ಇಲ್ಲಿನ ಮಾರ್ಕೆಟ್​​ನಲ್ಲಿ ಕೇವಲ 10 ಸಾವಿರ ರೂ.ಗೆ ಸಿಗುತ್ತೆ ಐಫೋನ್​

ಹೊಸ ಐಫೋನ್​ ಖರೀದಿ ಮಾಡುವ ಸಾಕಷ್ಟು ಗ್ರಾಹಕರು ಅದರ ಬೆಲೆಯನ್ನು ನೋಡಿ ಹಿಂದೇಟು ಹಾಕುವುದೇ ಜಾಸ್ತಿ. ಆದರೆ, ಭಾರತೀಯ ಮಾರುಕಟ್ಟೆಯೊಂದರಲ್ಲಿ ಕಡಿಮೆ ಬೆಲೆಯ ಐಫೋನ್​ ದೊರೆಯುತ್ತದೆ ಎಂದರೆ ನಂಬುತ್ತೀರಾ..?. ಹೌದು, ನಂಬಲೇಬೇಕು

Harshith AS | news18
Updated:March 4, 2019, 7:25 PM IST
ಇಲ್ಲಿನ ಮಾರ್ಕೆಟ್​​ನಲ್ಲಿ ಕೇವಲ 10 ಸಾವಿರ ರೂ.ಗೆ ಸಿಗುತ್ತೆ ಐಫೋನ್​
ಐಫೋನ್
  • News18
  • Last Updated: March 4, 2019, 7:25 PM IST
  • Share this:
ಐಫೋನ್​ ಮೊಬೈಲ್​ ಅಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಸಾಕಷ್ಟು ಜನರು ಜೀವನದಲ್ಲಿ ಒಮ್ಮೆಯಾದರು ಐಫೋನ್​ ಖರೀದಿಸಬೇಕೆಂಬ ಆಸೆಯನ್ನು ಇಟ್ಟುಕೊಂಡಿರುತ್ತಾರೆ. ಆದರೆ ಐಫೋನ್ ಖರೀದಿಸಲು ಹಲವರಲ್ಲಿ ಅಷ್ಟೊಂದು ದೊಡ್ಡ ಮೊತ್ತ ಇರುವುದಿಲ್ಲ. ಎಲ್ಲಾದರು ಕಡಿಮೆ ಬೆಲೆಯ ಐಫೋನ್​ ದೊರೆಯಿತೆಂದರೆ ಜನರು ಮುಗಿಬಿದ್ದು ಖರೀದಿಸಲು ಮುಂದಾಗುತ್ತಾರೆ.

ಅಂತೆಯೆ ಭಾರತೀಯ ಮಾರುಕಟ್ಟೆಯೊಂದರಲ್ಲಿ ಕಡಿಮೆ ಬೆಲೆಯ ಐಫೋನ್​ ದೊರೆಯುತ್ತದೆ ಎಂದರೆ ನಂಬುತ್ತೀರಾ..?. ಹೌದು, ದೆಹಲಿಯ ಗಾಫರ್ ಮಾರುಕಟ್ಟೆ ಮತ್ತು ಕರೋಲ್​ ಬಾಗ್​​ ಪಟ್ಟಣವೊಂದರಲ್ಲಿ ಕಡಿಮೆ ಬೆಲೆಗೆ ಐಫೋನ್​ ದೊರೆಯುತ್ತದೆ. ಮೊಬೈಲ್​ ಮಾತ್ರವಲ್ಲದೆ ಇಲೆಕ್ಟ್ರಾನಿಕ್​ ವಸ್ತುಗಳು ಕೂಡ ಗಾಫರ್​ ಮತ್ತು ಕರೋಲ್​ ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಗೆ ದೊರಕುತ್ತದೆ.

ಇದನ್ನೂ ಓದಿ: ನಿಮ್ಮ ಮೊಬೈಲ್​ ಬ್ಯಾಟರಿ ನಿರ್ವಹಣೆಗೆ ಇದೇ ಉತ್ತಮ ಆ್ಯಪ್​​

ಹೊಸ ಐಫೋನ್​ ಖರೀದಿ ಮಾಡುವ ಸಾಕಷ್ಟು ಗ್ರಾಹಕರು ಅದರ ಬೆಲೆಯನ್ನು ನೋಡಿ ಹಿಂದೇಟು ಹಾಕುವುದೇ ಜಾಸ್ತಿ. ಆದರೆ, ಗಾಫರ್​ ಮಾರುಕಟ್ಟೆ ಮತ್ತು ಕರೋಲ್​ ಬಾಗ್​ ಮಾರುಕಟ್ಟೆ ಸೆಕೆಂಡ್​ ಹ್ಯಾಂಡ್​ ವಸ್ತುಗಳ ಮಾರಟದಿಂದ ಹೆಸರುವಾಸಿಯಾಗಿದೆ. ಇಲ್ಲಿ ಐಫೋನ್​ ಮೊಬೈಲ್​ ಕೂಡ 10,000 ರೂಪಾಯಿಗೆ ದೊರೆಯುತ್ತದೆ. ಅದರಲ್ಲು ಒಂದು ವಿಶೇಷತೆಯಿದೆ.

ಈ ಮಾರುಕಟ್ಟೆಯಲ್ಲಿ 10,000ರೂ ನೀಡಿ ಐಫೋನ್​ ಖರೀದಿಸಿದರೆ ನಿಮಗೆ ಒಂದು ವರ್ಷ ವ್ಯಾರಂಟಿ ನೀಡುತ್ತಾರೆ. ಗ್ಯಾಜೆಟ್​ಗಳು, ಗೃಹ-ಉಪಯೋಗಿ ವಸ್ತುಗಳು ಕೂಡ ಬಾರಿ ರಿಯಾಯಿತಿ ದರದಲ್ಲಿ ದೊರಕುತ್ತದೆ.

 

First published:March 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ