ನಿಮ್ಮ ಭಾವನೆಯನ್ನು ತೋರ್ಪಡಿಸುವ ಎಮೋಜಿಗಳ ಬಗ್ಗೆ ನಿಮಗೆಷ್ಟು ಗೊತ್ತು?


Updated:July 17, 2018, 1:09 PM IST
ನಿಮ್ಮ ಭಾವನೆಯನ್ನು ತೋರ್ಪಡಿಸುವ ಎಮೋಜಿಗಳ ಬಗ್ಗೆ ನಿಮಗೆಷ್ಟು ಗೊತ್ತು?

Updated: July 17, 2018, 1:09 PM IST
ದಿನದಿಂದ ದಿನಕ್ಕೆ ಮೊಬೈಲ್​  ಮೇಲಿನ ಅವಲಂಭನೆ ಹೆಚ್ಚಾದಂತೆ ಹೊಸ ಹೊಸ ಆವಿಷ್ಕಾರೂ ನಡೆಯುತ್ತಲೇ ಬಂದಿದೆ. ಇಂತಹ ಪ್ರಮುಖ ಅವಿಷ್ಕಾರದಲ್ಲಿ ಎಮೋಜಿಗಳ ಆವಿಷ್ಕಾರವೂ ಒಂದು. ವಾಟ್ಸಪ್​ ಫೇಸ್​ಬುಕ್​ ಇತರೇ ಸಾಮಾಜಿಕ ಜಾಲತಾಣದಲ್ಲಿ ಎಮೊಜಿಗಳದ್ದೇ ಕಾರುಬಾರು, ಇಂತಹ ಎಮೋಜಿಗಳಿಗಾಗಿ ಇಂದು (ಜುಲೈ 17) ವಿಶ್ವ ಎಮೊಜಿ ದಿನವೆಂದು ಘೋಷಿಸಲಾಗಿದೆ.

ಸುಮಾರು 90ರ ಸಮಯದಲ್ಲಿ ಜಪಾನ್​ನಲ್ಲಿ ಎಮೋಜಿಗಳನ್ನು ಬಳಕೆ ಆರಂಭವಾಯಿತು ಎನ್ನಲಾಗಿದೆ. ನಗು, ಅಳು, ಕೋಪ, ಬೇಜಾರು, ಉತ್ಸಾಹ, ಆಶ್ವರ್ಯ, ವ್ಯಂಗ್ಯ, ನಾಚಿಕೆ ಇನ್ನಿತರ ಎಲ್ಲಾ ಭಾವನೆಗಳನ್ನು ಪುಟ್ಟ ಇಮೋಜಿಗಳ ಮೂಲಕ ವ್ಯಕ್ತಪಡಿಸಬಹುದು. 1995ರಲ್ಲಿ ಎನ್​ಟಿಟಿ ಡೊಕೊಮೊ  ಎಮೋಜಿಗಳನ್ನು ಮೊದಲ ಬಾರಿಗೆ ಪ್ರಯೋಗಿಕವಾಗಿ ಬಳಸಿಕೊಳ್ಳಲು ತೀರ್ಮಾನಿಸಿತ್ತು.

ಇದರ ಮೊದಲ ಹಂತವಾಗಿ ಹೃದಯದ ಎಮೊಜಿಯನ್ನು ರಚಿಸಲು ಮುಂದಾದ ಡೊಕೊಮ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ  ಶಿಗೇತಾಕ ಕುರಿಟಾ ಮೊದಲ ಇಮೋಜಿಯನ್ನು ರಚಿಸಿದರು. ಅವರನ್ನು ಇಮೋಜಿಗಳ ಪಿತಾಮಹಾ ಎಂದು ಕರೆಯಲಾಗುತ್ತದೆ. ಇದರೊಂದಿಗೆ ಅವರು 176 ಎಮೋಜಿಗಳನ್ನು ರಚಿಸಿದ್ದಾರೆ. ಈ ಎಲ್ಲಾ ಎಮೋಜಿಗಳನ್ನು ನ್ಯೂಯಾರ್ಕ್​ನ ಮ್ಯೂಸಿಯಂ ಆಫ್​ ಮಾಡರ್ನ್​ ಆರ್ಟ್​ನಲ್ಲಿ ಸಂಗ್ರಹಿಸಿಡಲಾಗಿದೆ.

ಎಮೋಜಿಗಳನ್ನು ಅಭಿವೃದ್ಧಿ ಪಡಿಸಲು ಯುನಿಕೋಡ್​ ಸ್ಟಾಂಡರ್ಡ್​ನ್ನು ಬಳಕೆ ಮಾಡಲಾಗುತ್ತದೆ. ಸುಮಾರು 2000ದ ಆಸುಪಾಸಿನಲ್ಲಿ 650ಕ್ಕೂ ಅಧಿಕ ಎಮೋಜಿಗಳನ್ನು ಆ್ಯಪಲ್​​ ಸಂಸ್ಥೆ ತಜ್ಞರು ಅಭಿವೃದ್ಧಿ ಪಡಿಸಿದ್ದರು. ಇದಾದ ಮೇಲೆ ನಮ್ಮ ಭಾವನೆಗಳನ್ನು ವ್ಯಕ್ತ ಪಡಿಸಲು ಈ ಎಮೋಜಿಗಳನ್ನು ಬಳಕೆ ಮಾಡಲಾಯಿತು.

ಈ ಎಲ್ಲಾ ಬೆಳವಣಿಗೆ ನಡುವೆ ಮೊಬೈಲ್​ ಬಳಕೆ ಏರುತ್ತಲೇ ಸಾಗತೊಡಗಿತು, ಹೀಗಾಗಿ ಈ ವರೆಗೆ ಕೀ ಬೋರ್ಡ್​ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಎಮೋಜಿಗಳು ಆ್ಯಪ್​ ರೂಪದಲ್ಲೂ ಲಭಿಸತೊಡಗಿತು.

2015ರ ವೇಳೆ ಈ ಎಮೋಜಿಗಳಲ್ಲಿ ಮಹತ್ವದ ಕ್ರಾಂತಿಯೊಂದು ನಡೆಯಿತು. ಅದೇನೆಂದರೆ ಕಣ್ಣೀರಿನೊಂದಿಗೆ ನಗುವ ಎಮೋಜಿ ಅತ್ಯಂತ ಹೆಚ್ಚು ಬಳಕೆಯಲ್ಲಿರುವ ಎಮೋಜಿಯೆಂದು ಆಕ್ಸ್​ಫರ್ಡ್​ ವಿಶ್ವವಿದ್ಯಾಲಯ ವಿಶ್ವವಿದ್ಯಾಲಯ ಗುರುತಿಸಿ ತನ್ನ ನಿಘಂಟುಗಳಲ್ಲಿ ನಮೂದಿಸಿಕೊಂಡಿತು.

ಹಿಗಾಗಿ ಪ್ರತೀ ವರ್ಷ ಹೊಸ ಮಾದರಿಯ ಎಮೋಜಿಗಳು ಮಾರುಕಟ್ಟೆ ಬರುತ್ತಲೇ ಇವೆ, ಹೆಜಾಬ್ ಧರಿಸಿರುವ ಮಹಿಳೆ, ತಲೆಬುರುಡೆ ಹೊಂದಿರುವ ಮನುಷ್ಯ, ಮಗುವನ್ನು ಅಪ್ಪಿಕೊಂಡಿರುವ ಮಹಿಳೆ ಹೀಗೆ ಹೊಸ ಹೊಸ ಎಮೋಜಿಗಳನ್ನು ನಾವು ಕಾಣಬಹುದು.
First published:July 17, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...