Oppo Smartphone: ಒಪ್ಪೋ ರೆನೋ 8ಟಿ ಸ್ಮಾರ್ಟ್​​ಫೋನ್​ನ ಫಸ್ಟ್​ ಸೇಲ್​ ಆರಂಭ! ಆಫರ್ಸ್​ ಹೇಗಿದೆ?

ಒಪ್ಪೋ ರೆನೋ 8ಟಿ 5ಜಿ ಸ್ಮಾರ್ಟ್​ಫೋನ್​

ಒಪ್ಪೋ ರೆನೋ 8ಟಿ 5ಜಿ ಸ್ಮಾರ್ಟ್​ಫೋನ್​

ಒಪ್ಪೋ ರೆನೋ 8ಟಿ 5ಜಿ ಸ್ಮಾರ್ಟ್​​​ಫೋನ್​ನ ಮೊದಲ ಮಾರಾಟ ಫೆಬ್ರವರಿ 10 ರಂದು ಪ್ರಾರಂಭವಾಗಿದೆ. ಈ ಸ್ಮಾರ್ಟ್​​​ಫೋನ್​4,800mAh ಸಾಮರ್ಥ್ಯದ ಬ್ಯಾಟರಿ ಜೊತೆಗೆ ಇನ್ನೂ ಹಲವಾರು ಫೀಚರ್ಸ್​ಗಳನ್ನು ಇದು ಒಳಗೊಂಡಿದೆ. ಇನ್ನು ಈ ಫಸ್ಟ್​ ಸೇಲ್​ನಲ್ಲಿ ಆಫರ್ಸ್​ ಸಹ ಲಭ್ಯವಿದೆ.

  • Share this:

    ದಿನ ಹೋದಂತೆ ಮೊಬೈಲ್​​ ಮಾರುಕಟ್ಟೆಗೆ( Mobile Market) ಹೊಸ ಹೊಸ ಮಾದರಿಯ ಸ್ಮಾರ್ಟ್​​ಫೋನ್​ಗಳು ಎಂಟ್ರಿ ನೀಡುತ್ತಲೇ ಇದೆ. ಜನಪ್ರಿಯ ಸ್ಮಾರ್ಟ್​​​ಫೋನ್​ ಕಂಪೆನಿಗಳಲ್ಲಿ ಒಂದಾಗಿರುವ ಒಪ್ಪೋ ಕಂಪೆನಿ (Oppo Company) ತನ್ನ ಬ್ರಾಂಡ್​ನ ಅಡಿಯಲ್ಲಿ ಇದುವರೆಗೆ ಸಾಕಷ್ಟು ಮೊಬೈಲ್​​ಗಳನ್ನು ಪರಿಚಯಿಸಿದೆ. ಒಪ್ಪೋ ಮೊಬೈಲ್​ ಕಂಪೆನಿಯು ಭಾರತದಲ್ಲಿ ತನ್ನ ಒಪ್ಪೋ ರೆನೋ 8ಟಿ 5ಜಿ ಸ್ಮಾರ್ಟ್​​ಫೋನ್​ ಅನ್ನು ಅನಾವರಣ ಮಾಡಿತ್ತು. ಈ ಮೊಬೈಲ್ ತನ್ನ ವಿಶೇಷ ವಿನ್ಯಾಸದ ಮೂಲಕವೇ ಜನರಲ್ಲಿ ಕುತೂಹಲ ಮೂಡಿಸಿತ್ತು. ಸದ್ಯ ಈ ಸ್ಮಾರ್ಟ್​​​ಫೋನ್​ನ ಫಸ್ಟ್​ ಸೇಲ್ (First Sale) ಆರಂಭವಾಗಿದೆ. ಜನಪ್ರಿಯ ಇ ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ (Flipkart) ಹಾಗೂ ಅಧಿಕೃತ ಒಪ್ಪೋ ಆನ್‌ಲೈನ್‌ ಸ್ಟೋರ್‌ (Oppo Online Store) ಮೂಲಕ ಮೊದಲ ಮಾರಾಟ ಆರಂಭಿಸಲಿದೆ.


    ಒಪ್ಪೋ ರೆನೋ 8ಟಿ 5ಜಿ ಸ್ಮಾರ್ಟ್​​​ಫೋನ್​ನ ಮೊದಲ ಮಾರಾಟ ಫೆಬ್ರವರಿ 10 ರಂದು ಪ್ರಾರಂಭವಾಗಿದೆ. ಈ ಸ್ಮಾರ್ಟ್​​​ಫೋನ್​4,800mAh ಸಾಮರ್ಥ್ಯದ ಬ್ಯಾಟರಿ ಜೊತೆಗೆ ಇನ್ನೂ ಹಲವಾರು ಫೀಚರ್ಸ್​ಗಳನ್ನು ಇದು ಒಳಗೊಂಡಿದೆ. ಇನ್ನು ಈ ಫಸ್ಟ್​ ಸೇಲ್​ನಲ್ಲಿ ಆಫರ್ಸ್​ ಸಹ ಲಭ್ಯವಿದೆ.


    ಒಪ್ಪೋ ರೆನೋ 8ಟಿ ಸ್ಮಾರ್ಟ್​​ಫೋನ್​ನ ವಿನ್ಯಾಸ


    ಒಪ್ಪೋ ರೆನೋ 8ಟಿ 5ಜಿ ಸ್ಮಾರ್ಟ್‌ಫೋನ್‌ 6.7 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ ಮೈಕ್ರೋ ಕರ್ವ್ಡ್ ಅಮೋಲ್ಡ್​ ಡಿಸ್‌ಪ್ಲೇ ಆಗಿದ್ದು, 120Hz ರಿಫ್ರೆಶ್ ರೇಟ್‌ ಅನ್ನು ಬೆಂಬಲಿಸಲಿದೆ. ಇನ್ನು ಡಿಸ್‌ಪ್ಲೇ ಡ್ರ್ಯಾಗನ್‌ಟ್ರೈಲ್‌ ಸ್ಟಾರ್‌2 ಪ್ರೊಟೆಕ್ಷನ್‌ ಅನ್ನು ಹೊಂದಿದ್ದು, ವೈಡ್‌ವೈನ್‌ L1 ಪ್ರಮಾಣೀಕರಣವನ್ನು ಪಡೆದಿದೆ.


    ಇದನ್ನೂ ಓದಿ: ಫ್ಲಿಪ್​ಕಾರ್ಟ್​​ ಹಾರ್ಟ್​​ ಡೇಸ್​ ಸೇಲ್​! ಸ್ಮಾರ್ಟ್​​ಫೋನ್​ಗಳ ಮೇಲೆ ಬಂಪರ್ ಆಫರ್​


    ಕ್ಯಾಮೆರಾ ಸೆಟಪ್ ಹೇಗಿದೆ?


    ಒಪ್ಪೋ ರೆನೋ 8ಟಿ 5ಜಿ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಕ್ಯಾಮೆರಾವನ್ನು ಒಳಗೊಂಡಿದೆ. ಇನ್ನು ಸೆಲ್ಫಿಗಾಗಿ ಇದರಲ್ಲಿ 32 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಕ್ಯಾಮೆರಾವನ್ನು ಸಹ ನೀಡಲಾಗಿದೆ. ಇನ್ನು ಕ್ಯಾಮೆರಾವು HDR, ಪೋರ್ಟ್ರೇಟ್ ಮತ್ತು ಡ್ಯುಯಲ್-ವ್ಯೂ ವಿಡಿಯೋದಂತಹ ಫೀಚರ್ಸ್‌ಗಳನ್ನು ಹೊಂದಿದೆ.


    ಒಪ್ಪೋ ರೆನೋ 8ಟಿ 5ಜಿ ಸ್ಮಾರ್ಟ್​ಫೋನ್​


    ಒಪ್ಪೋ ರೆನೋ 8ಟಿ ಸ್ಮಾರ್ಟ್​​​ಫೋನ್​ನ ಬ್ಯಾಟರಿ ಫೀಚರ್ಸ್


    ಒಪ್ಪೋ ರೆನೋ 8ಟಿ 5ಜಿ ಸ್ಮಾರ್ಟ್‌ಫೋನ್‌ 4,800mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಈ ಬ್ಯಾಟರಿಯು 67W ಸೂಪರ್‌ವೂಕ್‌ ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇದರಿಂದ ಈ ಫೋನ್‌ ಅನ್ನು ನೀವು ಕೇವಲ 45 ನಿಮಿಷಗಳಲ್ಲಿ 0 ರಿಂದ 100% ಬ್ಯಾಟರಿ ಚಾರ್ಜ್‌ ಮಾಡಬಹುದಾಗಿದೆ.


    ಇತರೆ ಫೀಚರ್ಸ್


    ಇನ್ನು ಒಪ್ಪೋ ರೆನೋ 8ಟಿ 5ಜಿ ಸ್ಮಾರ್ಟ್​​​ಫೋನ್​ನ ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ 5 ಮತ್ತು ಬ್ಲೂಟೂತ್ 5.1 ವೈರ್‌ಲೆಸ್ ಸಂಪರ್ಕವನ್ನು ಬೆಂಬಲಿಸಲಿದೆ.




    ಬೆಲೆ ಮತ್ತು ಲಭ್ಯತೆ


    ಒಪ್ಪೋ ರೆನೋ 8ಟಿ 5ಜಿ ಸ್ಮಾರ್ಟ್‌ಫೋನ್‌ ಭಾರತದಲ್ಲಿ 29,999 ರೂಪಾಯಿ ಆರಂಭಿಕ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಖರೀದಿ ಮಾಡಬಹುದಾಗಿದೆ. ಇದು ಇದೇ ಫೆಬ್ರವರಿ 10 ರಿಂದ ಫ್ಲಿಪ್‌ಕಾರ್ಟ್, ಒಪ್ಪೋ ಸ್ಟೋರ್ ಮತ್ತು ಇತರ ರಿಟೇಲ್‌ ಸ್ಟೋರ್‌ಗಳ ಮೂಲಕ ಸೇಲ್‌ ಆಗಲಿದೆ. ಈ ಸ್ಮಾರ್ಟ್‌ಫೋನ್‌ ಮಿಡ್‌ನೈಟ್ ಬ್ಲ್ಯಾಕ್ ಮತ್ತು ಸನ್‌ರೈಸ್ ಗೋಲ್ಡ್ ಬಣ್ಣದ ಆಯ್ಕೆಗಳಲ್ಲಿ ದೊರೆಯಲಿದೆ.


    ಒಪ್ಪೋ ಕಂಪೆನಿಯ ರೆನೋ ಸೀರಿಸ್​ನಿಂದ ಬಿಡುಗಡೆಯಾದ ಈ ಬಾರಿಯ ಮೊದಲ ಸ್ಮಾರ್ಟ್​ಫೋನ್​ ಇದಾಗಿದ್ದು, ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸೋದು ಗ್ಯಾರಂಟಿಯಾಗಿದೆ.

    Published by:Prajwal B
    First published: