• Home
  • »
  • News
  • »
  • tech
  • »
  • Samsung Galaxy F04 Smartphone: ಸ್ಯಾಮ್​ಸಂಗ್​​ ಕಂಪೆನಿಯ ಹೊಸ ಸ್ಮಾರ್ಟ್​ಫೋನ್​ನ ಫಸ್ಟ್​ ಸೇಲ್ ಆರಂಭ! ಆಫರ್ಸ್ ಹೇಗಿದೆ?

Samsung Galaxy F04 Smartphone: ಸ್ಯಾಮ್​ಸಂಗ್​​ ಕಂಪೆನಿಯ ಹೊಸ ಸ್ಮಾರ್ಟ್​ಫೋನ್​ನ ಫಸ್ಟ್​ ಸೇಲ್ ಆರಂಭ! ಆಫರ್ಸ್ ಹೇಗಿದೆ?

ಸ್ಯಾಮ್​​ಸಂಗ್​ ಗ್ಯಾಲಕ್ಸಿ ಎಫ್​04

ಸ್ಯಾಮ್​​ಸಂಗ್​ ಗ್ಯಾಲಕ್ಸಿ ಎಫ್​04

ಸ್ಯಾಮ್​​ಸಂಗ್​ ಕಂಪೆನಿ ಮಾರುಕಟ್ಟೆಗೆ ಪರಿಚಯಿಸಿದ ಹೊಸ ಸ್ಮಾರ್ಟ್​ಫೋನ್​ ಇದೀಗ ಫ್ಲಿಪ್​ಕಾರ್ಟ್​​ನಲ್ಲಿ ಫಸ್ಟ್​ ಸೇಲ್ ಅನ್ನು ಪ್ರಾರಂಭಿಸಿದೆ. ಸ್ಯಾಮ್​ಸಂಗ್​ ಗ್ಯಾಲಕ್ಸಿ ಡ್ಯುಯಲ್​ ರಿಯರ್​ ಕ್ಯಾಮೆರಾ ಸೆಟಪ್​ ಅನ್ನು ಹೊಂದಿರಲಿದ್ದು, ಇನ್ನೂ ಹಲವಾರು ಫೀಚರ್ಸ್​ಗಳ ಜೊತೆಗೆ ಇದು ಬಿಡುಗಡೆಯಾಗಿದೆ. ಬಜೆಟ್​ ಬೆಲೆಯಲ್ಲಿ ಬಿಡುಗಡೆಯಾದ ಸ್ಯಾಮ್​ಸಂಗ್​ ಕಂಪೆನಿಯ ಸ್ಮಾರ್ಟ್​​ಫೋನ್​ ಇದಾಗಿದೆ.

ಮುಂದೆ ಓದಿ ...
  • Share this:

    ಸ್ಮಾರ್ಟ್​ಫೋನ್ (Smartphone)​ ವಲಯದಲ್ಲಿ ಹೆಚ್ಚು ಬೇಡಿಕೆಯಲ್ಲಿರುವ ಕಂಪೆನಿಗಳಲ್ಲಿ ಸ್ಯಾಮ್​​ಸಂಗ್​ ಕೂಡಾ ಒಂದು. ಈ ಕಂಪೆನಿ ತನ್ನದೇ ಆದ ಶೈಲಿಯಲ್ಲಿ ಸ್ಮಾರ್ಟ್​​ಫೋನ್​ಗಳನ್ನು ಬಿಡುಗಡೆ ಮಾಡುವ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆದಿದೆ. ಇತ್ತೀಚೆಗೆ ಕೆಲದಿನಗಳ ಹಿಂದೆ ಸ್ಯಾಮ್​ಸಂಗ್ ಕಂಪೆನಿ ಭಾರತದಲ್ಲಿ ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಫ್04 (Samsung Galaxy F04) ಎಂಬ ಸ್ಮಾರ್ಟ್​ಫೋನ್ ಅನ್ನು ಲಾಂಚ್​ ಮಾಡಿತ್ತು. ಈ ಸ್ಮಾರ್ಟ್​​ಫೋನ್​ನ ಲಾಂಚ್ ಜೊತೆಗೆ ಫೀಚರ್ಸ್​ಗಳನ್ನು ಕಂಪೆನಿ ಸೋರಿಕೆ ಮಾಡಿದೆ. ಇದರ ಫೀಚರ್ಸ್​ ಮೂಲಕವೇ ಎಲ್ಲರ ಗಮನಸೆಳೆದಿದ್ದ ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಫ್​04 ಇದೀಗ ಜನವರಿ 12 ರಿಂದ ತನ್ನ ಫಸ್ಟ್​​ಸೇಲ್ (First Sale Offers)​ ಅನ್ನು ಫ್ಲಿಪ್​ಕಾರ್ಟ್​ ಮೂಲಕ ಪ್ರಾರಂಭಿಸಿದೆ. ಈ ಸ್ಮಾರ್ಟ್‌ಫೋನ್‌ ಲಾಂಚ್‌ ಆಫರ್‌ನಲ್ಲಿ ಕೇವಲ 7,499 ರೂಪಾಯಿ ಬೆಲೆಗೆ ಮಾರಾಟವಾಗಲಿದೆ. ಇದು ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್​​ ಅನ್ನು ಹೊಂದಿದ್ದು, ಮೀಡಿಯಾ ಟೆಕ್ ಪಿ35 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.


    ಸ್ಯಾಮ್​​ಸಂಗ್​ ಕಂಪೆನಿ ಮಾರುಕಟ್ಟೆಗೆ ಪರಿಚಯಿಸಿದ ಹೊಸ ಸ್ಮಾರ್ಟ್​ಫೋನ್​ ಇದೀಗ ಫ್ಲಿಪ್​ಕಾರ್ಟ್​​ನಲ್ಲಿ ಫಸ್ಟ್​ ಸೇಲ್ ಅನ್ನು ಪ್ರಾರಂಭಿಸಿದೆ. ಸ್ಯಾಮ್​ಸಂಗ್​ ಗ್ಯಾಲಕ್ಸಿ ಡ್ಯುಯಲ್​ ರಿಯರ್​ ಕ್ಯಾಮೆರಾ ಸೆಟಪ್​ ಅನ್ನು ಹೊಂದಿರಲಿದ್ದು, ಇನ್ನೂ ಹಲವಾರು ಫೀಚರ್ಸ್​ಗಳ ಜೊತೆಗೆ ಇದು ಬಿಡುಗಡೆಯಾಗಿದೆ. ಬಜೆಟ್​ ಬೆಲೆಯಲ್ಲಿ ಬಿಡುಗಡೆಯಾದ ಸ್ಯಾಮ್​ಸಂಗ್​ ಕಂಪೆನಿಯ ಸ್ಮಾರ್ಟ್​​ಫೋನ್​ ಇದಾಗಿದೆ.


    ಫಸ್ಟ್​ ಸೇಲ್​​ನಲ್ಲಿ ಏನೆಲ್ಲಾ ಆಫರ್ಸ್​ ಲಭ್ಯವಿದೆ?


    ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಫ್​04 ಸ್ಮಾರ್ಟ್‌ಫೋನ್ ಫಸ್ಟ್​​ಸೇಲ್​ ಆಫರ್​​ನಲ್ಲಿ ಕೇವಲ 7,499 ರೂಪಾಯಿ ಬೆಲೆಯಲ್ಲಿ ದೊರೆಯಲಿದೆ. ಆದರೆ ಈ ಲಾಂಚ್‌ ಆಫರ್‌ ಬೆಲೆಯು ಸೀಮಿತ ಅವಧಿಗೆ ಮಾತ್ರ ಲಭ್ಯವಿರುತ್ತದೆ. ಈ ಲಾಂಚ್‌ ಆಫರ್ ಮುಗಿದ ನಂತರ ಇದರ ಬೆಲೆ 9,499 ರೂಪಅಯಿ ಆಗಿರಲಿದೆ ಎಂದು ಕಂಪೆನಿ ಹೇಳಿದೆ. ಇನ್ನು ಫಸ್ಟ್‌ ಸೇಲ್‌ನಲ್ಲಿ ಸಿಟಿ ಕ್ರೆಡಿಟ್ ಕಾರ್ಡ್ ಮತ್ತು ಇಎಮ್​ಐ ವಹಿವಾಟು ಮೂಲಕ ಫೋನ್‌ ಖರೀದಿಸೋರಿಗೆ 1,000 ರೂಪಾಯಿವರೆಗೆ ಹೆಚ್ಚುವರಿ ರಿಯಾಯಿತಿ ದೊರೆಯಲಿದೆ. ಈ ಫೋನ್‌ ಜೇಡ್ ಪರ್ಪಲ್ ಮತ್ತು ಓಪಲ್ ಗ್ರೀನ್ ಕಲರ್‌ ಆಯ್ಕೆಗಳಲ್ಲಿ ಬರಲಿದೆ ಎಂದು ವರದಿಯಾಗಿದೆ.


    ಇದನ್ನೂ ಓದಿ: ರಿಯಲ್​ಮಿ ಕಂಪೆನಿಯ 240W ಚಾರ್ಜಿಂಗ್ ವೇಗದ ಸ್ಮಾರ್ಟ್​ಫೋನ್​ ಲಾಂಚ್​! ಯಾವಾಗ ರಿಲೀಸ್ ಗೊತ್ತಾ?


    ಡಿಸ್​​ಪ್ಲೇ ವಿನ್ಯಾಸ


    ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಫ್​04 ಸ್ಮಾರ್ಟ್‌ಫೋನ್‌ 6.5 ಇಂಚಿನ ಹೆಚ್​​ಡಿ+ ಇನ್ಫಿನಿಟಿ ವಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1560 × 720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ ಹೈ ಡೆಫಿನಿಷನ್‌ ವ್ಯೂವಿಂಗ್‌ ಎಕ್ಸ್‌ಪಿರಿಯನ್ಸ್‌ ಅನ್ನು ನೀಡಲಿದೆ. ಇದು ವಾಟರ್‌ಡ್ರಾಪ್ ನಾಚ್ ವಿನ್ಯಾಸ ಮತ್ತು ಸ್ಲಿಮ್ ಬೆಜೆಲ್‌ಗಳೊಂದಿಗೆ ಪ್ಯಾಕ್ ಮಾಡಲ್ಪಟ್ಟಿದೆ.


    ಸ್ಯಾಮ್​​ಸಂಗ್​ ಗ್ಯಾಲಕ್ಸಿ ಎಫ್​04


    ಕ್ಯಾಮೆರಾ ಫೀಚರ್ಸ್​


    ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಫ್​04 ಸ್ಮಾರ್ಟ್‌ಫೋನ್ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್​​ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಇದಲ್ಲದೆ ಸೆಲ್ಫಿಗಳು ಮತ್ತು ವಿಡಿಯೋ ಕಾಲ್​ಗಳಿಗಾಗಿ 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇನ್ನು ಹಿಂಭಾಗದ ಕ್ಯಾಮೆರಾಗಳ ಜೊತೆಗೆ ಎಲ್ಇಡಿ ಫ್ಲ್ಯಾಷ್‌ನೊಂದಿಗೆ ರಚಿಸಲಾಗಿದೆ.


    ಪ್ರೊಸೆಸರ್​ ಸಾಮರ್ಥ್ಯ


    ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಫ್​04 ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಪಿ35 ಪ್ರೊಸೆಸರ್ ಸಾಮರ್ಥ್ಯದೊಂದಿಗೆ ಬರುತ್ತದೆ. ಇದು ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ 2 ವರ್ಷಗಳ ಓಎಸ್ ಅಪ್‌ಗ್ರೇಡ್ ಅನ್ನು ನೀಡುವುದಾಗಿ ಸ್ಯಾಮ್‌ಸಂಗ್‌ ಕಂಪೆನಿ ತನ್ನ ಗ್ರಾಹಕರಿಗೆ ಭರವಸೆ ನೀಡಿದೆ. ಹಾಗೆಯೇ 4 ಜಿಬಿ ರ್‍ಯಾಮ್ ಮತ್ತು 64ಜಿಬಿ ಇಂಟರ್ನಲ್​​ ಸ್ಟೋರೇಜ್‌ ಅನ್ನು ಹೊಂದಿದೆ. ಇದಲ್ಲದೆ ವರ್ಚುವಲ್ ರ್‍ಯಾಮ್ ಸಹಾಯದಿಂದ 8 ಜಿಬಿ ರ್‍ಯಾಮ್ ವರೆಗೆ ವಿಸ್ತರಿಸುವ ಅವಕಾಶ ಕೂಡ ಇದೆ. ಜೊತೆಗೆ ಮೆಮೊರಿ ಕಾರ್ಡ್‌ ಮೂಲಕ 1ಟಿಬಿ ವರೆಗೆ ಸ್ಟೋರೇಜ್​ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.


    ಸ್ಯಾಮ್​​ಸಂಗ್​ ಗ್ಯಾಲಕ್ಸಿ ಎಫ್​04


    ಬ್ಯಾಟರಿ ಫೀಚರ್ಸ್​


    ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಫ್​04 ಸ್ಮಾರ್ಟ್‌ಫೋನ್ ಮುಖ್ಯವಾಗಿ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್​​ಫೋನ್​ನ ವೇಗದ ಚಾರ್ಜಿಂಗ್‌ ಬೆಂಬಲಿಸುವುದರ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.


    ಇತರೆ ಫೀಚರ್ಸ್​


    ಇನ್ನು ಈ ಸ್ಮಾರ್ಟ್​​ಫೋನ್​​ನ​​ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್‌, ವೈಫೈ, ಹಾಟ್‌ಸ್ಪಾಟ್‌, ಹೆಚ್‌ಡಿಎಂಐ ಪೋರ್ಟ್‌, ಹೆಡ್‌ಫೋನ್‌ ಜ್ಯಾಕ್‌ ಅನ್ನು ನೀಡುತ್ತದೆ.

    Published by:Prajwal B
    First published: