ನೋಚ್​ ಸ್ಕ್ರೀನ್​ ಬೆನ್ನುಬಿದ್ದ ಗೂಗಲ್​, ಹೊಸ ನಿಯಮ ಜಾರಿ


Updated:August 8, 2018, 2:09 PM IST
ನೋಚ್​ ಸ್ಕ್ರೀನ್​ ಬೆನ್ನುಬಿದ್ದ ಗೂಗಲ್​, ಹೊಸ ನಿಯಮ ಜಾರಿ

Updated: August 8, 2018, 2:09 PM IST
ಇತ್ತೀಚಿನ ದಿನಗಳಲ್ಲಿ ನಾಚ್​ ಸ್ಕ್ರೀನ್​ ಮೊಬೈಲ್​ಗಳು ಸರ್ವೇ ಸಾಮಾನ್ಯವಾಗಿಬಿಟ್ಟಿದೆ, ಮುಂದಿನ ದಿನಗಳಲ್ಲಿ ಈ ಮಾದರಿಯ ಡಿಸ್​ಪ್ಲೇ ಎಲ್ಲಾ ಮೊಬೈಲ್​ಗಳಲ್ಲಿ ಕಾಣಿಸಿಕೊಂಡರೂ ಏನೂ ಆಶ್ಚರ್ಯ ಪಡಬೇಕಿಲ್ಲ. ಆದರೆ ಇಂತಹ ನೋಚ್​ ಸ್ಕ್ರೀನ್​ ಬಳಕೇ ಮಾಡುವವರಿಗೆ ಗೂಗಲ್​ ಹೊಸ ನಿಯಮಗಳನ್ನು ಜಾರಿಗೊಳಿಸಿದೆ.

ಈ ನಿಯಮದ ಪ್ರಕಾರ ಮೊಬೈಲ್​ ನಿರ್ಮಾಣ ಕಂಪನಿಗಳು ತಮ್ಮ ಮೊಬೈಲ್​ಗಳಿಗೆ ಎಷ್ಟು ಬೇಕಾದರೂ ನೋಚ್​​ಗಳನ್ನು ಅಳವಡಿಸಬಹುದು. ಆದರೆ ಮೊಬೈಲ್​ನ ಮೇಲೆ ಮತ್ತು ಕೆಳ ಬಾಗದಲ್ಲಿ ಮಾತ್ರಾ ತಲಾ ಒಂದು ಸಣ್ಣ ಕಟೌಟ್​ ( ಕ್ಯಾಮೆರಾ ಮತ್ತು ಸ್ಪೀಕರ್​ ನಡುವೆ ಇರುವ ಸಣ್ಣ ಜಾಗ)ವನ್ನು ನಿಗದಿ ಮಾಡಬೇಕು ಎಂದು ಗೂಗಲ್​ ನಿರ್ದೇಶಿಸಿದೆ. ಈಗಾಗಲೇ ಮೂರು ಅಥವಾ ನಾಲ್ಕು ನೋಚ್​ ಸ್ಕ್ರೀನ್​ ಹೊಂದಿರುವ ಮೊಬೈಲ್​ಗಳು ಬರುವ ಸೂಚನೆಯಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಈಗಾಗಲೇ 11 ವಿವಿದ ಉತ್ಪಾದಕರು ನಿರ್ಮಿಸಿರುವ ಆ್ಯಂಡ್ರಾಯ್ಡ್​ ಆಪರೇಟಿಂಗ್​ ಸಿಸ್ಟಂ ಹೊಂದಿರುವ 16 ವಿವಿದ ಬಗೆಯ ಸ್ಮಾರ್ಟ್​ಫೋನ್​ಗಳು ಮಾರುಕಟ್ಟೆ ಪ್ರವೇಶಿಸಿದೆ. ಮುಂದಿನ ಒಂದು ವರ್ಷದಲ್ಲಿ ಈ ಸಂಖ್ಯೆಯಲ್ಲಿ ವ್ಯಾಪಕವಾಗಿ ಏರಿಕೆಯಾಗಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಈ ರೀತಿ ಎರಡೂ ಬದಿ ನೋಚ್​ ಬಳಕೆ ಮಾಡುವುದರಿಂದ ಗೇಮ್​ ಹಾಗೂ ಆ್ಯಪ್​ ಅಭಿವೃದ್ಧಿ ಪಡಿಸುವವರಿಗೆ ತಮ್ಮ ಕೆಲಸವೂ ಸುಲಭವಾಗುತ್ತದೆ, ಏಕೆಂದರೆ ಪ್ರತೀ ಬಾರಿ ನಾಚ್​ ಡಿಸ್​ಪ್ಲೇ ಬದಲಾಗುತ್ತಲೇ ಇದ್ದರೆ ಅದಕ್ಕನುಗುಣವಾಗಿ ಗೇಮ್ಸ್​ ಹಾಗು ಡಿಸ್​​ಪ್ಲೇ ರೆಸಲ್ಯೂಷನ್​ ಅಪ್​ಡೇಟ್​ ಮಾಡಬೇಕಾಗುತ್ತದೆ. ಹೀಗಾಗಿ ಎರಡೂ ನಾಚ್​ ಒಂದೇ ಪ್ರಮಾಣದಲ್ಲಿ ಇದ್ದರೆ ಇದಕ್ಕೆ ಸೂಕ್ತವಾಗುವ ಡಿಸೈನ್​ ಮಾಡಬಹುದು.
First published:August 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ