ಎಲೆಕ್ಟ್ರಾನಿಕ್ಸ್ ಡಿವೈಸ್ಗಳು (Electronics Device) ಮಾರುಕಟ್ಟೆಗೆ ಈ ಬಾರಿ ಹಲವಾರು ಬಿಡುಗಡೆಯಾಗಿವೆ. ಬೇರೆ ಬೇರೆ ರೀತಿಯಲ್ಲಿ ಮಾರುಕಟ್ಟೆಗೆ ಡಿವೈಸ್ಗಳನ್ನು ಪರಿಚಯಿಸುವ ಮೂಲಕ ಕಂಪೆನಿಗಳು ಸಹ ಗ್ರಾಹಕರನ್ನು ತನ್ನತ್ತ ಆಕರ್ಷಿಸುತ್ತಿದೆ. ಇದೀಗ ಎಲೆಕ್ಟ್ರಾನಿಕ್ಸ್ ಡಿವೈಸ್ಗಳನ್ನು ಪರಿಚಯಿಸುವ ಮೂಲಕ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಲ್ಲಿರುವ ಕಂಪೆನಿಯೆಂದರೆ ವೀವ್ಸೋನಿಕ್ ಕಂಪೆನಿ. ಈ ಕಂಪೆನಿ ಕಳೆದ ಅಕ್ಟೋಬರ್ನಲ್ಲಿ ಎರಡು ಮಾನಿಟರ್ಗಳನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಇವುಗಳಿಗೆ ವೀವ್ಸೋನಿಕ್ VA3209-MH (ViewSonic VA3209-MH) ಮತ್ತು ವೀವ್ಸೋನಿಕ್ VA3209-2K-MHD ಎಂದು ಹೆಸರಿಸಲಾಗಿದೆ. ಇದರ ನಡುವೆ ಮತ್ತೆ ವಿಭಿನ್ನ ಶೈಲಿಯ ಎರಡು ಮಾನಿಟರ್ಗಳನ್ನು (Monitors) ಅನಾವರಣ ಮಾಡಲಾಗಿದೆ.
ಸದ್ಯ ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಯಲ್ಲಿ ಭಾರೀ ಸಂಚಲನದಲ್ಲಿರುವ ಕಂಪೆನಿಯೆಂದರೆ ವೀವ್ಸೋನಿಕ್ ಕಂಪೆನಿ. ಈ ಕಂಪೆನಿ ಇದೀಗ ತನ್ನ ಬ್ರಾಂಡ್ನ ಅಡಿಯಲ್ಲಿ ಎರಡು ಮಾನಿಟರ್ಗಳನ್ನು ಪರಿಚಯಿಸಿದೆ. ವೀವ್ಸೋನಿಕ್ನ VG56V ಸೀರಿಸ್ನಲ್ಲಿ ವೀವ್ಸೋನಿಕ್ VG2456V ಮತ್ತು ವೀವ್ಸೋನಿಕ್ VG2756V ಎಂಬ 2ಕೆ ರೆಸಲ್ಯೂಶನ್ ಸಾಮರ್ಥ್ಯದ ಮಾನಿಟರ್ಗಳನ್ನು ಪರಿಚಯಿಸಿದೆ.
ವೀವ್ಸೋನಿಕ್ ಮಾನಿಟರ್ನ ಫೀಚರ್ಸ್ ಹೇಗಿದೆ?
ವೀವ್ಸೋನಿಕ್ VG56V ಸೀರಿಸ್ನ VG2456V ಮತ್ತು ಉನ್ನತ-ಮಟ್ಟದ VG2756V 2ಕೆ ರೆಸಲ್ಯೂಶನ್ನ ಮಾನಿಟರ್ಗಳು ಎರಡು ಕ್ರಮವಾಗಿ ಫುಲ್ ಹೆಚ್ಡಿ ಡಿಸ್ಪ್ಲೇಯನ್ನು ಹೊಂದಿದೆ. ಇದರಲ್ಲಿ 2 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು 5 ಮೆಗಾಪಿಕ್ಸೆಲ್ ಪಾಪ್ ಅಪ್ ಕ್ಯಾಮೆರಾ ಫೀಚರ್ಸ್ ಅನ್ನು ಹೊಂದಿಕೊಂಡಿದೆ.
ಈ ಮೂಲಕ ಹೊಸ ಮಾನಿಟರ್ಗಳು ವಿಶೇಷವಾಗಿ ಪಾಪ್-ಅಪ್ ಕ್ಯಾಮೆರಾದ ಮೂಲಕವೇ ಹೆಚ್ಚು ಸದ್ದು ಮಾಡುತ್ತಿದ್ದು, ಮುಂಭಾಗದ ಕ್ಯಾಮೆರಾ ಕಟೌಟ್ಗಳನ್ನು ತೆಗೆದುಹಾಕಲು ಮತ್ತು ಹೊಸ ಅನುಭವವನ್ನು ನೀಡಲು ವೀವ್ಸೋನಿಕ್ ಕಂಪೆನಿ ಮುಂದಾಗಿದೆ ಎಂದು ಈ ಮೂಲಕ ತಿಳಿಯಬಹುದಾಗಿದೆ. ಈ ಹಿಂದೆ ಪಾಪ್ಅಪ್ ಕ್ಯಾಮೆರಾಗಳನ್ನು ಸ್ಮಾರ್ಟ್ಫೋನ್ಗಳಲ್ಲಿಯೂ ಒಂದೆರಡು ಕಂಪೆನಿಗಳು ಬಳಸಿತ್ತು ಆದರೆ ಅದು ಸರಿಯಾಗಿ ಬಳಕೆಯಾಗದ ಕಾರಣ ನಂತರದಲ್ಲಿ ಆ ಫೀಚರ್ ಅನ್ನು ಕೈಬಿಡಲಾಯಿತು.
ಕ್ಯಾಮೆರಾದ ವಿನ್ಯಾಸ
ವೀವ್ ಸೋನಿಕ್ನ ಹೊಸ ಪಾಪ್-ಅಪ್ ಕ್ಯಾಮೆರಾಗಳು ಕೆಲವು ಆರಂಭಿಕ ಮೂಲ ಮಾದರಿಗಳನ್ನು ಮೀರಿ ಪ್ರಗತಿ ಸಾಧಿಸಿದ್ದು, ಎರಡೂ ಬದಿಗಳಲ್ಲಿ ಹೊಸ ರೀತಿಯ ಫಿಲ್-ಲೈಟ್ ಎಲ್ಇಡಿಗಳಿಂದ ಇನ್ನಷ್ಟು ಆಕರ್ಷಣೀಯ ಚಿತ್ರಗಳನ್ನು ಸೆರೆಹಿಡಿಯಲು ಅನುವು ಮಾಡಿಕೊಡಲಿವೆ. ಹೆಚ್ಚುವರಿಯಾಗಿ ವಿಡಿಯೋ ರೆಕಾರ್ಡ್ ಮಾಡುವಾಗ ಅಥವಾ ಮೀಟಿಂಗ್ನಲ್ಲಿ ಭಾಗಿಯಾಗಿರುವಾಗ ಬಣ್ಣದಲ್ಲಿ ಹಾಗೂ ಇತರೆ ವಿಭಾಗದಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳುವ ಮೂಲಕ ಅತ್ಯಾಕರ್ಷಕವಾಗಿ ಕಾಣಿಸಿಕೊಳ್ಳುವಂತೆ ಮಾಡಬಹುದಾಗಿದೆ.
ಕ್ಯಾಮೆರಾವನ್ನು ರೊಟೇಶನ್ ಮಾಡಬಹುದು
ಇದಷ್ಟೇ ಅಲ್ಲದೆ ಈ ಸಾಧನದಲ್ಲಿರುವಂತಹ ಕ್ಯಾಮೆರಾವನ್ನು ಯಾವುದೇ ದಿಕ್ಕಿನಲ್ಲಿ ಅಂದರೆ ಹಿಂದಕ್ಕೆ ಅಥವಾ ಮುಂದಕ್ಕೆ 5 ಡಿಗ್ರಿಗಳಷ್ಟು ತಿರುಗಿಸಬಹುದಾದ ಆಯ್ಕೆ ಸಹ ನೀಡಲಾಗಿದೆ. ಇದರೊಂದಿಗೆ ಈ ಮಾನಿಟರ್ಗಳು ಡ್ಯುಯಲ್ ಸ್ಪೀಕರ್ಗಳು ಮತ್ತು ಎರಡು ಮಾದರಿಯ ಮೈಕ್ರೊಫೋನ್ಗಳೊಂದಿಗೆ ಪ್ಯಾಕ್ ಆಗಿದೆ.
ಈ ಮೂಲಕ ಯಾವುದೇ ಮೀಟಿಂಗ್ನಲ್ಲಿ ಭಾಗವಹಿಸಬೇಕಾದರೆ ಬೇರೆ ನಾಯ್ಸ್ಗಳ ಬಗ್ಗೆ ತೊಂದರೆ ಇರುವುದಿಲ್ಲ. . ಇನ್ನು ಕ್ಯಾಮೆರಾ ಬಳಕೆ ಮುಗಿದ ನಂತರ ಬಳಕೆದಾರರು ಮಾನಿಟರ್ಗಳ ಬಾಡಿಗೆ ಸುಲಭವಾಗಿ ಕ್ಯಾಮೆರಾವನ್ನು ಇನ್ ಮಾಡಬಹುದಾಗಿದೆ. ಈ ದೊಡ್ಡ ಡಿಸ್ಪ್ಲೇ ಆಯ್ಕೆ ಇರುವ ಮಾನಿಟರ್ನಲ್ಲಿ ಪಾಪ್ ಆಪ್ ಕ್ಯಾಮೆರಾ ಪ್ರಮುಖ ಕಾರ್ಯವನ್ನು ನಿರ್ವಹಿಸುತ್ತವೆ ಎಂದು ವೀವ್ಸೋನಿಕ್ ಕಂಪೆನಿ ಹೇಳಿದೆ.
ಇದನ್ನೂ ಓದಿ: ರಿಪಬ್ಲಿಕ್ ಡೇ ಸೇಲ್ ಆರಂಭ! ಈ 3 ಸ್ಮಾರ್ಟ್ಫೋನ್ಗಳ ಮೇಲೆ ಭರ್ಜರಿ ರಿಯಾಯಿತಿ
ಬೆಲೆ ಮತ್ತು ಲಭ್ಯತೆ
ವೀವ್ಸೋನಿಕ್ನ VG246V ಮತ್ತು VG2756V-2K ಮಾನಿಟರ್ಗಳನ್ನು ಯುಎಸ್ನ ಆನ್ಲೈನ್ ಸ್ಟೋರ್ಗಳಲ್ಲಿ ಖರೀದಿ ಮಾಡಬಹುದಾಗಿದೆ. VG246V ಮಾನಿಟರ್ಗೆ US$358.99 ಅಂದರೆ ಭಾರತದಲ್ಲಿ ಸುಮಾರು 29,165.68 ರೂಪಾಯಿ ಎಂದು ನಿರ್ಧರಿಸಲಾಗಿದೆ ಹಾಗೂ VG2756V-2K ಗೆ US$480.99 ಅಂದರೆ ಭಾರತದಲ್ಲಿ ಸುಮಾರು 39,079.33 ರೂಪಾಯಿಗಳು ಎಂದು ಬೆಲೆ ನಿಗದಿ ಮಾಡಲಾಗಿದೆ. ಹಾಗೆಯೇ VG2756V-2K ಸದ್ಯಕ್ಕೆ ಅಮೆಜಾನ್ನಲ್ಲಿ US$459.99 ಅಂದರೆ ಭಾರತದಲ್ಲಿ ಸುಮಾರು 37,373.13 ರೂ. ಗಳಿಗೆ ಲಭ್ಯವಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ