Noise Buds Combat: 36 ಗಂಟೆಗಳ ಬ್ಯಾಟರಿ ಬ್ಯಾಕಪ್​ ಹೊಂದಿರುವ ನಾಯ್ಸ್​ ಕಂಪೆನಿಯ ಹೊಸ ಇಯರ್​​ಬಡ್ಸ್​ ಲಾಂಚ್​!

ನಾಯ್ಸ್​ ಬಡ್ಸ್​ ಕಾಂಬ್ಯಾಟ್​

ನಾಯ್ಸ್​ ಬಡ್ಸ್​ ಕಾಂಬ್ಯಾಟ್​

ನಾಯ್ಸ್​ ಕಂಪೆನಿ ಇದೀಗ ತನ್ನ ಬ್ರಾಂಡ್​ನ ಅಡಿಯಲ್ಲಿ ನಾಯ್ಸ್​ ಬಡ್ಸ್​ ಕಾಂಬ್ಯಾಟ್​ ಎಂಬ ಇಯರ್​​ಬಡ್ಸ್​ ಅನ್ನು ಅನಾವರಣ ಮಾಡಲು ರೆಡಿಯಾಗಿದೆ.ಇದು ಗೇಮರ್​​ಗಳಿಗೆ ಉತ್ತಮ ಸೌಂಡ್​ ಅನುಭವವನ್ನು ನೀಡಲಿದ್ದು, ಉತ್ತಮ ವಿನ್ಯಾಸವನ್ನೂ ಒಳಗೊಂಡಿದೆ. ಹಾಗಿದ್ರೆ ಈ ನಾಯ್ಸ್​ ಇಯರ್​​ಬಡ್ಸ್​ನ ಫೀಚರ್ಸ್​ ಹೇಗಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.

ಮುಂದೆ ಓದಿ ...
 • Share this:

  ಇಯರ್​ ಬಡ್ಸ್​ಗಳೆಂದರೇ (Earbuds) ಯಾರಿಗೆ ಇಷ್ಟ ಇಲ್ಲ ಹೇಳಿ. ಹಿಂದೆಲ್ಲಾ ಯಾವುದಾರೂ ಸಾಂಗ್​ ಕೇಳಿಕ್ಕೋ, ಇನ್ನೊಬ್ಬರೊಂದಿಗೆ ಫೋನ್​ನಲ್ಲಿ ಮಾತಾಡ್ಬೇಕಾದರೆ ಇಯರ್​ಫೋನ್​ಗಳನ್ನು ಬಳಸುತ್ತಿದ್ದರು. ಆದರೆ ಈಗ ಎಲ್ಲಿ ನೋಡಿದರೂ ಇಯರ್​ಬಡ್ಸ್​ಗಳೇ ಕಾಣುತ್ತದೆ. ಸ್ಮಾರ್ಟ್​​ ಡಿವೈಸ್​ಗಳನ್ನು (Smart Device) ಬಿಡುಗಡೆ ಮಾಡುವ ಕಂಪೆನಿಗಳಲ್ಲಿ ನಾಯ್ಸ್​ ಕಂಪೆನಿ ಬಹಳಷ್ಟು ಜನಪ್ರಿಯತೆಯನ್ನು ಪಡೆದಿದೆ. ನಾಯ್ಸ್​ ಕಂಪೆನಿ (Noise Company) ಇದುವೆರೆಗೆ ಸಾಕಷ್ಟು ಇಯರ್​ಬಡ್ಸ್​ಗಳನ್ನು, ಹೆಡ್​ಫೋನ್​ಗಳನ್ನು, ಸ್ಮಾರ್ಟ್​​ವಾಚ್​ಗಳನ್ನು ಬಿಡುಗಡೆ ಮಾಡಿದೆ. ಈ ಸಾಧನಗಳಿಗೆ ಈಗಲೂ ಬಹಳಷ್ಟು ಬೇಡಿಕೆಯೂ ಇದೆ. ಆದರೆ ಇದೀಗ ನಾಯ್ಸ್​ ಕಂಪೆನಿಯಿಂದ ಹೊಸ ಇಯರ್​ ಬಡ್ಸ್​​ ಬಿಡುಗಡೆಯಾಗುತ್ತಿದೆ. 


  ನಾಯ್ಸ್​ ಕಂಪೆನಿ ಇದೀಗ ತನ್ನ ಬ್ರಾಂಡ್​ನ ಅಡಿಯಲ್ಲಿ ನಾಯ್ಸ್​ ಬಡ್ಸ್​ ಕಾಂಬ್ಯಾಟ್​ ಎಂಬ ಇಯರ್​​ಬಡ್ಸ್​ ಅನ್ನು ಅನಾವರಣ ಮಾಡಲು ರೆಡಿಯಾಗಿದೆ.ಇದು ಗೇಮರ್​​ಗಳಿಗೆ ಉತ್ತಮ ಸೌಂಡ್​ ಅನುಭವವನ್ನು ನೀಡಲಿದ್ದು, ಉತ್ತಮ ವಿನ್ಯಾಸವನ್ನೂ ಒಳಗೊಂಡಿದೆ. ಹಾಗಿದ್ರೆ ಈ ನಾಯ್ಸ್​ ಇಯರ್​​ಬಡ್ಸ್​ನ ಫೀಚರ್ಸ್​ ಹೇಗಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.


  ನಾಯ್ಸ್​ ಬಡ್ಸ್​ ಕಾಂಬ್ಯಾಟ್​ ಫೀಚರ್ಸ್​


  ಈ ನಾಯ್ಸ್ ಬಡ್ಸ್ ಕಾಂಬ್ಯಾಟ್ ಇನ್-ಇಯರ್ ವಿನ್ಯಾಸವನ್ನು ಪಡೆದುಕೊಂಡಿದೆ.ಇನ್ನು ಈ ಇಯರ್​ಬಡ್ಸ್​ನಲ್ಲಿ ಟಚ್​ ಕಂಟ್ರೋಲ್​ ಫೀಚರ್​ ಅನ್ನು ಆ್ಯಡ್​ ಮಾಡಲಾಗಿದೆ. ಈ ಮೂಲಕ ಬಳಕೆದಾರರು ತಮಗೆ ಬೇಕಾದ ಹಾಗೆ ಕಾಲ್​ ಅಥವಾ ಮ್ಯೂಸಿಕ್​ನ ಸೌಂಡ್​ ಅನ್ನು ಕಂಟ್ರೋಲ್ ಮಾಡಬಹುದಾಗಿದೆ.
  ಇದರೊಂದಿಗೆ ವೇಕ್ ಹಾಗೂ ಪೇರ್ ಫೀಚರ್ಸ್‌ ಸೌಲಭ್ಯ ನೀಡಲಾಗಿರುವುದರಿಂದ ಚಾರ್ಜಿಂಗ್‌ ಕೇಸ್‌ನಿಂದ ಬಡ್ಸ್‌ಗಳನ್ನು ಹೊರತೆಗೆದ ತಕ್ಷಣವೇ ನಿಮ್ಮ ಸ್ಮಾರ್ಟ್‌ ಡಿವೈಸ್‌ಗಳಿಗೆ ಇವು ಸುಲಭವಾಗಿ ಕನೆಕ್ಟ್​ ಆಗುತ್ತದೆ. ಹಾಗೆಯೇ ಆಂಡ್ರಾಯ್ಡ್‌ಯ ಮತ್ತು ಐಓಎಸ್‌ ಡಿವೈಸ್‌ಗಳೆರಡರಲ್ಲೂ ಈ ಇಯರ್‌ಬಡ್ಸ್‌ ಅನ್ನು ಕನೆಕ್ಟ್​ ಮಾಡಬಹುದಾಗಿದೆ.


  ವಾಯ್ಸ್​ ಅಸಿಸ್ಟೆಂಟ್ ಫೀಚರ್​


  ನಾಯ್ಸ್​ ಬಡ್ಸ್​ ಕಾಂಬ್ಯಾಟ್​ ಇಯರ್​ಬಡ್ಸ್​ನಲ್ಲಿ ಗೂಗಲ್ ಅಸಿಸ್ಟೆಂಟ್​ ಮತ್ತು ಸಿರಿ ವಾಯ್ಸ್​ ಅಸಿಸ್ಟೆಂಟ್​ ಫೀಚರ್​ ಅನ್ನು ಅಳವಡಿಸಲಾಗಿದ್ದು, ಇವುಗಳ ಮೂಲಕ ನಿಮ್ಮ ಸ್ಮಾರ್ಟ್​​ಫೋನ್​ಗೆ ಬರುವ ಕಾಲ್​, ಮ್ಯೂಸಿಕ್​ ಹಾಗೂ ಇನ್ನಿತರೆ ವಿಷಯಗಳನ್ನು ಕಂಟ್ರೋಲ್ ಮಾಡಬಹುದಾಗಿದೆ.


  ಬ್ಯಾಟರಿ ಫಿಚರ್ಸ್​ ಹೇಗಿದೆ?


  ನಾಯ್ಸ್ ಬಡ್ಸ್ ಕಾಂಬ್ಯಾಟ್ ವಿಶೇಷವಾಗಿ ಒಮ್ಮೆ ಫುಲ್​ ಚಾರ್ಜ್​ ಮಾಡಿದ್ರೆ 36 ಗಂಟೆಗಳವರೆಗೆ ಬ್ಯಾಟರಿ ಬ್ಯಾಕಪ್ ನೀಡಲಿದೆ. ಜೊತೆಗೆ ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯ ಸಹ ಇದರಲ್ಲಿದ್ದು, ಇಯರ್‌ಬಡ್‌ಗಳು ಸಹ ಇನ್‌ಸ್ಟಾಚಾರ್ಜ್ ಆಯ್ಕೆ ಪಡೆದುಕೊಂಡಿರುವುದು ವಿಶೇಷ. ಇನ್ನು ಇದರಲ್ಲಿ ಚಾರ್ಜಿಂಗ್​ ಕೇಸ್​ ಅನ್ನು ಚಾರ್ಜ್​ ಮಾಡಲು ಟೈಪ್​ ಸಿ ಪೋರ್ಟ್​ ಅನ್ನು ನೀಡಲಾಗಿದೆ.


  ನಾಯ್ಸ್​ ಬಡ್ಸ್​ ಕಾಂಬ್ಯಾಟ್​


  ನಾಯ್ಸ್​ ಕ್ಯಾನ್ಸಲಿಂಗ್ ಫೀಚರ್​


  ಈ ಇಯರ್‌ಬಡ್‌ಗಳು 13mm ಡ್ರೈವರ್ ಯೂನಿಟ್‌ನೊಂದಿಗೆ ಪ್ಯಾಕ್‌ ಆಗಿದ್ದು, 40ms ಅಡಿಯಲ್ಲಿ ಕಡಿಮೆ ಲೇಟೆನ್ಸಿಯನ್ನು ಹೊಂದಿದೆ. ಜೊತೆಗೆ ಈ ಇಯರ್​ಬಡ್ಸ್​ನಲ್ಲಿ ನಾಯ್ಸ್​ ಕ್ಯಾನ್ಸಲಿಂಗ್​ ಸೌಲಭ್ಯವನ್ನೂ ನೀಡಲಾಗಿದ್ದು, ಈ ಮೂಲಕ ಬಳಕೆದಾರರು ಯಾವುದೇ ಬೇರೆ ಶಬ್ದಗಳ ಯಾವುದೇ ತೊಂದರೆಯಿಲ್ಲದೇ ಫ್ರೀಯಾಗಿ ಮಾತನಾಡಬಹುದಾಗಿದೆ. ಹಾಗೆಯೇ ಕನೆಕ್ಟಿವಿಟಿ ವಿಚಾರದಲ್ಲಿ ಬ್ಲೂಟೂತ್‌ ಆವೃತ್ತಿ 5.3 ಸಾಮರ್ಥ್ಯವನ್ನು ಒಳಗೊಂಡಿದೆ. ಜೊತೆಗೆ ನಾಯ್ಸ್‌ ಕ್ಯಾನ್ಸಲೇಶನ್‌ ಆಯ್ಕೆ ಇರುವ ಕ್ವಾಡ್ ಮೈಕ್‌ನೊಂದಿಗೆ ಬರಲಿದೆ.


  ಇದನ್ನೂ ಓದಿ: ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬರ್ತಿದೆ ಕೋಕಾ ಕೋಲಾ ಸ್ಮಾರ್ಟ್​​ಫೋನ್​! ಹೀಗಿದೆ ವಿನ್ಯಾಸ


  ಬೆಲೆ ಮತ್ತು ಲಭ್ಯತೆ


  ನಾಯ್ಸ್ ಬಡ್ಸ್ ಕಾಂಬ್ಯಾಟ್‌ಗೆ ಭಾರತದಲ್ಲಿ 1,499 ರೂಪಾಯಿಗಳಱ್ಟು ಬೆಲೆ ನಿಗದಿ ಮಾಡಲಾಗಿದೆ. ಹಾಗೆಯೇ ಈ ಇಯರ್​​ಬಡ್ಸ್​ ಸ್ಟೆಲ್ತ್ ಬ್ಲ್ಯಾಕ್, ಕವರ್ಟ್ ವೈಟ್ ಮತ್ತು ಶ್ಯಾಡೋ ಗ್ರೇ ನ ಮೂರು ಬಣ್ಣದ ಆಯ್ಕೆಯಲ್ಲಿ ಲಭ್ಯವಿದೆ. ಈ ಸ್ಮಾರ್ಟ್​​ ಡಿವೈಸ್​ ಅನ್ನು ನಾಯ್ಸ್‌ನ ಆನ್‌ಲೈನ್‌ ಸ್ಟೋರ್‌ ಹಾಗೂ ಫ್ಲಿಪ್‌ಕಾರ್ಟ್‌ನಲ್ಲಿ ಇದನ್ನು ಖರೀದಿ ಮಾಡಬಹುದಾಗಿದೆ.

  Published by:Prajwal B
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು