಾಲ್ ಕಟ್ ಮಾಡದೆ ಮಾತನಾಡಿದ್ದಾರೆ. ವಿಶೇಷವೆಂದರೆ, ಮಾನಸಿಕ ಒತ್ತಡವನ್ನು ತಪ್ಪಿಸಲು, ಇಬ್ಬರೂ ತಮ್ಮ ಶಕ್ತಿಯನ್ನು ಮರಳಿ ತರಲು ಪ್ರತಿ ಗಂಟೆಗೆ 5 ನಿಮಿಷಗಳ ವಿರಾಮವನ್ನು ನೀಡುತ್ತಿದ್ದರು.


ಇದನ್ನೂ ಓದಿ: ಗೂಗಲ್​ ಪೇ, ಫೋನ್​ ಪೇ ಬಳಸೋ ಮುನ್ನ ಎಚ್ಚರ, ಸ್ವಲ್ಪ ಯಾಮಾರಿದ್ರೂ ಬ್ಯಾಂಕ್​ ಅಕೌಂಟ್​ ಖಾಲಿ!


2009ರಲ್ಲಿ ಮತ್ತೊಂದು ದಾಖಲೆ


ಎರಿಕ್ ಆರ್. ಬ್ರೂಸ್ಟರ್ ಮತ್ತು ಆವೆರಿ ಎ. ಲಿಯೊನಾರ್ಡ್ ನಡುವಿನ ಈ ಕರೆಯು ಚಿಟ್-ಚಾಟ್ ಶೋನಲ್ಲಿ ನಡೆದಿದೆ ಎಂಬುದು ಗಮನಾರ್ಹವಾಗಿದೆ ಈ ಕರೆಗೂ ಮುನ್ನ 2009ರಲ್ಲಿ ಸುನೀಲ್ ಪ್ರಭಾಕರ್ ಅವರು ಸುದೀರ್ಘ ಫೋನ್ ಕರೆ ಮಾಡಿ ದಾಖಲೆ ಮಾಡಿದ್ದರು. ಅವರು ಸುಮಾರು 51 ಗಂಟೆಗಳ ಕಾಲ ಫೋನ್ ಕರೆಯಲ್ಲಿ ಮಾತನಾಡಿದ್ದಾರೆ. ಆದರೆ ಇದರಲ್ಲಿ ಅವರೊಂದಿಗೆ ಬೇರೆ ಬೇರೆ ಜನರು ಮಾತನಾಡಿದ್ದಾರೆ. ಆದರೆ 2012ರ ದಾಖಲೆಯಲ್ಲಿ ಇಬ್ಬರೇ 46 ಗಂಟೆಗಳ ಕಾಲ ಮಾತನಾಡಿರುವುದು ವಿಶೇಷವಾಗಿದೆ.


ಸಾಂದರ್ಭಿಕ ಚಿತ್ರ


ವಿಶ್ವದ ಅತೀ ಉದ್ದದ ಫೋನ್​ ಕರೆ


ಜಗತ್ತಿನಾದ್ಯಂತ ಮೊದಲ ಬಾರಿಗೆ ಕೇವಲ ಎರಡು ಜನರು 46 ಗಂಟೆಗಳ ಕಾಲ ನಿರಂತರವಾಗಿ ಮಾತನಾಡಿರುವುದು. ಆದ್ದರಿಂದ ಇದನ್ನೇ ವಿಶ್ವದ ಅತೀ ಉದ್ದ ಫೋನ್ ಕರೆಯೆಂದು ಗುರುತಿಸಲಾಗಿದೆ.


ವಿಶ್ವದ ಮೊದಲ ಎಸ್​ಎಮ್​ಎಸ್​ ಯಾರು ಮಾಡಿದ್ದು?


ಮೊದಲ ಎಸ್ಎಂಎಸ್ ಅನ್ನು ವೊಡಾಫೋನ್ ಎಂಜಿನಿಯರ್ ನೀಲ್ ಪ್ಯಾಪ್‌ವರ್ತ್ ಅವರು ತಮ್ಮ ಇತರ ಪಾಲುದಾರರಾದ ರಿಚರ್ಡ್ ಜಾರ್ವಿಸ್‌ಗೆ ಕಂಪ್ಯೂಟರ್‌ನಿಂದ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ. ಆಗ ರಿಚರ್ಡ್ ಜಾರ್ವಿಸ್ ಕಂಪನಿಯ ನಿರ್ದೇಶಕರಾಗಿದ್ದರು. ಈ ಎಸ್​ಎಮ್​ಎಸ್​​ ಅವರಿಗೆ ಆರ್ಬಿಟಲ್ 901 ಹ್ಯಾಂಡ್‌ಸೆಟ್‌ನಲ್ಲಿ ಕಳುಹಿಸಲಾಗಿದೆ.


ಕ್ರಿಸ್ಮಸ್ ಹಬ್ಬದ ಕುರಿತು ಸಂದೇಶ ರವಾನೆ


ಮೊದಲ ಬಾರಿಗೆ ನೀಲ್​ ಪ್ಯಾಪ್​ವರ್ತ್​ ಅವರು ಜಾರ್ವಿಸ್​ ಅವರಿಗೆ ತಮ್ಮ ಆರ್ಬಿಟಲ್ 901 ಹ್ಯಾಂಡ್​ಸೆಟ್​ನಲ್ಲಿ ಮೆಸೇಜ್ ಕಳುಹಿಸಿದರು. ಅದರಲ್ಲಿ ಕ್ರಿಸ್ಮಸ್ ಹಬ್ಬದ ಶುಭಾಶಯಗಳು ಎಂದು ಮೆಸೇಜ್ ಕಳುಹಿಸಿದ್ದಾರೆ.




ವೊಡಫೋನ್​ನಿಂದ ಮೊದಲ ಟೆಕ್ಸ್ಟ್​​ ಮೆಸೇಜ್:

top videos


    ಈ ಸಂದೇಶದಲ್ಲಿ 14 ಅಕ್ಷರಗಳನ್ನು ಬಳಸಲಾಗಿದೆ. ಇದನ್ನು 1992 ರಲ್ಲಿ ಮೊದಲಿಗೆ ಕಳುಹಿಸಲಾಗಿದೆ. ಪ್ರಪಂಚದ ಮೊದಲ ಟೆಕ್ಸ್ಟ್​ ಮೆಸೇಜ್​​ ಅನ್ನು ವೊಡಾಫೋನ್ ಕಳುಹಿಸಿದೆ ಎಂದು ಹೇಳಲಾಗಿದೆ. ಫ್ರಾಂಕೋ-ಜರ್ಮನ್ ಜಿಎಸ್​ಎಮ್ ಸಹಯೋಗದಲ್ಲಿ ಫ್ರೈಡೆಲ್ಮ್ ಹಿಲ್ಲರ್‌ಬ್ರಾಂಡ್ ಮತ್ತು ಬರ್ನಾರ್ಡ್ ಗಿಲ್ಬರ್ಟ್ ಅವರು 1984 ರಲ್ಲಿ ಎಸ್​ಎಮ್​ಎಸ್​​ ಪರಿಕಲ್ಪನೆಯನ್ನು ಮೊದಲು ರಚಿಸಿದವರಾಗಿದ್ದಾರೆ.

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು