ಟೆಕ್ಮೋ ಕಂಪೆನಿ (Techno Company) ಈ ಹಿಂದೆ ತನ್ನ ಬ್ರಾಂಡ್ನ ಅಡಿಯಲ್ಲಿ ಟೆಕ್ನೋ ಫ್ಯಾಂಟಮ್ ಎಕ್ಸ್2 ಎಂಬ ಸ್ಮಾರ್ಟ್ಫೋನ್ ಅನ್ನು ಅನಾವರಣ ಮಾಡಿತ್ತು. ಇದರ ಫೀಚರ್ಸ್ ಮೂಲಕವೇ ಎಲ್ಲರ ಗಮನಸೆಳೆದಿದ್ದಂತಹ ಟೆಕ್ನೋ ಫ್ಯಾಂಟಮ್ ಎಕ್ಸ್2 ಸ್ಮಾರ್ಟ್ಫೋನ್ (Techno Phantom X2 Smartphone) ಇದೀಗ ಇಂದು ಅಂದರೆ ಜನವರಿ 9ರಂದು ಫಸ್ಟ್ ಸೇಲ್ (First Sale) ಆರಂಭವಾಗಲಿದೆ ಎಂದು ಕಂಪೆನಿ ಹೇಳಿದೆ. ಈ ಸ್ಮಾರ್ಟ್ಫೋನ್ ಜನಪ್ರಿಯ ಇಕಾಮರ್ಸ್ ಕಂಪನಿಯಾಗಿರುವ ಅಮೆಜಾನ್ ಇಂಡಿಯಾದಲ್ಲಿ (Amazon India) ಫಸ್ಟ್ ಸೇಲ್ ಅನ್ನು ಜನವರಿ 9ರಂದು ಮಧ್ಯಾಹ್ನ 12 ರಿಂದ ಪ್ರಾರಂಭವಾಗಲಿದೆ. ಇನ್ನು ಈ ಫಸ್ಟ್ ಸೇಲ್ನಲ್ಲಿ ಖರೀದಿಸುವವರಿ ಭಾರೀ ಆಫರ್ಸ್ಗಳು ಕೂಡ ಲಭ್ಯವಿದ್ದು, ಇದು ಜನವರಿ 31 ರವರೆಗೆ ಮಾತ್ರ ಲಭ್ಯವಿರುತ್ತದೆ.
ಟೆಕ್ನೋ ಫ್ಯಾಂಟಮ್ ಎಕ್ಸ್2 ಸ್ಮಾರ್ಟ್ಫೋನ್ ಇದೀಗ ಫಸ್ಟ್ ಸೇಲ್ ಆರಂಭಿಸುವುದಾಗಿ ಸೂಚನೆ ನೀಡಿದೆ. ಇನ್ನು ಈ ಫಸ್ಟ್ ಸೇಲ್ನಲ್ಲಿ ಎಕ್ಸ್ಚೇಂಜ್ ಆಫರ್ಸ್, ಇಎಮ್ಐನಂತಹ ಇನ್ನೂ ಹಲವಾರು ಆಫರ್ಸ್ಗಳು ಲಭ್ಯವಿದೆ. ಜೊತೆಗೆ ಈ ಸ್ಮಾರ್ಟ್ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಇದರ ಬೆಲೆ, ಆಫರ್ಸ್ಗಳ ಮಾಹಿತಿ ಇಲ್ಲಿದೆ.
ಟೆಕ್ನೋ ಫ್ಯಾಂಟಮ್ ಎಕ್ಸ್2 ಫಸ್ಟ್ ಸೇಲ್ನ ಆಫರ್ಸ್
ಟೆಕ್ನೋ ಫ್ಯಾಂಟಮ್ ಎಕ್ಸ್2 ಸ್ಮಾರ್ಟ್ಫೋನ್ ಫಸ್ಟ್ ಸೇಲ್ ಇಂದು ಅಂದರೆ ಜನವರಿ 9 ಮಧ್ಯಾಹ್ನ 12 ರಿಂದ ಅಮೆಜಾನ್ ಇಕಾಮರ್ಸ್ ವೆಬ್ಸೈಟ್ ಮೂಲಕ ಪ್ರಾರಂಭವಾಗುತ್ತದೆ. ಈ ಸ್ಮಾರ್ಟ್ಫೋನ್ ಬೆಲೆ 39,999 ರೂಪಾಯಿ ಆಗಿದ್ದು, ವಿಶೇಷ ಲಾಂಚ್ ಆಫರ್ ಕೂಡ ಈ ಸ್ಮಾರ್ಟ್ಫೋನ್ ಮೇಲೆ ಸಿಗುತ್ತದೆ. ಇನ್ನೂ ಹೆಚ್ಚುವರಿಯಾಗಿ ಈ ಸ್ಮಾರ್ಟ್ಫೋನ್ ಅನ್ನು ಎಕ್ಸ್ಚೇಂಜ್ ಆಫರ್ನಲ್ಲೂ ಖರೀದಿಸಬಹುದಾಗಿದೆ. ಎಕ್ಸ್ಚೇಂಜ್ ಆಫರ್ನಲ್ಲಿ 5 ಸಾವಿರದವರೆಗೆ ರಿಯಾಯಿತಿಯನ್ನು ಪಡೆಯಬಹುದು.
ಇದನ್ನೂ ಓದಿ: ಭಾರತದಲ್ಲಿ ಶಿಯೋಮಿ 13 ಪ್ರೋ ಸ್ಮಾರ್ಟ್ಫೋನ್ ಬಿಡುಗಡೆ! ಬೆಲೆ ಎಷ್ಟು ಗೊತ್ತಾ?
ಆದರೆ ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ನೀವಯ ವಿನಿಮಯ ಮಾಡುವ ಸ್ಮಾರ್ಟ್ಫೋನ್ ಮಾದರಿ ಮತ್ತು ಗುಣಮಟ್ಟದ ಆಧಾರದ ಮೇಲೆ ನಿಮ್ಮ ಹಳೇ ಮೊಬೈಲ್ನ ಬೆಲೆ ನಿಗದಿಯಾಗುತ್ತದೆ. ಇನ್ನು ಈ ಫಸ್ಟ್ ಸೇಲ್ನಲ್ಲಿ ಟೆಕ್ನೋ ಫ್ಯಾಂಟಮ್ ಎಕ್ಸ್2 ಸ್ಮಾರ್ಟ್ಫೋನ್ ಅನ್ನು ಖರೀದಿಸಿದರೆ 1 ವರ್ಷದ ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ಸಹ ಪಡೆಯಬಹುದು. ಹಾಗೆಯೇ 6,667ರೂ. ಗಳಿಂದ ಪ್ರಾರಂಭವಾಗುವ ನೋ ಕಾಸ್ಟ್ ಇಎಮ್ಐ ಕೂಡ ಲಭ್ಯವಿದೆ.
ಟೆಕ್ನೋ ಫ್ಯಾಂಟಮ್ ಎಕ್ಸ್2 ಫೀಚರ್ಸ್
ಟೆಕ್ನೋ ಫ್ಯಾಂಟಮ್ ಎಕ್ಸ್2 ಸ್ಮಾರ್ಟ್ಫೋನ್ 5ಜಿ ನೆಟ್ವರ್ಕ್ ಅನ್ನು ಬೆಂಬಲಿಸುತ್ತದೆ. ಈ ಸ್ಮಾರ್ಟ್ಫೋನ್ 6.8 ಇಂಚಿನ ಕರ್ವ್ಡ್ ಅಮೋಲ್ಡ್ ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್ಪ್ಲೇ 1,080x2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಒಳಗೊಂಡಿದೆ. ಇನ್ನು ಈ ಡಿಸ್ಪ್ಲೇಯ ಸೇಫ್ಟಿಗಾಗಿ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್ ಅನ್ನು ಅಳವಡಿಸಲಾಗಿದೆ.
ಕ್ಯಾಮೆರಾ ಫೀಚರ್ಸ್
ಟೆಕ್ನೋ ಫ್ಯಾಂಟಮ್ ಎಕ್ಸ್2 5ಜಿ ಸ್ಮಾರ್ಟ್ಫೋನ್ ವಿಶೇಷವಾಗಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 13 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಸೆನ್ಸಾರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ ಸೆಲ್ಫಿ ಮತ್ತು ವಿಡಿಯೋ ಕಾಲ್ಗಾಗಿ 32 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದ ಕ್ಯಾಮೆರಾವನ್ನು ಅಳವಡಿಸಿದ್ದಾರೆ.
ಬ್ಯಾಟರಿ ಫೀಚರ್ಸ್
ಟೆಕ್ನೋ ಫ್ಯಾಂಟಮ್ ಎಕ್ಸ್2 5ಜಿ ಸ್ಮಾರ್ಟ್ಫೋನ್ 5,160mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಅನ್ನು ಒಳಗೊಂಡಿದೆ. ಈ ಬ್ಯಾಟರಿ 45W ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿದೆ. ಈ ಸಾಮರ್ಥ್ಯದಿಂದ ಈ ಸ್ಮಾರ್ಟ್ಫೋನ್ 20 ನಿಮಿಷಗಳಲ್ಲಿ 50% ಚಾರ್ಜ್ ಆಗುತ್ತದೆ.
ಕನೆಕ್ಟಿವಿಟಿ ಫೀಚರ್ಸ್
ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈಫೈ 2, 4ಜಿ, 5ಜಿ & ವೈಫೈ 6, ಬ್ಲೂಟೂತ್ 5.3, ಜಿಪಿಎಸ್, ಒಟಿಜಿ, NFC, ಮತ್ತುಯುಎಸ್ಬಿ ಟೈಪ್ ಸಿ ಪೋರ್ಟ್ ಸೇರಿವೆ. ಇದಲ್ಲದೆ ಪ್ರಾಕ್ಸಿಮಿಟಿ ಸೆನ್ಸಾರ್, ದಿಕ್ಸೂಚಿ, ಆರು ಆಕ್ಸಿಸ್ ಗೈರೋ ಸೆನ್ಸಾರ್ ಅನ್ನು ಸಹ ಹೊಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ